ಪೂಜಾಗೆ ತಿವಿದ ಕೋಲೆ ಬಸವ! “ಮೂಕ ಹಕ್ಕಿ’ ಚಿತ್ರದಲ್ಲಾದ ವಿಚಿತ್ರ ಘಟನೆ
Team Udayavani, Nov 16, 2017, 4:12 PM IST
ಕೆಲ ಸಿನಿಮಾಗಳ ಚಿತ್ರೀಕರಣ ಸಂದರ್ಭದಲ್ಲಿ ಕೆಲವೊಂದು ಘಟನೆಗಳು ನಡೆಯೋದು ಸಹಜ. ಆದರೆ, ಕೆಲವು ಸುದ್ದಿಯಾದರೆ, ಇನ್ನು ಕೆಲವು ಸುದ್ದಿಯಾಗೋದೇ ಇಲ್ಲ. ಚಿತ್ರೀಕರಣ ವೇಳೆ ಎಷ್ಟೇ ಎಚ್ಚರವಹಿಸಿದ್ದರೂ ಒಮ್ಮೊಮ್ಮೆ ಹಾಗೆ ಆಗುವುದುಂಟು. ಅಂಥದ್ದೊಂದು ಘಟನೆ “ಮೂಕ ಹಕ್ಕಿ’ ಚಿತ್ರದಲ್ಲೂ ನಡೆದಿದೆ.
ಅಂದಹಾಗೆ ಆ ಘಟನೆ ಏನ್ಗೊತ್ತಾ? “ಮೂಕ ಹಕ್ಕಿ’ ಒಂದು ಅಲೆಮಾರಿ ಜನಾಂಗದ ಬದುಕಿನ ಚಿತ್ರಣ. ನೋವುಂಡ, ದನಿ ಕಳೆದುಕೊಂಡವರ ಕಥೆ ಮತ್ತು ವ್ಯಥೆ. “ತಿಥಿ’ ಖ್ಯಾತಿಯ ಪೂಜಾ ಆ ಚಿತ್ರದ ಆಕರ್ಷಣೆ. ಅವರೊಂದಿಗೆ ಕೋಲೆ ಬಸವ (ಗೂಳಿ) ಪ್ರಮುಖ ಪಾತ್ರ ನಿರ್ವಹಿಸಿದೆ. ಕೋಲೆ ಬಸವ ಹಿಡಿದು, ಊರೂರು ಅಲೆಯೋ ಅಲೆಮಾರಿಯಾಗಿ ಪೂಜಾಗೆ ಆ ಕೋಲೆ ಬಸವ ಒಮ್ಮೆಲ್ಲೆ ಗುದ್ದಿದ್ದರಿಂದ ಪೂಜಾ ಅವರ ಎಡಗೈ ಪಕ್ಕೆಗೆ ಗಾಯವಾಗಿದೆ. ಪರಿಣಾಮ ಒಂದು ವಾರದ ಕಾಲ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಪೂಜಾ ಅವರು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವಿಶೇಷವೆಂದರೆ, ಆ ಘಟನೆ ನಡೆದು ಒಂದು ವಾರದ ನಂತರ ಪೂಜಾ, ಪುನಃ ಕೋಲೆ ಬಸವನೊಂದಿಗೆ ಬೆರೆತು ಚಿತ್ರೀಕರಣದಲ್ಲಿ ಪಾಲ್ಗೊಂಡು ಆ ದೃಶ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಅದು ಕ್ಲೈಮ್ಯಾಕ್ಸ್ ದೃಶ್ಯ. ಇನ್ನೇನು ಕೋಲೆ ಬಸವನ ಜತೆ ನಾಲ್ಕೈದು ಹೆಜ್ಜೆ ಇಡಬೇಕು ಅನ್ನುವಷ್ಟರೊಳಗೆ ಕೋಲೆ ಬಸವ ಪೂಜಾ ಅವರಿಗೆ ತನ್ನ ಕೊಂಬುಗಳಿಂದ ತಿವಿದು ಬಿಟ್ಟಿದೆ. ಇದರಿಂದ ಪೂಜಾ ನೆಲಕ್ಕೆ ಬಿದ್ದ ಕೂಡಲೇ ಚಿತ್ರತಂಡದವರೆಲ್ಲರೂ ಅವರ ಬಳಿ ಧಾವಿಸಿ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೊಂದು ದೃಶ್ಯ ಮುಗಿದಿದ್ದರೆ, ಚಿತ್ರಕ್ಕೆ ಕುಂಬಳಕಾಯಿ ಬೀಳಬೇಕಿತ್ತು. ಆದರೆ, ಕೆಟ್ಟ ಘಳಿಗೆ ಹಾಗಾಯಿತು. ಒಂದೊಳ್ಳೆಯ ಕೆಲಸ ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಒಳ್ಳೆಯ ಚಿತ್ರ ಮೂಡಿಬಂದಾಗ, ಇಂತಹ ಘಟನೆಗಳೆಲ್ಲ ಸಹಜ ಎಂಬುದು ಪೂಜಾ ಮಾತು.
ಅದೇನೆ ಇರಲಿ, ಪೂಜಾ ಅವರಿಗೆ “ಮೂಕ ಹಕ್ಕಿ’ ಚಿತ್ರದ ಬದುಕಿನ ಮತ್ತೂಂದು ಮಜಲು. “ತಿಥಿ’ ನೋಡಿದವರಿಗೆ ಪೂಜಾ ಹೇಗೆ ಕಾಣುತ್ತಿದ್ದರೋ, ಇಲ್ಲೂ ಅದೇ ಪೂಜಾ ಕಾಣುತ್ತಾರೆ. ಅಂಥದ್ದೇ ಕಾಸ್ಟೂéಮ್, ಅದೇ ಡಿಗ್ಲಾಮರು, ಮತ್ತದೇ ಲುಕ್ಕು. ಆದರೆ, ಭಾವನೆಗಳು ಮಾತ್ರ ಬೇರೆ. ಪಾತ್ರವೂ ಹೊಸದಾಗಿದೆ. ಮೂಕಹಕ್ಕಿಯಲ್ಲಿರುವ ಗೌರಿ ಎಂಬ ಪಾತ್ರ “ತಿಥಿ’ಯ ಕಾವೇರಿ ಪಾತ್ರವನ್ನು ಮರೆಸುವಷ್ಟರ ಮಟ್ಟಿಗೆ ಮೂಡಿಬಂದಿದೆ ಅನ್ನುತ್ತಾರೆ ಪೂಜಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ
Thalapathy69: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆ
Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್ ಆರತಿ
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.