ಅಹ್ಮದ್‌ನಗರ ಶ್ರೀ ಗುರುದೇವ  ಸೇವಾ ಬಳಗ: ಗುರುವಂದನೆ


Team Udayavani, Nov 17, 2017, 2:42 PM IST

14-Mum06a.jpg

ಪುಣೆ: ಆತ್ಮಶುದ್ಧಿಯೊಂದಿಗೆ ಧರ್ಮಮಾರ್ಗದಲ್ಲಿ ಮಾಡಿದ ಕಾರ್ಯಕ್ಕೆ ಭಗವಂತನ ಅನುಗ್ರಹವಿರುತ್ತದೆ. ನಾನು, ನನ್ನದು ನನ್ನಿಂದಾದುದು ಎಂಬ ಸ್ವಾರ್ಥಭಾವ ಧರ್ಮದ ಕಾರ್ಯದಲ್ಲಿ ಇರಬಾರದು. ನಿಸ್ವಾರ್ಥ ಸೇವೆಯೇ ಭಗವಂತನಿಗೆ ಪ್ರಿಯವಾದುದು. 

ಅಂತರಂಗದ ಸುಖ ಹಾಗೂ  ಬಹಿರಂಗದ ಸುಖ ಪರಿಶುದ್ಧವಾದ ಹೃದಯ, ಸಂಸ್ಕಾರಯುತ ಅಧ್ಯಾತ್ಮಿಕತೆಯಿಂದ ಕೂಡಿದ ಬದುಕುವ ಶೈಲಿಯನ್ನು ಪ್ರತಿಯೊಬ್ಬರೂ   ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ರಾಷ್ಟ್ರ ನಿರ್ಮಾಣ ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರ  ಕಾರ್ಯಕ್ಷೇತ್ರವು  ಧರ್ಮದ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಎಲ್ಲರೂ ತಮ್ಮ ಆತ್ಮಜ್ಯೋತಿಯನ್ನು ಬೆಳಗುವುದರ ಮೂಲಕ ಸಮಾಜದ ಜ್ಯೋತಿ ಯನ್ನು ಬೆಳಗುವಂತೆ ಮಾಡುವ ಕಾರ್ಯ ನಮ್ಮಿಂದಾಗಬೇಕು.  ನಮ್ಮ ಜೀವನದ ದುಃಖದನಾಲ್ಕು ಮುಖಗಳನ್ನು ಸರಿದಾರಿಗೆ ತರುವಂತಹ  ಶಕ್ತಿ ಅಧ್ಯಾತ್ಮಕ್ಕಿದೆ. ಅಧುನಿಕತೆಯ  ಜೀವನ ಶೈಲಿಗೆ   ಅಧ್ಯಾತ್ಮದೊಂದಿಗೆ ಉತ್ತಮ ಸಂಸ್ಕಾರದ
ಸ್ಪರ್ಶವಿರಬೇಕು.  ಮನುಷ್ಯ ಜನ್ಮದಲ್ಲಿ ಬಾಳಿದವನು ಬದುಕನ್ನು ಅತ್ಮಜ್ಞಾನದಿಂದ ಸಂಸ್ಕಾರ ಯುತವಾಗಿ ವಿಕಾಸಗೊಳಿಸಬೇಕು. ಆವಾಗ ಬದುಕು ಸುಂದರವಾಗಿ ರೂಪುಗೊಳ್ಳಬಹುದು. ಬದುಕುವ ಕಲೆಯಲ್ಲಿ ಧರ್ಮದ ಪಾಲನೆ ಅತಿಮುಖ್ಯವಾದುದು. ಉತ್ತಮ ಸಂಸ್ಕಾರಯುತ ವಾದ ಜೀವನ ಪದ್ಧತಿ ನಮ್ಮದಾದರೆ ಆತ್ಮಜ್ಯೋತಿಯು ಪ್ರಜ್ವಲಿಸಬಹುದು ಎಂದು ಶ್ರೀಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ  ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.

ನ. 9ರಂದು ಅಹ್ಮದ್‌ನಗರ ಸಾವೇಡಿ, ಪ್ರೇಮ ಧನ್‌ಚೌಕ್‌ನ ನಮಶ್ರೀ ಬಂಗಲೆ ವಠಾರದಲ್ಲಿ ನಡೆದ ಅಹ್ಮದ್‌ನಗರ ಶ್ರೀ  ಗುರುದೇವ ಸೇವಾ ಬಳಗದ ಗುರುವಂದನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಶ್ರೀಗಳು, ಅಧ್ಯಾತ್ಮ ಹಾಗೂ ಧರ್ಮದ ಪಾಲನೆ ಮುಖ್ಯ.  ಮನಸ್ಸು ಶುಚಿಯಾಗಿ ಮನ  ಶ್ರದ್ಧೆಯಿಂದ ಯಾವುದೇ ಸತ್ಕಾರ್ಯ ಮಾಡಿದರೂ ಯಶಸ್ಸಾಗುತ್ತದೆ. ಸೇವೆಯೆಂಬ ಮಹಾ ಕಾರ್ಯದಲ್ಲಿ ಪ್ರತಿಯೊಬ್ಬರು ಪುಷ್ಪದಂತೆಒಂದು ಪಾಲು ಇದ್ದರೆ
ಬದುಕು ಸಾರ್ಥಕವಾಗಬಹುದು. ಅದರ ಫಲ ಜನಮಾನಸವನ್ನು ತಲುಪಿದಾಗ ಆತ್ಮತೃಪ್ತಿ ದೊರಕುತ್ತದೆ. ನಮ್ಮ ಯುವ ಪೀಳಿಗೆಗೆ ಒಳ್ಳೆಯ ಸಂಸ್ಕಾರ, ಆಧ್ಯಾತ್ಮಿಕತೆಯೊಂದಿಗೆ ಬದುಕುವ ಕಲೆಯ ಅರಿವನ್ನು ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ  ಎಂದರು.
 ಶ್ರೀಗಳನ್ನು ಆರತಿ ಬೆಳಗಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ  ಬರಮಾಡಿಕೊಳ್ಳಲಾಯಿತು.

ಧಾರ್ಮಿಕ ಕಾರ್ಯಕ್ರಮವಾಗಿ  ಪಾದಪೂಜೆಯನ್ನು ಅಹ್ಮದ್‌ನಗರದ  ಭಕ್ತರ ಪರವಾಗಿ ಶ್ರೀ  ಗುರುದೇವ ಸೇವಾ ಬಳಗ ಅಹ್ಮದ್‌ನಗರ  ಅಧ್ಯಕ್ಷ, ಉದ್ಯಮಿ  ವಿಜಯ್‌  ಹೆಗ್ಡೆ ದಂಪತಿ ನೆರವೇರಿಸಿ ಗುರು ವಂದನೆ ಸಲ್ಲಿಸಿ ದರು. ಈ ಸಂದರ್ಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಉಪಸ್ಥಿತರಿದ್ದರು. ಅಹ್ಮದ್‌ನಗರ ಶ್ರೀ ಗುರುದೇವ ಸೇವಾ ಬಳಗದ ಪ್ರಮುಖರಾದ ವಿಶ್ವನಾಥ್‌  ಶೆಟ್ಟಿ ಅವರು ಈ ಕಾರ್ಯಕ್ರಮದ ಆಯೋಜನೆ ಮಾಡುವಲ್ಲಿ ಸಹಕರಿಸಿದರು.
ಅಪಾರ ಸಂಖ್ಯೆಯಲ್ಲಿ ಸೇರಿದ ಗುರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು.

 ಈ ಸಂದರ್ಭಅಹ್ಮದ್‌ ನಗರದ ಉದ್ಯಮಿಗಳು. ತುಳು ಕನ್ನಡಿಗರಲ್ಲದೆ ಇತರ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ದ್ದರು. ಪುಣೆ ಬಳಗದ ಕಾರ್ಯದರ್ಶಿ ಎನ್‌. ರೋಹಿತ್‌ ಡಿ. ಶೆಟ್ಟಿ,  ಕೋಶಾಧಿಕಾರಿ ರಂಜಿತ್‌ ಶೆಟ್ಟಿ,ಮಾಜಿ ಅಧ್ಯಕ್ಷರು, ಸಲಹೆಗಾರರಾದ   ನಾರಾಯಣ ಕೆ. ಶೆಟ್ಟಿ, ಉಷಾಕುಮಾರ್‌ ಶೆಟ್ಟಿ, ಬಳಗದ ಪ್ರಮುಖರಾದ ಸುರೇಶ್‌ ಶೆಟ್ಟಿ, ಅಮಿತ್‌ ಶೆಟ್ಟಿ  ಉಪಸ್ಥಿತರಿದ್ದರು.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.