ಮಕ್ಕಳ ಮೇಲೆ ಹೇರಿಕೆ ಸಲ್ಲದು: ಚಿನ್ನಪ್ಪ ಗೌಡ
Team Udayavani, Nov 18, 2017, 9:51 AM IST
ಅತ್ತಾವರ: ಮಕ್ಕಳಿಗೆ ಅನುಭವಿಸಿ ಕಲಿಯುವುದಕ್ಕೆ ಪೂರಕ ವಾತಾವರಣವನ್ನು ಹೆತ್ತವರು ಕಲ್ಪಿಸಿಕೊಡಬೇಕು. ಯಾವುದೇ ವಿಚಾರವನ್ನು ಹೇರಿಕೆ ಮಾಡಬಾರದು ಎಂದು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಹೇಳಿದರು.
ಸರೋಜಿನಿ ಮಧುಸೂದನ್ ಕುಶೆ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಎರಡು ದಿನ ಕಾಲ ನಡೆಯುವ ‘ಸರೋಜ್ ಮಧು ಕಲಾ ಉತ್ಸವ್-2017’ ಅಂತರ್ ಶಾಲಾ ಕಾಲೇಜು ಸ್ಪರ್ಧೆಯನ್ನು ಅವರು ಶುಕ್ರವಾರ ಉದ್ಘಾಟಿಸಿದರು.
ಮಾತಿಗಿಂತ ಹೆಚ್ಚು ತೆರೆದ ಕಣ್ಣು, ತೆರೆದ ಕಿವಿ ಮತ್ತು ಸಹೃದಯ ಇರಬೇಕು. ಅಂತಹ ವ್ಯಕ್ತಿತ್ವ ಬೆಳೆಸಲು ಮಕ್ಕಳಿಗೆ ಅವಕಾಶ ಸೃಜಿಸಬೇಕು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅನುಭವಗಳು ಸಿಗುತ್ತಿದ್ದು, ಅವುಗಳು ನೆನಪಾಗಿ ಉಳಿದು ಭರವಸೆಗೆ ದಾರಿದೀಪವಾಗಬೇಕು. ಭರವಸೆಗಳೇ ಹೊಸ ಕನಸುಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.
ಪಿವಿಎಸ್ ಗ್ರೂಪ್ ಅಧ್ಯಕ್ಷೆ ಮತ್ತು ಎಂಡಿ ಸರೋಜಿನಿ ಎಂ. ಕುಶೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಟೂನ್ ಕಲಾವಿದ ಜಾನ್ ಚಂದ್ರನ್ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೆ. ವಿ. ವಾಸುದೇವ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೆ. ಕೆ. ಉಪಾಧ್ಯಾಯ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.