ನಾಟಕದಲ್ಲಿ ಸ್ನೇಹಿತನ ಕುತ್ತಿಗೆಯನ್ನೇ ಕೊಯ್ದ ಬಾಲಕ!

Team Udayavani, Nov 20, 2017, 11:46 AM IST

image.jpg

ಮುಂಬಯಿ: ಅತ್ಯಂತ ವಿಲಕ್ಷಣ ಘಟನೆಯೊಂದರಲ್ಲಿ  ನಗರದ  ಶಾಲೆಯೊಂದರಲ್ಲಿ  ನಡೆಯುತ್ತಿದ್ದ  ವಾರ್ಷಿಕ  ನಾಟಕ  ಸ್ಪರ್ಧೆಯ  ವೇಳೆ ದಕ್ಷಿಣ-ಮಧ್ಯ ಮುಂಬಯಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತನ ಕುತ್ತಿಗೆಯನ್ನೇ ಚಾಕುವಿನಿಂದ ಕೊಯ್ದಿದ್ದು ಸದ್ಯ ಬಾಲಕನ  ಕುತ್ತಿಗೆಗೆ 6 ಹೊಲಿಗೆಗಳನ್ನು ಹಾಕಲಾಗಿದ್ದು  ಅದೃಷ್ಟವಶಾತ್‌  ಆತ  ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ನಾಟಕದಲ್ಲಿ ಬಾಲಕ ತನ್ನ ಸ್ನೇಹಿತನನ್ನು  ಹತ್ಯೆಗೈಯ್ಯುವ ದೃಶ್ಯವಿತ್ತು. ನಾಟಕದ  ರಿಹರ್ಸಲ್‌ನ  ಸಂದರ್ಭದಲ್ಲಿ  ಆತ  ಮೊಂಡಾದ  ಚಾಕುವನ್ನು ಬಳಸುತ್ತಿದ್ದರೆ  ಸ್ಪರ್ಧೆಯ  ವೇಳೆ  ಈ ಚಾಕುವನ್ನು  ಎಲ್ಲೋ  ಇರಿಸಿದ್ದರಿಂದಾಗಿ  ಬ್ರೆಡ್‌  ಕೊಯ್ಯಲು ಬಳಸುವ  ಚಾಕನ್ನೇ  ಕೊನೇಕ್ಷಣದಲ್ಲಿ  ಆತ ಬಳಸಿದ್ದನು. ಆದರೆ  ಈ ಬಗ್ಗೆ  ಆತನಿಗೆ  ಮಾಹಿತಿ ಇರಲಿಲ್ಲ.  ರಿಹರ್ಸಲ್‌ನಲ್ಲಿ  ಅಭ್ಯಸಿಸಿದ  ಮಾದರಿಯಲ್ಲಿಯೇ  ನಾಟಕದ  ವೇಳೆ ಚಾಕುವಿನಿಂದ  ಬಲವಾಗಿ  ಸ್ನೇಹಿತನ ಕುತ್ತಿಗೆಗೆ  ಆತ ಕೊಯ್ದಿದ್ದನು. 

ಗಾಯಾಳು ಬಾಲಕ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು  ನಾಟಕದಲ್ಲಿ ಈತ ಸಾವಿಗೀಡಾಗುವುದರಿಂದ  ಸುಮಾರು  ಏಳು ನಿಮಿಷಗಳ ಕಾಲ  ಆತ ವೇದಿಕೆಯಲ್ಲಿ  ಸಾವನ್ನಪ್ಪಿದ  ಸ್ಥಿತಿಯಲ್ಲಿ  ಬಿದ್ದಿದ್ದನು. ಆತ ಸಾವನ್ನಪ್ಪಿರುವುದನ್ನು  ತೋರಿಸಲು  ಆತನ ಮೇಲೆ  ಕೆಂಪು ನೀರನ್ನು ಎರಚಲಾಗಿತ್ತು. ಇದರಿಂದ ಅಲ್ಲಿದ್ದ ಇತರರಿಗೂ ಈತನಿಗೆ  ಗಾಯವಾಗಿರುವುದು ಗಮನಕ್ಕೆ ಬಂದಿರಲಿಲ್ಲ. ನಾಟಕ ಮುಗಿದ  ಬಳಿಕ  ವೇದಿಕೆಯ ಹಿಂಭಾಗಕ್ಕೆ ಓಡಿದ ಆತ ತನ್ನ  ಕುತ್ತಿಗೆಗೆ ಗಾಯವಾಗಿರುವುದನ್ನು ಸ್ನೇಹಿತರಿಗೆ ತಿಳಿಸಿದನು. ತತ್‌ಕ್ಷಣವೇ ಶಾಲೆಯಲ್ಲಿನ ಅರೆವೈದ್ಯಕೀಯ ಸಿಬಂದಿ  ಗಾಯಾಳು ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ  ನೀಡಿದರಾದರೂ ಶಿಕ್ಷಕರು  ತತ್‌ಕ್ಷಣವೇ ಸಮೀಪದ ಆಸ್ಪತ್ರೆಗೆ  ಬಾಲಕನನ್ನು  ದಾಖಲಿಸಿದರು. 

ಆಸ್ಪತ್ರೆಯ ವೈದ್ಯರು  ಬಾಲಕನ ಕುತ್ತಿಗೆಗೆ  ಆರು ಹೊಲಿಗೆಗಳನ್ನು  ಹಾಕಿದ್ದು  ಸದ್ಯ  ಆತ ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆ ಸಂಬಂಧ ಆಸ್ಪತ್ರೆಯ ಅಧಿಕಾರಿಗಳು  ಪೊಲೀಸರಿಗೆ  ಮಾಹಿತಿ  ನೀಡಿರುವರಾದರೂ  ಬಾಲಕನ ಪೋಷಕರು  ದೂರು  ನೀಡಲು  ಆಸಕ್ತಿಯನ್ನು  ತೋರಿಲ್ಲ. ಅಚ್ಚರಿ ಎಂದರೆ  ಈ ಬಾಲಕನ ತಂಡ ಅಭಿನಯಿಸಿದ  ನಾಟಕಕ್ಕೆ  ದ್ವಿತೀಯ ಬಹುಮಾನ ಲಭಿಸಿದೆ.

ಟಾಪ್ ನ್ಯೂಸ್

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.