‘ಪದ್ಮಾವತಿ’ಗೆ ಬಾಗಿಲು ಮುಚ್ಚಿದ ಐದನೇ ರಾಜ್ಯ ಗುಜರಾತ್ !
Team Udayavani, Nov 22, 2017, 7:16 PM IST
ಅಹ್ಮದಾಬಾದ್ : ಖ್ಯಾತ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರತ್ತ ಕೆಟ್ಟ ಸುದ್ದಿಗಳು ಈಚಿನ ದಿನಗಳಲ್ಲಿ ಮೆರವಣಿಗೆಯಾಗಿ ಸಾಗಿ ಬರುತ್ತಿವೆ. ಇದೀಗ ಬನ್ಸಾಲಿ ಅವರ ವಿವಾದಿತ “ಪದ್ಮಾವತಿ” ಚಿತ್ರದ ಬಿಡುಗಡೆಯನ್ನು ನಿಷೇಧಿಸಿರುವ ಐದನೇ ರಾಜ್ಯವಾಗಿ ಗುಜರಾತ್ ಮೂಡಿ ಬಂದಿದೆ.
ಪದ್ಮಾವತಿ ಬಿಡುಗಡೆಗೆ ನಿಷೇಧ ಹೇರುವ ಸರಕಾರದ ನಿರ್ಧಾರವನ್ನು ಇಂದು ಬುಧವಾರ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರೇ ಖುದ್ದು ಪ್ರಕಟಿಸಿದರು. ಇತಿಹಾಸದ ಸತ್ಯಗಳನ್ನು ತಿರುಚುವ ಮತ್ತು ರಾಜಪೂತರ ಭಾವನೆಗಳಿಗೆ ನೋವುಂಟು ಮಾಡುವ ‘ಪದ್ಮಾವತಿ’ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡಲಾಗದು ಎಂದವರು ಹೇಳಿದರು.
ಇಂದಿನ ಈ ಮೊದಲಿನ ವರದಿ :
ದೀಪಿಕಾ ಪಡುಕೋಣೆ, ಶಾಹೀದ್ ಕಪೂರ್‌ಮತ್ತು ರಣವೀರ್ ಸಿಂಗ್ ಅಭಿನಯದ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹು ವಿವಾದಿತ “ಪದ್ಮಾವತಿ’ ಚಿತ್ರಕ್ಕೆ ಈ ವರ್ಷ ಬಿಡುಗಡೆಯ ಭಾಗ್ಯ ಇಲ್ಲವಾಗಿದೆ.
ಡಿ.1ರಂದು ಬಿಡುಗಡೆಯಾಗುವುದೆಂದು ನಿಗದಿಯಾಗಿದ್ದ ಪದ್ಮಾವತಿ ಚಿತ್ರಕ್ಕೆ ಸಿಬಿಎಫ್ಸಿ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ನೀಡಿಲ್ಲ. ಈಗಿನ್ನೂ ಸೆನ್ಸಾರ್ ಮಂಡಳಿ ಸದಸ್ಯರು ಈ ಚಿತ್ರವನ್ನು ವೀಕ್ಷಿಸಿಲ್ಲ; ಆ ಪ್ರಕ್ರಿಯೆ ಮುಗಿದ ಬಳಿಕ ಸರ್ಟಿಫಿಕೇಟ್ ದೊರತರೂ ಚಿತ್ರ ಕಾಣುವುದು ಮುಂದಿನ ವರ್ಷವೇ ಎಂದು ಈಗ ತಿಳಿಯಲಾಗಿದೆ. ಅಂತೆಯೇ ಪದ್ಮಾವತಿ ಚಿತ್ರ ನಿರ್ಮಾಪಕರು ಚಿತ್ರದ ಪ್ರಚಾರಾಭಿಯಾನವನ್ನು ಮುಂದಕ್ಕೆ ಹಾಕಿದ್ದಾರೆ.
ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು. ರಾಣಿ ಪದ್ಮಾವತಿ (ದೀಪಿಕಾ) ಮತ್ತು ಅಲ್ಲಾವುದ್ದೀನ್ ಖೀಲ್‌ಜಿ (ರಣವೀರ್) ನಡುವಿನ ಕನಸಿನ ದೃಶ್ಯವು ಚಿತ್ರದಲ್ಲಿದ್ದು ಇದು ಪದ್ಮಾವತಿ ಪಾತ್ರಕ್ಕೆ ಚ್ಯುತಿ ತರುವಂತಿದೆ ಎಂದು ರಾಜಪೂತರು ದೂರಿದ್ದರು.
ಪದ್ಮಾವತಿ ಚಿತ್ರ ನಿರ್ಮಾಪಕರ ದುರದೃಷ್ಟವೆಂಬಂತೆ ಈ ಚಿತ್ರಕ್ಕೆ ದೇಶಾದ್ಯಂತ ಪ್ರತಿಭಟನೆ ನಡೆದಿರುವುದು ವಿಪರ್ಯಾಸವಾಗಿದೆ. ಕಾರಣ ಚಿತ್ರವನ್ನು ನೋಡದೆಯೇ ಅದನ್ನು ಜನರು ಪ್ರತಿಭಟಿಸಿದುದು ವಿಪರ್ಯಾಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.