ಪಂಜರದೊಳಗಿನ ಗಿಳಿಗಳಿಗೆ ಗುರಿಯುಂಟು!


Team Udayavani, Nov 21, 2017, 5:57 PM IST

panjara.jpg

ಬಾಡಿಗೆ ಮನೆಯ ಆ ಕೊಠಡಿಗೆ ಮೌನದ ಬಣ್ಣ ಬಳಿದಿತ್ತು. ಅಲ್ಲಿ ಕುಳಿತ ಯಾರಿಗಾದರೂ ಜೋರಾಗಿ ಉಸಿರಾಡಲು ಭಯವಾಗುತ್ತಿತ್ತು. ಮಾತುಗಳು ಎಣಿಕೆಗೆ ಸಿಗುತ್ತಿದ್ದವು. ಒಂದು ವೇಳೆ ಮಾತನಾಡಿದರೆ ಪರೀಕ್ಷೆ, ಸಿಲಬಸ್‌, ಕ್ವಶ್ಚನ್‌ ಪೇಪರ್‌ ಹೀಗೆ ಆರಂಭವಾಗಿ ಕೀ ಉತ್ತರ, ಫಲಿತಾಂಶ, ಆಯ್ಕೆ ಪಟ್ಟಿಯವರೆಗೆ ಸಾಗಿ ಮಾತು ಮುಗಿಯುತ್ತಿದ್ದವು. ಅವರ ಓದಿಗೆ ಸಿಗದ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳೇ ಇಲ್ಲವೇನೋ ಎಂಬಂತೆ ಓದುವುದು ಅವರಿಗೆ ಅಭ್ಯಾಸವೂ ಹವ್ಯಾಸವೂ ಆಗಿತ್ತು. 

ಆ ಕೊಠಡಿಯ ಮೂಲೆಮೂಲೆಗಳಿಗೂ ಪುಸ್ತಕದ ನಂಟು. ಓದಿದ, ಓದಲು ಇಟ್ಟುಕೊಂಡ, ಓದಬೇಕಾದ ಆದ್ಯತೆಯ ಆಧಾರದ ಮೇಲೆ ಸ್ಥಾನಪಲ್ಲಟವಾಗುತ್ತಿತ್ತು ಮೇಲಿಂದ ಮೇಲೆ. ಅದು ಅವರ ಓದಿನ ವೇಗವನ್ನು ಮತ್ತು ಓಘವನ್ನು ಅವಲಂಬಿಸಿತ್ತು ಹಾಗೂ ಪ್ರತಿಬಿಂಬಿಸುತ್ತಿತ್ತು. ಯಾವುದೇ ಉದ್ಯೋಗದ ನೇಮಕಾತಿ ವಿವರ ಕೇಳಿದರೂ ಅವರ ನಾಲಗೆ ತುದಿಯಲ್ಲೇ! ಅಡ್ಮಿಶನ್‌ ಟಿಕೆಟ್‌ಗಳು, ಯಾವ ಪರೀಕ್ಷೆ? ಯಾವ ಭಾನುವಾರ? ಯಾವ ಊರಲ್ಲಿ? ಎಂಬ ಗೊಂದಲ ಮೂಡಿಸುವಂತಿರುತ್ತಿದ್ದವು. 

ಜೊತೆಗೊಂದಿಷ್ಟು ಅಡಿಯೋ ಕ್ಲಿಪ್‌ಗ್ಳು ಅವರ ಮೊಬೈಲ್‌ನ ಸಂಗೀತ ಕಡತಗಳ ಮೊದಲ ಪಟ್ಟಿಯಲ್ಲಿ ಮಾತಾಡುತ್ತಿದ್ದವು. ಮೊಬೈಲ್‌ ಹೋಂಸ್ಕ್ರೀನ್‌ನಲ್ಲಿ ಜಾಗ ಪಡೆದ ಅಪ್ಲಿಕೇಶನ್‌ಗಳು ಪರೀಕ್ಷಾ ಸಂಬಂಧಿಯೇ ಎಂಬುದರಲ್ಲಿ ವಿಶೇಷತೆಯೇನೂ ಇರಲಿಲ್ಲ. ಅದು ಆ ಮೊಬೈಲ್‌ನ ಸಹಜ ಧರ್ಮವಾಗಿತ್ತು. ವಾಟ್ಸಾಪ್‌ ಗ್ರೂಪ್‌ಗ್ಳು ದಿನ ವಿ ಡೀ ಪ್ರಶ್ನೋತ್ತರಗಳನ್ನೇ ಚಾಟಿಸುತ್ತಿದ್ದವು. ಅವರೆಲ್ಲರ ಬಳಿ ಲ್ಯಾಪ್‌ಟಾಪ್‌ ಇತ್ತು. ಬ್ರೌಸಿಂಗ್‌ ಹಿಸ್ಟರಿಯನ್ನು ನೋಡಿದರೂ ಸಾಕು, ಪ್ರತ್ಯೇಕವಾಗಿ ಓದುವ ಅಗತ್ಯವೇ ಇರಲಿಲ್ಲ. ಅಷ್ಟರಲ್ಲಿಯೇ ಅಂಕ ಪಡೆಯುವ ಸರಕು ಸಿಗುತ್ತಿತ್ತು.

ಇವರು ಓದಿ ಓದಿ ಕೆಟ್ಟ ಕೂಚುಭಟ್ಟರಲ್ಲ. ಬಹಳಷ್ಟು ನೌಕರಿಗಳ ಬಾಗಿಲಿಗೆ ಹೋಗಿ ಮರಳಿದ್ದಾರೆ. ಅದು ಸೋಲಲ್ಲ, ಮತ್ತೂಂದು ಪ್ರಯತ್ನಕ್ಕೆ ತೆರೆದ ಬಾಗಿಲು ಎಂದುಕೊಳ್ಳುತ್ತಾರೆ. ಕೆಲವೇ ಪಾಯಿಂಟ್‌ಗಳ ಅಂತರದಲ್ಲಿ ಆಯ್ಕೆಪಟ್ಟಿಯಿಂದ ಕೆಳಜಾರಿದ್ದಾರೆ. ಆದರೂ ಓದುವುದನ್ನು ಬಿಡುವುದಿಲ್ಲ. ಇಷ್ಟು ಓದಿಗೆ ನೌಕರಿ ಸಿಗದಿದ್ದರೆ ಹೋಯ್ತು. ಕೊನೇಪಕ್ಷ ಅಳಿಸಲಾಗದ ಜ್ಞಾನದ ಮುದ್ರೆ ಶಾಶ್ವತವಾಗಿ ಉಳಿಯುತ್ತದಲ್ಲ ಎಂಬ ಆಶಾಭಾವನೆಯಲ್ಲಿ ಪುಸ್ತಕದ ಪುಟ ತಿರುಗಿಸುತ್ತಾರೆ. ಈ ಸಲವಾದರೂ ಇವರಿಗೊಂದು ನೌಕರಿ ಸಿಗಲಿ ಎಂಬ ಖುಷಿಯೊಂದಿಗೆ ಕಿಟಕಿಯನ್ನು ದಾಟಿ ಬಂದ ತಂಗಾಳಿ ಒಮ್ಮೆಲೇ ಹತ್ತು ಪುಟಗಳನ್ನು ಹೊರಳಿಸಿ ನಗುತ್ತದೆ. 

* ಸೋಮು ಕುದರಿಹಾಳ, ಗಂಗಾವತಿ

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.