ಇಡ್ಲಿ ವಡೆ ಮತ್ತು ಹುಡುಗಿಯರ ಮ್ಯಾನೇಜಮೆಂಟ್


Team Udayavani, Nov 17, 2017, 6:23 PM IST

17-9.jpg

ಜೀವನದಲ್ಲಿ ಹಾಸ್ಟೆಲ್‌ ಎಂಬ ವಸತಿನಿಲಯಗಳಲ್ಲಿ ಸ್ವಲ್ಪ ಕಾಲವಾದರೂ ತಂಗಿದ್ದಲ್ಲಿ ಅವರೆಲ್ಲರ ಬಾಯಿಯಿಂದ ಬರುವ ಒಂದೇ ಮಾತೆಂದರೆ, ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್‌ ಲೈಫ್ ಅನುಭವಿಸಬೇಕೆಂಬುದು. ಅದು ಸಿಹಿ-ಕಹಿ ಘಟನೆಗಳ ಮೇಲೋಗರವಾಗಿದ್ದರೂ ನಾವು ಕಾಲೇಜಿನ ಪಾಠ-ಪ್ರವಚನಗಳಲ್ಲಿ ಕಲಿಯದ ಅನೇಕ ಜೀವನ ಪಾಠಗಳನ್ನು ಹಾಸ್ಟೆಲ್‌ನಲ್ಲಿ ಕಲಿತಿರುತ್ತೇವೆ. ನನಗೆ 10 ವರ್ಷದ  ಹಾಸ್ಟೆಲ್‌ ಜೀವನ, ಏಳು ವರ್ಷ ವಿದ್ಯಾರ್ಥಿನಿಯಾಗಿ ಹಾಗೂ ಮೂರು ವರ್ಷ ಉದ್ಯೋಗಸ್ಥ ಮಹಿಳಾ ವಸತಿ ನಿಲಯದ ಜೀವನದಲ್ಲಿ. ಕಹಿಗಿಂತ ಸಿಹಿನೆನಪುಗಳೇ ಹೆಚ್ಚು. ಸಿಹಿನೆನಪುಗಳು ಆಗಾಗ ಮನಸ್ಸಿಗೆ ಹಿತ ನೀಡಿದರೆ ಕಹಿ ನೆನಪುಗಳು “ಆಹಾ! ನಾನು ಈಗೆಷ್ಟು ಸುಖೀ’ ಎಂಬ ಬೆಚ್ಚಗಿನ ಭಾವವನ್ನು ಒದಗಿಸಿ ಮಲಯ ಮಾರುತ ಚಿತ್ರದ ಅಧರಂ ಮಧುರಂ…. ಹಾಡನ್ನು ಸ್ವಲ್ಪ ತಿರುಚಿ ಗಂಡನು ಮಧುರಂ… ಮಕ್ಕಳೂ ಮಧುರಂ… ಮನೆಯೂ ಮಧುರಂ… ಮನೆಗೆಲಸವೂ ಮಧುರಂ ಎನ್ನುವ ಜೀವನಶೈಲಿಯನ್ನು ರೂಢಿಸಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಿದೆ.

ನನ್ನ ಹಾಸ್ಟೆಲ್‌ ಜೀವನದ ವಿಶೇಷವೆಂದರೆ, ಕಲಾ ವಿದ್ಯಾರ್ಥಿಯಾದ ನನಗೆ  ಹತ್ತರಲ್ಲಿ ಮೊದಲ ಒಂದು ವರ್ಷ ಬಿಟ್ಟು  ಉಳಿದ ಒಂಬತ್ತು ವರ್ಷಗಳು ನನ್ನ ಜೊತೆಗಾರ್ತಿಯರು ಸೈನ್ಸ್‌ ವಿದ್ಯಾರ್ಥಿಗಳು, ನಂತರದ  ರೂಮ್‌ಮೇಟ್‌ಗಳೂ ಎಂಜಿನಿಯರ್ಸ್‌ ಆಗಿದ್ದುದು. ನನಗೆ ನನ್ನ ಪಠ್ಯಪುಸ್ತಕಗಳ ಜೊತೆಗೆ ಅವರ ಪುಸ್ತಕಗಳ ಆಥರ್‌ಗಳ ಹೆಸರುಗಳೂ ಚೆನ್ನಾಗಿ ನೆನಪಲ್ಲಿ ಉಳಿದಿರುತ್ತಿತ್ತು. ಅವರೆಲ್ಲ ಒಂದು ನಿಮಿಷವನ್ನೂ ವೃಥಾ ವ್ಯಯಿಸದೇ ಕಾಲೇಜ್‌, ಟ್ಯೂಶನ್‌, ರೂಮಿಗೆ ಬಂದೊಡನೆ ಓದು ಎಂದು ತುಂಬಾ ಪ್ರಾಂಪ್ಟ್ ಸ್ಟೂಡೆಂಟ್‌ಗಳಾಗಿದ್ದರು. ನಾನು ಪರೀಕ್ಷೆಯ ಸಮಯದಲ್ಲಿ ಮಾತ್ರ ಇಂಗ್ಲಿಶ್‌, ಹಿಸ್ಟರಿ, ಎಕನಾಮಿಕ್ಸ್‌ ಓದುತ್ತಿದ್ದು ವರ್ಷವಿಡೀ ಕನ್ನಡ ಸಾಹಿತ್ಯ, ಕಥೆ-ಕಾದಂಬರಿ ಓದುತ್ತಿ¨ªೆ. ಆಗ ನನಗೆ ತುಂಬಾ ಖುಷಿ ಕೊಡುತ್ತಿದ್ದ ವಿಷಯವೆಂದರೆ ಇಂಗ್ಲಿಶ್‌ ಸಾಹಿತ್ಯದ ಪಾರಿಭಾಷಿಕ ಶಬ್ದಗಳನ್ನೆಲ್ಲ ಪರೀಕ್ಷೆಯಲ್ಲಿ ವಿವರಿಸುವಾಗ ಅದರ ಮಧ್ಯದಲ್ಲಿ ಉದಾಹರಣೆಯಾಗಿ ಕನ್ನಡ ಕಾದಂಬರಿಗಳನ್ನು, ಭಾವಗೀತೆಗಳನ್ನು ಉಲ್ಲೇಖೀಸುವುದಾಗಿತ್ತು.

ಮಕ್ಕಳನ್ನೆಲ್ಲ ದೊಡ್ಡದೇನೋ ಓದಿಸಬೇಕೆಂಬ ಮಹತ್ವಾಕಾಂಕ್ಷೆ ಯಿಂದ ಪಿಯುಸಿಯಲ್ಲಿ  ಸೈನ್ಸ್‌ ಕೊಡಿಸಿ ಹಾಸ್ಟೆಲ್‌ನಲ್ಲಿರಿಸಿದ ಪೋಷಕರಿಗೆ, ಯಾವಾಗಲೂ ಕಥೆ-ಕಾದಂಬರಿ ಓದುವ ರೂಮ್‌ಮೇಟ್‌ ನಾನು ಎಂದು ತಿಳಿದು ಅವರಿಗೆ ತುಂಬ ನೋವಾಗುತ್ತಿತ್ತೇನೊ? ಆದರೆ, ಅದನ್ನೆಲ್ಲ ಅವರ ಪೋಷಕರ ಹತ್ತಿರ ಹೇಳಬಾರದೆಂಬ ಕಾಮನ್‌ಸೆನ್ಸ್‌ ನನ್ನ ರೂಮಿಗಳಿಗಿತ್ತು. ನಾನು ಎರಡು ವರುಷಗಳ ಕಾಲ ನನ್ನ ರೂಮ್‌ಮೇಟ್‌ ಒಬ್ಬಳನ್ನು ಪ್ರತಿದಿನ ಅಲಾರಮ್‌ ಕೂಗಿದ ಕೂಡಲೇ ಹತ್ತಿರ ಹೋಗಿ ಎಬ್ಬಿಸಬೇಕಿತ್ತು. ಆ ಕೆಲಸವನ್ನೂ ತುಂಬಾ ನಿಯತ್ತಿನಿಂದ ಮಾಡಿ ನಾನು ಮಾತ್ರ ಕಡೆಯ ಟ್ರಿಪ್‌ ಬಿಸಿನೀರಿನ ಬೆಲ್‌ ಆಗುವವರೆಗೂ ಮಲಗಿರುತ್ತಿದ್ದೆ. ಈಗವಳು ಡಾಕ್ಟರ್‌ ಆಗಿದ್ದಾಳೆ. ಎರಡು ವರ್ಷ ಬೆಳಿಗ್ಗೆ ಎಬ್ಬಿಸಿ ಓದಿಸಿದ  ಋಣವೋ ಏನೋ ಈಗ ನನ್ನೆಲ್ಲ ಅರೋಗ್ಯ ಸಮಸ್ಯೆ-ಸಂದೇಹಗಳಿಗೂ ತುಂಬಾ ಸಮಾಧಾನದಿಂದ ಫೋನ್‌ನಲ್ಲೇ ಉತ್ತರಿಸುತ್ತಾಳೆ.

 ಹದಿಮೂರರ ಮಗ್ಗಿಗೇ ತಡಕಾಡುವ ನನಗೆ, ಪಿಯೂಸಿಯಲ್ಲಿ ಅವರುಗಳು ತುಂಬಾ ಕ್ಲಿಷ್ಟಕರ ಎಂದು  ಬಿಂಬಿಸುತ್ತಿದ್ದ ಫಿಸಿಕ್ಸ್‌ ಪ್ರಾಬ್ಲೆಮ್ಸ…ನ್ನು ಪರೀಕ್ಷೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸರಿ ಮಾಡುವವರು ತುಂಬಾ ಬುದ್ಧಿವಂತರಂತೆ ಗೋಚರಿಸುತ್ತಿದ್ದರು. ತಮ್ಮ ಕ್ಲಾಸ್‌ಮೇಟ್‌ ಗಳ ಬಗ್ಗೆ ಹೇಳುವಾಗಲೂ ಅವರು, “ಇಂಥವರು ಎರಡು, ಇವರು ಮೂರು ಪ್ರಾಬ್ಲಿಮ್‌ ಸಾಲ್‌Ì ಮಾಡುತ್ತಾರೆ’ ಎಂದು ಹೇಳಿ, ನನಗೆ  ಫಿಸಿಕ್ಸ್‌ ಪ್ರಾಬ್ಲಿಮ್‌ ಸಾಲ್ವಿಂಗ್‌ ಸ್ಕಿಲ್‌ನಿಂದಲೇ ಅವರವರ ಬುದ್ಧಿಮತ್ತೆ ಅಸ್ಸೆಸ್‌ ಮಾಡಬಹುದು ಎಂದು ಹೊಸ ವಿಷಯವನ್ನು ಮನವರಿಕೆ ಮಾಡಿದ್ದರು. ನನ್ನೆಲ್ಲಾ ಸೈನ್ಸ್‌ ರೂಮ್‌ಮೇಟ್‌ಗಳ ಬಗ್ಗೆ ನಾನು ಹೆಮ್ಮೆ ಪಟ್ಟಿದ್ದು ಯೂನಿವರ್ಸಿಟಿಯಲ್ಲಿ ಎಂ.ಎ. ಓದುವಾಗ. ಕಂಪ್ಯೂಟರ್‌ ಸೈನ್ಸ್‌ ಓದುವವರಿದ್ದರೂ ಆಗಿನ್ನೂ ರೂಮ್‌ಗಳಲ್ಲಿ ಲ್ಯಾಪ್‌ಟಾಪ್‌ ಅಥವಾ ಡೆಸ್ಕ್ಟಾಪ್‌ಗ್ಳನ್ನು ಇಟ್ಟುಕೊಳ್ಳಲು ಈಗಿನಂತೆ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹಾಗೊಂದು ವೇಳೆ ಕಲ್ಪಿಸಿದ್ದರೂ ಹೆಣ್ಣುಮಕ್ಕಳು ಇಸ್ತ್ರಿ ಪೆಟ್ಟಿಗೆ, ಎಲೆಕ್ಟ್ರಿಕ್‌ ಸ್ಟವ್‌ ಮುಂತಾದವನ್ನು ಇಟ್ಟುಕೊಂಡು ಜಾಸ್ತಿ ಕರೆಂಟ್‌ ಖರ್ಚು ಮಾಡುತ್ತಾರೆ. ಹೀಗೆಂದುಕೊಂಡು ಪ್ಲಗ್‌ ಪಾಯಿಂಟ್‌ಗಳನ್ನೂ ಡಿಸ್ಕನೆಕ್ಟ್ ಮಾಡಿದ್ದರು. ಆಗ ಎಂ.ಎಸ್ಸಿ. ಓದುತ್ತಿದ್ದ ನನ್ನ ರೂಮ್‌ಮೇಟ್‌ ಹೊರಗಡೆ ಮೇನ್‌ ಸ್ವಿಚ್‌ ಆಫ್ ಮಾಡಿಕೊಂಡು, ಚಮಚಾದಲ್ಲೇ ಸಾಕೆಟ್‌ ಬಿಚ್ಚಿ  ಒಳಗೆ ಜೋಡಿಸಬೇಕಾದ್ದನ್ನು ಜೋಡಿಸಿ  ನನ್ನ ವಾಕ್‌ಮನ್‌ನಲ್ಲಿ, “ಬಾರೆ ನನ್ನ ದೀಪಿಕಾ… ಮಧುರ ಕಾವ್ಯ ರೂಪಕ’ ಎಂದು ಹಾಡಿಸಿಬಿಟ್ಟಳು! 

ಜೀವನದಲ್ಲಿ ಹೊಂದಾಣಿಕೆ ಎಂಬುದನ್ನು ಕಲಿಯಲು ಹಾಸ್ಟೆಲ್‌ ಲೈಫ್ ತುಂಬಾ ಸಹಕಾರಿ. ನಾನು ಪದವಿ ಓದುತ್ತಿದ್ದಾಗ ನಮ್ಮ ಪಕ್ಕದ ರೂಮಿನಾಕೆ ಎರಡು ಬಕೆಟ್‌ ನೀರಿನ ಮಿತಿಯಿದ್ದಿದ್ದು ಗೊತ್ತಿದ್ದೂ ನಾಲ್ಕು-ಐದು ಬಕೆಟ್‌ ಬಿಸಿನೀರನ್ನು ಹಿಡಿದುಕೊಂಡು ಬೇರೆಯವರಿಗೆ ನೀರು ಸಿಗದಂತೆ ಮಾಡುತ್ತಿದ್ದಳು. ಆಮೇಲೊಂದು ದಿನ ಆಕೆಗೆ ಯಶಸ್ವಿಯಾಗಿ  ಬುದ್ಧಿ ಕಲಿಸಿದ ತಂಡದಲ್ಲಿ ನಾನೂ ಇದ್ದೆ.

ಇನ್ನು ಊಟ-ತಿಂಡಿ ವಿಷಯದಲ್ಲೂ ಅಷ್ಟೇ. ಹಳ್ಳಿಯಲ್ಲೇ ಹುಟ್ಟಿ ಬೆಳೆದ ನನಗೆ ಹಸುವಿನ ಪರಿಶುದ್ದ ದಪ್ಪ ಹಾಲಿನ ಪ್ರಾಮುಖ್ಯ ಗೊತ್ತಾಗಿದ್ದು ಅಡುಗೆ ಭಟ್ಟರು ಹಾಲಿನ ಪ್ಯಾಕೆಟ್‌ಗೆ 1:1 ಅನುಪಾತದಲ್ಲಿ ನೀರು ಸೇರಿಸಿ ಕಾಫಿ ಟೀ ಮಾಡಿಕೊಟ್ಟಾಗ. ನಾನು ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರ ಮತ್ತು ಉದ್ಯೋಗಸ್ಥ ಮಹಿಳೆಯರ ವಸತಿನಿಲಯದಲ್ಲಿ¨ªಾಗ ಶುಕ್ರವಾರ ಇಡ್ಲಿ ವಡೆ ಸಾಂಬಾರ್‌ ಮಾಡುತ್ತಿದ್ದರು. ಒಬ್ಬರಿಗೆ ಒಂದೇ ವಡೆ, ಇಡ್ಲಿ ಯಥಾನುಶಕ್ತಿ! ಹೆಚ್ಚಿನ ಹುಡುಗಿಯರು ಹಾಗೂ ಹೀಗೂ ಎರಡು ವಡೆ ಬಡಿಸಿಕೊಂಡು ಒಂದೂ ಇಡ್ಲಿಯನ್ನು ತಿನ್ನದೇ ಕಾಲೇಜ್‌ಗೆ ಹೋಗುತ್ತಿದ್ದರು. ಮಾಡಿದ ಇಡ್ಲಿಯಲ್ಲಿ ಅರ್ಧದಷ್ಟು ಮಿಕ್ಕುತ್ತಿತ್ತು. ಅನಂತರ ಒಂದು ನಿಯಮ ಪಾಲಿಸಬೇಕಾಯಿತು, ಒಬ್ಬರಿಗೆ ಒಂದೇ ವಡೆ ಎಂದು ಆ ವಡೆಯನ್ನು ಕಾಯಲು ಒಬ್ಬ ವಾರ್ಡನ್‌ ಆಂಟಿ ನಿಂತುಕೊಳ್ಳುತ್ತಿದ್ದರು. ನಮಗೆಲ್ಲ ತುಂಬಾ ನಗು. ನಾವು ಟೀಚರ್ಸ್‌, ಎಂಜಿನಿಯರ್ಸ್‌, ಬ್ಯಾಂಕ್‌ ಉದ್ಯೋಗಿಗಳೆಲ್ಲರೂ ವಡೆ ಕದಿಯುವುದಿಲ್ಲ ಎಂಬ ನಂಬಿಕೆಯಿದ್ದರೂ ಅವರು ವಡೆ ಪಾತ್ರೆ ಪಕ್ಕದಲ್ಲಿ ನಿಂತುಕೊಳ್ಳುತ್ತಿದ್ದರು. ಹಾಗಾಗಿ, ಕೆಲವು ಹುಡುಗಿಯರು ವಡೆಯೊಂದನ್ನೇ ಬೆಳಗಿನ ಉಪಹಾರವಾಗಿ ತಿಂದು  ಕಾಲೇಜ್‌ನಲ್ಲಿ ತಲೆತಿರುಗಿ ಬಿದ್ದಾಗ ಇಡ್ಲಿಯೊಂದಿಗೆ ವಡೆ  ನಿಲ್ಲಿಸಿಬಿಟ್ಟರು. ಶುಕ್ರವಾರ ಕೇವಲ ಇಡ್ಲಿ ಸಾಂಬಾರ್‌ನೊಟ್ಟಿಗೆ ಹೊಟ್ಟೆ ತಂಪಾಗಿಸಿಕೊಳ್ಳುವುದು ಎಲ್ಲರಿಗೂ ಅನಿವಾರ್ಯವಾಯಿತು.

ಮೊನ್ನೆ ಮೊನ್ನೆ ನನ್ನ ಮಾವ, “ಶಿವಮೊಗ್ಗದಲ್ಲೊಂದು ಲೇಡೀಸ್‌ ಪೀಜಿ ತೆಗೆಯಬೇಕೆಂದಿದ್ದೇನೆ, ನಿನ್ನ ಹಾಸ್ಟೆಲ್‌ ಅನುಭವಗಳಲ್ಲಿ ಹುಡುಗಿಯರ  ಆದ್ಯತೆ ಏನು? ಪೀಜಿಯಲ್ಲಿ ಏನೇನು ಸೌಲಭ್ಯಗಳಿರಬೇಕು, ಏನೇ ನಿರಬಾರದು?’ ಎಂದು ನನ್ನನ್ನು ಕೇಳಿದಾಗ, ನನ್ನ 10 ವರ್ಷಗಳ ಹಾಸ್ಟೆಲ್‌ ಜೀವನ ಸಾರ್ಥಕ ಎಂದುಕೊಂಡೆ. ನನಗನಿಸಿದ್ದನ್ನೆಲ್ಲ ಹೇಳಿದೆ, ಬೆಳಗಿನ ಉಪಹಾರಕ್ಕೆ ಇಡ್ಲಿ ವಡೆ ಎರಡೂ ಮಾಡಿಸಿ ಹುಡುಗಿಯರನ್ನು ಮ್ಯಾನೇಜ್‌ ಮಾಡುವ ಬಗೆಯನ್ನೂ ವಿವರಿಸಿದೆ.

ಆಗೀಗ ಓಡಾಡುವಾಗ ನಾನಿದ್ದ ಕೆಲವು ಹಾಸ್ಟೆಲ್‌ಗ‌ಳ ಮುಂದೆ ಹಾಯ್ದು ಹೋಗುವಾಗೆಲ್ಲ  ನಾನು ಎಡಬಿಡದೇ, ಪೂರ್ಣವಿರಾಮ ಇಡದೆ ನನ್ನ ಮಧುರ ನೆನಪುಗಳನ್ನು ನನ್ನವರಿಗೆ ಕೊರೆಯುತ್ತಿರುತ್ತೇನೆ.  ಒಮ್ಮೆ ಒಳಹೊಕ್ಕು ನಾವು ಬಾಗಿಲ ಮೂಲೆಯಲ್ಲಿ  ಚಿಕ್ಕದಾಗಿ ಕೊರೆದ ನಮ್ಮ ಹೆಸರುಗಳು ಇನ್ನೂ ಇದೆಯ ಇಲ್ಲಾ ಪೇಯಿಂಟ್‌ ಮಾಡಿಬಿಟ್ಟಿ¨ªಾರಾ ಎಂದು ನೋಡುವಾಸೆ! 

ಆದರೆ, ಈಗ ನನ್ನ ಮಗ “ಅಮ್ಮ… ನೀವೆಲ್ಲಾ ಬ್ಯಾಡ್‌ ಗರ್ಲ್ಸ್‌ ಆಗಿದ್ರಾ ?’ ಎಂದು ಕೇಳಿಬಿಟ್ಟರೆ! 
ನನ್ನಲ್ಲಿ ಉತ್ತರವಿಲ್ಲ.

ವಿದ್ಯಾ ಹೊಸಕೊಪ್ಪ

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.