ಜನ ಹಣಕ್ಕೆ ಮಹತ್ವ ನೀಡಿದ್ದರಿಂದ ನನಗೆ ಸೋಲು 


Team Udayavani, Nov 17, 2017, 12:07 PM IST

m5-janamahatva.jpg

ನಂಜನಗೂಡು: ತಾನು ಸ್ವಾಭಿಮಾನವನ್ನು ಪಣಕ್ಕಿಟ್ಟು ಉಪ ಚುನಾವಣೆ ಕಣಕ್ಕಿಳಿದಾಗ ಹೆಚ್ಚು ಜನ ಸ್ವಾಭಿಮಾನವನ್ನು ಬದಿಗಿಟ್ಟು ಹಣಕ್ಕೆ ಮಹತ್ವ ನೀಡಿದ್ದರಿಂದ ತನಗೆ ಸೋಲಾಯಿತು ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್‌ ವಿಷಾದಿಸಿದರು. ತಾಲೂಕಿನ ಹೆಗ್ಗಡಹಳ್ಳಿ ಜಿಪಂ ಸದಸ್ಯ ದಯಾನಂದ ಮೂರ್ತಿ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು.

ಉಪ ಚುನಾವಣೆ ನಂತರದ  ಪ್ರಥಮ ಹೃದಯ ಸ್ಪರ್ಷಿ ಸಭೆ ನಡೆದಿದೆ ಎಂದ ಅವರು, ಹೆಚ್ಚನ ಮತದಾರರು ಸ್ವಾಭಿಮಾನವನ್ನು ಬದಿಗೊತ್ತಿ ಸಿದ್ದರಾಮಯ್ಯನವರ ಹಣಕ್ಕೆ  ಪ್ರಾಧಾನ್ಯತೆ ನೀಡಿದರು. ಆದರೆ, ಹಣ ತಿರಸ್ಕರಿಸಿ ತಮಗೆ ಮತ  ನೀಡಿದ 65 ಸಾವಿರ ಜನತೆಗೆ ತಾವು ಅತ್ಯಂತ ಋಣಿಯಾಗಿರುವುದಾಗಿ ಹೇಳಿದರು.

ನೀವೇ ಅಭ್ಯರ್ಥಿಯಾಗಿ ಎಂಬ ಬೆಂಬಲಿಗರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್‌, ಕೆಲವು ತಮ್ಮ ಬೆಂಬಲಿಗರಿಗೆ  ಜೆ.ಪಿ.ಪ್ಯಾಲೇಸ್‌ನ ಮೂಳೆ ಹಾಗೂ ನೋಟುಗಳೇ ಪ್ರಧಾನವಾಯಿತು  ಎಂದರು. ಇನ್ನು ತಮ್ಮ ಸ್ಪರ್ಧೆ ವರಿಷ್ಟರಿಗೆ ಬಿಟ್ಟದ್ದು ಎಂದರು.

 ಎರಡು ಜಿಲ್ಲೆ ಸೀಮಿತ: ಬರುವ ಚುನಾವಣೆಯಲ್ಲಿ ತಾವು ಮೈಸೂರು ಚಾಮರಾಜ ನಗರ ಜಿಲ್ಲೆಗಳಿಗೆ ಸಿಮೀತರಾಗಲಿದ್ದು ಇವರೆಡು ಜಿಲ್ಲೆಗಳ ವರುಣ, ಚಾಮುಂಡೇಶ್ವರಿ, ಟಿ.ನರಸಿಪುರ  ನಂಜನಗೂಡು ಸೇರಿದಂತೆ ಎಲ್ಲಡೆ ಕಾಂಗ್ರೆಸ್‌ನ್ನು ಸೋಲಿಸುವ ಗುರಿ ಹೊಂದಿದ್ದೇವೆಂದರು.

ತಮ್ಮ ಕಾಲದಲ್ಲಿ ಆರಂಭಗೊಂಡ ಮಿನಿ ವಿಧಾನಸೌಧ, ಪದವಿ ಕಾಲೇಜು, ಬಸ್‌ ನಿಲ್ದಾಣ  ಬಾಲಕಿಯರ ಪದವಿ ಪೂರ್ವ ಕಾಲೇಜು, ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ, ಕೆರೆ ತುಂಬುವ ಕಾಮಗಾರಿ, ಸಮುದಾಯ ಭವನಗಳು ಮುಂತಾದವುಗಳನ್ನು ಬಿಟ್ಟರೆ ಇನ್ನೇನು ಕೆಲಸ ಪ್ರಾರಂಭಿಸಿದ್ದೀರಿ ಹೇಳಿ ಎಂದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು. 

ಹಣ ಹಂಚುವ ಲೋಕಸಭಾ ಸದಸ್ಯರು ಎಂದು ಟೀಕಿಸಿದ ಅವರು ಚುನಾವಣೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಣ ಹಂಚುವ ಸಾಮರ್ಥ್ಯ  ನಮ್ಮ ಸಂಸರಿಗಲ್ಲದೆ ಇನ್ಯಾರಿಗಿದೆ ಎಂದು  ಸಂಸದ ಧ್ರುವನಾರಾಯಣರ ಹೆಸರೇಳದೆ ತರಾಟೆಗೆ ತೆಗೆದುಕೊಂಡರು.

 ತಮ್ಮನ್ನು ಸೋಲಿಸುವ  ಭರದಲ್ಲಿ  ಸಮಾಜದ ನಾಯಕರೆಲ್ಲಾ ಒಂದಾಗಿ ದಲಿತರ ಸ್ವಾಭಿಮಾನವನ್ನೇ ಹೊಸಕಿ ಹಾಕಿದ ಖರ್ಗೆ, ಪರಮೇಶ್ವರ ಸೇರಿದಂತೆ ದಲಿತ ನಾಯಕರುಗಳು  ಎಂದ ಪ್ರಸಾದ ತಾವೇನು ಮಾಡುತ್ತಿದ್ದೇವೆ ಎಂದು ಯೋಚಿಸದೆ ಸಮುದಾಯವನ್ನೇ ಬಲಿಕೊಟ್ಟರೆಂದರು.

ಸಭೆ ಆಯೋಜಕ ದಯಾನಂದಮೂರ್ತಿ ಮಾತನಾಡಿದರು. ಜಿಪಂ ಸದಸ್ಯ ಸದಾನಂದ,  ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ,  ಹರ್ಷವರ್ಧನ, ಕೃಷ್ಣರಾಜಪುರದ ಸಿದ್ದಪ್ಪ, ಬಸವರಾಜು, ರಾಜಶೇಖರಮೂರ್ತಿ, ಸುರೇಶ, ಬಸವಣ್ಣ, ಶೇಖರ ಸೇರಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರಿದ್ದರು.

ನನ್ನ ಪುಸ್ತಕದಲ್ಲಿ 2 ಭಾಗಗಳಿವೆ. ಬೂಸಾ ಚಳವಳಿಯಿಂದ ಉಪ ಚುನಾವಣೆವರೆಗಿನ ವಿಷಯಗಳಿವೆ. ಅಲ್ಲದೆ, ನಂಜನಗೂಡು ಉಪಚುನಾವಣೆಯಲ್ಲಿ ಸಮಾಜವಾದಿ ಸಿದ್ದರಾಮಯ್ಯ  ಸೇರಿದಂತೆ ಇನ್ನಿತರ ನಾಯಕರು ನಡೆದುಕೊಂಡ ವಿವರಗಳನ್ನೂ ದಾಖಲಿಸಿ ಅವರ ಮುಖವಾಡವನ್ನು ಬಹಿರಂಗಪಡಿಸುವೆ. ಒಂದು ಭಾಗ ಈಗಾಗಲೆ ಮುದ್ರಣಕ್ಕೆ ಹೋಗಿದ್ದು ಇನ್ನೋಂದು ಭಾಗ ಕೆಲವೇ ದಿನಗಳಲ್ಲಿ ಮುದ್ರಣವಾಗಲಿದೆ.
-ಶ್ರೀನಿವಾಸ ಪ್ರಸಾದ, ಬಿಜೆಪಿ ಮುಖಂಡ

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.