ನಿಧಿಗಾಗಿ ಹುಡುಕಾಟ


Team Udayavani, Nov 21, 2017, 5:57 PM IST

nidhi.jpg

ಇದು ಮೈಸೂರಿನ ಮಾನಸ ಗಂಗೋತ್ರಿ ವಿವಿಯ ವಿದ್ಯಾರ್ಥಿಗಳು ಪ್ರತಿವರ್ಷ ಏರ್ಪಡಿಸುವ ಆಟವೊಂದರ ಕತೆ. ಅದರ ಹೆಸರು “ನಿಧಿಗಾಗಿ ಶೋಧ’. ಹಿಂದೆಲ್ಲ ನಿಧಿಗಾಗಿ ಯುದ್ಧಗಳೇ ನಡೆಯುತ್ತಿದ್ದವಂತೆ. ಹಾಗೆ ಈ ವಿದ್ಯಾರ್ಥಿಗಳ ನಡುವೆಯೂ ಒಂದು ಮನರಂಜನಾತ್ಮಕ ಯುದ್ಧ ನಡೆಯುತ್ತದೆ. ಅದು ಹೇಗಂತೀರ?

ಓಡು… ಓಡು… ಓಡು…! ಏನಿದು ಉಸೇನ್‌ ಬೋಲ್ಟ್ ಜತೆ ಮೈಸೂರಿನ ಹುಡುಗರೆಲ್ಲ ಓಡ್ತಿದ್ದಾರೆ ಅಂದೊRಂಡ್ರಾ? ಹಾಗೇನೂ ಇಲ್ಲ. ಈಗತಾನೇ ಸ್ನಾತಕೋತ್ತರ ಪದವಿಗೆ ಕಾಲಿಟ್ಟವರಿಗೆ ಇದೊಂದು ಒಲಿಂಪಿಕ್‌! ಎಂ.ಎ. ತರಗತಿಗಳು ಆರಂಭವಾದ ಹಿನ್ನೆಲೆಯಲ್ಲಿ ಮನರಂಜನೆಗಾಗಿ, ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಪರ್ಧೆ ಏರ್ಪಡಿಸಿದ್ದಾರೆ. ಅದೇ ನಿಧಿಗಾಗಿ ಶೋಧ! ಮೈಸೂರು ವಿವಿಯ ಮಾನಸ ಗಂಗೋತ್ರಿಯ ಪ್ರತಿ ವಿಭಾಗದಲ್ಲೂ, ಪ್ರತಿ ವರ್ಷ ಈ ಆಟ ನಡೆಯುತ್ತದೆ.

ಹಿಂದೆಲ್ಲ ನಿಧಿಗಾಗಿ ಯುದ್ಧಗಳೇ ನಡೆಯುತ್ತಿದ್ದವಂತೆ. ಹಾಗೆ ಈ ವಿದ್ಯಾರ್ಥಿಗಳ ನಡುವೆಯೂ ಒಂದು ಮನರಂಜನಾತ್ಮಕ ಯುದ್ಧ ನಡೆಯುತ್ತದೆ. ಯಾವ ತಂಡವು ಮೊದಲು ನಿಧಿಯನ್ನು ಶೋಧಿಸುತ್ತದೋ, ಅವರು ಇಲ್ಲಿ ವಿಜಯಶಾಲಿಗಳಾಗುತ್ತಾರೆ. ಕಾಲಿಗೆ ಸ್ಕೇಟಿಂಗ್‌ ಕಟ್ಟಿಕೊಂಡವರಂತೆ, ಕ್ಯಾಂಪಸ್‌ ಸುತ್ತಾ ಓಡಾಡುತ್ತಾ ಒಂದೊಂದು ತಂಡವು ವಿಭಿನ್ನ ರೀತಿಯಲ್ಲಿ ನಿಧಿಗಾಗಿ ಶೋಧ ನಡೆಸುತ್ತಾರೆ.

ಏನಿದು ನಿಧಿಗಾಗಿ ಶೋಧ?: ಇದು ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸೃಷ್ಟಿ. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಹುಡುಗ- ಹುಡುಗಿಯರ ಮಿಶ್ರ ಸಹಭಾಗಿತ್ವದಲ್ಲಿ 4 ರಿಂದ 5 ಗುಂಪುಗಳನ್ನು ಮಾಡುತ್ತಾರೆ. ಅವುಗಳಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಗೌಪ್ಯವಾಗಿ ಅಡಗಿಕೊಳ್ಳುವಂತೆ ಸಲಹೆ ನೀಡಿರುತ್ತಾರೆ.

ಅದರಂತೆ, 12- 15 ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳ ಹೆಸರನ್ನು ವಿಭಿನ್ನವಾಗಿ ಅಂದರೆ, ಗಡಿಯಾರದ ಸ್ಥಳವನ್ನು ಗುರುತಿಸಲು ಅದಕ್ಕೆ ವಿಶೇಷವಾಗಿ ಬರೆದಿರುತ್ತಾರೆ. ಅದೆಂದರೆ, “ಎಲ್ಲರ ಕಾಲನ್ನೂ ಎಳೆಯುತ್ತೆ ಕಾಲ’ ಅಂತ ಒಂದು ಚೀಟಿಯಲ್ಲಿ ಬರೆದು ಪ್ರತಿ ಗುಂಪುಗಳಿಗೂ ನೀಡಲಾಗುತ್ತದೆ. ಅದನ್ನು ಯಾವ ಸ್ಥಳವೆಂದು ಗುರುತಿಸಿ, ಆ ಸ್ಥಳದಲ್ಲಿ ಯಾರಿರುತ್ತಾರೆಂಬುದನ್ನು ಗುರುತಿಸಿ ಚೀಟಿ ಪಡೆಯಬೇಕಿರುತ್ತದೆ. ಹಾಗೆ ಚೀಟಿ ಪಡೆಯುವುದಕ್ಕೂ ಮೊದಲು ಸೀನಿಯರ್‌ ಕೊಟ್ಟ ಟಾಸ್ಕ್ ಅನ್ನು ಪೂರ್ಣಗೊಳಿಸಿ, ನಂತರ ಮುಂದಿನ ಸ್ಥಳಕ್ಕೆ ಹೋಗುವ ಅವಕಾಶ ಇರುತ್ತದೆ.

ಟಾಸ್ಕ್ನಲ್ಲಿ ಏನೇನಿರುತ್ತೆ?: ಮೊದಲಿಗೆ ಇಷ್ಟವಾದ ಹಾಡನ್ನು ಹೇಳಿಸುವುದು, ಸಿನಿಮಾ ನಟರ ಹಾಗೆ ಆ್ಯಕ್ಟ್ ಮಾಡಿಸುವುದು, ಕಪ್ಪೆ ನೆಗೆತ, ಕೋತಿ, ನಾಯಿಯ ರೀತಿಯಲ್ಲಿ ಅಭಿನಯಿಸುವುದು… ಮುಂದುವರಿಯುತ್ತಾ ತುಂಬಾ ಕಷ್ಟದ ಟಾಸ್ಕ್ಗಳನ್ನು ಕೊಡಲಾಗುತ್ತದೆ. ಪರಿಚಯವಿಲ್ಲದ ವ್ಯಕ್ತಿಗಳ ಹತ್ತಿರ ಸೆಲ್ಫಿ ತೆಗೆದುಕೊಳ್ಳುವುದು, ಲವ್‌ ಪ್ರಪೋಸ್‌ ಮಾಡುವುದು, ಯಾರಾದರೂ ಗೊತ್ತಿಲ್ಲದವರ ನಂಬರ್‌ ಕೇಳಿ ತೆಗೆದುಕೊಂಡು ಬರುವುದು… ಹೀಗೆ ಅನೇಕ ರೀತಿಯ ಟಾಸ್ಕ್ಗಳನ್ನು ನೀಡಿ ಅವರಿಗೆ ಕಾಟವನ್ನು ಕೊಟ್ಟು ಮುಂದಿನ ಸ್ಥಳಕ್ಕೆ ಕಳುಹಿಸಲಾಗುತ್ತದೆ.

ಅಂತಿಮ ಹಂತದ ಅವಾಂತರ!: ಎಲ್ಲ ಸ್ಥಳಗಳನ್ನೂ ಸುತ್ತಿದ ನಂತರ ಕೊನೆಯಲ್ಲಿ ಎಲ್ಲಾ ತಂಡಗಳು ಒಗ್ಗೂಡಿಸಿ, ಕೊನೆಯ ಟಾಸ್ಕ್ ನೀಡುತ್ತಾರೆ; ಅದೇ ನಿಧಿಗಾಗಿ ಹುಡುಕಾಟ. ಮೊದಲಿಗೆ ಒಂದು ಡಮ್ಮಿ ನಿಧಿಯನ್ನು ಇಡಲಾಗಿರುತ್ತದೆ. ಅದನ್ನು ಎಲ್ಲ ಗುಂಪಿನ ವಿದ್ಯಾರ್ಥಿಗಳು ಸೇರಿ ಹುಡುಕುತ್ತಾರೆ. ಅದು ಸಿಕ್ಕ ತಕ್ಷಣ ಹುಡುಕಿದ ಗುಂಪಿನ ಹರುಷಕ್ಕೆ ಪಾರವೇ ಇರುವುದಿಲ್ಲ. ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾ, ಅದರ ಮುಂದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ.

ಅದನ್ನು ಓಪನ್‌ ಮಾಡಿದಾಕ್ಷಣ, ಅವರಿಗೆ ಸಿಗೋದೇ ಕಲ್ಲು, ಮಣ್ಣು! ಅದನ್ನು ನೋಡಿ ಎಲ್ಲರೂ ಬಿದ್ದೂಬಿದ್ದು ನಗುತ್ತಾರೆ. ಆಗ ಮತ್ತೂಂದು ಕೊನೆಯ ಟಾಸ್ಕ್, ಅದೇ ನಿಜವಾದ ನಿಧಿಯನ್ನು ಹುಡುಕುವ ಚಾಲೆಂಜ್‌. ಆ ನಿಧಿಯನ್ನು ಯಾವುದಾದರು ಒಂದು ರಹಸ್ಯವಾದ ಸ್ಥಳದಲ್ಲಿ ಇಟ್ಟು, ಅದಕ್ಕಾಗಿ ಶೋಧವನ್ನು ನಡೆಸಿ ಅಂತಿಮವಾಗಿ ಹುಡುಕಿದ ಗುಂಪು ಜಯಶಾಲಿ ಆಗುತ್ತೆ. ಆ ಬಾಕ್ಸ್‌ನಲ್ಲಿ ಸಿಹಿತಿನಿಸುಗಳು ಇರುತ್ತವೆ. ಎಲ್ಲರೂ ತಿಂದು ಹರ್ಷಿಸುತ್ತಾರೆ.

* ವಿನೋದ್‌ ಕುಮಾರ್‌ ಎಸ್‌.ವಿ., ಮೈಸೂರು 

ಟಾಪ್ ನ್ಯೂಸ್

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.