ಹಾರ್ದಿಕ್ಗೆ ಮತ್ತಷ್ಟು ಹಿನ್ನಡೆ
Team Udayavani, Nov 19, 2017, 6:05 AM IST
ಅಹ್ಮದಾಬಾದ್: ಗುಜರಾತ್ ಚುನಾ ವಣೆ ಸಮೀಪಿಸುತ್ತಿದ್ದಂತೆಯೇ ಪಟೇಲರಿಗೆ ಮೀಸಲು ಕೊಡಿಸುವ ಆಂದೋಲನ ಸಮಿತಿ (ಪಿಎಎಎಸ್)ನಾಯಕ ಹಾರ್ದಿಕ್ ಪಟೇಲ್ಗೆ ಹಿನ್ನಡೆಯಾಗಿದೆ. ಅವರ ಇಬ್ಬರು ಪ್ರಮುಖ ಬೆಂಬಲಿಗರಾದ ಕೇತನ್ ಪಟೇಲ್ ಮತ್ತು ಅಮ್ರಿಶ್ ಪಟೇಲ್ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯಿಂ ದಾಗಿ ಒಟ್ಟು 7 ನಾಯಕರು ಪಟೇಲ್ರನ್ನು ತೊರೆದು ಬಿಜೆಪಿಗೆ ಸೇರಿದಂತಾಗಿದೆ.
ಈಗ ದಿನೇಶ್ ಬಂಬಾನಿಯಾ ಮತ್ತು ಅಲ್ಪೇಶ್ ಖತಿರಿಯಾ ಎಂಬ ಇಬ್ಬರು ಮಾತ್ರ ಪಿಎಎಎಸ್ನಲ್ಲಿ ಇರುವಂತಾಗಿದೆ. ಅವರಿಬ್ಬರ ವಿರುದ್ಧ ದೇಶದ್ರೋಹದ ಆರೋಪವಿದೆ. ಕೆಲ ದಿನಗಳ ಹಿಂದಷ್ಟೇ ನಿತಿನ್ ಸವಾನಿ ಎಂಬು ವರು ಬಿಜೆಪಿಗೆ ಸೇರಿ ಕೆಲವೇ ಗಂಟೆಗಳಲ್ಲಿ ಪಕ್ಷ ತೊರೆದು ತಮಗೆ 1 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದು ಆರೋಪಿಸಿದ್ದರು.
ಸಂಧಾನಕ್ಕೆ ಸಿಬಲ್: ಪಟೇಲ್ ಸಮುದಾಯಕ್ಕೆ ಮೀಸಲು ನೀಡುವ ವಿಚಾರದಲ್ಲಿ ನಿಲುವು ಸ್ಪಷ್ಟಪಡಿಸಲು ಮತ್ತು ತಾನು ಸೂಚಿಸಿದ 30 ಮಂದಿ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿ ಕೊಡಲು ಹಾರ್ದಿಕ್ ಪಟೇಲ್ ಕಾಂಗ್ರೆಸ್ಗೆ 24 ಗಂಟೆಗಳ ಗಡುವು ನೀಡಿದ್ದಾರೆ. ಹೀಗಾಗಿ, ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಯುವ ನಾಯಕನ ಜತೆಗೆ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಪಕ್ಷ ತನ್ನ ನಿರ್ಧಾರ ಪ್ರಕಟಿಸಲಿದೆ. ಜತೆಗೆ ಅವರ ಬೇಡಿಕೆಯ ಬಗ್ಗೆ ಸಂವಿಧಾನದ ಮಿತಿ ಯಲ್ಲಿಯೇ ಪರಿಹಾರ ಕಂಡುಕೊಳ್ಳುವ ಬಗ್ಗೆ ಮೀಸಲು ಹೋರಾಟ ಸಮಿತಿ ನಾಯಕರಿಗೆ ವಾಗ್ಧಾನ ನೀಡಿದ್ದಾರೆ.
ರಿಕ್ಷಾ ಚಿಹ್ನೆಯಡಿ ಸ್ಪರ್ಧೆ: ಇನ್ನೊಂದೆಡೆ, ರಾಜ್ಯಸಭಾ ಸದಸ್ಯ ಶರದ್ ಯಾದವ್ ಮತ್ತು ಅವರ ಬಣ ಗುಜರಾತ್ ಚುನಾವಣೆಯಲ್ಲಿ “ಆಟೋ ರಿಕ್ಷಾ’ ಚಿಹ್ನೆಯಡಿ ಸ್ಪರ್ಧಿಸಲು ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.