ಕೇರಳ-ಕೋಲ್ಕತಾ ಉದ್ಘಾಟನಾ ಪಂದ್ಯ ಡ್ರಾ


Team Udayavani, Nov 18, 2017, 12:43 PM IST

18-18.jpg

ಕೊಚ್ಚಿ: ನಾಲ್ಕನೇ ಆವೃತ್ತಿ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಕೇರಳ ಬ್ಲಾಸ್ಟರ್ ಹಾಗೂ ಅಟ್ಲೆಟಿಕೊ ಡಿ ಕೋಲ್ಕತಾ ನಡುವೆ ಶುಕ್ರವಾರ ನಡೆದ ಉದ್ಘಾಟನಾ ಫ‌ುಟ್ಬಾಲ್‌ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.

ಆತಿಥೇಯ ಕೇರಳ ಬ್ಲಾಸ್ಟರ್ಸ್‌ ತಂಡ ಆರಂಭದಲ್ಲೇ ಗೋಲು ಸಿಡಿಸಲು ಪ್ರಯತ್ನ ನಡೆಸಿತು. ಪಂದ್ಯದ 5ನೇ ನಿಮಿಷದಲ್ಲಿ ಬ್ಲಾಸ್ಟರ್ಸ್‌ನ ಬೆರ್ಬಟೋವ್‌ ನಡೆಸಿದ ಪ್ರಯತ್ನ ಗೋಲು ಪೆಟ್ಟಿಗೆಯಿಂದ ಆಚೆ ಹಾರಿತು. 1-0 ಮುನ್ನಡೆ ಸಾಧಿಸುವ ಕೇರಳ ತಂಡದ ಕನಸು ಈಡೇರಲಿಲ್ಲ. ಬಳಿಕ ಕೋಲ್ಕತಾ ತಂಡ ಚೆಂಡಿನ ಮೇಲೆ ಸ್ವಲ್ಪ ಹಿಡಿತ ನಡೆಸುವ ಪ್ರಯತ್ನ ನಡೆಸಿತು. ಆಗ ಆಟ ಆರಂಭವಾಗಿ 10 ನಿಮಿಷವಷ್ಟೇ ಆಗಿತ್ತು.

ಗೋಲ್‌ ಮಿಸ್‌ ಮಾಡಿದ ಕೋಲ್ಕತಾ: ಪಂದ್ಯದ ಹದಿನಾಲ್ಕನೇ ನಿಮಿಷದಲ್ಲಿ ಕೋಲ್ಕತಾದ ಹಿತೇಶ್‌ ಶರ್ಮಗೆ ಗೋಲು ದಾಖಲಿಸುವ ಎಲ್ಲ ಅವಕಾಶ ಇತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಈ ಮೂಲಕ ಎರಡೂ ತಂಡಗಳು ಆರಂಭದಲ್ಲಿ ಗೋಲುಗಳಿಸುವ ಎರಡು ಸುವರ್ಣಾವಕಾಶವನ್ನು ಮಿಸ್‌ ಮಾಡಿಕೊಂಡವು. ಪಂದ್ಯದ 45ನೇ ನಿಮಿಷದ ವರೆಗೆ ಯಾವುದೇ ಬದಲಾವಣೆ ಕಾಣಲಿಲ್ಲ. ಅದೇ ಹೋರಾಟ ಮುಂದುವರಿಯಿತು. ಈ ವೇಳೆ ಹೆಚ್ಚಿನ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪಂದ್ಯದ ಮೊದಲಾರ್ಧ ಮುಗಿದಾಗ 0-0 ಗೋಲುಗಳಿಂದ ಎರಡೂ ತಂಡಗಳು ಸಮಸಾಧಿಸಿಕೊಂಡಿದ್ದವು.

ಐಎಸ್‌ಎಲ್‌ಗೆ ಅದ್ಧೂರಿ ಚಾಲನೆ
ಕೊಚ್ಚಿ: ಇಲ್ಲಿನ ಜವಾಹರ್‌ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ 4ನೇ ಆವೃತ್ತಿ ಐಎಸ್‌ಎಲ್‌ (ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್‌ಬಾಲ್‌) ಕೂಟಕ್ಕೆ ಶುಕ್ರವಾರ ಸಂಜೆ ಅದ್ಧೂರಿ ಚಾಲನೆ ನೀಡಲಾಯಿತು. ಬಾಲಿವುಡ್‌ನ‌ ಖ್ಯಾತ ನಟ ಸಲ್ಮಾನ್‌ ಖಾನ್‌, ನಟಿ ಕತ್ರೀನಾ ಕೈಫ್ ನೃತ್ಯ ಮಾಡುವ ಮೂಲಕ ಉದ್ಘಾಟನೆಗೆ ಮತ್ತಷ್ಟು ಮೆರುಗು ತಂದರು. ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಪಾಲ್ಗೊಂಡಿದ್ದರು. ಕ್ರೀಡಾಂಗಣ ಭರ್ತಿಯಾಗಿ ತುಂಬಿತ್ತು.

ಮೊದಲ ಪಂದ್ಯದಲ್ಲಿ ಆತಿಥೇಯ ಕೇರಳ ತಂಡವನ್ನು 2 ಬಾರಿಯ ಚಾಂಪಿಯನ್‌ ಬಲಿಷ್ಠ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಎದುರಿಸಿತು. ಕೂಟದಲ್ಲಿ ಕೋಲ್ಕತಾ, ಬೆಂಗಳೂರು, ಚೆನ್ನೈ, ದಿಲ್ಲಿ, ಗೋವಾ, ಜೆಮೆಡ್‌ಪುರ, ಕೇರಳ ಬ್ಲಾಸ್ಟರ್, ಮುಂಬೈ ಸಿಟಿ, ನಾರ್ಥ್ ಈಸ್ಟ್‌ ಯುನೈಟೆಡ್‌, ಪುಣೆ ಸಿಟಿ ತಂಡಗಳು ಪಾಲ್ಗೊಂಡಿವೆ. ಒಟ್ಟಾರೆ 4 ತಿಂಗಳು ಕೂಟ ನಡೆಯಲಿದೆ. 2018 ಮಾರ್ಚ್‌ 2ನೇ ವಾರ ಫೈನಲ್‌ ಪಂದ್ಯ ನಡೆಯಲಿದೆ.

ಟಾಪ್ ನ್ಯೂಸ್

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.