ರೈತರ ಬೆಳೆಗೆ ಮೌಲ್ಯದಲ್ಲಿ ಅನ್ಯಾಯ
Team Udayavani, Nov 21, 2017, 1:09 PM IST
ಪಿರಿಯಾಪಟ್ಟಣ: ರಾಜ್ಯದ ತಂಬಾಕಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದ್ದರೂ ಸಹ ರಾಜ್ಯದ ರೈತರಿಗೆ ಕಡಿಮೆ ಬೆಲೆ ನೀಡಿ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಎಚ್.ಸಿ. ಬಸವರಾಜು ತಿಳಿಸಿದರು.
ತಾಲೂಕಿನ ಬೆಟ್ಟದಪುರದ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ತಂಬಾಕು ರೈತರ ಜಾಗೃತಿ ರಥ ಯಾತ್ರೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಿ ರೈತಪರವಾಗಬೇಕು. ರಾಜ್ಯದಲ್ಲಿಯೇ ತಾಲೂಕಿನಲ್ಲಿ ತಂಬಾಕು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಬೆಳೆದ ತಂಬಾಕಿಗೆ ಮಂಡಳಿಯಲ್ಲಿ ವೈಜಾnನಿಕ ಬೆಲೆ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ,
ಅವರು ತಂಬಾಕು ಬೆಳೆಯಲು ಬ್ಯಾಂಕುಗಳಲ್ಲಿ ಹಾಗೂ ವೈಯಕ್ತಿಕವಾಗಿ ಸಾಲ ಮಾಡಿರುತ್ತಾರೆ ಮಾರಾಟದ ಸಮಯದಲ್ಲಿ ಸೂಕ್ತ ಬೆಲೆ ಸಿಗದೆ ರೈತ ತತ್ತರಿಸಿದ್ದಾನೆ, ಅಂತಹವರ ಜಾಗೃತಿಗಾಗಿ ಹಾಗೂ ಪೋ›ಬೆಲೆಗಾಗಿ ಕೌಲನಹಳ್ಳಿ ಸೋಮಶೇಖರ್‌ರವರ ರೈತ ಜಾಗೃತಿ ಯಾತ್ರೆ ಯಶಸ್ವಿಯಾಗಲೆಂದು ಆರೈಸಿದರು.
ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ಮಾತನಾಡಿ, ರಾಜಕೀಯ ಉದ್ದೇಶದಿಂದ ಈ ರಥ ಯಾತ್ರೆ ಹಮ್ಮಿಕೊಂಡಿಲ್ಲ, ರೈತರ ಅಭ್ಯುದಯ ನನ್ನ ಮುಖ್ಯ ಗುರಿ, ಪ್ರತೀ ಗ್ರಾಮಗಳಲ್ಲಿ ಕೂಡ ಸಮಸ್ಯೆಗಳಿವೆ, ಅದನ್ನು ಈ ರಥ ಯಾತ್ರೆಯ ಮೂಲಕ ಆಲಿಸಿ, ಗ್ರಾಮ ವಾಸ್ತವ್ಯ ಮಾಡಿ ಪರಿಹಾರ ಕಂಡುಕೊಳ್ಳುವುದು ಮೂಲ ಉದ್ದೇಶ ಎಂದರು.
ಇತ್ತೀಚೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಅದಕ್ಕೆ ಮೂಲ ಕಾರಣ ಅವರು ನಂಬಿರುವ ಕೃಷಿ ಕ್ಷೇತ್ರವಾಗಿದೆ, ಪಂಜಾಬನ್ನು ಬಿಟ್ಟರೆ ರಾಜ್ಯದ ಮಂಡ್ಯ, ಮೈಸೂರಲ್ಲಿ ವಾಣಿಜ್ಯ ಬೆಳೆ ಬೆಳೆಯುವುದು ಹೆಚ್ಚಿದೆ, ಸದ್ಯದ ಪರಿಸ್ಥಿತಿಯಲ್ಲಿ ಸಾಲ ತೀರಿಸಲು ಸಾದ್ಯವಿಲ್ಲ, ಇದಕ್ಕೆ ಪರ್ಯಾಯವಾಗಿ ಹೋರಾಟ ಮಾಡಬೇಕಾಗುತ್ತದೆ ಇದಕ್ಕಾಗಿ ರೈತನ್ನು ಜಾಗೃತಿಗೊಳಿಸಿ ಒಗ್ಗೂಡಿಸಿವ ಪ್ರಯತ್ನ ರಥಯಾತ್ರೆಯದ್ದಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ರೈತ ಸಂಘದ ಅಧ್ಯಕ್ಷ ಎನ್.ಜಿ ರಾಮಚಂದ್ರ, ಸಾವಯವ ಕೃಷಿ ಪ್ರಶಸ್ತಿ ಪುರಸ್ಕೃತೆ ಕಣಗಾಲು ಪದ್ಮಮ್ಮ, ಬೆಟ್ಟದಪುರ ರೈತ ಸಂಘದ ಉಪಾಧ್ಯಕ್ಷ ಬಿ.ಪಿ ದೇವರಾಜು ಮಾತನಾಡಿದರು.
ಸನ್ಮಾನ: ಹೈನುಗಾರಿಕೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಗೊರಳ್ಳಿ ಗ್ರಾಮದ ಶೋಭ ಜಗಧೀಶ್ ಹಾಗೂ ಸಾವಯವ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪದ್ಮಮ್ಮರವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಟ್ಟದಪುರ ಗ್ರಾಪಂ ಸದಸ್ಯ ರಾಜಶೇಖರ್, ಎಪಿಎಂಸಿ ಸದಸ್ಯ ನರಸಿಂಹೇಗೌಡ, ಬೆಟ್ಟದಪುರ ಸುತ್ತಮುತ್ತಲ ರೈತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.