ಸೋಯಾ ಹಸಿ ಅವರೆಯಾಗಿ ಇನ್ನು ಬಳಕೆಗೆ ರೆಡಿ
Team Udayavani, Nov 20, 2017, 10:23 AM IST
ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳು 8 ವರ್ಷಗಳಿಂದ ಸುದೀರ್ಘ ಅಧ್ಯಯನ ನಡೆಸಿ ತರಕಾರಿ “ಸೋಯಾ ಅವರೆ’ಯನ್ನು ಹೊಸದಾಗಿ ಅಭಿವೃದ್ಧಿಪಡಿಸಿದ್ದಾರೆ.
ಈ ಮೊದಲು ಸೋಯಾ ಅವರೆ ಎಣ್ಣೆಕಾಳಾಗಿ ಮಾತ್ರ ಬಳಕೆಯಲ್ಲಿತ್ತು. ಆದರೆ, ಹಸಿಕಾಯಿ(ತರಕಾರಿ)ಯಾಗಿ ಬಳಕೆ
ಮಾಡುವ ಯಾವುದೇ ತಳಿ ದೇಶದಲ್ಲಿರಲಿಲ್ಲ. ಬೆಂಗಳೂರು ಕೃಷಿ ವಿವಿಯ ವಿಜ್ಞಾನಿಗಳ ಸಂಶೋಧನೆ ಪರಿಣಾಮವಾಗಿ ಈಗ “ಕರುಣೆ’ ತಳಿಯ ತರಕಾರಿ ಸೋಯಾ ಅವರೆಯನ್ನು ಸಹ ಹಸಿಕಾಯಿಯಾಗಿ ಬಳಸಬಹುದಾಗಿದೆ. ತರಕಾರಿಯಂತೆ ಈ ಸೋಯಾ ಅವರೆಯನ್ನು ಹಸಿ ಇರುವಾಗಲೇ ಕಿತ್ತು ಬಳಕೆ ಮಾಡಬಹುದು. ಇದೊಂದು ದ್ವಿದಳ ಬೆಳೆಯಾಗಿದ್ದು, ಶೇ.40 ಸಸಾರಜನಕ ಮತ್ತು ಶೇ.20 ಎಣ್ಣೆ ಅಂಶದಿಂದ ಕೂಡಿದೆ. ಯಾವುದೇ ಕಾಳುಗಳಲ್ಲಿ ಇಷ್ಟು ಪ್ರಮಾಣದ ಸಸಾರಜನಕ ಮತ್ತು ಎಣ್ಣೆ ಅಂಶ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸೋಯಾ ಅವರೆ ಸಂಶೋಧನಾ ವಿಭಾಗ ಹಿರಿಯ ಸಂಶೋಧನಾ ಸಹಾಯಕ ವಿಜ್ಞಾನಿ ಕೆ.ನಟರಾಜ್.
ತೈವಾನಿನ ಏಷ್ಯನ್ ವೆಜಿಟೇಬಲ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಟ್ ಕೌನ್ಸಿಲ್‌ನಿಂದ 9 ವರ್ಷಗಳ ಹಿಂದೆ ಸುಮಾರು 12 ತಳಿಗಳನ್ನು ಕೃಷಿ ವಿವಿ ತರಿಸಿಕೊಂಡಿತ್ತು. ಈ ತಳಿಗಳನ್ನು ಪ್ರಯೋಗಕ್ಕೆ ಒಳಪಡಿಸಿದ ಮೇಲೆ ಸೋಯಾ ಅವರೆ ಇಲ್ಲಿನ ಹವಾಮಾನ ಮತ್ತು ಮಣ್ಣಿಗೆ ತಕ್ಕಂತೆ ಅಭಿವೃದ್ಧಿ ಪಡಿಸಲು ಸಾಧ್ಯವೆಂದು ಅರಿತ ಎಂ.ಸ್ವಾಮಿ ನೇತೃತ್ವದ ವಿಜ್ಞಾನಿಗಳ ತಂಡದ ಎಂ.ಚಂದ್ರಪ್ಪ, ಸಿ.ಮಂಜಾನಾಯಕ್, ಜಿ.ಟಿ.ಸಂತೋಷ್‌ಕುಮಾರ್, ಎನ್.ಸ್ವಾಮಿ, ಎಂ.ಸುಶ್ಮಿತಾ ಅವರು ಸತತ ಎಂಟು ವರ್ಷಗಳ
ಕಾಲ ತರಕಾರಿ ಸೋಯಾ ಅವರೆಯನ್ನು ವಿವಿಧ ಹಂತದಲ್ಲಿ ಸಂಶೋಧನೆಗೆ ಒಳಪಡಿಸಿ ಅಭಿವೃದ್ಧಿಪಡಿಸಿದ್ದಾರೆ.
ವಿಶ್ರಬೆಳೆಯಾಗಿ ಸೋಯಾ ಅವರೆ
2 ಅಡಿ ಅಂತರದ ತೊಗರಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆಯಬಹುದು. ಇದರಿಂದ ಎಕರೆಗೆ ಸುಮಾರು 4-5 ಕ್ವಿಂಟಾಲ್ ತೊಗರಿ, 3 ಕ್ವಿಂಟಾಲ್ ಸೋಯಾ ಅವರೆ ಪಡೆಯಬಹುದು. ರಾಗಿಯಲ್ಲಿ ಒಂದೂವರೆ ಅಡಿ ಅಂತರದಲ್ಲಿ ಎರಡು ರಾಗಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆದರೆ 6 ಕ್ವಿಂಟಲ್ ರಾಗಿ ಮತ್ತು 3 ಕ್ವಿಂಟಲ್ ಸೋಯಾ ಅವರೆ ಸಿಗುತ್ತದೆ. ಕಬ್ಬು, ಮುಸುಕಿನ ಜೋಳ, ಭತ್ತದ ಕೂಳೆ ಗದ್ದೆಯಲ್ಲೂ ಮಿಶ್ರಬೆಳೆಯಾಗಿ ಸೋಯಾ ಅವರೆ ಬೆಳೆಯಬಹುದು.
ಉಚಿತ ಬೀಜ
ಕೃಷಿ ಮೇಳದಲ್ಲಿ ತರಕಾರಿ ಸೋಯಾ ಅವರೆಯನ್ನು ವಿಸ್ತರಿಸುವ ಉದ್ದೇಶದಿಂದ ಸೋಯಾ ಅವರೆ ಸಂಶೋಧನಾ ವಿಭಾಗ ಉಚಿತವಾಗಿ ರೈತರಿಗೆ ಈ ತಳಿಯ ಬೀಜಗಳನ್ನು ವಿತರಿಸಿದೆ. ಆಸಕ್ತ ರೈತರು ಈ ತಳಿ ಬೆಳೆಯಲು ಬಯಸುವುದಾದರೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಲಿ ದ್ದಾರೆ. ತರಕಾರಿ ಸೋಯಾ ಅವರೆ ತಳಿ ಬೀಜ ಮತ್ತು ಮಾಹಿತಿಗೆ ವಿಜ್ಞಾನಿಗಳಾದ ಎಂ.ಚಂದ್ರಪ್ಪ (9986858158), ಸಿ.ಮಂಜಾನಾಯಕ್ (9480773978) ಮತ್ತು ಡಾ.ಕೆ. ನಟರಾಜ್ (8147129773) ಸಂಪರ್ಕಿಸಬಹುದು.
ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.