ಹಸುವೇ ಹೊನ್ನು


Team Udayavani, Nov 20, 2017, 11:49 AM IST

20-18.jpg

ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರಂ ಪಟ್ಟಣದ ಹೊಸಳ್ಳಿ ಸದಾನಂದ  16-17 ವರ್ಷಗಳಿಂದ ಹೈನುಗಾರಿಕೆಯಲ್ಲಿ  ತೊಡಗಿದ್ದಾರೆ.

 ಪಟ್ಟಣದ ರಂಗನಾಥ ಸ್ವಾಮಿ ದೇವಾಲಯ ರಸ್ತೆಯ ತಮ್ಮ ಸ್ವಂತ ಕೊಟ್ಟಿಗೆಯಲ್ಲಿ  ಹೈನುಗಾರಿಕೆ ನಡೆಸುತ್ತಿದ್ದಾರೆ. ಭತ್ತದ ಗದ್ದೆ  ಕೈ ಕೊಟ್ಟಾಗ ಒಂದು ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಿದರು. ಇದರಿಂದ ಹಾಲಿನ ಉತ್ಪನ್ನದ ಜೊತೆಗೆ ಕೃಷಿಗೆ ಪೂರಕವಾದ ಸಗಣಿ ಗೊಬ್ಬರ ಸಹ ದೊರೆತಂತಾಯಿತು.  

ಮರುವರ್ಷವೇ ಇನ್ನೂ ಎರಡು ಹಸು ಖರೀದಿಸಿದರು. 4 ನೇ ವರ್ಷದಿಂದ ಮೊದಲು ಸಾಕಿದ ಹಸು ಕರು ಹಾಕಿ ಆ ಕರುಗಳು ದೊಡ್ಡವಾಗಿ ಹೈನುಗಾರಿಕೆಯ ಪ್ರಮಾಣ ಹೆಚ್ಚಳವಾಗತೊಡಗಿತು. ಒಂದು ಜರ್ಸಿ ಹಸು, 4 ಮಿಶ್ರ ತಳಿ ಹಸು  ಸೇರಿ ಈಗ 5 ಹಸುಗಳು ಮತ್ತು 4 ಕರು ಇವರ ಕೊಟ್ಟಿಗೆಯಲ್ಲಿವೆ. ತಮ್ಮ ಭತ್ತದ ಗದ್ದೆಯ ಒಣ ಹುಲ್ಲು, ಬ್ಯಾಣದಲ್ಲಿನ ಹಸಿರು ಹುಲ್ಲು ಮತ್ತು ಪಶು ಆಹಾರವನ್ನು ಅಗತ್ಯ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಪ್ರತಿ ನಿತ್ಯ ಒಂದು ಹಸುವಿಗೆ ಸರಾಸರಿ 4 ಕಟ್ಟು ಒಣಹುಲ್ಲು, 3 ಕಟ್ಟು ಹಸಿ ಹುಲ್ಲು,3.5 ಕೆ.ಜಿ.ಯಷ್ಟು ಪಶು ಆಹಾರ ನೀಡುತ್ತಾರೆ.

ಲಾಭದ ಲೆಕ್ಕಾಚಾರ 
ಪ್ರತಿ ನಿತ್ಯ  ಬೆಳಿಗ್ಗೆ ಮತ್ತು ಸಂಜೆ ಸೇರಿ ಸರಾಸರಿ 40 ಲೀಟರ್‌ ಹಾಲು ಮಾರುತ್ತಾರೆ. ಒಂದು ಲೀಟರ್‌ ಗೆ ರೂ. 26 ರಂತೆ ದರ ಸಿಗುತ್ತದೆ. ಜೊತೆಗೆ ಪ್ರತಿ ಲೀಟರ್‌ಗೆ ರೂ.5 ಪ್ರೋತ್ಸಾಹ ಧನ ಸಹ ದೊರೆಯುತ್ತದೆ. ಹೀಗೆ ಲೀಟರ್‌ ಒಂದಕ್ಕೆ 31ರೂ. ಆದಾಯವಿದೆ. ದಿನವೊಂದಕ್ಕೆ ಇವರಿಗೆ 40 ಲೀ.ಹಾಲು ಮಾರಾಟ ಮಾಡಿದರೆ 1,240 ರೂ. ಆದಾಯ. ಆಹಾರ, ಮೇವು ಹೀಗೆ ಎಲ್ಲ ರೀತಿಯ ಲೆಕ್ಕ ಹಾಕಿದರೆ ದಿನವೊಂದಕ್ಕೆ ರೂ.600 ಖರ್ಚು ತಗಲುತ್ತದೆ.  ತಿಂಗಳ ಸರಾಸರಿ ರೂ.18 ಸಾವಿರ ಲಾಭ ಮಾಡುತ್ತಿದ್ದಾರೆ.

 ವರ್ಷಕ್ಕೆ ಸುಮಾರು 10 ಲೋಡ್‌ (ಕ್ಯಾಂಟರ್‌)ಸಗಣಿ  ಗೊಬ್ಬರಸಿಗುತ್ತದೆ.ಒಂದು ಲೋಡ್‌ ಗೆ ರೂ.7000 ದಂತೆ ಲೆಕ್ಕ ಹಾಕಿದರೆ ರೂ.70 ಸಾವಿರ ಆದಾಯ ದೊರೆಯುತ್ತದೆ.  ತಮ್ಮ ಹೊಲಕ್ಕೆ ಈ ಗೊಬ್ಬರ ಬಳಸುವ ಕಾರಣ ಗೊಬ್ಬರ ಖರೀದಿಯ ಹಣ ಉಳಿತಾಯವಾಗುತ್ತದೆ. ಇವರ ಕಾರ್ಯಕ್ಕೆ ಇವರ ಪತ್ನಿ ಗೀತಾ  ಸಹಕರಿಸುತ್ತಿದ್ದು ನಿತ್ಯ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಎನ್‌.ಡಿ.ಹೆಗಡೆ ಆನಂದಪುರಂ 

ಟಾಪ್ ನ್ಯೂಸ್

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.