ಬರದಲ್ಲೂ ಹಸಿರು ಮೇವು ನೀಡುವ “ಹೈಡ್ರೋಫೋನಿಕ್ ‘
Team Udayavani, Nov 18, 2017, 9:56 AM IST
ಬೆಂಗಳೂರು: ಸತತ ಬರಗಾಲ, ನೀರಿನ ಕೊರತೆ, ಮೇವು ಬೆಳೆಯಲು ಜಮೀನಿಲ್ಲ . ಇದ್ದರೂ ಆಳು ಕಾಳು ಎಲ್ಲ ಸೇರಿ ಮೇವು ಬೆಳೆಯಲು 3 ತಿಂಗಳು ಕಾಯ ಬೇಕು. ಆದರೆ ಈ ಆತಂಕ ಈಗ ಬೇಡ. ಯಾವುದೇ ಶ್ರಮವಿಲ್ಲದೆ, ಕೇವಲ ಬಟನ್ ಆನ್ -ಆಫ್ ಮಾಡುವ ಮೂಲಕ ನಿತ್ಯ ಐದು ಹಸುಗಳಿಗಾಗುವಷ್ಟು ಹಸಿರು ಮೇವನ್ನು ರೈತರು ಮನೆಯಲ್ಲೇ ಉತ್ಪಾದಿಸಬಹುದು!
ಮೇವು ಉತ್ಪಾದನೆಗೂ ಹೈಡ್ರೋಫೋನಿಕ್ ಪದ್ಧತಿ ಬಂದಿದೆ. ಮಣ್ಣಿನ ಸಂಪರ್ಕ ಇಲ್ಲದ ಈ ಹೊಸ ಪದ್ಧತಿಯಿಂದ ರೈತರು ವರ್ಷಪೂರ್ತಿ ರಾಸುಗಳಿಗೆ ಹಸಿರು ಮೇವು ಬೆಳೆಯಬಹುದು. ಬರಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು
ಇದರ ಮೊರೆಹೋಗಿದ್ದಾರೆ. ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಬೆಳಗಾವಿಯ ಗೋಕಾಕ್ ತಾಲೂಕಿನ ಕಾಶೀನಾಥ ಮಾಳಿ ಈ ಪದ್ಧತಿಯ ಪೂರ್ಣ ಮಾಹಿತಿ ನೀಡಿದರು.
“ಬರಪೀಡಿತ ಪ್ರದೇಶಗಳಲ್ಲಿ ಸಮರ್ಪಕ ಮೇವು ಇಲ್ಲದೆ, ರಾಸುಗಳು ಸೊರಗುತ್ತವೆ. ಇದರಿಂದ ಹಾಲಿನ ಇಳುವರಿ ಕೂಡ ಕಡಿಮೆಯಾಗುತ್ತದೆ. ಇದಕ್ಕೆ ಹೈಡ್ರೋಫೋನಿಕ್ ಪದ್ಧತಿ ಪರಿಹಾರ ಎಂದು ಗೊತ್ತಾಯಿತು. ಈಗ ಇದೊಂದು ರೀತಿಯ ಟ್ರೆಂಡ್
ಆಗುತ್ತಿದೆ. ನಾನು ಈ ಪದ್ಧತಿಯನ್ನು ಕಲಿತು, ಆಸಕ್ತ ರೈತರ ಮನೆ ಅಥವಾ ಶೆಡ್‌ಗಳಿಗೆ ತೆರಳಿ ಅಳವಡಿಸಿ ಬರುತ್ತೇನೆ’ ಎಂದು ಕಾಶಿನಾಥ ಮಾಳಿ ತಿಳಿಸಿದರು. 6×8 ಅಡಿ ಜಾಗದಲ್ಲಿ 72 ಕ್ರೇಟ್‌ಗಳನ್ನು ಜೋಡಿಸಿ, ಅದರಲ್ಲಿ ದನಗಳಿಗೆ ಬೇಕಾದ ಮೇವು ತಯಾರಿಸ ಬಹುದು. ಒಂದು ದಿನಕ್ಕೆ 45 ಕೆಜಿ ಮೇವು ಇದರಲ್ಲಿ ಉತ್ಪಾದಿಸಬಹುದು. ಮೊಳಕೆಯೊಡೆದ ಕಾಳು ಕ್ರೇಟ್
ಗಳಲ್ಲಿ ಹಾಕಿದ ಹತ್ತು ದಿನಗಳಲ್ಲಿ ಮೇವು ಬರುತ್ತದೆ. ಒಂದು ಕೆಜಿ ಕಾಳುಗಳಿಗೆ 9ರಿಂದ 10 ಕೆಜಿ ಮೇವು ಉತ್ಪಾದಿಸಬಹುದು.
ದಿನಕ್ಕೆ 80 ಲೀ. ನೀರು ಸಾಕು. ಟ್ಯಾಂಕರ್, ನೀರು μಲ್ಟರ್, ಪೈಪ್‌ಗ್ಳು, ಟೈಮರ್ ಸೇರಿ 26 ಸಾವಿರ ರೂ. ಖರ್ಚಾಗುತ್ತದೆ. ಇದೆಲ್ಲವನ್ನೂ ನಾವು ಜೋಡಿಸುತ್ತೇವೆ. ರೈತರ ಕೆಲಸ ಕೇವಲ ಬಟನ್ ಆನ್ ಅಥವಾ ಆಫ್ ಮಾಡುವುದು ಅಷ್ಟೆ ಎನ್ನುತ್ತಾರೆ ಕಾಶಿನಾಥ್.
ಪೋಷಕಾಂಶಗಳ ಕಣಜವೂ ಹೌದು ಹೈಡ್ರೋಫೋನಿಕ್ ಮೇವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೀವಸತ್ವಗಳಿದ್ದು,
ಪೋಷ ಕಾಂಶಗಳ ಕಣಜವೇ ಇದಾಗಿರುತ್ತದೆ. ಇದನ್ನು ಸೇವಿಸುವ ಹಸುಗಳಿಂದ ಹಾಲಿನ ಗುಣಮಟ್ಟ ಮತ್ತು ಬೆಣ್ಣೆಯ ಅಂಶ ಉಳಿದ
ಹಸುಗಳಿಗಿಂತ ಅಧಿಕವಾಗಿರುತ್ತದೆ. ಅತಿ ಶೀಘ್ರ ಜೀರ್ಣವಾಗಿ ಸ್ವಲ್ಪವೂ ಅಪವ್ಯಯವಾಗದೆ, ದೇಹಕ್ಕೆ ಪೂರ್ಣ ವಾಗಿ ಲಭಿಸುವ
ಪೌಷ್ಟಿಕ ಆಹಾರ ಇದಾಗಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ
(ಎನ್‌ಡಿಆರ್‌ಐ)ಯ ಹಿರಿಯ ತಾಂತ್ರಿಕ ಅಧಿಕಾರಿ ಸಿದ್ದರಾಮಣ್ಣ ತಿಳಿಸುತ್ತಾರೆ.
ತಯಾರಿಕೆ ವಿಧಾನ
ಸ್ಥಳೀಯವಾಗಿ ಲಭ್ಯವಿರುವ ಯಾವುದೇ ಏಕದಳ ದ್ವಿದಳ ಧಾನ್ಯ ಬಳಸಿಯೂ ಹೈಡ್ರೋಫೋನಿಕ್ ವಿಧಾನದಲ್ಲಿ ಹಸಿರು ಮೇವು
ಉತ್ಪಾದಿಸಬಹುದು. 1 ಮೆಕ್ಕೆ ಜೋಳ ತೊಳೆದು 24 ಗಂಟೆ ನಂತರ ಕಾಟನ್ ಬಟ್ಟೆ ಅಥವಾ ಗೋಣಿ ಚೀಲದಲ್ಲಿ 48 ಗಂಟೆಗಳ
ಕಾಲ ಕಟ್ಟಿ ಇಡಬೇಕು. ಆಗ ಅದು ಮೊಳಕೆ ಕಟ್ಟುತ್ತದೆ. ನಂತರ ಟ್ರೇಗೆ ಹರಡಿ, ಪ್ರತಿ ಒಂದೂವರೆ ತಾಸಿಗೊಮ್ಮೆ 25ರಿಂದ 30 ಸೆಕೆಂಡು ನೀರು ಉಣಿಸಬೇಕು. ಕೇವಲ 8ರಿಂದ 10 ದಿನಗಳಲ್ಲಿ ಅದು 9-10 ಕೆಜಿ ತೂಗುತ್ತದೆ ಎಂದು ವಿವರಿಸಿದರು.
●ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.