ಔಷಧ ಸಿಂಪಡಿಸುವ ಕೆಲಸ ಈಗ ಈಸಿ
Team Udayavani, Nov 18, 2017, 11:27 AM IST
ಬೆಂಗಳೂರು: ಹೆಗಲಿಗೆ ಕ್ಯಾನ್ ಏರಿಸಿಕೊಂಡು ದಿನವಿಡೀ ತೋಟ ಸುತ್ತಾಡಿ ಶ್ರಮಿಸಿದರೂ ಮುಗಿಯದ ಔಷಧ ಸಿಂಪಡಿಸುವ ಕೆಲಸವನ್ನು ಕೇವಲ ಅರ್ಧ ತಾಸಿನಲ್ಲೇ ಮುಗಿಸುವ ಯಂತ್ರವೊಂದು ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿದೆ.
ಕೃಷಿ ಕಾರ್ಮಿಕರ ಕೊರತೆ ಬಾಧಿಸುತ್ತಿರುವ ಈ ಕಾಲದಲ್ಲಿ ಹತ್ತಾರು-ನೂರಾರು ಎಕರೆ ತೋಟಕ್ಕೆ ಔಷಥ ಸಿಂಪಡಿಸುವ ಉದ್ದೇಶದಿಂದಲೇ ತಯಾರಿಸಲಾದ “ಏರ್ ಬ್ಲಾಸ್ಟ್ ಸ್ಟ್ರೇಯರ್’ ಯಂತ್ರ ಕೃಷಿಕರ ಶ್ರಮ ಕಡಿಮೆ ಮಾಡಲಿದೆ. ಚಿಕ್ಕ ಹಿಡುವಳಿದಾರರಿಗೆ ಈ ಯಂತ್ರದ ಉಪಯೋಗ ಕಡಿಮೆ.
ಆದರೆ, 10ರಿಂದ ನೂರಾರು ಎಕರೆ ಭೂಮಿ ಹೊಂದಿರುವ ತೋಟದ ಮಾಲೀಕರಿಗೆ ಇದು ಬಹುಪಯೋಗಿ. ರೋಗ ಬಾಧೆಯನ್ನು ಆಕರ್ಷಿಸುವ ದಾಳಿಂಬೆ, ದ್ರಾಕ್ಷಿ, ಮಾವು, ಪಪ್ಪಾಯ ಸೇರಿದಂತೆ ವಿವಿಧ ಹಣ್ಣಿನ ಬೆಳೆಗಳಿಗೆ ಸಕಾಲದಲ್ಲಿ ಔಷಧ ಸಿಂಪಡಿಸಲು ಏರ್ ಬ್ಲಾಸ್ಟ್ ಸ್ಟ್ರೇಯರ್ ಸಹಕಾರಿ. ಔಷಧದ ಕ್ಯಾನ್ ಹೊತ್ತು ಒಂದೊಂದೆ ಗಿಡಕ್ಕೆ ಸಿಂಪಡಿಸುವ ಬದಲು, ಏರ್ ಬ್ಲಾಸ್ಟ್ ಸ್ಟ್ರೇಯರ್ ಬಳಸಿದರೆ
ಹತ್ತಾರು ಎಕರೆಗೆ ಔಷಧ ಸಿಂಪಡಿಸುವ ಕೆಸಲ ನೋಡು ನೋಡುತ್ತಲೇ ಮುಗಿದಿರುತ್ತದೆ. ಏಕಕಾಲಕ್ಕೆ 2ರಿಂದ 7 ಸಾವಿರ ಲೀಟರ್ ಔಷಧ ಶೇಖರಿಸಿಟ್ಟುಕೊಳ್ಳುವುದು ಯಂತ್ರದ ವಿಶೇಷತೆ. ಯಂತ್ರದಿಂಧ ಹೊರ ಹೋಗುವ ಔಷಧ ಮಂಜಿನ ರೀತಿ ಹರಡುವುದರಿಂದ ಹೂವುಗಳು ಉದುರುವ ಸಮಸ್ಯೆ ಇಲ್ಲ. ಜತೆಗೆ ಗಿಡದ ಪ್ರತಿ ಭಾಗಕ್ಕೂ ಔಷಧ ತಲುಪುವುದರಿಂದ ರೋಗ ದೂರಾಗುತ್ತದೆ.
ಯಂತ್ರದ ಕಾರ್ಯ ನಿರ್ವಹಣೆ ಹೀಗಿದೆ: ಟ್ರ್ಯಾಕ್ಟರ್‌ಗೆ ಜೋಡಿಸಬಹುದಾದ ಯಂತ್ರ ಇದಾಗಿದ್ದು, ನಿಗದಿತ ಪ್ರಮಾಣದ ಔಷಧವನ್ನು ಟ್ಯಾಂಕರ್‌ಗೆ ತುಂಬಿಸಬಹುದು. ಹೀಗೆ ಶೇಖರಿಸಿದ ಔಷಧ ಟ್ಯಾಂಕರ್‌ಗೆ ವೃತ್ತಾಕಾರವಾಗಿ ಅಳವಡಿಸಿರುವ 10 ನಳಿಕೆಗಳ ಮೂಲಕ ಸ್ವಯಂ ಚಾಲಿತವಾಗಿ ಹೊರ ಬರುತ್ತದೆ.
ಈ ವೇಳೆ ನಳಿಕೆಗಳ ಹಿಂಭಾಗದಲ್ಲಿ ಅಳವಡಿಸಿರುವ ಟರ್ಬನ್‌ಗಳು (ಫ್ಯಾನ್) ಬೀಸುವ ಗಾಳಿಗೆ ಮಂಜಿನ ರೀತಿ ಎಲ್ಲೆಡೆ ಹರಡಿಕೊಳ್ಳುತ್ತದೆ. ಮಂಜಿನ ರೀತಿ (ಫಾಗ್) ಔಷಧ ಹರಡುವುದರಿಂದ ದಾಳಿಂಬೆ, ಮಾವು, ದ್ರಾಕ್ಷಿ ಸೇರಿದಂತೆ ಇತರ ಹಣ್ಣಿನ ಗಿಡ, ಮರಗಳಲ್ಲಿ ಬಿಟ್ಟ ಹೂವುಗಳು ಉದುರುವ ಭಯ ಇರುವುದಿಲ್ಲ.
ಸರ್ಕಾರದ 1.12 ಲಕ್ಷ ರೂ.ವರೆಗೆ ಸಬ್ಸಿಡಿ: “ಏರ್ ಬ್ಲಾಸ್ಟ್ ಸ್ಟ್ರೇಯರ್‌ನ ಮಾರುಕಟ್ಟೆ ದರ 4.35 ಲಕ್ಷ ರೂ. ಇದ್ದು, ಇತ್ತೀಚೆಗೆ ರಾಜ್ಯ ಸರ್ಕಾರ ಸಬ್ಸಿಡಿ ಘೋಷಣೆ ಮಾಡಿದೆ. ಅದರಂಥೆ ಸಾಮಾನ್ಯ ವರ್ಗದವರಿಗೆ 50 ಸಾವಿರ ರೂ., ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ 1.12 ಲಕ್ಷ ರೂ. ಸಬ್ಸಿಡಿ ಸಿಗಲಿದೆ. ಈಗಾಗಲೇ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಯಂತ್ರಗಳು ಮಾರಾಟವಾಗಿದ್ದು,
ಕೃಷಿ ಮೇಳದಲ್ಲಿ ನಾಲ್ಕೈದು ಯಂತ್ರಗಳ ಬುಕ್ಕಿಂಗ್ ಆಗಿದೆ,’ ಎಂದು ಮಿತ್ರ ಇನಾ#ರ್ಮೇಷನ್ ಟೆಕ್ನಾಲಜಿ ರಿಸೋರ್ಸ್ ಅಗ್ರಿಕಲ್ಚರ್ ಕಂಪನಿಯ ಸೇಲ್ಸ್ ಹೆಡ್ ಬಸವರಾಜ್ ಮಾಹಿತಿ ನೀಡಿದ್ದಾರೆ. ಡಿಡಿಡಿ.ಞಜಿಠಿrಚಡಿಛಿಚಿ.ಜಿn ಗೆ ಭೇಟಿ ನೀಡಿದರೆ ಈ ಯಂತ್ರದ ಕುರಿತು ಹೆಚ್ಚಿನ ಮಾಹಿತಿ ದೊರೆಯಲಿದೆ.
ಏರ್ ಬ್ಲಾಸ್ಟ್ ಸ್ಟ್ರೇಯರ್ ದೊಡ್ಡ ಹಿಡುವಳಿದಾರರಿಗೆ ಹೆಚ್ಚು ಉಪಯುಕ್ತ. ಸರ್ಕಾರ ಈ ಯಂತ್ರ ಖರೀದಿಗೆ ಸಬ್ಸಿಡಿ ಕೊಡುತ್ತಿದ್ದು, ಅದನ್ನು ಸದ್ಭಳಕೆ ಮಾಡಿಕೊಳ್ಳಬಹುದು. ಕಂಪನಿಯು ಚಿತ್ರದುರ್ಗದಲ್ಲಿದ್ದು, ಆಸಕ್ತರು ಸಂಪರ್ಕಿಸಿದರೆ ಅಗತ್ಯ ಮಾಹಿತಿ ನೀಡುತ್ತೇವೆ. ಕೃಷಿಮೇಳದಲ್ಲಿನ ನಮ್ಮ ಮಳಿಗೆಗೆ ಭೇಟಿ ಕೊಟ್ಟರೂ ಮಾಹಿತಿ ಸಿಗಲಿದೆ.
-ಬಸವರಾಜ್, ಮಿತ್ರ ಕಂಪನಿ
ಏರ್‌ಬ್ಲಾಸ್ಟ್ ಸ್ಪ್ರೆಯರ್ ಯಂತ್ರ ಬಳಕೆಗೆ ಯೋಗ್ಯವಾಗಿದೆ. ಬೆಲೆ ದುಬಾರಿಯಾಗಿದ್ದು, ಸಾಮಾನ್ಯ ರೈತರು ಖರೀದಿಸಲು ಸಾಧ್ಯವಿಲ್ಲ. ಜತೆಗೆ ಇದು ಟ್ರ್ಯಾಕ್ಟರ್ ಮೂಲಕ ಬಳಕೆ ಮಾಡಬೇಕಾದ ಯಂತ್ರವಾಗಿರುವುದರಿಂದ ಟ್ರ್ಯಾಕ್ಟರ್ ಇರುವವರು ಹಾಗೂ ದೊಡ್ಡ ಹಿಡುವಳಿದಾರರಷ್ಟೇ ಬಳಸಬೇಕಾಗುತ್ತದೆ.
-ದೊಡ್ಡ ತಿಮ್ಮೇಗೌಡ, ಕಬ್ಬುಬೆಳೆಗಾರ, ಮಂಡ್ಯ
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.