ಮಹಿಳಾ ಮೀನುಗಾರರ ಸಾಲದ ಸಹಾಯಧನ ಬಿಡುಗಡೆ
Team Udayavani, Nov 20, 2017, 10:59 AM IST
ಉಡುಪಿ: ವಿವಿಧ ಸಹಕಾರಿ ಸಂಘ ಗಳಿಂದ ಮಹಿಳಾ ಮೀನುಗಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ನೀಡಲಾಗುವ ಸಾಲದ ಮೇಲಿನ ಬಡ್ಡಿಯ ಬಾಕಿ ಸಹಾಯಧನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ರವಿವಾರ ಶ್ಯಾಮಿಲಿ ಸಭಾಂಗಣದ ಎದುರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಮತ್ತು ಜಿಲ್ಲಾ ಮಹಿಳಾ ಮೀನುಗಾರರ ಸಹಕಾರಿ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾದ ಮಹಿಳಾ ಮೀನುಗಾರರ ಸಮಾವೇಶ ಮತ್ತು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿ ಸಲ್ಪಡುವ ಅತ್ಯಾಧುನಿಕ ಸೌಲಭ್ಯಗಳುಳ್ಳ 100 ಹಾಸಿಗೆಗಳ ನೂತನ ಸುಸಜ್ಜಿತ ದಿ| ಶ್ರೀಮತಿ ಲಕ್ಷ್ಮೀಸೋಮ ಬಂಗೇರ ಹೆರಿಗೆ ವಿಭಾಗದ ಶಿಲಾನ್ಯಾಸ ಸಮಾರಂಭ ನೆರವೇರಿಸಿದ ಅನಂತರ ಮಹಿಳಾ ಮೀನುಗಾರರ ಪರವಾಗಿ ನಾಡೋಜ ಡಾ| ಜಿ. ಶಂಕರ್ ಅವರ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ಈ ಆದೇಶ ಹೊರಡಿಸಿದರು. “ಬಾಕಿ ಇರುವ 12 ಕೋ.ರೂ. ಕೂಡಲೇಬಿಡುಗಡೆ ಮಾಡಿ ಚುಕ್ತಾ ಮಾಡು ವಂತೆ ಇಲ್ಲಿಯೇ ಆದೇಶ ಮಾಡಿದ್ದೇನೆ’ ಎಂದರು.
ನಿಗಮಕ್ಕೆ 100 ಕೋ.ರೂ.
“ಅಂಬಿಗರ ಚೌಡಯ್ಯ ನಿಗಮ ರಚಿಸಿ ಅನು ದಾನ ಮೀಸಲಿಡಬೇಕು’ ಎಂಬ ಬೇಡಿಕೆಗೆ ಸ್ಪಂದಿ ಸಿದ ಸಿದ್ದರಾಮಯ್ಯ ಅವರು ನಿಗಮಕ್ಕೆ 100 ಕೋ.ರೂ. ಅನುದಾನ ಮೀಸಲಿಡಲಾಗು ವುದು ಎಂದರು. “60 ವರ್ಷ ದಾಟಿದ ಮೀನುಗಾರ ಮಹಿಳೆಯರಿಗೆ ಮತ್ಸ éಭಾಗ್ಯ ಯೋಜನೆಯಡಿ ಮಾಸಿಕ 2,000 ರೂ. ಪಿಂಚಣಿ ನೀಡಬೇಕು’ ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬೇಡಿಕೆ ಯನ್ನು ಯೋಚನೆ ಮಾಡಿ ಮುಂದೆ ಪರಿಶೀಲಿಸೋಣ. ಒಬ್ಬರಿಗೆ ನೀಡಿದರೆ ಬೇರೆ ಸಮು ದಾಯದವರೂ ಕೇಳುತ್ತಾರೆ’ ಎಂದರು.
ಮೀನುಗಾರರ ಅನುಕೂಲಕ್ಕಾಗಿ ಸಚಿವ ಪ್ರಮೋದ್ ಹಾಕಿಕೊಳ್ಳುವ ಎಲ್ಲ ಯೋಜನೆ, ಕಾರ್ಯಕ್ರಮಗಳಿಗೆ ಮಂಜೂ ರಾತಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರದ ಮೇಲೆ ಒತ್ತಡ ಹಾಕಿ
ಮೊಗವೀರ ಮತ್ತು 39 ಉಪಜಾತಿಗಳನ್ನು ಪ.ಪಂಗಡಕ್ಕೆ ಸೇರಿಸುವವರೆಗೆ ಅತೀ ಹಿಂದುಳಿದ ವರ್ಗವಾದ ಪ್ರವರ್ಗ 1ರಲ್ಲಿ ಬರುವ ಮೀನು ಗಾರರಿಗೆ ನೀಡಲಾಗುವ ಮೀಸಲಾತಿ ಆದಾಯ ಮಿತಿಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು “ಮೀನುಗಾರರು, ಬೆಸ್ತರು, ಗಂಗಾಮತಸ್ಥ, ಖಾರ್ವಿ, ಕೋಳಿಸಮಾಜ ಇವರೆಲ್ಲರೂ ಪ್ರವರ್ಗ 1ರಲ್ಲಿದ್ದಾರೆ. ಅವರನ್ನು° ಎಸ್‌ಟಿ ಮಾಡಲು ಒತ್ತಾಯ ಇದೆ. ಅವರೆಲ್ಲರನ್ನು ಎಸ್‌ಟಿ ಮಾಡಲು ಕೇಂದ್ರ ಸರಕಾರಕ್ಕೆ ಎರಡು ಶಿಫಾರಸು ಮಾಡಿದ್ದೇವೆ. ಇನ್ನೂ ಒತ್ತಾಯ ಮಾಡುತ್ತೇನೆ. ಆದರೆ ತೀರ್ಮಾನ ಮಾಡಬೇಕಾದುದು ಕೇಂದ್ರ ಸರಕಾರ. ಅವರ ಮೇಲೆ ಒತ್ತಡ ಹಾಕಿ’ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಅಭಿವೃದ್ಧಿ ಕಾರ್ಯ
ಪ್ರಮೋದ್ ಮಧ್ವರಾಜ್ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯ ಪ್ರಗತಿಯಲ್ಲಿ ಮೀನು ಗಾರರ ಕೊಡುಗೆ ಬಹಳಷ್ಟಿದೆ. ಸಿದ್ದರಾಮಯ್ಯ ಸರಕಾರ ಮೀನುಗಾರರಿಗೆ ಹಲ ವಾರು ಕೊಡುಗೆಗಳನ್ನು ನೀಡಿದೆ. ಮೀನು ಗಾರ ಕುಟುಂಬದ ನನಗೆ ಕ್ಯಾಬಿನೆಟ್ ಸ್ಥಾನ ನೀಡಿದೆ. ಮಲ್ಪೆಯಲ್ಲಿ 5 ಕೋ.ರೂ. ಕಾಮಗಾರಿ ನಡೆಯು ತ್ತಿದೆ. ಬೈಂದೂರಿನಲ್ಲಿಯೂ ಕೋಟ್ಯಂತರ ರೂ.ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಹೆಜಮಾಡಿ ಬಂದರು ಕಾಮಗಾರಿ ಕೂಡ ನಡೆಯಲಿದೆ. ಡೀಸೆಲ್ ಸಬ್ಸಿಡಿಯನ್ನು 105 ಕೋ.ರೂ.ಗಳಿಗಿಂತ 257 ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ. ಸಂಕಷ್ಟ ಪರಿಹಾರ ನಿಧಿಯನ್ನು 1 ಲ.ರೂ.ನಿಂದ 6 ಲ.ರೂ.ಗಳಿಗೆ ಹೆಚ್ಚಿಸಲಾಗಿದೆ. ಜಿ. ಶಂಕರ್ ಅವರು ತಾವು ಸಂಪಾದನೆ ಮಾಡಿರುವುದನ್ನೆಲ್ಲ ಜನರಿಗೆ ನೀಡುತ್ತಿದ್ದಾರೆ. ಇದು ಶ್ಲಾಘನೀಯ ಎಂದು ಹೇಳಿದರು.
ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ಸಾಂಕೇತಿಕ ವಾಗಿ ವಿತರಿಸಲಾಯಿತು. ಸಮಾವೇಶದಲ್ಲಿ ಸುಮಾರು 12ರಿಂದ 15,000ದಷ್ಟು ಮೀನು ಗಾರ ಮಹಿಳೆಯರು ಪಾಲ್ಗೊಂಡಿದ್ದರು ಎಂದು ಸಂಘಟಕರು ತಿಳಿಸಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿನಯ ಕುಮಾರ್ ಸೊರಕೆ, ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ ಸಾರಂಗ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಉದ್ಯಮಿ ಆನಂದ ಸಿ. ಕುಂದರ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಬಾರಕೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ವಿಶ್ವನಾಥ ಮಾಸ್ತರ್ ಕೂರಾಡಿ, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘ ಶಾಖಾಧ್ಯಕ್ಷ ಕೆ.ಕೆ. ಕಾಂಚನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರ, ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಉಪಸ್ಥಿತರಿದ್ದರು. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರ್ವಹಿಸಿದರು.
94 ಸಿ ಮಾಹಿತಿ: ಸಭಿಕರ ಕೋರಿಕೆ
“94 ಸಿ ಹಕ್ಕುಪತ್ರ ಕೊಡಿ’ ಎಂದು ಸಭಿಕರಲ್ಲೋರ್ವರು ಸಿದ್ದರಾಮಯ್ಯ ಭಾಷಣ ಮಾಡಲು ಎದ್ದು ನಿಂತಾಗ ಹೇಳಿದರು. ಅದಕ್ಕೆ ಸಿದ್ದರಾಮಯ್ಯ “ಡೋಂಟ್‌ವರಿ 94ಸಿ, 94ಸಿಸಿ ಹಕ್ಕುಪತ್ರ ಕೊಡ್ತೇವೆ’ ಎಂದು ಹೇಳಿ ಅನಂತರ ಭಾಷಣ ಆರಂಭಿಸಿದರು.
20 ವರ್ಷಗಳ ಗೆಳೆತನ
ಜಿ.ಶಂಕರ್ ಅವರ ಸಂಘಟನಾ ಶಕ್ತಿ ಮೆಚ್ಚಿದ್ದೇನೆ. ಹಿಂದುಳಿದ ಸಮಾಜ ದಲ್ಲಿ ಹುಟ್ಟಿ ಈಗ ಸಮುದಾಯ, ಬಡವರು, ದುರ್ಬಲರ ಏಳಿಗೆಗೆ ಶ್ರಮಿಸು ತ್ತಿರುವ ಅವರ ಕಾರ್ಯ ಶ್ಲಾಘನೀಯ. ಜಿ.ಶಂಕರ್ ನನಗೆ 20 ವರ್ಷ ಗಳಿಂದ ಪರಿಚಯ. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನನ್ನ ಬಳಿ ಬರು ತ್ತಲೇ ಇರುತ್ತಾರೆ. ಹಾಗಾಗಿ ನನಗೆ ಶಂಕರ್ ಮೇಲೆ ಪ್ರೀತಿ ಎಂದರು ಸಿದ್ದರಾಮಯ್ಯ.
ಒಂದು ವರ್ಷದಲ್ಲಿ ಕಟ್ಟಡ ಪೂರ್ಣ
ಮೀನುಗಾರರ ಪರವಾಗಿ ಮನವಿಯನ್ನು ಸಲ್ಲಿಸಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಅವರು, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕಟ್ಟಡವನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಿ ಸರಕಾರಕ್ಕೆ ವಾಪಸ್ಸು ನೀಡುತ್ತೇವೆ. ಇದರಲ್ಲಿ ನನಗೆ ಯಾವುದೇ ವ್ಯಾಪಾರದ ಉದ್ದೇಶವಿಲ್ಲ. ನನಗೆ ಎಂಎಲ್‌ಸಿ, ಎಂಎಲ್‌ಎ, ಎಂಪಿ ಸ್ಥಾನ ಬೇಡ. ನನ್ನ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಸಿಆರ್‌ಝಡ್ ವಲಯ 3ರಿಂದ 2ಕ್ಕೆ ಇಳಿಸಬೇಕು. ನಮಗೆ 100 ಕೋ.ರೂ. ಕೊಟ್ಟರೂ ಸಮುದ್ರದ ಬದಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.