ದಿಢೀರ್‌ ತಿಂಡಿಗಳು


Team Udayavani, Nov 22, 2017, 11:16 AM IST

22-27.jpg

ಮಕ್ಕಳು ಸ್ಕೂಲ್‌ನಿಂದ ಬರುವಾಗ ಅಮ್ಮ ತಿಂಡಿ ಮಾಡಿಟ್ಟುಕೊಂಡು ಕಾಯುವುದು ಸಾಮಾನ್ಯ. ಪ್ರತಿದಿನವೂ ಹೊಸ ಹೊಸ ತಿಂಡಿ ಮಾಡಿದರೆ ಮಕ್ಕಳಿಗೂ ಖುಷಿಯಾಗುತ್ತದೆ. ಆದರೆ ದಿನಾ ಏನಪ್ಪಾ ಹೊಸದು ಮಾಡುವುದು ಅನ್ನೋದು ಅಮ್ಮಂದಿರ ಚಿಂತೆ. ಅಂಥ ಅಮ್ಮಂದಿರಿಗಾಗಿ ಕೆಲವು ದಿಢೀರ್‌ ತಿಂಡಿಗಳ ರೆಸಿಪಿ ಇಲ್ಲಿವೆ. 

1. ಪನೀರ್‌ ಸ್ಟಿಕ್‌
ಬೇಕಾದ ಸಾಮಗ್ರಿ:
ಪನೀರ್‌-1/4 ಕೆ.ಜಿ, ದೊಣ್ಣೆ ಮೆಣಸಿನ ಕಾಯಿ – 2 ತುಂಡು, ಜೀರಿಗೆ – 1/2 ಚಮಚ, ಟೊಮೆಟೊ, ಮೆಣಸಿನ ಪುಡಿ-1/4 ಚಮಚ, ಕರಿ ಮೆಣಸಿನ ಪುಡಿ -1/4 ಚಮಚ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ ಹಾಕಿ. ಎಣ್ಣೆ ಬಿಸಿಯಾದ ನಂತರ ಟೊಮೆಟೊ ಪೀಸ್‌ಗಳನ್ನು ಹಾಕಿ 2-3 ನಿಮಿಷ ಕುದಿಸಿರಿ. ಪನ್ನೀರ್‌ ತುಂಡು ಮಾಡಿ, ದೊಣ್ಣೆ ಮೆಣಸಿನ ಕಾಯಿ ತುಂಡುಗಳು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದ ನಂತರ 2-3 ನಿಮಿಷ ಬೇಯಿಸಿ. ರುಚಿಗೆ ಉಪ್ಪು ಸೇರಿಸಿ, ಬ್ರೆಡ್‌ ಅಥವಾ ಚಪಾತಿ ಜೊತೆ ತಿನ್ನಲು ಕೊಡಿ.

2. ದಿಢೀರ್‌ ತಿಂಡಿಗಳು
ಬೇಕಾದ ಸಾಮಗ್ರಿ:
ಕೊತ್ತಂಬರಿ ಸೊಪ್ಪು- 1 ಕಟ್ಟು, ಹಸಿ ಮೆಣಸಿನಕಾಯಿ- 10, ಎಳ್ಳು- 2 ಚಮಚ, ಗರಂ ಮಸಾಲ- 1 ಚವåಚ, ಕಡಲೆಹಿಟ್ಟು- 125 ಗ್ರಾಂ, ಶುಂಠಿ- 1 ತುಂಡು, ಜೀರಿಗೆ- 1/2 ಚಮಚ, ಬೆಲ್ಲ ಮತ್ತು ಉಪ್ಪು, ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ ರುಬ್ಬಿಟ್ಟುಕೊಳ್ಳಿ. ನಂತರ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು, ಎಳ್ಳು, ಗರಂ ಮಸಾಲ ಹಾಗೂ ಬೆಲ್ಲ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಸೇರಿಸಿದ ನಂತರ 3-4 ರೋಲ್‌ ಮಾಡಿ. ಗ್ಯಾಸ್‌ ಮೇಲೆ ಒಂದು ಪಾತ್ರೆಯಲ್ಲಿ ನೀರಿಟ್ಟು, ಅದರ ಮೇಲೆ ಒಂದು ತಟ್ಟೆಗೆ ಎಣ್ಣೆ ಹಚ್ಚಿ ರೋಲ್‌ಗ‌ಳನ್ನು ಹಬೆಯಲ್ಲಿ ಬೇಯಿಸಿ. ಅದು ತಣ್ಣಗಾದ ನಂತರ ಅದನ್ನು ತುಂಡು ತುಂಡು ಮಾಡಿ ಎಣ್ಣೆಯಲ್ಲಿ ಕರಿಯಿರಿ. ಹಬೆಯಲ್ಲಿ ಬೇಯಿಸಿದ ನಂತರ ಕರಿದರೆ ಜಾಸ್ತಿ ಎಣ್ಣೆ ಹೀರಿಕೊಳ್ಳುವುದಿಲ್ಲ. 

3. ಮಿನಿ ಕಟ್ಲೆಟ್‌
ಬೇಕಾದ ಸಾಮಗ್ರಿ:
ಕ್ಯಾಬೇಜ್‌ -1/4 ಕೆಜಿ, ಬಟಾಣಿ-1/4 ಕೆಜಿ, ಆಲೂಗಡ್ಡೆ -1/4 ಕೆಜಿ, ಕ್ಯಾರೆಟ್‌-100ಗ್ರಾಂ, ಸಣ್ಣ ರವೆ-1/4 ಕೆಜಿ, ಬ್ರೆಡ್‌-1, ಚಕ್ಕೆತುಂಡುಗಳು-3, ಬೆಳ್ಳುಳ್ಳಿ ಎಸಳು-4, ಲವಂಗ-3, ಈರುಳ್ಳಿ-1, ಹಸಿಮೆಣಸು-3, ಉಪ್ಪು-3/4 ಚಮಚ, ಕೊತ್ತಂಬರಿ ಸೊಪ್ಪು -1ಕಟ್ಟು.

ತಯಾರಿಸುವ ವಿಧಾನ: ಆಲೂಗೆಡ್ಡೆ ಬೇಯಿಸಿಡಿ. ಎಲ್ಲಾ ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಬೇಯಿಸಿರಿ. ಬ್ರೆಡ್‌ನ್ನು ನೀರಿನಲ್ಲಿ ನೆನೆಸಿ ತೆಗೆಯಿರಿ. ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಡಿ. ಚಕ್ಕೆ, ಲವಂಗ ಪುಡಿ ಮಾಡಿ.ಬೇಯಿಸಿದ ನೀರನ್ನು ಶೋಧಿಸಿ ಒಂದು ಪಾತ್ರೆಯಲ್ಲಿ ಇಡಿ. 

ಇವೆಲ್ಲವನ್ನೂ ಆಲೂಗೆಡ್ಡೆ ಜೊತೆಗೆ ಸೇರಿಸಿ ನಂತರ ಈರುಳ್ಳಿ ಹಾಗೂ ಮಸಾಲೆ ಸೇರಿಸಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಹಿಟ್ಟನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ತಟ್ಟಿ ರವೆಯಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಕರಿಯಿರಿ. ತವಾದಲ್ಲಿ ಹಾಕಿಯೂ ಬೇಯಿಸಬಹುದು.

4. ವೆಜಿಟೆಬಲ್‌ ರೋಲ್ಸ್‌
ಬೇಕಾದ ಸಾಮಗ್ರಿ:
ಚಿರೋಟಿ ರವೆ- 1ಕಪ್‌, ಪಾಲಕ್‌- 1 ಕಟ್ಟು, ಕಡಲೆ ಹಿಟ್ಟು- 1/4 ಕಪ್‌, ಗೋಧಿ ಹಿಟ್ಟು- 1/4 ಕಪ್‌, ಮೊಸರು- 1/4 ಕಪ್‌, ಜೀರಿಗೆ ಪುಡಿ- 1/4 ಚಮಚ, ಖಾರದ ಪುಡಿ- 1/2 ಚಮಚ, ಅರಿಶಿನ ಪುಡಿ -ಒಂದು ಚಿಟಿಕೆ, ಶುಂಠಿ -1/2 ತುಂಡು, ಹಸಿಮೆಣಸಿನಕಾಯಿ -3, ಕೊತ್ತಂಬರಿ ಸೊಪ್ಪು -1/2 ಕಟ್ಟು, ಇಂಗು, ಸಕ್ಕರೆ ಹಾಗೂ ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಗೋಧಿ ಹಿಟ್ಟು, ಕಡಲೆ ಹಿಟ್ಟು ಜರಡಿ ಹಿಡಿದು ಹದವಾಗಿ ಕಲಸಿ. ಅದರ ಜೊತೆಗೆ ಚಿರೋಟಿ ರವೆ, ಹಸಿಮೆಣಸಿನಕಾಯಿ, ಖಾರದ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ, ಚೂರು ಮಾಡಿದ ಪಾಲಕ್‌ ಶುಂಠಿ ಸೇರಿಸಿ ರೋಲ್‌ ಮಾಡಿ ಇಡಿ. ಇದನ್ನು ಹಬೆಯ ಮೇಲೆ 10 ನಿಮಿಷ ಬೇಯಿಸಿರಿ. ತಣ್ಣಗಾದ ನಂತರ ಎಲ್ಲವನ್ನೂ ಚೆನ್ನಾಗಿ ಸೇರಿಸಿ. ನಂತರ ಹಿಟ್ಟನ್ನು ಸಮವಾಗಿ ನಾದಿ. ಸ್ವಲ್ಪ ಸ್ವಲ್ಪ ನೀರು ಸೇರಿಸಬಹುದು. 3-4 ರೋಲ್‌ ಮಾಡಿ ಅದನ್ನು ಹತ್ತು ನಿಮಿಷ ಹಬೆಯ ಮೇಲೆ ಬೇಯಿಸಿ. ನಂತರ ಅದನ್ನು ಎಣ್ಣೆಯಲ್ಲಿ ಕರಿಯಿರಿ. ಸಾಸ್‌ ಜೊತೆಗೆ ಮಕ್ಕಳಿಗೆ ಸವಿಯಲು ಕೊಡಿ.

5. ಮಕ್ಕಳ ಡಬ್ಬಿ ಸ್ಪೆಶಲ್‌ 
ಬೇಕಾದ ಸಾಮಗ್ರಿ:
ಬ್ರೆಡ್‌ ತುಂಡು -2, ಚಿರೋಟಿ ರವೆ-1 ಕಪ್‌, ಮೊಸರು -1 ಕಪ್‌, ಹಸಿಮೆಣಸಿನ ಕಾಯಿ-1, ಶುಂಠಿ -1 ಚಿಕ್ಕ ತುಂಡು, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಸಾಸಿವೆ, ಕರಿಬೇವು.

ತಯಾರಿಸುವ ವಿಧಾನ: ಶುಂಠಿ ಹಾಗೂ ಹಸಿಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ. ನಂತರ ರವೆ, ಮೊಸರು, ಉಪ್ಪು ಹಾಗೂ ಬ್ರೆಡ್‌ ಪುಡಿಯನ್ನು ಚೆನ್ನಾಗಿ ಕೈಯಿಂದ ಕಲಸಿರಿ. ಒಗ್ಗರಣೆ ಹಾಕಿ, ಹತ್ತು ನಿಮಿಷ ಹಾಗೇ ಇಡಿ. ಈಗ ಒಂದೊಂದು ಕಟೋರಿಗೆ ಎಣ್ಣೆ ಸವರಿ ಇದನ್ನು ಹಾಕಿ. ಇಡ್ಲಿ ತಟ್ಟೆಯಲ್ಲೂ ಹಾಕಬಹುದು. ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಇದು ಬಲು ರುಚಿ. ಕ್ಯಾರೆಟ್‌ ತುರಿದು, ಪಾಲಕ್‌ ಸೇರಿಸಿದರೂ ಆದೀತು. 

ಹೀರಾ ಆರ್‌.

ಟಾಪ್ ನ್ಯೂಸ್

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.