ಭಾರತದ ಮಾಹಿತಿ ಹ್ಯಾಕ್ ಮಾಡಿದ ಚೀನ
Team Udayavani, Nov 20, 2017, 6:00 AM IST
ಹೊಸದಿಲ್ಲಿ : ಇನ್ನೊಂದು ವರ್ಷದಲ್ಲಿ ದೇಶದ ಎಲ್ಲ ಸೇವೆಗಳನ್ನು ಆನ್‌ಲೈನ್ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಗುರಿ ಇರಿಸಿಕೊಂಡಿರುವ ಕೇಂದ್ರ ಸರಕಾರಕ್ಕೆ ಸೈಬರ್ ಒಳನುಸುಳುವಿಕೆ (ಹ್ಯಾಕ್) ಸವಾಲಾಗಿ ಪರಿಣಮಿಸಿದೆ.
ಕಳೆದ ತಿಂಗಳಷ್ಟೇ ನಡೆದ ಉನ್ನತ ಅಧಿಕಾರಿಗಳ ಸ್ಯಾಟ್‌ಲೆçಟ್ ಆಧಾರಿತ ವೀಡಿಯೋ ಕಾನೆ#ರೆನ್ಸ್ ಸಭೆಯ ದೃಶ್ಯಾವಳಿಗಳನ್ನು ಚೀನ ಹ್ಯಾಕ್ ಮಾಡಿರುವ ಬಗ್ಗೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಅತ್ಯಂತ ಸುಧಾರಿತ ಮತ್ತು ವ್ಯವಸ್ಥಿತ ಸೈಬರ್ ಸಂಚು ಎಂದೆನಿಸಿಕೊಂಡಿದ್ದು, ಡಾಟಾ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.
ಇದಷ್ಟೇ ಅಲ್ಲ, ಉನ್ನತ ಅಧಿಕಾರಿಗಳ ಸಭೆಯ ವೀಡಿಯೋ ಲಿಂಕ್ 4ರಿಂದ 5 ನಿಮಿಷಗಳವರೆಗೆ ಹ್ಯಾಕರ್‌ಗಳ ವಶದಲ್ಲೇ ಇತ್ತು ಎಂಬುದನ್ನೂ ಈ ವರದಿ ಬಹಿರಂಗಪಡಿಸಿದೆ. ತಮ್ಮ ವೀಡಿಯೋ ಲಿಂಕ್ ಹ್ಯಾಕ್ ಆಗಿದೆ ಎಂಬುದು ಗೊತ್ತಾಗುವ ಹೊತ್ತಿಗೇ ಐದಾರು ನಿಮಿಷಗಳು ಕಳೆದುಹೋಗಿ ದ್ದವು ಎಂಬುದು ವಿಷಾದದ ಸಂಗತಿ.
ಚೀನದ ಹ್ಯಾಕರ್‌ಗಳೇ ಈ ಕೆಲಸ ಮಾಡಿದ್ದಾರೆ ಎಂಬುದು ಇಲ್ಲಿನ ಸೈಬರ್ ತಜ್ಞರ ಮಾತು. ಆದರೆ ಇದನ್ನು ಅಲ್ಲಿನ ಸರಕಾರವೇ ಮಾಡಿಸಿತೇ ಅಥವಾ ಸೈಬರ್ ಕ್ರಿಮಿನಲ್‌ಗಳು ಮಾಡಿದ್ದಾರೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ದೇಶದ ಗುಪ್ತಚರ ಸಂಸ್ಥೆ (ಐಬಿ) ಈ ಸಂಬಂಧ ಟಿಪ್ಪಣಿಯೊಂದನ್ನು ಸಿದ್ಧಪಡಿಸಿ ಸರಕಾರಕ್ಕೆ ಕೊಟ್ಟಿದೆ. ಈ ಟಿಪ್ಪಣಿ “ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಸಿಕ್ಕಿದ್ದು, ಚೀನ ಹ್ಯಾಕರ್‌ಗಳ ಒಳನುಸುಳುವಿಕೆ ಬಗ್ಗೆ ವಿವರಿಸಲಾಗಿದೆ.
ಈ ಟಿಪ್ಪಣಿಯ ಪ್ರಕಾರ, ಸರಕಾರಗಳ ವೆಬ್‌ಸೈಟ್‌ಗಳಿಗೆ ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ನುಗ್ಗಿ ಡೇಟಾಗಳನ್ನು ಕದಿಯುವ ಶಕ್ತಿ ಚೀನದ ಹ್ಯಾಕರ್‌ಗಳಿಗಿದೆ. ಜತೆಗೆ ಇಡೀ ವ್ಯವಸ್ಥೆಯನ್ನೇ ನಾಶಪಡಿಸುವ ಅಥವಾ ತೊಂದರೆಗೀಡು ಮಾಡುವ ಉದ್ದೇಶವೂ ಈ ಹ್ಯಾಕರ್‌ಗಳಿಗೆ ಇದೆ. ಹೀಗಾಗಿ ಬಲಿಷ್ಠ ಸೈಬರ್ ಭದ್ರತಾ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಐಬಿ ಎಚ್ಚರಿಕೆಯನ್ನೂ ನೀಡಿದೆ.
2018ರೊಳಗೆ ಎಲ್ಲವೂ ಆನ್‌ಲೈನ್
ಇತ್ತೀಚೆಗೆ ಹೊರಬಿದ್ದ ಪ್ರಧಾನಿ ಕಾರ್ಯಾಲಯದ ಟಿಪ್ಪಣಿ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲ ಸೌಲಭ್ಯಗಳು, ಸಬ್ಸಿಡಿ ಜನಧನ ಅಕೌಂಟ್, ಆಧಾರ್ ಮತ್ತು ಮೊಬೈಲ್‌ಗಳ ಮೂಲಕವೇ ತಲುಪಬೇಕು. 2018ರೊಳಗೆ ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅದು ಸೂಚಿಸಿದೆ.
ಸದ್ಯ ದೇಶದಲ್ಲಿ 4,000 ಇ-ಸೇವೆಗಳು ಲಭ್ಯವಿದ್ದು, ತಿಂಗಳಿಗೆ ಹತ್ತಿರತ್ತಿರ 61 ಕೋಟಿ ಇ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದಲ್ಲದೇ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೇರಿದ 8000 ಪೋರ್ಟಲ್, ವೆಬ್‌ಸೈಟ್‌ಗಳು ಮತ್ತು ದಾಖಲೆಗಳನ್ನು ಸಂಸ್ಥೆಯೊಂದು ನಿರ್ವಹಣೆ ಮಾಡುತ್ತಿದೆ. ಎಲ್ಲ ಸೇವೆಗಳು, ಮಾಹಿತಿ ಒಂದೇ ಕಡೆ ಸಿಗುವುದರಿಂದ ಈ ಸಂಸ್ಥೆಯೇ ಸೈಬರ್ ದಾಳಿಗೆ ಸುಲಭ ತುತ್ತಾಗುತ್ತದೆ. ಇದರ ಜತೆಗೆ ಕೇಂದ್ರ ಸರಕಾರ 2018ರೊಳಗೆ 2,000 ಮೊಬೈಲ್ ಆ್ಯಪ್‌ಗ್ಳನ್ನು ಮಾಡಿ ಈ ಮೂಲಕ ಜನರಿಗೆ ವಿವಿಧ ಸೇವೆಗಳನ್ನು ನೀಡಲು ಮುಂದಾಗಿದೆ.
ಆನ್‌ಲೈನ್ ಸೇವೆಗಾಗಿ ಇಷ್ಟೆಲ್ಲ ವ್ಯವಸ್ಥೆ ಮಾಡಿ ಕೊಂಡಿದ್ದರೂ ದೇಶದಲ್ಲಿ ಇನ್ನೂ ಸೈಬರ್ ಭದ್ರತೆ ನೀಡುವ ವ್ಯವಸ್ಥೆ ಬಂದಿಲ್ಲ. ಹೀಗಾಗಿ ಚೀನದಂಥ ಆಧುನಿಕ ಮತ್ತು ಸುಧಾರಿತ ರೀತಿಯಲ್ಲಿ ದಾಳಿ ನಡೆಸುವಂತಹ ವ್ಯವಸ್ಥೆಯನ್ನು ಎದುರಿಸಲು ಅತ್ಯಂತ ಶಕ್ತಿಶಾಲಿಯಾದ ಭದ್ರತಾ ವ್ಯವಸ್ಥೆ ಬರಬೇಕು ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಡಿಸೆಂಬರ್ 8ಕ್ಕೆ ಅಣಕು ಪ್ರದರ್ಶನ
ಸೈಬರ್ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಡಿ. 8ರಂದು 7 ಸಚಿವಾಲಯಗಳಿಗಾಗಿ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ಕಾನೂನು, ಕಾರ್ಮಿಕ, ಮಾನವ ಸಂಪನ್ಮೂಲ ಅಭಿವೃದ್ಧಿ, ವಿದೇಶಾಂಗ, ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯಗಳು ಪಾಲ್ಗೊಳ್ಳಲಿವೆ. ಈ ಸಚಿವಾಲಯಗಳಿಗೆ ನುಗ್ಗಿ ಹ್ಯಾಕ್ ಮಾಡುವ ಬಗ್ಗೆ ಅಂದು ಪರೀಕ್ಷೆ ನಡೆಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.