ಕ್ಲರ್ಕ್ಸ್ ಇನ್ ಹೋಟೆಲ್‌ನಲ್ಲಿ ಕೇಕ್ ತಯಾರಿಕೆಗೆ ಚಾಲನೆ
Team Udayavani, Nov 21, 2017, 1:08 PM IST
ಹುಬ್ಬಳ್ಳಿ: ಕ್ರಿಸ್‌ಮಸ್ ಹಬ್ಬ ಹಾಗೂ ಹೊಸ ವರ್ಷ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ಗೋಕುಲ ರಸ್ತೆಯ ಕ್ಲರ್ಕ್ಸ್ ಇನ್ ಹೋಟೆಲ್ ನಲ್ಲಿ ಕೇಕ್ ಮಿಕ್ಸಿಂಗ್ ಕಾರ್ಯ ಸೋಮವಾರ ನಡೆಯಿತು. ಕ್ರಿಸ್‌ಮಸ್ ಒಂದು ತಿಂಗಳು ಬಾಕಿ ಇರುವಾಗಲೇ ಕೇಕ್ ತಯಾರಿಗೆ ಚಾಲನೆ ನೀಡಲಾಯಿತು.
ಒಣ ದ್ರಾಕ್ಷಿ, ಬ್ಯಾಕ್ ಕರೇಂಟ್ಸ್, ಫೊನ್ಸ್, ಗ್ಲೆ„ಜ್ ಡೇಟ್ಸ್, ಚೆರ್ರಿ, ಕ್ಯಾಂಡಿಡ್ ಆರೆಂಜ್, ಲೆಮನ್ ರೈಂಡ್, ಗೋಡಂಬಿ, ಪಿಸ್ತಾ, ಜೇನು ಸೇರಿದಂತೆ ಸುಮಾರು 25 ಕೆ.ಜಿ. ಡ್ರೈಫೂಟ್ಸ್ ಮಿಶ್ರಣ ಮಾಡಲಾಯಿತು. ಒಣಗಿದ ಹಣ್ಣುಗಳು ಹಾಗೂ ಕೇಕ್ ಮೃದುವಾಗಿಸುವ ಸಲುವಾಗಿ ವೈನ್ ಹಾಗೂ ರಮ್ ಬಳಲಾಯಿತು.
ಪ್ರತಿದಿನ ಇದಕ್ಕೆ ಅಗತ್ಯ ಪದಾರ್ಥಗಳನ್ನು ಮಿಶ್ರಣ ಮಾಡಲಾಗುತ್ತದೆ. ಹೀಗೆ ಸುಮಾರು 25 ದಿನಗಳ ಕಾಲ ಡ್ರೈಫೂಟ್ಸ್ ಮದ್ಯವನ್ನು ಹೀರಿಕೊಳ್ಳುತ್ತದೆ ಎಂದು ಮುಖ್ಯ ಬಾಣಸಿಗ ಸಂಜಯ ಮಂಡಲ ಫ್ಲಮ್ ಕೇಕ್ ಬಗ್ಗೆ ವಿವರಿಸಿದರು. ಪ್ರತಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಫ್ಲಮ್ ಕೇಕ್ ತಯಾರಿಸುವುದು ವಿಶೇಷ.
ಈ ಬಾರಿ 50 ಕೆ.ಜಿ ತೂಕದ ಕೇಕ್ ತಯಾರಿಸಲಾಗುತ್ತದೆ. ಡಿ.23 ನಂತರ ಇದನ್ನು ಖರೀದಿಸಬಹುದಾಗಿದೆ ಎಂದು ವ್ಯವಸ್ಥಾಪಕ ಪಾಲುದಾರ ರಾಕೇಶ ಕೋಟಿ ತಿಳಿಸಿದರು. ಮಹಾಪೌರ ಡಿ.ಕೆ. ಚವ್ಹಾಣ ಕೇಕ್ ಉತ್ಸವಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪಕ ಪಾಲುದಾರ ವಿನಾಯಕ ಕೋಟಿ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಮಹಾರಾಣ ಸೇರಿದಂತೆ ಹೋಟೆಲ್ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
Waqf; ಬಿಜೆಪಿ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಿದ್ದರೂ ತಪ್ಪು: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ
Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ
ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು
Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು
New Delhi: ಹುಸಿ ಬಾಂಬ್ ಕರೆ ಪತ್ತೆಗೆ ಇಂಟರ್‌ಪೋಲ್ ಮೊರೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.