ರಂಗಾಯಣದ ವನರಂಗದಲ್ಲಿ ಚಿಣ್ಣರ ಕಲರವ…
Team Udayavani, Nov 22, 2017, 12:49 PM IST
ಮೈಸೂರು: ಸುಭಾಷ್ ಚಂದ್ರಬೋಸ್, ಕಿತ್ತೂರು ರಾಣಿಚೆನ್ನಮ್ಮ, ಸಿಂಡ್ರೆಲಾ ಹೀಗೆ ವಿವಿಧ ವೇಷಭೂಷಣಗಳಿಂದ ಕಂಗೊಳಿಸುತ್ತಿದ್ದ ಹತ್ತಾರು ಚಿಣ್ಣರ ಕಲರವ ರಂಗಾಯಣದ ವನರಂಗದಲ್ಲಿ ಕೇಳಿಬಂತು.
ಜಿಲ್ಲಾಡಳಿತ, ಜಿಪಂ, ಧಾರವಾಡದ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಂಗಳವಾರ ರಂಗಾಯಣದ ವನರಂಗದಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದ ಚಿಣ್ಣರು ವಿವಿಧ ವೇಷಭೂಷಣಗಳನ್ನು ತೊಟ್ಟು ಮಿಂಚಿದರು. ಸುಭಾಷ್ ಚಂದ್ರಬೋಸ್, ರಾಧೆ, ಕೃಷ್ಣ, ಶಿವ, ಶಕುಂತಲಾ, ಮೌಲ್ವಿ, ಸಿಂಡ್ರೆಲಾ ಸೇರಿದಂತೆ ಹತ್ತಾರು ಬಗೆಯ ವೇಷಗಳಿಂದ ಕಂಗೊಳಿಸುತಿದ್ದ ಚಿಣ್ಣರು ಹಾಡು, ನೃತ್ಯಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ವೇದಿಕೆಯಲ್ಲಿ ಹೆಜ್ಜೆ: ಪ್ರಮುಖವಾಗಿ ಅನನ್ಯ ಕಿತ್ತೂರು ರಾಣಿಚೆನ್ನಮ್ಮ, ನಿರೀûಾ ರಾಧೆ, ಭೂಮಿಶ್ರೀ ಪೊಲೀಸ್ ಅಧಿಕಾರಿ, ಮೇಘನಾ ಭಾರತಾಂಬೆ, ಮೋನಿಷ್‌ಗೌಡ ಶಿವ, ಸಿಂಡ್ರೆಲಾ ಶ್ರೇಯಾ, ಅಲಿನ್‌ತಾಜ್ ಚಿಟ್ಟೆಯ ವೇಷಧರಿಸಿದ ಮಕ್ಕಳು ವೇದಿಕೆ ಮೆಲೆ ಹೆಜ್ಜೆಹಾಕಿದರು.
ಕಾರ್ಯಕ್ರಮದಲ್ಲಿ ಕುಂಭಾರಕೊಪ್ಪಲಿನ ಮಕ್ಕಳು ಸಭಿಕರನ್ನು ಮನರಂಜನಾ ಕಾರ್ಯಕ್ರಮಕ್ಕೆ ಸ್ವಾಗತಿಸಿದರೆ, ಅಜೀಜ್ ನಗರದ 4ನೇ ಕೇಂದ್ರ, ಮೈಸೂರು ಗ್ರಾಮಾಂತರದ ಏಳಿಗೆಹುಂಡಿ ಅಂಗನವಾಡಿ ಮಕ್ಕಳು, ಹೊಸುಂಡಿ ಅಂಗನವಾಡಿ ಕೇಂದ್ರ, ಹಂಚ್ಯಾ ಅಂಗನವಾಡಿ ಕೇಂದ್ರ, ಎಂ.ಸಿ.ಹುಂಡಿ ಅಂಗನವಾಡಿ ಕೇಂದ್ರ, ಸತ್ಯನಗರದ ಅಂಗನವಾಡಿ ಕೇಂದ್ರದ ಮಕ್ಕಳು ನೃತ್ಯದ ಮೂಲಕ ಗಮನ ಸೆಳೆದರು.
ಇವರೊಂದಿಗೆ ವಿವಿಧ ಅಂಗನವಾಡಿ ಕೇಂದ್ರದ ಮಕ್ಕಳು ನೃತ್ಯ, ಶ್ಲೋಕಗಳ ಗಾಯನದ ಮೂಲಕ ನೆರೆದಿದ್ದವರ ಮನರಂಜಿಸಿದರು. ಇದಕ್ಕೂ ಮುನ್ನ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಶುಭ ಹಾರೈಸಿದರು.
ಪ್ರಾಣೀಗಳ ಬಗ್ಗೆ ಅರಿವು: ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮಾತನಾಡಿ, ಬಾಲಭವನ, ಮೊದಲ ಬಾರಿಗೆ ಬಾಲಮಂದಿರ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ಮೃಗಾಲಯಕ್ಕೆ ಉಚಿತ ಪ್ರವೇಶ ನೀಡಲಾಗುತ್ತಿದೆ.
ಈಗಾಗಲೇ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನಕ್ಕೆ ಸರ್ಕಾರಿ ಶಾಲೆ ಮಕ್ಕಳನ್ನು ತಾವೆ ಕರೆದೊಯ್ದು, ಸಪಾರಿ ಹಾಗೂ ಊಟದ ವ್ಯವಸ್ಥೆ ಮಾಡುತ್ತಿದ್ದು, ಮೃಗಾಲಯದಲ್ಲಿ ಪ್ರಾಣಿ, ಪ್ರಕೃತಿ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳು ಸಹ ಪ್ರಕೃತಿ ಹಾಗೂ ಪ್ರಾಣಿಗಳ ಬಗ್ಗೆ ಅರಿತು ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಜಾಗೃತಿ ಅಗತ್ಯ: ಜಿಪಂ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದ್ದು, ಈ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ. ಅಲ್ಲದೇ ಭ್ರೂಣ ಹತ್ಯೆಯಿಂದ ಶಾಲಾ ಆವರಣ, ಮನೆ ವಾತಾವರಣದಲ್ಲಿ ಮಕ್ಕಳ ಹಕ್ಕನ್ನೂ ಕಿತ್ತುಕೊಳ್ಳಲಾಗುತ್ತಿದ್ದು,
ಇಂತಹ ದಿನಗಳಲ್ಲಿ ಮಕ್ಕಳ ಹಕ್ಕುಗಳನ್ನು ಅವರಿಗೆ ಕೊಡಿಸುವ ಜತೆಗೆ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಹೋಗಲಾಡಿಸಬೇಕಿದೆ ಎಂದರು. ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ, ಸವಿತಾ ಕುಮಾರಿ, ಮರ್ಲಿನ್ ಡಿಸೋಜಾ, ಗೀತಾ, ಧನಂಜಯ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.