ಆಕರ್ಷಿಸಿದ ಗ್ರಾಮೀಣ ಸೊಗಡಿನ ಹಾಳೆ ಟೋಪಿ ಮಾರಾಟ


Team Udayavani, Nov 18, 2017, 5:00 PM IST

18-Nov-18.jpg

ಬೆಳ್ತಂಗಡಿ: ಸುತ್ತಲೂ ಜನ ಸಂದಣಿ. ನೆಲದಲ್ಲಿ ಕೂತು ಹಾಳೆಟೋಪಿ ಮುಟ್ಟಾಳೆಯನ್ನು ಹೆಣೆಯುತ್ತಾ ಕೂತ ಹಿರಿ ವಯಸ್ಸಿನ ವ್ಯಕ್ತಿ. ಅದರ ಕಡೆಗೆ ಕುತೂಹಲದ ಕಣ್ಣುಗಳನ್ನು ನೆಟ್ಟು ಆ ಬಗ್ಗೆ ವಿಚಾರಿಸುತ್ತಿರುವವರು.ಅವರಲ್ಲಿ ಒಂದಷ್ಟು ಜನ ಕೊಳ್ಳುವ ಇರಾದೆ ವ್ಯಕ್ತಪಡಿಸುವವರು..

ಈ ಚಿತ್ರಣ ಕಂಡು ಬಂದದ್ದು ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನದಲ್ಲಿ. ಅಡಿಕೆ ಹಾಳೆಯನ್ನು ಕಚ್ಚಾವಸ್ತುವನ್ನಾಗಿ ಬಳಸಿ ರೂಪುಗೊಂಡ ಹಾಳೆ ಟೋಪಿಗಳು ಅಲ್ಲಿದ್ದವು. ಕೃಷಿ ಕೆಲಸದಲ್ಲಿ ನಿರತರಾದವರು, ಶ್ರಮವಹಿಸಿ ದುಡಿಯುವವರು ತಮ್ಮ ದುಡಿಮೆಯ ಅವಧಿಯಲ್ಲಿ ಹಾಕಿಕೊಳ್ಳಬಹುದಾದ ಟೋಪಿಗಳಿವು. ಇವುಗಳನ್ನು ಮಾರಾಟಕ್ಕಿಟ್ಟು ಕುಳಿತಿದ್ದವರು ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶಿರ್ಲಾಲು ನಿವಾಸಿಯಾಗಿರುವ ಅರವತ್ತು ವರ್ಷದ ಬಾಬು ನಲಿಕೆ.

ಆರು ವರ್ಷಗಳಿಂದ ಮಾರಾಟ
ಟೋಪಿಯನ್ನು ಸಿದ್ಧಪಡಿಸಿ ಅದರಿಂದಲೇ ಆದಾಯ ತಂದುಕೊಳ್ಳುವ ಅವರ ಉತ್ಸಾಹ ಯುವಕರನ್ನೂ ನಾಚಿಸುವಂತಿದೆ. ಸುಮಾರು 6 ವರ್ಷಗಳಿಂದ ಲಕ್ಷದೀಪೋತ್ಸವದಲ್ಲಿ ಹಾಳೆ ಟೋಪಿಯನ್ನು ಮಾರುತ್ತಾ ಬಂದಿದ್ದಾರೆ. ಸ್ವಂತವಾಗಿ ಅವರೇ ಈ ಹಾಳೆಟೋಪಿ ಸಿದ್ಧಪಡಿಸುತ್ತಾರೆ. ಲಕ್ಷದೀಪೋತ್ಸವದ ಕಾರಣಕ್ಕಾಗಿ 300ಕ್ಕೂ ಹೆಚ್ಚಿನ ಹಾಳೆ ಟೋಪಿಗಳನ್ನು ಸಿದ್ಧಪಡಿಸುತ್ತಾರೆ. ಸಿದ್ಧವಾದವುಗಳನ್ನು ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮಳಿಗೆಯಲ್ಲಿ ತಂದು ಮಾರುತ್ತಾರೆ.

ಅಡಿಕೆ ಹಾಳೆಯಲ್ಲಿ ತಯಾರು ಮಾಡುವ ಅಡಿಕೆ ಹಾಳೆಯ ಕಚ್ಚಾವಸ್ತುಗಳ ಅಲಭ್ಯತೆಯಿಂದಾಗಿ ಹಾಳೆ ಟೋಪಿಯ ತಯಾರಿಕೆ ಮತ್ತು ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಆದರೆ ಟೋಪಿ ಸಿದ್ಧಪಡಿಸುವ ಉತ್ಸಾಹವನ್ನಂತೂ ಬಾಬು ನಲಿಕೆಯವರು ಕಳೆದುಕೊಂಡಿಲ್ಲ.

ತಯಾರಿ ವಿಧಾನ
ಹಾಳೆಟೋಪಿ ಸಿದ್ಧಪಡಿಸುವಿಕೆ ಮಾತ್ರವಲ್ಲದೆ ಭೂತಕಟ್ಟುವ ಕಾರ್ಯದಲ್ಲೂ ಇವರು ತೊಡಗಿಕೊಂಡಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ದಿನಕ್ಕೆ ಸುಮಾರು 20 ಟೋಪಿಗಳನ್ನು ಸಿದ್ಧಪಡಿಸುತ್ತಾರೆ. ಅಡಿಕೆ ಹಾಳೆಯನ್ನು ಸಂಗ್ರಹಿಸಿ ಅದನ್ನು ನೀರಿನಲ್ಲಿ ನೆನೆ ಹಾಕಿಡುತ್ತಾರೆ. ಬಳಿಕ ಆಯಾ ಅಳತೆಗಳಿಗೆ ಕತ್ತರಿಸಿ ಹದ ಮಾಡಲಾಗುತ್ತದೆ.

ಹಾಳೆಗೆ 1.5 ರೂ.
ಅಳದಂಗಡಿ ಸುತ್ತಮುತ್ತಲಿನ ಅಡಿಕೆ ತೋಟದಿಂದ ಖರೀದಿಸುವ ಒಂದು ಹಾಳೆಯ ಬೆಲೆ 1.5 ರೂ.. ನಷ್ಟ ಉಂಟು ಮಾಡದೇ ಕೇವಲ ಲಾಭವನ್ನು ನೀಡುವ ಈ ಹಾಳೆ ಟೋಪಿ ಸಿದ್ಧಪಡಿಸುವಿಕೆಯು ಗ್ರಾಮೀಣ ಸೊಗಡಿಗೆ ನಿದರ್ಶನವಾಗಿದೆ. ವರ್ಷದಿಂದ ವರ್ಷಕ್ಕೆ ಗ್ರಾಹಕರ ಸಂಖ್ಯೆಯು ಹೆಚ್ಚುತ್ತಿದ್ದು, ಹಾಳೆಟೋಪಿಯ ಬೇಡಿಕೆ ಹೆಚ್ಚಿದೆ. ನವಜೀವನ ಸಂಸ್ಥೆ ಹಾಗೂ ಸ್ವಸಹಾಯ ಸಂಘದ ವತಿಯಿಂದ ಲಕ್ಷದೀಪೋತ್ಸವದಲ್ಲಿ ಹಾಳೆಟೋಪಿಗಳನ್ನು ಮಾರಾಟ ಮಾಡಲಾಗುತ್ತದೆ. 

ಎರಡು ಗಾತ್ರದಲ್ಲಿ ಟೋಪಿ ತಯಾರಿ 
ಈ ಹಾಳೆಟೋಪಿಯನ್ನು 2 ಗಾತ್ರದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಒಂದುಗೇಣುವಿನ ಸಣ್ಣ ಪ್ರಮಾಣದ ಟೋಪಿಯು 50 ರೂ. ಹಾಗೂ ಒಂದುವರೆ ಗೇಣುವಿನ ದೊಡ್ಡ ಪ್ರಮಾಣದ ಟೋಪಿಯು 60 ರೂ. ಗಳಿಗೆ ಮಾರಾಟವಾಗುತ್ತಿವೆ. 

ಪಲ್ಲವಿ ಜೋಶಿ

ಟಾಪ್ ನ್ಯೂಸ್

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

24

Belthangady: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

Puttur: ಸ್ಕೂಟಿ-ಕಾರು ಢಿಕ್ಕಿ; ಸವಾರ ಗಂಭೀರ

Puttur: ಸ್ಕೂಟಿ-ಕಾರು ಢಿಕ್ಕಿ; ಸವಾರ ಗಂಭೀರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Colera

Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.