ವೈದ್ಯಕೀಯ ಕ್ಷೇತ್ರ ಮೌಲ್ಯ ಕಳೆದುಕೊಳ್ಳಲಿದೆ
Team Udayavani, Nov 18, 2017, 12:47 PM IST
ಮೈಸೂರು: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ಯುದ್ಧಭೂಮಿಯಾಗಿ ಪರಿಣಮಿಸಿದ್ದು, ವೈದ್ಯರು ಸಾಕಷ್ಟು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಭಾರತೀಯ ವೈದ್ಯಕೀಯ ಜೀವ ರಸಾಯನ ವಿಜ್ಞಾನ ಸಂಘ(ಎಎಂಬಿಐ) ವತಿಯಿಂದ ನಗರದ ದಿ ಲಲಿತ ಮಹಲ್ ಹೋಟೆಲ್ ಆವರಣದಲ್ಲಿ ಆಯೋಜಿಸಿರುವ ಅಂಬಿಕಾನ್-2017 25ನೇ ಬೆಳ್ಳಿಹಬ್ಬದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ವೈದ್ಯರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ವೈದ್ಯರ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದು, ಇದರ ಪರಿಣಾಮ ಚಿಕಿತ್ಸೆ ಸಂದರ್ಭದಲ್ಲಿ ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಅದಕ್ಕೆ ವೈದ್ಯರೇ ಕಾರಣ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.
ಹೀಗಾಗಿ ಬಹುತೇಕ ವೈದ್ಯರು ಒತ್ತಡದಲ್ಲೇ ಕೆಲಸ ಮಾಡುವಂತಾಗಿದ್ದು, ಪರಿಣಾಮ ಕಳೆದ 10 ವರ್ಷಕ್ಕೆ ಹೋಲಿಸಿದರೆ ವೈದ್ಯರ ಜೀವಿತಾವಧಿ ಪ್ರಮಾಣ ಕುಸಿದಿದೆ. ಚಿಕಿತ್ಸೆ ಫಲಿಸದೆ ರೋಗಿ ಸಾವನ್ನಪ್ಪಿದ ಸಂದರ್ಭಗಳಲ್ಲಿ ವೈದ್ಯರನ್ನೇ ಗುರಿಯನ್ನಾಗಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ತನ್ನ ಮೌಲ್ಯ ಕಳೆದುಕೊಳ್ಳಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶುದ್ಧಗಾಳಿ ಪಡೆಯಲು ಆಮ್ಲಜನಕದ ಸಿಲಿಂಡರ್‌ಗಳನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಲಿದೆ. ಇಲ್ಲವಾದಲ್ಲಿ ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವ ರೀತಿಯಲ್ಲಿ ಶುದ್ಧ ಗಾಳಿ ಪಡೆಯಲು ನಗರಪ್ರದೇಶದ ಜನರು ಹಳ್ಳಿಗಳಿಗೆ ವಲಸೆ ಹೋಗಲಿದ್ದಾರೆಂದು ಹೇಳಿದರು.
ಗಣನೀಯ ಕೊಡುಗೆ: ವಿಶ್ವದಲ್ಲಿ ಜೀವರಸಾಯನ ವಿಜ್ಞಾನ ಕ್ಷೇತ್ರವೂ ಮಾನವಕುಲ ಮತ್ತು ಆಧುನಿಕ ಔಷಧ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದು, ಇದರ ಪರಿಣಾಮ ಜಗತ್ತಿನಲ್ಲಿ ಹೆಚ್ಚಿನ ನೊಬೆಲ್ ಪ್ರಶಸ್ತಿ ಜೀವರಸಾಯನ ಕ್ಷೇತ್ರಕ್ಕೆ ಲಭಿಸಿದೆ. ಅಲ್ಲದೆ ಜೀವರಸಾಯನಶಾಸ್ತ್ರ ಆರಂಭಿಕ ರೋಗ ನಿರ್ಣಯಕ್ಕೆ ಜೀವಸೆಲೆಯಾಗಿರುವುದರಿಂದ ಜೀವ ರಸಾಯನಶಾಸ್ತ್ರ ಮತ್ತು ಚಿಕಿತ್ಸಾಲಯಗಳು ವೈದ್ಯಕೀಯ ಕ್ಷೇತ್ರದಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಇದೇ ವೇಳೆ ಭಾರತೀಯ ವೈದ್ಯಕೀಯ ಜೀವ ರಸಾಯನವಿಜ್ಞಾನ ಸಂಘದ ನಿರ್ಗಮಿತ ಅಧ್ಯಕ್ಷೆ ಡಾ.ಪ್ರಜ್ಞಾ ಬಿ.ಡಾಲಿಯಾ ನೂತನ ಅಧ್ಯಕ್ಷೆ ಡಾ.ಭಾರತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ಅಂಬಿಕಾನ್-2017 ವಾರ್ಷಿಕ ಸಮಾವೇಶದ ಸ್ಮರಣಿಕೆ ಹಾಗೂ ವೈದ್ಯಕೀಯ ಜೀವ ರಸಾಯನಶಾಸ್ತ್ರದಲ್ಲಿ ಗಣಿತಶಾಸ್ತ್ರದ ಗಣನೆಗಳು ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜೀವ್‌ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ರಾಧಾಮಣಿ, ಡಾ.ವಿ.ಗೋವಿಂದರಾಜು, ಡಾ.ಶಾಂತಿ ಕೆ.ನಾಯ್ಡು, ಡಾ.ಎಂ.ಎನ್.ಸುಮಾ ಇದ್ದರು.
ಪ್ರಸ್ತುತ ಸಂದರ್ಭದಲ್ಲಿ ದೇಶದ ಶೇ.52 ಮಂದಿ ದೈಹಿಕವಾಗಿ ನಿಷ್ಕ್ರಿಯರಾಗಿದ್ದು ದೇಶದಲ್ಲಿ ಹೃದಯಾಘಾತ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬರ ಜೀವನಶೈಲಿ ಬದಲಾಗಿರುವ ಪರಿಣಾಮ ಪ್ರತಿ 10 ಮಂದಿಯಲ್ಲಿ ಒಬ್ಬರು ರಕ್ತದೊತ್ತಡ, ಹೃದ್ರೋಗ ಸಮಸ್ಯೆ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ.
-ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.