ರಕ್ತ ಸಂಬಂಧಗಳಲ್ಲಿ ಮದುವೆ


Team Udayavani, Nov 22, 2017, 10:59 AM IST

22-24.jpg

ಪಾರ್ಕು ಬೆಂಚಿನ ಮೇಲೆ ಕೂತಿದ್ದ ಮಹಿಳೆಯೊಬ್ಬಳ ಮಾತುಗಳು ಕಿವಿಗೆ ಬೀಳುತ್ತಿದ್ದವು. 20 ಎಕರೆ ತೋಟ, ಹತ್ತು ಎಕರೆ ಗದ್ದೆ, ಬಂಗಲೆಯಂಥ ಮನೆ. ಈ ಎಲ್ಲ ಆಸ್ತಿಗೂ ತನ್ನ ತಮ್ಮನೊಬ್ಬನೇ ವಾರಸುದಾರ. ತವರಿನ ಆಸ್ತಿ ಯಾರೋ ಹೊರಗಿನವಳು ಬಂದು ಅನುಭವಿಸುವ ಹಾಗಾಗಬಾರದು. ಮಗಳನ್ನು ತಮ್ಮನಿಗೆ ಕೊಟ್ಟು ಮದುವೆ ಮಾಡಿದರೆ ಅತ್ತೆಯ ಕಾಟವೂ ಇರಲಾರದು. ಆಸ್ತಿಯೂ ಕೈ ತಪ್ಪಿ ಹೋಗಲಾರದು ಎಂಬ ದೂರಾಲೋಚನೆ ಅವಳದು.

ನಮ್ಮ ಸಮಾಜದ ಎಷ್ಟೋ ಪಾಲಕರು ಈ ರೀತಿ ಯೋಚಿಸುತ್ತಾರೆ. ಮದುವೆಯ ಬಂಧನಕ್ಕೆ ಒಳಗಾಗಬೇಕಾದ ಹುಡುಗ- ಹುಡುಗಿಯ ಇಷ್ಟ ಕಷ್ಟಗಳು ಇಲ್ಲಿ ಗಣನೆಗೆ ಬರುವುದೇ ಇಲ್ಲ. ಕೆಲವೊಮ್ಮೆ ಹುಡುಗ ಹುಡುಗಿಯ ಮಧ್ಯದಲ್ಲಿ ವಯಸ್ಸಿನ ಅಂತರ ಹದಿನೈದು ವರ್ಷಗಳಿಗಿಂತಲೂ ಹೆಚ್ಚಿರುತ್ತಿದೆ. ಹುಡುಗಿ ಅಕ್ಷರಸ್ಥಳಾಗಿದ್ದು ಹುಡುಗ ಅನಕ್ಷರಸ್ಥನೋ, ಅಥವಾ ಹೆಚ್ಚು ಓದಿದವನಾಗಿರುವುದಿಲ್ಲ. ಬಾಲ್ಯದಲ್ಲಿ ಇಬ್ಬರೂ ಒಟ್ಟಿಗೆ ಆಡಿ ಬೆಳೆದವರಾಗಿರಬಹುದು. ಇಲ್ಲವೇ ಅಕ್ಕನ ಮಗಳನ್ನು ಎತ್ತಿ ಆಡಿಸಿದ ಸಂದರ್ಭಗಳಂತೂ ಸಾಮಾನ್ಯ. ಮದುವೆ ಎಂಬುದು ಮನಸು ಮನಸು ಸೇರಿ ಆಗುವ ಭಾವ ಬಂಧನ. ಗಂಡು ಹೆಣ್ಣಿನ ಮಧ್ಯ ಪರಸ್ಪರ ಆಕರ್ಷಣೆ, ತುಡಿತವಿರದಿದ್ದಾಗ ಮದುವೆ ಎಂಬುದು ನೀರಸವಾಗಿ ಬಿಡುತ್ತದೆ. ಪಾಲಕರ ಒತ್ತಾಯಕ್ಕೆ ಕಟ್ಟು ಬಿದ್ದು ಆಗುವ ಮದುವೆಗಳು ಹೆಚ್ಚು ಕಾಲ ಬಾಳಲಾರವು.

ತಂದೆಯ ಸಹೋದರಿಯ ಮಗನನ್ನೋ ಇಲ್ಲವೇ ತಾಯಿಯ ಸಹೋದರನ ಮಗನನ್ನೋ, ತಾಯಿಯ ಸಹೋದರನನ್ನೋ ಮದುವೆಯಾಗಬೇಕಾದ ಸಂದರ್ಭಗಳು ಅನೇಕ ಹೆಣ್ಮಕ್ಕಳ ಜೀವನದಲ್ಲಿ ಬಂದೊದಗುತ್ತದೆ. ಮನಸಾರೆ ಇಷ್ಟಪಟ್ಟು ಪರಸ್ಪರ ಒಪ್ಪಿ ವರಿಸುವ ಗಂಡು ಹೆಣ್ಣುಗಳು ಬೆರಳೆಣಿಕೆಯಷ್ಟು ಮಾತ್ರ. ಪಾಲಕರ ಬಲವಂತಕ್ಕೆ ಮಣಿದು ಕೆಲವರು ರಕ್ತ ಸಂಬಂಧಗಳಲ್ಲಿ ಮದುವೆಯಾದರೆ, ಮತ್ತೆ ಕೆಲವರು ಹೆತ್ತವರು ಹಾಕಿದ ಗೆರೆಯನ್ನು ದಾಟುವ ಧೈರ್ಯವಿಲ್ಲದೆ ಇಂಥ ಮದುವೆಗಳಿಗೆ ತಲೆ ಬಾಗುತ್ತಾರೆ. ಅನಿವಾರ್ಯವಾಗಿ ತಾಳಿ ಕಟ್ಟಿಸಿಕೊಳ್ಳುವ/ ಕಟ್ಟುವವರ ಸಂಖ್ಯೆಯೇ ಜಾಸ್ತಿ.

ರಕ್ತ ಸಂಬಂಧದ ಮದುವೆಗಳಿಂದ ಅನುಕೂಲಕ್ಕಿಂತ ಅನನುಕೂಲತೆಗಳೇ ಜಾಸ್ತಿ. ಹುಟ್ಟುವ ಮಗು ಅಂಗವೈಕಲ್ಯತೆಯನ್ನು ಪಡೆದು ಹುಟ್ಟಬಹುದು. ರಕ್ತ ಸಂಬಂಧಗಳಲ್ಲಿ ಮದುವೆಯಾದವರಲ್ಲಿ ಶೇ.6ರಷ್ಟು ಮಕ್ಕಳು ನ್ಯೂನತೆಗಳನ್ನು ಹೊಂದಿ ಜನಿಸುತ್ತವೆ. ಹೃದ್ರೋಗದ ತೊಂದರೆಗಳು, ನರವ್ಯೂಹಕ್ಕೆ ಸಂಬಂಧಿಸಿದ ತೊಂದರೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಕೆಲವೊಂದು ಪ್ರಕರಣಗಳಲ್ಲಿ ಅಂಗವಿಹೀನ ಮಕ್ಕಳು ಜನಿಸಬಹುದು. ಹೀಗಾಗಿ ಕೆಲವು ಜಾತಿಗಳಲ್ಲಿ ಸಗೋತ್ರ ವಿವಾಹಗಳು ನಿಷಿದ್ಧ. ಹುಡುಗ ಹುಡುಗಿ ಒಂದೇ ಗೋತ್ರದವರಾದಲ್ಲಿ ಅವರು ಸಹೋದರ ಸಹೋದರಿಯರೆಂದು ಪರಿಗಣಿಸಿ ಅಂಥ ಸಂಬಂಧಗಳನ್ನು ನಿರಾಕರಿಸುತ್ತಾರೆ.

ರಕ್ತ ಸಂಬಂಧಗಳಲ್ಲಿನ ಮದುವೆಗಳು ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಾಗಿ ಕಂಡುಬರುತ್ತವೆ. ಅಜ್ಞಾನ, ಅನಕ್ಷರತೆ, ಅಂಧಶ್ರದ್ಧೆಗಳ ಕಾರಣದಿಂದ ಈಗಲೂ ರಕ್ತ ಸಂಬಂಧಗಳಲ್ಲಿನ ಮದುವೆಗಳು ನಡೆಯುತ್ತಲೇ ಇವೆ. ಅಲೆಮಾರಿ ಕುಟುಂಬಗಳಲ್ಲಿ ಇಂಥ ಮದುವೆಗಳು ಜಾಸ್ತಿ. ಅವಿಭಕ್ತ ಕುಟುಂಬಗಳಲ್ಲಿ ಇಂಥ ಮದುವೆಗೆ ಅವಕಾಶಗಳು ಜಾಸ್ತಿ. ಹೊರಗಿನಿಂದ ಬಂದ ಹೆಣ್ಣು ತಮ್ಮ ಮನೆಗೆ ಹೊಂದಿಕೊಳ್ಳುತ್ತಾಳ್ಳೋ ಇಲ್ಲವೆಂದೋ, ಹೊರಗಿನಿಂದ ಬಂದವಳು ಕೂಡು ಕುಟುಂಬವನ್ನು ಎಲ್ಲಿ ಒಡೆದು ಬಿಡುತ್ತಾಳ್ಳೋ ಎಂಬ ಭಯದಿಂದಲೂ ಒಳ ಸಂಬಂಧಗಳಲ್ಲಿ ವಿವಾಹಗಳು ನಡೆಯುತ್ತವೆ.

ಪರಸ್ಪರ ಇಷ್ಟಪಟ್ಟಾಗ ಅಂತಹ ಒಳ ಸಂಬಂಧಗಳ ಮದುವೆಗಳು ಅನಿವಾರ್ಯವಾಗಬಹುದು. ಆದರೆ, ಬೇರಾವುದೋ ಅನುಕೂಲಕ್ಕಾಗಿ, ಸ್ವಾರ್ಥಕ್ಕಾಗಿ ಮಾಡುವ ರಕ್ತ ಸಂಬಂಧದ ಮದುವೆಗಳಿಂದ ಇಬ್ಬರೂ ಜೀವನವಿಡೀ ಪರದಾಡಬೇಕಾಗುತ್ತದೆ. ಜನಿಸುವ ಮಗು ಕೂಡ ಅಸಹನೀಯ ಬದುಕನ್ನು ಬದುಕಬೇಕಾಗುತ್ತದೆ.

ಆಸ್ತಿಯ ಆಸೆಗಾಗಿಯೋ, ಇನ್ನಾವುದೋ ಸ್ವಾರ್ಥಕ್ಕಾಗಿಯೋ ಮಾಡುವ ರಕ್ತ ಸಂಬಂಧದ ಮದುವೆಗಳು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುವುದಷ್ಟೇ ಅಲ್ಲದೆ ಪರೋಕ್ಷವಾಗಿ ಸಾಮಾಜಿಕ ಸಮಸ್ಯೆಗಳಿಗೂ ದಾರಿ ಮಾಡಿ ಕೊಡುತ್ತವೆ.

ಪ್ರತಿ ಕುಟುಂಬದ ತಲೆಮಾರಿನಲ್ಲಿ ಯಾರಿಗಾದರೂ ಏನೋ ಒಂದು ನ್ಯೂನತೆ ಇದ್ದೇ ಇರುತ್ತೆ. ಅದು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದುಕೊಂಡು ಬಂದಿರುತ್ತದೆ. ಉದಾ: ತಾಯಿಯ ಜೀನ್‌ನಲ್ಲಿ ಕುಳ್ಳಗಿನ ಜೀನ್‌ ಇದ್ದರೆ ಅದು ಆಕೆಯ ಮಗಳಿಗೂ ಟ್ರಾನ್ಸ್‌ಫ‌ರ್‌ ಆಗಿರುತ್ತೆ. ಈ ಸಂದರ್ಭದಲ್ಲಿ ಮಗಳನ್ನು ತಾಯಿಯ ತಮ್ಮನಿಗೆ ಮದುವೆ ಮಾಡಿಕೊಡುವುದು ತುಂಬಾ ರಿಸ್ಕ್. ಏಕೆಂದರೆ, ಒಡಹುಟ್ಟಿದವರಾಗಿರುವುದರಿಂದ ಅದೇ ಕುಳ್ಳಗಿನ ಜೀನ್ಸ್‌ ತಮ್ಮನಲ್ಲೂ ಇರುತ್ತೆ. ಮಗಳು ಮತ್ತು ಸೋದರ ಮಾವ ಕೂಡುವುದರಿಂದ ಎರಡೆರಡು ದಾನಿಗಳಿಂದ ಕುಳ್ಳಗಿನ ಜೀನ್‌ ಪ್ರಾಬಲ್ಯ ಮೆರೆದು ಕುಬj ಮಗು ಹುಟ್ಟುವ ಸಾಧ್ಯತೆ ಹೆಚ್ಚು. ಇಲ್ಲಿ ಕುಬjತೆಯನ್ನು ಒಂದು ಉದಾಹರಣೆಯಾಗಿ ಮಾತ್ರ ಕೊಟ್ಟಿದ್ದು. ಇದೇ ರೀತಿ ಅನೇಕ ನ್ಯೂನತೆಗಳು, ಅಂಗವೈಕಲ್ಯಗಳು ಮಗುವನ್ನು ಕಾಡಬಹುದು.
– ಡಾ. ಸುಹಾಸ್‌, ಲೈಂಗಿಕ ತಜ್ಞರು

ಮಗಳು ಸೋದರ ಸಂಬಂಧದಲ್ಲೇ ಮದುವೆಯಾದರೆ ಕಣ್ಣ ಮುಂದೆಯೇ ಚೆನ್ನಾಗಿರುತ್ತಾಳೆ ಅಂತಲೋ, ಆಸ್ತಿ ಯಾಕೆ ಸುಮ್ಮನೆ ಬೇರೆಯವರ ಪಾಲಾಗಬೇಕು ಅಂತಲೋ ಸೋದರ ಸಂಬಂಧದಲ್ಲೇ ಮದುವೆ ಮಾಡಿಕೊಡುತ್ತಾರೆ. ಈ ರೀತಿ ಮಗಳು ಚೆನ್ನಾಗಿರಬೇಕು ಎನ್ನುವ ದೃಷ್ಟಿಯಿಂದ ನೋಡಿದರೆ, ಈ ನಿರ್ಧಾರದಲ್ಲಿ ಯಾವುದೇ ತಪ್ಪು ಕಾಣುವುದಿಲ್ಲ. ಆದರೆ, ವೈದ್ಯವಿಜ್ಞಾನ ಬೇರೆಯದೇ ಹೇಳುತ್ತೆ. ಸೋದರ ಸಂಬಂಧಗಳ ಮದುವೆಯಿಂದ ಅಂಗವಿಕಲ ಮಗು ಹುಟ್ಟೋ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಮದುವೆ ನಂತರ ಕೌನ್ಸೆಲಿಂಗ್‌ಗೆ ಅಂತ ದಂಪತಿ ಬರುತ್ತಾರೆ. ಆ ಹಂತದಲ್ಲಿ ವೈದ್ಯಕೀಯ ಪರೀಕ್ಷೆಗಳು ಮತ್ತು ಧೈರ್ಯ ತುಂಬುವುದರ ಹೊರತಾಗಿ ಹೆಚ್ಚಿನದ್ದೇನನ್ನೂ ಮಾಡಲಾಗದು. 
– ಡಾ. ಶುಭ್ರತಾ, ಮನಃಶಾಸ್ತ್ರಜ್ಞೆ

ಗೌರಿ ಚಂದ್ರಕೇಸರಿ, ಶಿವಮೊಗ್ಗ

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.