ಮುಲ್ಲಾನ ಕತೆಗಳು
Team Udayavani, Nov 19, 2017, 6:35 AM IST
ಚುನಾವಣಾ ಭಾಷಣ
ಮುಲ್ಲಾ ನಾಸಿರುದ್ದೀನನ ಹೆಂಡತಿ ಚುನಾವಣೆಗೆ ನಿಂತಿದ್ದಳು. ಪ್ರಚಾರ ಜೋರಾಗಿ ನಡೆದಿತ್ತು. ಸುತ್ತಲಿನ ಹತ್ತು ಹಳ್ಳಿಗಳಿಗೆ ಹೋಗಿ ಜನರನ್ನು ಖುದ್ದು ಭೇಟಿ ಮಾಡಿ ಮಾತಾಡಿಸಿ ಮತ ಹಾಕುವಂತೆ ಕೇಳಿಕೊಂಡು ಬರಬೇಕಾಗಿತ್ತು. ಇಡೀ ದಿನದ ಪ್ರಚಾರ ಕಾರ್ಯ ಮುಗಿಸಿ ಸಂಜೆ ಮನೆಯೊಳಗೆ ಬರುತ್ತಲೇ ಮುಲ್ಲಾ ಈಸಿಚೇರಿನ ಮೇಲೆ ಕುಸಿದ. “”ಅಬ್ಟಾ ಎಂಥಾ ಶ್ರಮಭರಿತ ದಿನ! ಸುಸ್ತು ಹೊಡೆದು ಹೋದೆ!” ಎಂದ.
“”ಏನು ಸುಸ್ತು? ಅದೂ ನಿಮಗೆ? ಇವತ್ತು ಒಟ್ಟು ಹದಿನಾಲ್ಕು ಕಡೆ ಭಾಷಣ ಮಾಡಿದವಳು ನಾನು. ಸುಸ್ತು ಆಗಬೇಕಾದ್ದು ಯಾರಿಗೆ?” ಎಂದು ದಬಾಯಿಸಿದಳು ಹೆಂಡತಿ.
“”ನೀನು ಭಾಷಣ ಮಾಡಿರಬಹುದು ಬಂಗಾರಿ. ಆದರೆ, ಅಷ್ಟನ್ನೂ ಕೇಳಿಸಿಕೊಂಡವನು ಯಾರು ಹೇಳು?” ಎಂದ ಮುಲ್ಲಾ.
ಮುನ್ನೂರು ವರ್ಷ
ಬನ್ನಿರೀ ಬನ್ನಿರಿ, ಕೊಳ್ಳಿರಿ! ಸಂಜೀವಿನಿ ಔಷಧ! ಕುಡಿದರೆ ನವತಾರುಣ್ಯ! ಎಷ್ಟೇ ವಯಸ್ಸಾದರೂ ಯುವಕರಂತೆಯೇ ಕಂಗೊಳಿಸುವಿರಿ. ವೃದ್ಧಾಪ್ಯವನ್ನೇ ಇಲ್ಲವಾಗಿಸುವ ದಿವೌÂಷಧ” ಎಂದು ಒಬ್ಬ ಹಕೀಮ ಜೋರಾಗಿ ಕೂಗುತ್ತಿದ್ದ. ರಫೀಕನಿಗೆ ಇದನ್ನು ನಂಬಲಾಗಲಿಲ್ಲ. “”ಅದೂ ಅಲ್ಲದೆ ನೋಡಿ, ನಾನು 300 ವರ್ಷಗಳಷ್ಟು ಹಳಬ” ಎಂದಾಗಲಂತೂ ಅವನಿಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ. ಹೋಗಿ ಆ ವೈದ್ಯನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನಾಸಿರುದ್ದೀನನ್ನು ಎಳೆದ.
“”ಏನೋ, ನಿನ್ನ ದಣಿ ತನಗೆ ಮುನ್ನೂರು ವರ್ಷ ಆಯ್ತು ಅಂತಿದ್ದಾನೆ. ಇದು ಶುದ್ಧ ಬೊಗಳೆ ಅಲ್ವಾ? ಅವನಿಗೆ ಅಷ್ಟು ವಯಸ್ಸಾಗಿದೆ ಅಂತ ನೀನು ನಂಬಿ¤àಯಾ?” ಎಂದ.
“”ಏನೋಪ್ಪ ಯಾರಿಗ್ಗೊತ್ತು. ನಾನು ಅವರ ಕೈ ಕೆಳಗೆ ಕೆಲಸ ಮಾಡ್ತಿರೋದೇ ಕಳೆದ 180 ವರ್ಷಗಳಿಂದ ಅಷ್ಟೆ” ನಾಸಿರುದ್ದೀನ್ ಸಮಜಾಯಿಷಿ ಕೊಟ್ಟ.
ಜೀವನಾವಧಿ
ಮುಲ್ಲಾ ನಾಸಿರುದ್ದೀನ ಅಪರೂಪಕ್ಕೆ ಕಾರಿನಲ್ಲಿ ಡ್ರೆ„ವರ್ ಸೀಟಿನಲ್ಲಿ ಕೂತಿದ್ದ. ಆದರೆ, ಅವನ ದುರದೃಷ್ಟಕ್ಕೆ ಅವತ್ತೇ ಪೊಲೀಸ್ ಅವನನ್ನು ತಡೆದು ನಿಲ್ಲಿಸಿದರು. ಪೊಲೀಸ್ ಅಧಿಕಾರಿಯೊಬ್ಬ ಹತ್ತಿರ ಬಂದು ಕಾರಿನಲ್ಲಿ ಕೂತಿದ್ದ ನಾಸಿರುದ್ದೀನನನ್ನು ಕಂಡು ಗುರಾಯಿಸಿ ದಂಡದ ಚೀಟಿ ಬರೆಯಲು ಶುರು ಮಾಡಿದ. ಆದರೆ, ಅಷ್ಟರಲ್ಲೇ ಕಾರಿನ ಹಿಂಬದಿಯಿಂದ ಒಂದು ಕಿರುಚಾಟ ಶುರುವಾಯಿತು.
“”ಹೇಳಿದೀನೋ ಇಲ್ಲವೋ? ನಿಮಗೆ ಎಷ್ಟು ಸಲಾಂತ ಹೇಳ್ಳೋದು? ಹೋಗಿ ಹೋಗಿ ಸಿಕ್ಕಿಹಾಕೊಂಡ್ರಲ್ಲ ಪೊಲೀಸ್ ಹತ್ತಿರ. ಈಗ ಅನುಭವಿಸಿ. ಹಾರ್ನ್ ಹಾಕಲ್ಲ, ವೇಗಮಿತಿಯನ್ನು ಗಮನಿಸಲ್ಲ, ರಸ್ತೆ ಮೇಲೆ ನಿಗಾ ಇಲ್ಲ. ಕಾರನ್ನು ಎತ್ತಿನ ಬಂಡಿ ಅನ್ನೋ ಹಾಗೆ ಉಢಾಳತನದಿಂದ ನೋಡ್ಕೊàತೀರಿ. ಯಾವುದರ ಮೇಲೂ ಗಮನ ಇಲ್ಲ ನಿಮಗೆ. ನಾನು ಹೇಳ್ಳೋ ಮಾತುಗಳನ್ನ ಎಲ್ಲಿ ಕೇಳಸ್ಕೋತೀರಿ ನೀವು. ಯಾವಾಗಾದ್ರೂ ನನ್ನ ಮಾತುಗಳನ್ನ ಗಂಭೀರವಾಗಿ ತಗೊಂಡಿದ್ದೀರಾ? ಆಯ್ತಲ್ಲ ಈಗ, ಅನುಭವಿಸಿ. ನಾನು ಬೆಳಗ್ಗೇನೇ ಬಡ್ಕೊಂಡೆ…” ಎಂದು ಹಿಂಬದಿಯ ಸೀಟಿನಿಂದ ಸಹಸ್ರನಾಮಾರ್ಚನೆ ನಿರರ್ಗಳವಾಗಿ ಶುರುವಾಯಿತು. ದಂಡದ ಮೊತ್ತ ಬರೆದು ಚೀಟಿ ಹರಿಯಹೋಗಿದ್ದ ಪೊಲೀಸ್, ಬರೆಯುವುದನ್ನು ನಿಲ್ಲಿಸಿ, ಮತ್ತೆ ಬಾಗಿ, ನಾಸಿರುದ್ದೀನನ ಬಳಿ, “”ಯಾರದು?” ಎಂದು ಕೇಳಿದ.
“”ನನ್ನ ಹೆಂಡತಿ” ಎಂದ ನಾಸಿರುದ್ದೀನ ಜೋಲುಮೋರೆ ಮಾಡಿ.
“”ಹಾಗಾದರೆ ಬದುಕಿಕೋ ಬಡಪಾಯಿ. ಈಗಾಗಲೇ ಶಿಕ್ಷೆ ಅನುಭವಿಸ್ತಾ ಇದ್ದೀಯ!” ಎಂದು ಪೊಲೀಸ್ ದಂಡದ ಪುಸ್ತಕ ಮುಚ್ಚಿ ನಾಸಿರುದ್ದೀನನಿಗೆ ಮುಂದೆ ಹೋಗಲು ಬಿಟ್ಟ.
ದಂತವೈದ್ಯರು
ಮುಲ್ಲಾ ನಾಸಿರುದ್ದೀನ ಹಲ್ಲಿನ ವೈದ್ಯರ ಬಳಿ ಹೋದ. “”ಒಂದು ಹಲ್ಲು ಕೀಳುವುದಕ್ಕೆ ಎಷ್ಟು ಫೀಸು?” ಎಂದು ವಿಚಾರಿಸಿದ.
“”ಒಂದು ಹಲ್ಲು ಕೀಳಲು 30 ದಿನಾರು ಆಗುತ್ತೆ. ಆದರೆ, ಕೀಳುವ ನೋವು ತಿಳಿಯಬಾರದೆಂದು ಅನಸ್ತೇಶಿಯಾ ಕೊಡಬೇಕೆಂದು ನೀವು ಬಯಸಿದರೆ 2 ದಿನಾರು ಹೆಚ್ಚು”
“”2 ದಿನಾರು? ಓಹ್, ಅದಕ್ಕೆಲ್ಲ ನೀವು ತಲೆಕೆಡಿಸಿಕೊಳ್ಳಬೇಡಿ. 30 ದಿನಾರಿನ ದಂತಸೇವೆಯೇ ಸಾಕು, ಅನಸ್ತೇಶಿಯಾ ಎಲ್ಲ ಬೇಕಾಗಿಲ್ಲ” ಎಂದ ಮುಲ್ಲಾ.
“”ನೀವು ಬಯಲುಸೀಮೆ ಜನ ಬಹಳ ಗಟ್ಟಿಗರಪ್ಪಾ$! ಎಂತಹ ನೋವನ್ನೂ ಸಹಿಸಿಕೊಂಡು ಬದುಕಬಲ್ಲ ಧೈರ್ಯವಂತ ಜನ. ನಿಮ್ಮನ್ನು ಕಂಡರೆ ನನಗೆ ನಿಜಕ್ಕೂ ಅಭಿಮಾನ ! ಎಲ್ಲಿ, ಇಲ್ಲಿ ಬನ್ನಿ…” ಎಂದು ವೈದ್ಯರು ಮುಲ್ಲಾನ ಮಾತಿಗೆ ಮೆಚ್ಚುಗೆ ಸೂಚಿಸುತ್ತ ಆತನನ್ನು ತನ್ನ ಕ್ಲಿನಿಕ್‌ನಲ್ಲಿ ಹಾಕಿದ್ದ ದಂತ ಚಿಕಿತ್ಸೆಯ ಕುರ್ಚಿಯತ್ತ ಕರೆದರು.
“”ಡಾಕ್ಟ್ರೇ, ಹಲ್ಲು ಕೀಳಬೇಕಿರುವುದು ನನಗಲ್ಲ, ಹೆಂಡತಿಗೆ. ಕರೊRಂಬತೇìನೆ ಇರಿ” ಎಂದು ಹೊರಟ ಮುಲ್ಲಾ.
ಅವರೆಕಾಳಿನ ಉಸಳಿ
ಗುರುವಾರ ಸಂಜೆ ಊಟಕ್ಕೆ ಕೂತಾಗ ಮುಲ್ಲಾನ ಹೆಂಡತಿ ತಟ್ಟೆಯಲ್ಲಿ ಎರಡು ರೊಟ್ಟಿ, ಜೊತೆಗೆ ಅವರೆಕಾಳಿನ ಉಸಳಿ ತಂದಿಟ್ಟಳು. ಮುಲ್ಲಾ ಕೂಡಲೇ ಆ ತಟ್ಟೆಯನ್ನು ಎತ್ತಿ ಎದುರಿದ್ದ ಗೋಡೆಗೆ ಬೀಸಿ ಒಗೆದ. “”ನನಗೆ ಅವರೆಕಾಳಿನ ಉಸಳಿ ಆಗಲ್ಲಾ ಆಗಲ್ಲಾ!” ಎಂದು ಕೂಗಾಡಿದ.
ಅವನ ಹೆಂಡತಿಗೆ ಇದು ವಿಚಿತ್ರವೆನಿಸಿತು. “”ಯಾಕೆ ಹೀಗೆ ಆಡ್ತೀರಿ! ನಿಮಗೆ ಏನು ಒಗ್ಗುತ್ತೆ, ಏನು ಒಗ್ಗಲ್ಲ ಅನ್ನುವುದೇ ಯಕ್ಷಪ್ರಶ್ನೆಯಾಗಿದೆ! ಮೊನ್ನೆ ಭಾನುವಾರ ಸಂಜೆ ಅವರೆಕಾಳಿನ ಉಸಲಿ ಮಾಡಿದ್ದೆ, ರುಚಿಯಾಗಿದೆ ಅಂತ ಎರಡೆರಡು ಸಲ ಹಾಕಿಸಿಕೊಂಡು ತಿಂದಿರಿ. ಸೋಮವಾರ ಮಾಡಿದೆ, ತಿಂದಿರಿ. ಮೊನ್ನೆ ಮಂಗಳವಾರನೂ ಮಾಡಿದ್ದೆ, ತಿಂದಿರಿ. ನಿನ್ನೆಯೂ ಯಾವ ಟೀಕೆ-ಟಿಪ್ಪಣಿ ಮಾಡದೆ ತಿಂದಿರಿ. ಇವತ್ತು ಮಾತ್ರ ಅದು ಇಷ್ಟವಿಲ್ಲ ಅನ್ನುತ್ತೀರಲ್ಲಾ!” ಎಂದು ಮೂಗಿನ ಮೇಲೆ ಬೆರಳಿಟ್ಟಳು.
ಮೂವತ್ತನೆಯ ದಿನ
ಯಾಕಯ್ಯ ಮುಲ್ಲಾ, ಬಹಳ ಬೇಸರಪಟ್ಟು ಕೂತಿದ್ದೀ? ಏನು ಸಮಾಚಾರ?”
“”ಏನು ಹೇಳಲಯ್ಯ. ನನಗೂ ಹೆಂಡತಿಗೂ ಒಂದು ಕ್ಷುಲ್ಲಕ ವಿಷಯಕ್ಕೆ ಜಗಳ ಆಯಿತು. ಜಗಳ ವಿಕೋಪಕ್ಕೆ ಹೋಗಿ ಅವಳು ಒಂದು ತಿಂಗಳು ನನ್ನ ಜೊತೆ ಮಾತು ಬಿಡುತ್ತೇನೆ ಎಂದು ಶಪಥ ಬೇರೆ ಹಾಕಿಬಿಟ್ಟಳು”
“”ತುಂಬ ದುಃಖದ ವಿಚಾರ ಕಣಯ್ಯ!”
“”ಹೂn. ಇಂದೇ ತಿಂಗಳ ಮೂವತ್ತನೇ ದಿನ ಅನ್ನೋದೇ ನನ್ನ ದುಃಖ”
– ರೋಹಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.