ರಂಗಭೂಮಿ ಹಲವುಗಳ ಸೃಷ್ಟಿಕರ್ತ: ಜೆ.ಲೋಕೇಶ್
Team Udayavani, Nov 22, 2017, 11:55 AM IST
ಬೆಂಗಳೂರು: ರಂಗಭೂಮಿ ಹಲವುಗಳ ಸೃಷ್ಟಿ ಕರ್ತ. ಎಲ್ಲವನ್ನೂ ಇದು ಕಲಿಸುತ್ತೇ. ಹೀಗಾಗಿ ಮಕ್ಕಳು ಮೊಬೈಲ್, ಟಿವಿ ಸಂಸ್ಕೃತಿಯನ್ನು ಬಿಟ್ಟು, ರಂಗಭೂಮಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್ ಸಲಹೆ ನೀಡಿದರು. ನಗರದಲ್ಲಿ ಮಂಗಳವಾರ ಜೆಎಸ್‌ಎಸ್ ಮಹಾವಿದ್ಯಾಪೀಠ ಶಿವರಾತ್ರೀಶ್ವರ ಕೇಂದ್ರಲ್ಲಿ ಆಯೋಜಿಸಿದ್ದ, ಜೆಎಸ್‌ಎಸ್ ರಂಗೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಬೆಳಕಿಲ್ಲದ ದಾರಿಯಲ್ಲಿ ಸಾಗಬಹುದು. ಆದರೆ ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯುವುದು ಅಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಭವಿಷತ್ತಿನ ಕನಸು ಕಾಣಬೇಕು. ಆರೋಗ್ಯಕರವಾದ ಕನಸು ಕಂಡಾಗ ಮಾತ್ರ ನಮ್ಮನ್ನು ನಾವು ಸೃಷ್ಟಿಸಿಕೊಳ್ಳಬಹುದು. ಚಂದ್ರಲೋಕಕ್ಕೂ ತೆರಳಬಹುದು ಎಂದರು.
ಮಕ್ಕಳು ಇಂದು ಮೊಬೈಲ್ ಸಂಸ್ಕೃತಿಕೆಗೆ ಒಗ್ಗಿಕೊಂಡಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದರಿಂದ ದೊರವಿರಲು ಮಕ್ಕಳು ರಂಗಭೂಮಿಯತ್ತ ಚಿತ್ತಹರಿಸಬೇಕು. ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆ ಹುದುಗಿದ್ದು ಅದನ್ನು ನಾವೇ ಹೊರತಗಿಯಬೇಕು. ಮುಂದಿನ ಪೀಳಿಗೆಯ ಮಾರ್ಗದಶಕರಾಗುವ ವಿದ್ಯಾರ್ಥಿಗಳು ಹೊಸತರತ್ತ ಚಿತ್ತ ಹರಿಸಿ ಎಂದು ತಿಳಿಸಿದರು.
ಅಖೀಲಭಾರತ ಶರಣ ಸಾಹಿತ್ಯ ಪರಿಷತ್ ಬೆಂಗಳೂರು ಘಟಕದ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ನಾಟಕ ರಂಗವು ಬಿ.ವಿ.ಕಾರಂತ, ಪ್ರೇಮಕಾರಂತ ಸೇರಿದಂತೆ ಹಲವು ದಿಗ್ಗಜರನ್ನು ಹುಟ್ಟುಹಾಕಿತು. ಈ ಮಹಾನ್ ಕಲಾವಿದರು ಮಕ್ಕಳ ರಂಗಭೂಮಿಯನ್ನು ಹುಟ್ಟುಹಾಕಿದರು.
ಆದರೆ ಇಂದು ಮಕ್ಕಳು ರಂಗಭೂಮಿಯತ್ತ ಆಸಕ್ತಿ ತೋರುತ್ತಿಲ್ಲ. ಅಪಾಯಕಾರಿ ವಸ್ತುಗಳನ್ನಿಟ್ಟುಕೊಂಡು ಜೀವನ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಕಾಲೇಜು ರಂಗೋತ್ಸವದಂತೆ ಮಕ್ಕಳ ನಾಟಕೋತ್ಸವದ ಕಡೆಗೂ ಹೆಚ್ಚು ಗಮನ ನೀಡುವಂತೆ ಒತ್ತಾಯಿಸಿದರು.
ಕೆಲವು ನಿರ್ದೇಶಕರು ಬರೀ ಪೌರಾಣಿಕ ಕಥಾವಸ್ತುಗಳನ್ನು ರಂಗದ ಮೇಲೆ ಇಡುತ್ತಿದ್ದಾರೆ. ಇದರ ಜೊತೆ ರಂಗಭೂಮಿಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಳ್ಳಬೇಕು. ವಾಸ್ತವದ ವಿಷಯಗಳನ್ನಿಟ್ಟುಕೊಂಡೇ ನಾಟಕಗಳನ್ನು ಸೃಷ್ಟಿಸಿ ರಂಗ ಭೂಮಿಯ ಮೇಲೆ ಪ್ರಯೋಗ ಮಾಡಬೇಕು ಆಗ ಹೊಸತರ ಅವಿರ್ಭವ ಸಾಧ್ಯ ಎಂದರು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಗೌರವ ಸಲಹೆಗಾರ, ಡಾ.ಗೊ.ರು.ಚನ್ನಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.