ಮುಂದಿನ ವರ್ಷ ಭೀಕರ ಭೂಕಂಪ ? ನಾಸಾ ವಿಜ್ಞಾನಿಗಳ ಭವಿಷ್ಯ!
Team Udayavani, Nov 21, 2017, 6:00 AM IST
ಹೊಸದಿಲ್ಲಿ: 2018ರಲ್ಲಿ ಭೀಕರ ಭೂಕಂಪ ಸಂಭವಿಸಿ ಭೂಮಿಯ ಕೆಲವು ಭಾಗ ಸಂಪೂರ್ಣ ನಾಶಗೊಳ್ಳಬಹುದು!
ಹೀಗೆಂದು ಹೇಳಿದ್ದು ಯಾವುದೋ ಜ್ಯೋತಿಷಿ ಗಳಲ್ಲ. ಬದಲಿಗೆ ನಾಸಾ ವಿಜ್ಞಾನಿಗಳು… ಇದಕ್ಕೆ ಅವರು ಸೂಕ್ತ ಪುರಾವೆಯನ್ನೂ ಒದಗಿಸಿದ್ದಾರೆ. ಭೂಮಿಯ ಪರಿಭ್ರಮಣದ ವೇಗ 2018ರಲ್ಲಿ ವ್ಯತ್ಯಯವಾಗಲಿದೆ. ಇದರಿಂದಾಗಿ ಹೆಚ್ಚು ಜನ ಸಂಖ್ಯೆಯಿರುವ ಉಷ್ಣವಲಯದಲ್ಲಿ ಭೂಕಂಪದ ತೀವ್ರತೆ ಮತ್ತು ಸಂಖ್ಯೆ ಹೆಚ್ಚಿರಲಿದೆ. ಭೂಮಿಯ ಪರಿಭ್ರಮಣ ಮತ್ತು ಭೂಕಂಪದ ಮಧ್ಯೆ ಸಂಬಂಧವಿದೆ ಎಂದು ಅಮೆರಿಕದ ಜಾಗತಿಕ ಭೂಗರ್ಭಶಾಸ್ತ್ರಜ್ಞರ ಸಂಘಟನೆಯ ವಾರ್ಷಿಕ ಸಭೆಯಲ್ಲಿ ಕೊಲರಾಡೋ ವಿಶ್ವವಿದ್ಯಾಲಯದ ರೋಜರ್ ಬಿಲ್ಹಮ್ ಎಂಬವರು ಮಂಡಿಸಿರುವ ಸಂಶೋಧನಾ ಪ್ರಬಂಧದಲ್ಲಿ ವಿವರಿಸಲಾಗಿದೆ.
ಭೂಮಿ ಪರಿಭ್ರಮಣ ವೇಗ ಕಡಿಮೆಯಾದಾ ಗಲೆಲ್ಲ ಭೂಕಂಪದ ತೀವ್ರತೆ ಹಾಗೂ ಸಂಖ್ಯೆಯೂ ಹೆಚ್ಚಾಗಿರುವುದು ಕಂಡುಬಂದಿದೆ. ಈ ಹಿಂದೆಯೂ ಇದು ಕಂಡುಬಂದಿದೆ. 2017ರಲ್ಲಿ ಭೂಮಿ ಪರಿಭ್ರಮಣ ವೇಗ ಸಾಧಾರಣ ಮಟ್ಟದಲ್ಲಿತ್ತು. ಹೀಗಾಗಿ 6 ತೀವ್ರ ಪ್ರಮಾಣದ ಭೂಕಂಪ ಸಂಭವಿಸಿವೆ. ಆದರೆ 2018ರಲ್ಲಿ 20 ಬಾರಿ ತೀವ್ರ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆ ಯಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಕೆಲವೇ ದಿನಗಳ ಹಿಂದೆ ವಾಡಿಯಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಭಾರತದಲ್ಲಿ ಭೂಕಂಪ ಹೆಚ್ಚಾಗುವ ಭೀತಿ ವ್ಯಕ್ತಪಡಿಸಿದ್ದರು. ಯುರೇಶಿಯಾ ಪ್ಲೇಟ್‌ನ ಕಡೆಗೆ ಭಾರತದ ಭೂಪದರವು ವರ್ಷಕ್ಕೆ 45 ಮಿ.ಮೀ. ವೇಗದಲ್ಲಿ ಸಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿನ ಭೂಮಿಯ ಮೇಲೆ ವಿಪರೀತ ಒತ್ತಡ ಉಂಟಾಗುತ್ತಿದೆ ಎಂದಿದ್ದರು. ಈ ಚಲನೆಯಿಂದ ಉಂಟಾದ ಶಕ್ತಿಯಿಂದಾಗಿ 2015ರಲ್ಲಿ ತೀವ್ರ ಭೂಕಂಪ ಉಂಟಾಗಿತ್ತು. ಇದೇ ರೀತಿಯ ಭೂಕಂಪ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.