ಕೆರೆ ನುಂಗಿ ನೀರು ಕುಡಿದವರಿವರು!
Team Udayavani, Nov 22, 2017, 9:33 AM IST
ಸುವರ್ಣಸೌಧ, ಬೆಳಗಾವಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10786 ಎಕರೆ ಕೆರೆ, 1256 ಎಕರೆ ಕುಂಟೆ, 501 ಕಿ.ಮೀ. ರಾಜಕಾಲುವೆ ಒತ್ತುವರಿ ಪತ್ತೆ ಮಾಡಿರುವ ಕೆರೆ ಒತ್ತುವರಿ ಅಧ್ಯಯನ ಸಮಿತಿ, ಅಧಿಕಾರಿಗಳ ಸಹಕಾರದಿಂದ ಕೆರೆ ಅಂಗಳ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವ ಬಿಲ್ಡರ್ ಮತ್ತು ಡೆವಲಪರ್ಗಳ ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್
ಮೊಕದ್ದಮೆ ದಾಖಲಿಸಬೇಕು ಎಂದು ಶಿಫಾರಸು ಮಾಡಿದೆ.
ಅಷ್ಟೆ ಅಲ್ಲದೆ, ತಪ್ಪು ಮಾಡಿರುವ ಬಿಲ್ಡರ್ -ಡೆವಲಪರ್ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಒತ್ತುವರಿ ಮಾಡಿ ನಿರ್ಮಿಸಿರುವ ಮನೆ, ಅಪಾರ್ಟ್ಮೆಂಟ್, ಸಮೂಹ ಮನೆಯ ಪ್ರತಿಯೊಂದು ಪ್ರಕರಣದ ಬಗ್ಗೆ ಪರಿಶೀಲಿಸಿ ಎಲ್ಲೆಲ್ಲಿ ಕೆರೆ ಪುನಶ್ಚೇತನಗೊಳಿಸಲು ಸಾಧ್ಯವಿದೆಯೋ ಅಲ್ಲಿ ಒತ್ತುವರಿ ಕಡ್ಡಾಯವಾಗಿ ತೆರವುಗೊಳಿಸಬೇಕು. ಕಾನೂನು ದುರ್ಬಳಕೆ ಮಾಡಿ ಒತ್ತುವರಿ ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಶಿಫಾರಸಿನಲ್ಲಿ ಹೇಳಿದೆ.
ಸದನ ಸಮಿತಿ ವರದಿಯನ್ನು ಸದಸ್ಯರೂ ಆಗಿರುವ ಶಾಸಕ ಎನ್.ಎ.ಹ್ಯಾರಿಸ್ ವಿಧಾನ ಸಭೆ ಯಲ್ಲಿ ಮಂಗಳವಾರ ಮಂಡಿಸಿದ್ದಾರೆ. ಬೆಂಗಳೂರಿನ 57932 ಎಕರೆಗಳಷ್ಟು ಕೆರೆ/ ಕಟ್ಟೆ ಪ್ರದೇಶಗಳ 10,786 ಎಕರೆ ಒತ್ತುವರಿಯಾಗಿದ್ದು, 8119 ಕುಂಟೆ-ಹೊಂಡ ಪ್ರದೇಶಗಳ 1256 ಎಕರೆ ಒತ್ತುವರಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಯ 1090 ಕಿ.ಮೀ. ಪ್ರದೇಶ ವ್ಯಾಪ್ತಿಯ 348 ಗ್ರಾಮಗಳ ಲ್ಲಿ 501 ಎಕರೆ ಪ್ರದೇಶ ಒತ್ತುವರಿ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯಾರ್ಯಾರು ಎಲ್ಲೆಲ್ಲಿ?
ಅಧ್ಯಯನ ಸಮಿತಿಯ ವರದಿಯಲ್ಲಿ ಸರೋಜ, ಗಾರ್ಡನ್ ವ್ಯೂ, ಪ್ರಸ್ಟೀಜ್ ಗ್ರೂಪ್, ಆದರ್ಶ ಡೆವಲ ಪರ್ಸ್, ಡಿಎಸ್ ಮ್ಯಾಕ್ಸ್, ಬ್ರಿಗೇಡ್ ಡೆವಲಪರ್ಸ್, ಶೋಭ, ಜಯನಗರ ಕೋ ಆಪರೇಟಿವ್ ಸೊಸೈಟಿ, ನೈಸ್ ಕಂಪನಿ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಮೌಂಟ್ ಕಾರ್ಮಲ್ ಕಾಲೇಜು, ಆರ್ಎನ್ಎಸ್ ಸ್ಪರ್ಶ್ ಆಸ್ಪತ್ರೆ ಅಪಾರ್ಟ್ಮೆಂಟ್ಗಳು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಉಲ್ಲೇಖವಾಗಿದೆ.
ಸಮಿತಿಯ ಶಿಫಾರಸುಗಳು
ಒತ್ತುವರಿ ಮಾಡಿರುವ ಬಿಲ್ಡರ್ ಮತ್ತು ಡೆವಲಪರ್ಗಳ ಸ್ಥಿರ-ಚರಾಸ್ತಿ ಮುಟ್ಟುಗೋಲು
ಪುನಶ್ಚೇತನಗೊಳಿಸಬಹುದಾದ ಕೆರೆಯಲ್ಲಿನ ಕಟ್ಟಡಗಳ ನೆಲಸಮಕ್ಕೆ ಶಿಫಾರಸು
ರ್ಜೀವ ಕೆರೆ ಭಾಗದಲ್ಲಿರುವ ವಸತಿ ಕಟ್ಟಡಗಳ ಉಳಿಸಲು ಕ್ರಮ ಕೈಗೊಳ್ಳಬೇಕು
ಒತ್ತುವರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು
ಸರ್ಕಾರದ ಸಂಸ್ಥೆಗಳು ಸಾರ್ವಜನಿಕ ಬಳಕೆಗೆ ಮಾಡಿರುವ ಒತ್ತುವರಿ ಸಕ್ರಮ
ಒಟ್ಟಾರೆ ಪ್ರಕರಣದ ತನಿಖೆಗೆ ನ್ಯಾಯಾಂಗ ಆಯೋಗ ರಚನೆ ಮಾಡಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.