ಚೀನ ಡಾಂಗ್‌ಫೆಂಗ್ ತಂತ್ರ
Team Udayavani, Nov 21, 2017, 6:00 AM IST
ಬೀಜಿಂಗ್: ವಿಶ್ವದ ಯಾವುದೇ ಪ್ರದೇಶದ ಮೇಲಾದರೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಅಣ್ವಸ್ತ್ರ ಕ್ಷಿಪಣಿಯನ್ನು ಚೀನ ಸೇನೆ ಮುಂದಿನ ವರ್ಷ ಸೇರ್ಪಡೆಗೊಳಿಸಲಿದೆ ಎನ್ನಲಾಗಿದೆ. ಇಂದು ಮುಂದಿನ ತಲೆಮಾರಿನ ಅತಿ ದೀರ್ಘ ದೂರದ ಕ್ಷಿಪಣಿಯಾಗಿರಲಿದೆ ಎಂದು ಚೀನ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಡಾಂಗ್‌ಫೆಂಗ್ 41 ಎಂದು ನಾಮಕರಣ ಮಾಡಲಾಗಿದ್ದು, ಮ್ಯಾಚ್ 10ಕ್ಕಿಂತ ಹೆಚ್ಚು ವೇಗ ಹೊಂದಿರಲಿದೆ. 2012 ರಿಂದಲೇ ಇದರ ಅಭಿವೃದ್ಧಿ ನಡೆಸಲಾಗುತ್ತಿದ್ದು, ಎಂಟು ಬಾರಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.
ಇದು ಮೂರು ಹಂತದ ಘನ ಇಂಧನ ಬಳಕೆ ಸಾಮರ್ಥ್ಯ ಹೊಂದಿದ್ದು, 12,000 ಕಿ.ಮೀ ಚಲಿಸಬಲ್ಲದು. ಹೀಗಾಗಿ ಚೀನದಿಂದ ವಿಶ್ವದ ಯಾವುದೇ ಭಾಗದ ಮೇಲೂ ಇದು ದಾಳಿ ನಡೆಸಬಲ್ಲದಾಗಿದೆ. ಇದರಲ್ಲಿ ಕೇವಲ ಒಂದಲ್ಲ, 10 ಅಣ್ವಸ್ತ್ರಗಳನ್ನು ಅಳವಡಿ ಸಬಹುದು. ಈ ಪ್ರತಿಯೊಂದನ್ನೂ ವಿವಿಧ ದಿಕ್ಕಿಗೆ ಉಡಾಯಿಸಬಹುದು. ಹೀಗಾಗಿ ಬಹುತೇಕ ಇಡೀ ವಿಶ್ವವನ್ನು ಇದು ನಾಶಗೊಳಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಮೂಲಗಳ ಪ್ರಕಾರ ಈ ಕ್ಷಿಪಣಿಯನ್ನು ಅಮೆರಿಕವನ್ನು ಗಮನದಲ್ಲಿಟ್ಟು ಕೊಂಡು ರೂಪಿಸಲಾಗಿದ್ದು, ಅಮೆರಿಕ ಮತ್ತು ಯುರೋಪ್‌ನ ಬಹುತೇಕ ಭಾಗವನ್ನು ಇದು ತಲುಪಲ್ಲದು.
ನವೆಂಬರ್ ಆರಂಭದಲ್ಲಿ ಪಶ್ಚಿಮ ಮರುಭೂಮಿಯಲ್ಲಿ ಪ್ರಯೋಗ ನಡೆಸಲಾಗಿದ್ದು, ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ಹೇಳಲಾಗಿದೆ. ಏಪ್ರಿಲ್‌ನಲ್ಲಿ ಇಂಥದ್ದೊಂದು ಕ್ಷಿಪಣಿ ಪರೀಕ್ಷೆ ನಡೆಸಿರುವುದರ ಬಗ್ಗೆ ಅಮೆರಿಕದ ಸ್ಯಾಟಲೈಟ ಟ್ರ್ಯಾಕಿಂಗ್ ಸಿಸ್ಟಂ ಕೂಡ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.