ಜಾಗತಿಕ ಬಲಿಷ್ಠ ರಾಷ್ಟ್ರವಾಗಲಿದೆ ಭಾರತ
Team Udayavani, Nov 20, 2017, 10:51 AM IST
ಉಡುಪಿ: ಭಾರತ ಜಗತ್ತಿನಲ್ಲೇ ಅತೀ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶ. ಯುವಜನತೆ ಈ ದೇಶದ ಶಕ್ತಿ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಜಾಗತಿಕ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಮೈನಿ ಗ್ರೂಪ್ ಅಧ್ಯಕ್ಷ ಸಂದೀಪ್ ಮೈನಿ ಹೇಳಿದರು.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ರವಿವಾರ ನಡೆದ ಮಣಿಪಾಲ ವಿ.ವಿ. ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯುವಜನತೆಯಲ್ಲಿ ಸಂಘಟನಾತ್ಮಕ ಮತ್ತು ಸಕಾರಾತ್ಮಕ ಬದಲಾವಣೆ ತರುವ ಅತ್ಯದ್ಭುತ ಶಕ್ತಿ ಇದೆ. ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಸಾಮಾ ಜಿಕವಾಗಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಕಾರಾತ್ಮಕ ಪರಿಣಾಮಗಳನ್ನು ಪತ್ತೆಹಚ್ಚಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ರಾಜಕೀಯ, ಸಾಮಾ ಜಿಕ, ಆರ್ಥಿಕ ಹೀಗೆ ವಿವಿಧ ಸ್ತರಗಳಲ್ಲಿ ಬದ ಲಾವಣೆಯ ಪರ್ವ ಪ್ರಾರಂಭವಾಗಲಿದೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ, ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಲಿದೆ ಎಂದರು.
ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು
ಭಾರತ ಐತಿಹಾಸಿಕವಾಗಿ ಸಾಂಸ್ಕೃತಿಕ, ಸಾಮಾ ಜಿಕ, ಪ್ರಬುದ್ಧ ಕುಟುಂಬ ಪದ್ಧತಿ ಹಾಗೂ ನೈತಿಕ ಮೌಲ್ಯ ಗಳನ್ನು ಬೆಳೆಸಿಕೊಂಡು ಬಂದಿರುವ ದೇಶ. ಆ ಮೌಲ್ಯಗಳನ್ನು ಯುವಜನತೆ ಪ್ರತಿ ಹಂತ ದಲ್ಲಿಯೂ ಕಾಪಾಡಿಕೊಂಡು ಮುಂದೆ ಸಾಗ ಬೇಕು. ದೇಶ ಸರ್ವರೀತಿಯಲ್ಲಿ ಅಭಿವೃದ್ಧಿ ಹೊಂದ ಬೇಕಾ ದರೆ ಅಲ್ಲಿನ ನೈತಿಕ ಮೌಲ್ಯವೂ ಪ್ರಮುಖ ಪಾತ್ರ ವಹಿಸು ತ್ತದೆ. ಆದರೆ ದೇಶದಲ್ಲಿ ಕೆಲ ವೊಂದು ಮೌಲ್ಯಗಳು ಕುಸಿಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕಳೆದು ಹೋಗುತ್ತಿರುವ ಮೌಲ್ಯಗಳನ್ನು ಪುನರ್ ರೂಪಿಸುವ ಮತ್ತು ಬಿತ್ತರಿಸುವ ಜವಾಬ್ದಾರಿಯನ್ನು ಕೂಡ ನಾವು ಬೆಳೆಸಿಕೊಳ್ಳಬೇಕು ಎಂದರು.
ಫಲಾಪೇಕ್ಷೆ ರಹಿತ ಕೆಲಸ
ಬದುಕಿನಲ್ಲಿ ಎಂದಿಗೂ ನಮ್ಮ ಬಗ್ಗೆ ನಮಗೆ ತಿರಸ್ಕೃತ ಮನೋಭಾವ ಮೂಡಬಾರದು. ಅನೇಕ ಅವಕಾಶಗಳು ನಮ್ಮಿಂದ ಕೈತಪ್ಪಿ ಹೋಗುತ್ತವೆ. ಇದ ರಿಂದ ನಾವು ಧೃತಿಗೆಡಬಾರದು. ನಮ್ಮ ಕನಸು, ಗುರಿ ತಲುಪಬೇಕಾದರೆ ಮಾಡುವ ವೃತ್ತಿಯಲ್ಲಿ ಸಂತೃಪ್ತಿ ಮತ್ತು ಶ್ರಮ ಪಡಬೇಕು. ಫಲಾಪೇಕ್ಷೆ ಇಲ್ಲದೇ ನಾವು ಕಾರ್ಯಪ್ರವೃತ್ತರಾಗ ಬೇಕಾಗುತ್ತದೆ. ಭಗವದ್ಗೀತೆ ಕೂಡ ಇದನ್ನೇ ಹೇಳಿದೆ ಎಂದರು.
ಎರಡನೇ ದಿನದ ಘಟಿಕೋತ್ಸವದಲ್ಲಿ 1,264 ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಗಳಿಗೆ ಮತ್ತು 22 ಮಂದಿಗೆ ಪಿಎಚ್‌ಡಿ ಪದವಿ ನೀಡಲಾಯಿತು. 5 ಮಂದಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಮಣಿಪಾಲ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಡಾ| ಎಚ್. ವಿನೋದ್ ಭಟ್, ಕುಲಸಚಿವ ಡಾ| ನಾರಾಯಣ ಸಭಾಹಿತ್, ಸಹಕುಲಪತಿಗಳಾದ ಡಾ| ಪೂರ್ಣಿಮಾ ಬಾಳಿಗಾ, ಡಾ| ಜಿ.ಕೆ. ಪ್ರಭು, ಡಾ| ಅಬ್ದುಲ್ ರಜಾಕ್, ಡಾ| ವಿನೋದ್ ಥಾಮಸ್, ಡಾ| ಸುಮಾ ನಾಯರ್, ಡಾ| ಮಧುಕರ್ ಮಲ್ಯ ಉಪಸ್ಥಿತರಿದ್ದರು. ಸಹಕುಲಪತಿ ಡಾ| ವಿ. ಸುರೇಂದ್ರ ಶೆಟ್ಟಿ ಸ್ವಾಗತಿಸಿ, ಡಾ| ಬಿ. ರಾಜಶೇಖರ್ ವಂದಿಸಿದರು. ಡಾ| ಅನಿಲ್ ಭಟ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.