ನೀವ್‌ ಒಪ್ಕೊಂಡ್ರೆ ಮಗಳೇ ಹೀರೋಯಿನ್‌


Team Udayavani, Nov 17, 2017, 6:16 PM IST

Nan-magale-Heroine.jpg

ಕಥೆ ಇಟ್ಟುಕೊಂಡು ಓಡಾಡುವ ನಿರ್ದೇಶಕನಿಗೆ ಹೇಗೋ ನಿರ್ಮಾಪಕರು ಸಿಗುತ್ತಾರೆ. ಸಿನಿಮಾ ನಿರ್ಮಿಸಲು ಮುಂದಾಗುವ ಆ ನಿರ್ಮಾಪಕ ಒಂದು ಕಂಡೀಷನ್‌ ಹಾಕುತ್ತಾನೆ. ಸಿನಿಮಾಕ್ಕೆ ನನ್ನ ಮಗಳೇ ಹೀರೋಯಿನ್‌ ಆಗಬೇಕೆಂದು. ಸಿಕ್ಕ ನಿರ್ಮಾಪಕನನ್ನು ಬಿಡಲಾಗದೇ, ನಿರ್ದೇಶಕ ಒಪ್ಪಿಕೊಳ್ಳುತ್ತಾನೆ. ಸಿನಿಮಾದ ಪೂರ್ವತಯಾರಿ ಜೋರಾಗಿಯೇ ಆರಂಭವಾಗುತ್ತದೆ.

ನಟನೆಯ ಗಂಧಗಾಳಿ ಗೊತ್ತಿಲ್ಲದ ನಿರ್ಮಾಪಕರ ಮಗಳಿಗೆ ರಿಹರ್ಸಲ್‌ ಮೇಲೆ ರಿಹರ್ಸಲ್‌ ನಡೆಯತ್ತೆ. ಕೊನೆಗೂ ಸಿನಿಮಾದ ಮುಹೂರ್ತದ ದಿನ ಬರುತ್ತದೆ. ನಿರ್ದೇಶಕ ನಿಟ್ಟುಸಿರು ಬಿಡುತ್ತಾನೆ. ಅಷ್ಟರಲ್ಲಿ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ನನ್‌ ಮಗಳೇ ಹೀರೋಯಿನ್‌’ ಚಿತ್ರ ನೋಡಿ. ಹೆಸರಿಗೆ ತಕ್ಕಂತೆ ಇದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ.

ಒಬ್ಬ ಯುವ ನಿರ್ದೇಶಕ ಸಿನಿಮಾ ಮಾಡಲು ಹೊರಟಾಗ ಎದುರಾಗುವ ಸಮಸ್ಯೆಗಳನ್ನಿಟ್ಟುಕೊಂಡು ಇಡೀ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಪ್ರತ್ಯೇಕವಾಗಿ ಕಾಮಿಡಿ ಟ್ರ್ಯಾಕ್‌ ಇಲ್ಲ. ಆದರೆ, ಚಿತ್ರದಲ್ಲಿನ ಸನ್ನಿವೇಶಗಳನ್ನೇ ಕಾಮಿಡಿಯಾಗಿ ಹೇಳಲಾಗಿದೆ. ಹಾಗಾಗಿ, ಆರಂಭದಿಂದಲೂ ನಗುವ ಸರದಿ ನಿಮ್ಮದು. ಮೇಲ್ನೋಟಕ್ಕೆ ಚಿತ್ರ ಕಾಮಿಡಿಯಾಗಿ ಸಾಗಿದರೂ ಇಲ್ಲಿ ಒಬ್ಬ ಯುವ ನಿರ್ದೇಶಕನ ಕನಸು,

ಆತನ ಕೌಟುಂಬಿಕ ಸಮಸ್ಯೆ, ಗುರಿಮುಟ್ಟಲು ಆತ ಪ್ರತಿ ಹಂತದಲ್ಲೂ ಕಾಂಪ್ರಮೈಸ್‌ ಆಗಬೇಕಾದ ಅನಿವಾರ್ಯತೆಯನ್ನು ಇಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಸದ್ಯ ಗಾಂಧಿನಗರದಲ್ಲಿ ಕಥೆ ಹಿಡಿದು ನಿರ್ಮಾಪಕರನ್ನು ಹುಡುಕುವ ಯುವ ನಿರ್ದೇಶಕರಿಗೆ ಸಿನಿಮಾ ನೋಡುವಾಗ ತಮ್ಮ ಕಥೆ ನೆನಪಾದರೂ ಅಚ್ಚರಿಯಿಲ್ಲ. ಆ ಮಟ್ಟಿಗೆ “ನನ್‌ ಮಗಳೇ ಹೀರೋಯಿನ್‌’ ಒಂದು ನೀಟಾದ ಸಿನಿಮಾ.

ಚಿತ್ರದಲ್ಲಿ ಡಬಲ್‌ ಮೀನಿಂಗ್‌ ಸಂಭಾಷಣೆ ಇಲ್ಲದೇ, ಇಡೀ ಸಿನಿಮಾವನ್ನು ಫ‌ನ್ನಿ ಸಂಭಾಷಣೆ ಹಾಗೂ ಸನ್ನಿವೇಶಗಳ ಮೇಲೆಯೇ ಕಟ್ಟಿಕೊಡಲಾಗಿದೆ. ಕಾಮಿಡಿ ಸಿನಿಮಾಗಳ ಮಧ್ಯೆ ಸೆಂಟಿಮೆಂಟ್‌ ತುರುಕಿದರೆ ಅದು ವಕೌಟ್‌ ಆಗೋದಿಲ್ಲ ಎಂಬ ಸತ್ಯ ನಿರ್ದೇಶಕರಿಗೆ ಗೊತ್ತಿದೆ. ಹಾಗಾಗಿ, ಸೆಂಟಿಮೆಂಟ್‌ ದೃಶ್ಯ ಇದ್ದರೂ ಅದನ್ನು ಹೆಚ್ಚು ಎಳೆದಾಡದೇ ಇಂಟರ್‌ವಲ್‌ಗೆ ಮುಗಿಸಿದ್ದಾರೆ.

ಅಂದಹಾಗೆ, ಈ ಸಿನಿಮಾ ನೋಡಿದಾಗ ನಿಮಗೆ ತಮಿಳಿನ “ಉಪ್ಪು ಕರುವಾಡು’ ಚಿತ್ರದ ನೆರಳು ಕಾಣಿಸಬಹುದು. ಅದೇನೇ ಆದರೂ ನಿರ್ದೇಶಕರು ಇಡೀ ಸಿನಿಮಾವನ್ನು ಲವಲವಿಕೆಯಿಂದ ಕಟ್ಟಿಕೊಡಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಇಲ್ಲಿ ಹೆಚ್ಚು ಪಾತ್ರಗಳಿಲ್ಲ, ಕೆಲವೇ ಪಾತ್ರಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಬರುವ ಗಡ್ಡಪ್ಪ ದೃಶ್ಯದ ಅವಶ್ಯಕತೆ ಸಿನಿಮಾಕ್ಕೆ ಇರಲಿಲ್ಲ. ಅದು ಸಿನಿಮಾದಿಂದ ಹೊರತಾಗಿ ಕಾಣುತ್ತದೆ.

ಬಹುತೇಕ ಕಥೆ ನಡೆಯೋದು ಮಂಗಳೂರಿನಲ್ಲಿ. ಜೊತೆಗೆ ಮಂಗಳೂರಿನ ಅಣ್ಣಪ್ಪ ರೈ ಎಂಬ ಪಾತ್ರ ಬೆಂಗಳೂರು ಕನ್ನಡ ಮಾತನಾಡುತ್ತದೆ. ಈ ಬಗ್ಗೆಯೂ ನಿರ್ದೇಶಕರು ಗಮನ ಹರಿಸಬೇಕಿತ್ತು.ಮುಖ್ಯವಾಗಿ ಸಿನಿಮಾದ ಆರಂಭದಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಬರುತ್ತವೆ. ಆದರೆ, ಕ್ಲೈಮ್ಯಾಕ್ಸ್‌ ವೇಳೆಗೆ ಎಲ್ಲಾ ಗೊಂದಲಗಳಿಗೂ ನಿರ್ದೇಶಕರು ತೆರೆಎಳೆದಿದ್ದಾರೆ. ಆ ಮಟ್ಟಿಗೆ ಇದು ಗೊಂದಲಮುಕ್ತ ಸಿನಿಮಾ ಎನ್ನಬಹುದು. 

ನಾಯಕ ಸಂಚಾರಿ ವಿಜಯ್‌ಗೆ ಈ ಪಾತ್ರ ಹೊಸದು. ಆದರೂ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಒಬ್ಬ ಯುವ ನಿರ್ದೇಶಕನ ಕನಸು, ತಲ್ಲಣ, ಅನಿವಾರ್ಯತೆಯ ಪಾತ್ರದಲ್ಲಿ ವಿಜಯ್‌ ಇಷ್ಟವಾಗುತ್ತಾರೆ. ನಾಯಕಿ ದೀಪಿಕಾ ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ. ಅಮೃತಾ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಬಿ.ಸಿ.ಪಾಟೀಲ್‌, ತಬಲಾ ನಾಣಿ, ವಿಜಯ್‌ ಚೆಂಡೂರು, ಪವನ್‌, ಬುಲೆಟ್‌ ಪ್ರಕಾಶ್‌ ನಟಿಸಿದ್ದಾರೆ.

ಚಿತ್ರ: ನನ್‌ ಮಗಳೇ ಹೀರೋಯಿನ್‌
ನಿರ್ಮಾಣ: ಪಟೇಲ್‌ ಆರ್‌. ಅನ್ನದಾನಪ್ಪ- ಎಸ್‌.ಬಿ.ಮೋಹನ್‌ ಕುಮಾರ್‌
ನಿರ್ದೇಶನ: ಬಾಹುಬಲಿ
ತಾರಾಗಣ: ಸಂಚಾರಿ ವಿಜಯ್‌, ದೀಪಿಕಾ, ಅಮೃತಾ ರಾವ್‌, ಬಿ.ಸಿ.ಪಾಟೀಲ್‌, ತಬಲಾ ನಾಣಿ, ವಿಜಯ್‌ ಚೆಂಡೂರು, ಪವನ್‌, ಬುಲೆಟ್‌ ಪ್ರಕಾಶ್‌ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.