ಕೃಷಿಕರ ಸೆಳೆಯುವ ದೇಸಿ ತಳಿ ರಾಸುಗಳು


Team Udayavani, Nov 17, 2017, 11:31 AM IST

raasu-sampath.jpg

ಬೆಂಗಳೂರು: ಬೆಂಗಳೂರು ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಜತೆ ಈ ಬಾರಿ ಪಶುಸಂಗೋಪನೆಗೆ ಆದ್ಯತೆ ನೀಡಿದ್ದು, ರಾಜ್ಯದ ಹಳ್ಳಿಕಾರ್‌, ಅಮೃತ್‌ ಮಹಲ್‌, ಮಲೆನಾಡು ಗಿಡ್ಡ ಜಾತಿಯ ಸ್ಥಳೀಯ ರಾಸುಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ರೈತರ ಆರ್ಥಿಕ ಸ್ವಾವಲಂಬನೆಗೆ ನೆರವಾಗುವ ನಿಟ್ಟಿನಲ್ಲಿ ಪಶುಪಾಲನೆ ಕುರಿತು ಪ್ರದರ್ಶನ ಮತ್ತು ಮಾಹಿತಿ ಒದಗಿಸುವ ಕಾರ್ಯಕ್ರಮಗಳು ಗಮನ ಸೆಳೆಯುತ್ತಿವೆ.

ಸಾಹಿವಾಲ್‌ ಎಂಬ ಪಂಜಾಬ್‌ ಮೂಲದ ರಾಸುಗಳು ಮೇಳದ ಮತ್ತೂಂದು ಆಕರ್ಷಣೆ. ಸುಮಾರು 200ರಿಂದ 250 ಕಿಲೋ ತೂಗುವ ಈ ರಾಸುಗಳು ದಿನಕ್ಕೆ 15ರಿಂದ 18 ಲೀಟರ್‌ ಹಾಲು ಕೊಡುತ್ತವೆ.

“ಹೈನೋದ್ಯಮವನ್ನು ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಳ್ಳುವ ರೈತರಿಗೆ ಸಾಹಿವಾಲ್‌ ತಳಿ ಸೂಕ್ತವೆನಿಸಿದ್ದು, ಹಸುವೊಂದರ ಬೆಲೆ 1.20 ಲಕ್ಷ ರೂ. ಇದೆ,’ ಎಂದು ಜೆ.ಪಿ.ನಗರದ ರಾಸುಗಳ ಮಾಲಿಕ ಲಕ್ಷಿನಾರಾಯಣ್‌ ತಿಳಿಸಿದ್ದಾರೆ. ಇನ್ನು ಮಂಡ್ಯದ ಶಿವರುದ್ರೇಗೌಡ ಎಂಬುವವರ 2 ಹಳ್ಳಿಕಾರ್‌ ತಳಿಯ ಹೋರಿಗಳು ಮೇಳದಲ್ಲಿ ಕೃಷಿಕರ ಗಮನ ಸೆಳೆದವು. ಎರಡೂ ವರೆ ವರ್ಷದ ಹೋರಿಗಳಿಗೆ 3.25 ಲಕ್ಷ ರೂ. ನಿಗದಿ ಮಾಡಲಾಗಿತ್ತು.

ಕೆ.ಜಿ ತುಪ್ಪದ ಬೆಲೆ 2000!: ಮಲೆನಾಡು ಮೂಲದ ಮಲಾ°ಡ್‌ ಗಿಡ್ಡ ತಳಿ ಹಸು ಇತೀಚೆಗೆ ಹೆಚ್ಚು ಬೇಡಿಕೆ ಪಡೆದಿದೆ. ಕೇವಲ 3ರಿಂದ 4 ಅಡಿ ಎತ್ತರ ಇರುವ ಈ ರಾಸು ನೀಡುವುದು ದಿನಕ್ಕೆ ಕೇವಲ 2 ಲೀಟರ್‌ ಹಾಲು. ಆದರೆ ಮಲಾ°ಡ್‌ ಗಿಡ್ಡ ಹಸುವಿನ ಹಾಲಿನಿಂದ ತಯಾರಿಸಿದ ಒಂದು ಕೆಜಿ ತುಪ್ಪದ ಬೆಲೆ  2 ಸಾವಿರ ರೂ.! ಹಾಗೂ ಲೀಟರ್‌ ಹಾಲಿನ ಬೆಲೆ ಬರೋಬ್ಬರಿ 100 ರೂ. ಎಂಬುದು ವಿಶೇಷ.

ಗಿಡ್ಡ ತಳಿ ಹಸುವಿನ ಹಾಲು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಹೊಂದಿರಲಿದ್ದು, ಇದು ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳುತ್ತದೆ. ಇಂಥ ಗಿಡ್ಡ ತಳಿ ಹಸು ಒಂದರ ಬೆಲೆ 20ರಿಂದ 25 ಸಾರ ರೂ. ಪ್ರಸ್ತುತ ಅವಸಾನದ ಅಂಚಿನಲ್ಲಿರುವ ಮಲಾ°ಡ್‌ ಗಿಡ್ಡ ತಳಿ ಅಭಿವೃದ್ಧಿಗೆ ಮುಂದಾಗಿರುವ ಪಶುಸಂಗೋಪನಾ ಇಲಾಖೆ, ಈ ತಳಿ ಕುರಿತು ರೈತರಲ್ಲಿ ಅರಿವು ಮೂಡಿಸುತ್ತಿದೆ.

ಅಮೃತ್‌ಮಹಲ್‌ ರಕ್ಷಣೆ: ಸ್ಥಳೀಯ ರಾಸುಗಳು ಹೆಚ್ಚಾಗಿ ಕ್ರಾಸ್‌ ಬ್ರಿಡಿಂಗ್‌ಗೆ ಒಳಗಾಗಿ ಪರಿಶುದ್ಧತೆ, ಮೂಲಗುಣ ಕಳೆದುಕೊಳ್ಳುತ್ತಿವೆ. ಇದರಲ್ಲಿ ಅಮೃತ್‌ಮಹಲ್‌ ಕೂಡ ಒಂದು. ಆದ್ದರಿಂದ ತಳಿ ಶುದ್ಧತೆ ರಕ್ಷಣೆಯ ಅಗತ್ಯತೆ ಪ್ರಸ್ತುತ ಹೆಚ್ಚಿದೆ. ಈ ತಳಿಯ ಎತ್ತುಗಳು ಅಪಾರ ಸಾಮರ್ಥ್ಯಕ್ಕೆ ಹೆಸರಾಗಿವೆ. ಅಲ್ಲದೆ ಹೆಚ್ಚು ಆಕರ್ಷಣೆಯುಳ್ಳ ಅಮೃತ್‌ಮಾಲ್‌ ರಕ್ಷಣೆ ಕುರಿತು ಕೃಷಿ ಮೇಳದಲ್ಲಿ ಮಾಹಿತಿ ಲಭ್ಯವಿದೆ.

ಕೆ.ಜಿ ಮಾಂಸಕ್ಕೆ ಸಾವಿರ ರೂ.: ಪಶುಸಂಗೋಪನೆಯಲ್ಲಿ ಈ ಬಾರಿ ವಿವಿಧ ತಳಿಯ ಮೇಕೆ ಮತ್ತು ಕುರಿಗಳನ್ನು ಮೇಳದಲ್ಲಿ ವೀಕ್ಷಿಸಬಹುದಾಗಿದ್ದು, ಬೀಟಲ್‌, ಬೋಯರ್‌, ಜಮನಾಪುರಿ, ಸಾನಿಯನ್‌, ಡಾರ್‌ಫ‌ರ್‌, ಡಾರ್‌ಫ‌ರ್‌ ನಾರಿಕ್ರಾಸ್‌, ಅವಸಿ, ಜಕ್ರಾನ, ಇತ್ಯಾದಿ ದೇಶಿ ಹಾಗೂ ದೇಶಿ ತಳಿಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ಡಾರ್‌ಫ‌ರ್‌ ನಾರಿಕ್ರಾಸ್‌ ಎಂಬ ಸೌತ್‌ ಆಫ್ರಿಕನ್‌ ತಳಿಯ ಒಂದು ಕೆ.ಜಿ ಮಾಂಸದ ಬೆಲೆ ಬರೋಬ್ಬರಿ 1000 ರೂ. ಇದೆ ಎಂದು ಕುರಿ-ಮೇಕೆ ಸಾಕಣಿಕೆದಾರ ಮೆಲ್ವಿನ್‌ ಮಾಹಿತಿ ನೀಡಿದ್ದಾರೆ. ಈ ತಳಿಯ ಗಂಡು ಮೇಕೆ 100ರಿಂದ 120 ಕೆ.ಜಿ ತೂಗಿದರೆ, ಹೆಣ್ಣು 60ರಿಂದ 80 ಕೆ.ಜಿ ತೂಕ ಇರುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನ‌ ಸಾನಿಯಾನ್‌ ತಳಿ ದಿನಕ್ಕೆ 3ರಿಂದ 5 ಲೀಟರ್‌ ಹಾಲು ನೀಡುತ್ತದೆ. ಜತೆಗೆ ಈ ತಳಿಯ 1 ಕೆ.ಜಿ. ಮಾಂಸಕ್ಕೆ 750ರಿಂದ 800 ರೂ. ಇದ್ದು, ಹಾಲಿನ ರಾಸುವಾಗಿ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ.

* ಸಂಪತ್‌ ತರೀಕೆರೆ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.