ನಿಶ್ಶರ್ತ ಪ್ರೀತಿಯ ಸಂಬಂಧ ಶಾಶ್ವತ: ಸುಧಾ ಮೂರ್ತಿ


Team Udayavani, Nov 18, 2017, 10:54 AM IST

18-12.jpg

ಬೆಳ್ತಂಗಡಿ: ಸಂಬಂಧಗಳು ಅರ್ಥಪೂರ್ಣವಾದಾಗ ಹಣ ಕಡಿಮೆ ಇದ್ದರೂ ಖುಷಿಯ ಜೀವನ ನಡೆಸ ಬಹುದು. ಇಲ್ಲದಿದ್ದರೆ ಮರಳುಗಾಡಿನ ಯಾತ್ರಿಕನಂತಹ ಬದುಕು ನಮ್ಮದಾಗುತ್ತದೆ. ನಿಶ್ಶರ್ತ ಪ್ರೀತಿ ಇದ್ದರೆ ಆ ಸಂಬಂಧ ಶಾಶ್ವತವಾಗಿರುತ್ತದೆ. ಕವಿ, ಲೇಖಕ ಹಾಗೂ ಓದುಗನ ಮಧ್ಯೆ ಅಂತಹ ಒಂದು ಹದವಾದ ಭಾವ ಬೆಸುಗೆ ಇರುತ್ತದೆ ಎಂದು ಲೇಖಕಿ, ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.

ಅವರು ಶುಕ್ರವಾರ ಸಂಜೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ನಡೆದ 85ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 

ಅನುಭವವೇ ಸಾಹಿತ್ಯ
ಸಾಹಿತ್ಯ ಎಂದರೆ ಬಹಳ ರೋಚಕ ವಾಗಿರಬೇಕು ಎಂಬ ನಿಲುವಿದೆ. ಆದರೆ ಅನುಭವವೇ ಸಾಹಿತ್ಯ ಎಂದು ನನ್ನ ನಂಬಿಕೆ. ನಾವು ನೋಡಿದ್ದನ್ನು ಅಕ್ಷರ ರೂಪಕ್ಕಿಳಿಸಿದಾಗ ಅದು ಸಾಹಿತ್ಯ ವಾಗುತ್ತದೆ. ಸಾಹಿತ್ಯದಿಂದ ಏನು ಲಾಭ ಎಂದು ಎಲ್ಲವನ್ನೂ ಆರ್ಥಿಕ ಲಾಭ ನಷ್ಟದ ಮೂಲಕ ಲೆಕ್ಕಾಚಾರ ಹಾಕ ಬಾರದು. ಅದು ಸಂತೋಷವನ್ನು ನೀಡುತ್ತದೆ ಎಂದರು.

ಭಾಷೆಯ ಮೂಲಕ ಗ್ರಹಿಕೆ
ಅಧ್ಯಕ್ಷತೆ ವಹಿಸಿದ್ದ ಕವಿ ಬಿ.ಆರ್‌. ಲಕ್ಷ್ಮಣ ರಾವ್‌, ನಾವು ಜಗತ್ತನ್ನು ಗ್ರಹಿಸುವುದು ನಮ್ಮ ಭಾಷೆಯ ಮೂಲಕ. ಲೋಕವನ್ನು ಸ್ಪಷ್ಟ ವಾಗಿ ಗ್ರಹಿಸಲು ನನಗೆ ಕವಿತೆ ಮೂಲಕ ಕನ್ನಡದ ಕನ್ನಡಕ ದೊರೆತಿದೆ ಎಂದರು.

ಉಪನ್ಯಾಸ
ಉಪನ್ಯಾಸಕ, ಲೇಖಕ ಎಸ್‌.ಆರ್‌. ವಿಜಯ ಶಂಕರ ಅಡಿಗರ ಸ್ಮೃತಿ ಮಾಡಿ, ನವ್ಯ ಕಾವ್ಯ ವ್ಯಕ್ತಿಯ ವಿಶಿಷ್ಟತೆ ಯನ್ನು ಹುಡುಕುತ್ತದೆ. ಕವಿತೆಯ ಹಳೆ ಪ್ರಕಾರ ಎಲ್ಲ ಮನುಷ್ಯರಿಗೂ ಅನ್ವಯ ವಾಗುತ್ತದೆ. ಹಾಗಂತ ನವ್ಯ ಎಂದರೆ ಹೊಸತಲ್ಲ, ಪುರಾತನ ಕಾಲದಿಂದ ಇದ್ದದ್ದು. ಆದರೆ ಹೊಸತನ್ನು ಹುಡು ಕುವ ಸ್ವಭಾವ ಎಂದರು.

“ಸಾಹಿತ್ಯ ಸಾಮರಸ್ಯ’ ಕುರಿತು ಸಾಹಿತಿ ರಂಜಾನ್‌ ದರ್ಗಾ, ಪಂಪ ಕಾವ್ಯದ ಮೂಲಕ ಲೋಕಕ್ಕೆ ಪಾಠ ಕಲಿಸುವ ಕಾಯಕ ಮಾಡಿದ. ಬೇಡನೊಬ್ಬ ರಾಜನ ಮುಂದೆ ಸೆಟೆದು ನಿಲ್ಲು ವಂತಹ ಧೈರ್ಯದ ಕುರಿತು ಅಂದೇ ಚಿತ್ರಣ ನೀಡಿ ನಮ್ಮ ಮನಸ್ಥಿತಿಯ ಸುಧಾರಿಕೆಗೆ ಕರೆ ನೀಡಿದ. ಮೌಲ್ಯ ಗಳನ್ನು ಮುರಿದು ಸವ್ಯಸಾಚಿ ಯಾದ ಕವಿ ಪಂಪ. ಪಂಪನ ಕನಸನ್ನು ನನಸು ಮಾಡಿದವರು ಬಸವಣ್ಣನವರು ಎಂದರು.

“ಹಾಸ್ಯ ಮನೋಧರ್ಮ’ ಕುರಿತು ಸಾಹಿತಿ ಭುವನೇಶ್ವರಿ ಹೆಗಡೆ ಮಾತ ನಾಡಿ, ಹಾಸ್ಯ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೆಲವೆಡೆ ಭಾಷೆಯಲ್ಲೇ ಹಾಸ್ಯದ ಜಿನುಗಿದೆ. ಆದರೆ ತುಳುನಾಡು ಹಾಸ್ಯ ವನ್ನು ತುಂಬ ಘನತೆಯಿಂದ ಕಾಣು ತ್ತಿದೆ ಎಂದರು.

ಸಮ್ಮಾನ
ಲಕ್ಷ್ಮಣ ರಾವ್‌ ಅವರನ್ನು ಡಾ| ಡಿ. ಹೆಗ್ಗಡೆ, ಸುಧಾ ಮೂರ್ತಿ ಅವರನ್ನು ಹೇಮಾವತಿ ಹೆಗ್ಗಡೆ, ವಿಜಯಶಂಕರ್‌, ರಂಜಾನ್‌ ದರ್ಗಾ ಅವರನ್ನು ಡಿ. ಹಷೇìಂದ್ರ ಕುಮಾರ್‌, ಭುವನೇಶ್ವರಿ ಹೆಗಡೆ ಅವರನ್ನು ಸುಪ್ರಿಯಾ ಎಚ್‌. ಕುಮಾರ್‌ ಸಮ್ಮಾನಿಸಿದರು.

ಸಾಹಿತಿ ಪ್ರೊ| ಎಂ. ರಾಮಚಂದ್ರ ಕಾರ್ಕಳ ನಿರ್ವಹಿಸಿದರು. ಶ್ರದ್ಧಾ ಅಮಿತ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಸಮ್ಮಾನಪತ್ರ ವಾಚಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶಶಿಧರ್‌ ಶೆಟ್ಟಿ ವಂದಿಸಿದರು.

4,000 ಕಲಾವಿದರು
    ಲಕ್ಷದೀಪೋತ್ಸವ ಕೊನೆಯ ದಿನ ಕ್ಷೇತ್ರದಲ್ಲಿ 4,000 ಕಲಾವಿದರು ಸೇವೆ ಸಲ್ಲಿಸಿದ್ದಾರೆ.
    508 ತಂಡದಲ್ಲಿ 2,020 ವಾಲಗ ದವರು, 41 ತಂಡ ಬ್ಯಾಂಡ್‌ ಸೆಟ್‌ನವರು, 230 ಶಂಖ ಊದುವವರು, 13 ತಂಡ ಡೊಳ್ಳು ಕುಣಿತದವರು, 116 ಕರಡಿ ಮೇಳದವರು, 106 ವೀರಗಾಸೆಯವರು ಭಾಗ ವಹಿಸಿದ್ದರು.
    16 ತಂಡದವರು ಯಾತ್ರಿಕರಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಿದ್ದರು.
    ಭಕ್ತರು ದೇವಾಲಯ ಹಾಗೂ ಸುತ್ತಮುತ್ತ ಹೂವಿನ ಅಲಂಕಾರ ಮಾಡಿದ್ದರು.

ಟಾಪ್ ನ್ಯೂಸ್

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.