ಬೆಂಗಳೂರು-ಮೈಸೂರು ರೈಲಲ್ಲಿ ಕೃತಕ ಬುದ್ಧಿಮತ್ತೆ?
Team Udayavani, Nov 23, 2017, 6:20 AM IST
ಹೊಸದಿಲ್ಲಿ: ಸದ್ಯದಲ್ಲೇ ರೈಲ್ವೇಯ ಬೆಂಗಳೂರು-ಮೈಸೂರು ವಿಭಾಗದಲ್ಲಿ ನೀವು ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- ಎಐ)ಯ ಸೌಲಭ್ಯಗಳನ್ನು ಕಾಣಬಹುದು.
ರೈಲ್ವೇ ಇಲಾಖೆ ತನ್ನ ಸಿಗ್ನಲಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವ್ಯವಸ್ಥೆ ಜಾರಿ ಮಾಡಲು ಮುಂದಾಗಿದೆ. ನೈಋತ್ಯ ರೈಲ್ವೇಯ ಬೆಂಗಳೂರು-ಮೈಸೂರು ವಿಭಾಗ, ಪಶ್ಚಿಮ ರೈಲ್ವೇಯ ಅಹ್ಮದಾಬಾದ್-ವಡೋದರಾ ಮಾರ್ಗಗಳನ್ನು ಈ ಉದ್ದೇಶಕ್ಕಾಗಿ ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ.
ಸದ್ಯ ರೈಲ್ವೇ ಇಲಾಖೆಯಲ್ಲಿ ಸಿಗ್ನಲ್ ವ್ಯವಸ್ಥೆಯಲ್ಲಿ ಮಾನವ ನಿರ್ವಹಣೆಯನ್ನು ಕಾಣಬಹುದು. ಅದನ್ನು ಸಂಪೂರ್ಣವಾಗಿ ದೂರನಿಯಂತ್ರಣ ವ್ಯವಸ್ಥೆಯಾಗಿ ಪರಿವರ್ತಿಸುವ ಬಗ್ಗೆ ಯೋಚನೆ ನಡೆಸುತ್ತಿದೆ. ಆಕ್ಸೆಲ್ ಕೌಂಟರ್, ವಿದ್ಯುತ್ ಪೂರೈಕೆ, ವೋಲ್ಟೆàಜ್, ಇಂಟರ್‌ಲಾಕಿಂಗ್ ಸಹಿತ ಹಲವು ವಿಭಾಗಗಳನ್ನು ನಿರ್ವಹಿಸಲು ಅದರಿಂದ ಅನುಕೂಲವಾಗುತ್ತದೆ. ಸ್ವಯಂಚಾಲಿತವಾಗಿ ಸಿಗ್ನಲ್ ಸಮಸ್ಯೆ ಇದ್ದರೆ ಸರಿಪಡಿಸಿ ಅಥವಾ ಸರಿಪಡಿಸಬೇಕಾದಲ್ಲಿ ಮಾಹಿತಿಯನ್ನೂ ನೀಡಲಿದೆ. ಸದ್ಯ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.
ಡೀಸೆಲ್ ಬದಲು ವಿದ್ಯುತ್ ಎಂಜಿನ್
ಸದ್ಯ ದೇಶದ ರೈಲು ಎಂಜಿನ್‌ಗಳು ಡೀಸೆಲ್ ಚಾಲಿತ. ಇನ್ನು ಕೆಲವೇ ವರ್ಷಗಳಲ್ಲಿ ಹಂತ ಹಂತವಾಗಿ ಅವುಗಳು ಇತಿಹಾಸದ ಪುಟಕ್ಕೆ ಸೇರಲಿವೆ. ಅಂದರೆ ಅವುಗಳ ಸ್ಥಾನದಲ್ಲಿ ವಿದ್ಯುತ್‌ನಿಂದ ಚಲಿಸುವ ಎಂಜಿನ್‌ಗಳನ್ನು ತರಲಾಗುತ್ತದೆ. ಇದರಿಂದಾಗಿ ಪರಿಸರದ ಉಳಿವಿಗೆ ಕೊಡುಗೆ ಕೊಡುವ ಜತೆಗೆ ಇಲಾಖೆಗೆ ವಾರ್ಷಿಕವಾಗಿ 10,500 ಕೋಟಿ ರೂ. ಉಳಿತಾಯವೂ ಆಗಲಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಶೇ.100ರಷ್ಟು ವಿದ್ಯುತ್ ಮಾರ್ಗ ರಚಿಸುವ ಬಗ್ಗೆ ಇಲಾಖೆ ಈಗಾಗಲೇ ಕ್ರಮ ಕೈ ಗೊಂಡಿದೆ ಎಂದಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ 30 ಸಾವಿರ ಕಿಮೀ ದೂರವನ್ನು ವಿದ್ಯುದೀಕರಣಗೊಳಿಸಲು 30 ರಿಂದ 35 ಸಾವಿರ ಕೋಟಿರೂ.ವೆಚ್ಚ ಮಾಡಲಾಗುತ್ತದೆ ಎಂದಿದ್ದಾರೆ ಗೋಯಲ್.
ವಿದ್ಯುತ್ ಲೈನ್ ಮಾರಾಟ?
ಮತ್ತೂಂದು ಪ್ರಮುಖ ಯೋಜನೆಯೊಂದರಲ್ಲಿ ಏರ್‌ಇಂಡಿಯಾ ಮಾರಾಟದ ಮಾದರಿಯಲ್ಲಿ ರೈಲ್ವೇ ಇಲಾಖೆ ಹೊಂದಿರುವ ವಿದ್ಯುತ್ ಲೈನ್‌ಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ. 30 ಸಾವಿರ ಕಿ.ಮೀ.ದೂರದ ವಿದ್ಯುತ್ ಲೈನ್ ಅನ್ನು ಪ್ರತಿ ಕಿಮೀಗೆ 1 ಕೋಟಿ ರೂ.ಗಳಂತೆ ವಾರ್ಷಿಕವಾಗಿ 30 ಸಾವಿರ ಕೋಟಿ ರೂ. ಲಾಭ ಪಡೆಯುವ ಯೋಜನೆ ಇದಾ ಗಿದೆ. ಗುತ್ತಿಗೆ ಆಧಾರದಲ್ಲಿ ವಿದ್ಯುತ್ ಲೈನ್ ಅನ್ನು ಖಾಸಗಿ ಸಂಸ್ಥೆಗಳಿಂದ ಪಡೆಯುತ್ತದೆ. ಆ ಕಂಪೆನಿಗೆ ನಿಗದಿತ ಬಡ್ಡಿ ನೀಡ ಲಾಗುತ್ತದೆ. ವಿದ್ಯುತ್ ಲೈನ್‌ಗಳ ನಿರ್ವಹಣೆ ಕಾರ್ಯಗಳನ್ನು ಇಲಾಖೆಯೇ ನಿರ್ವಹಿಸಲಿದೆ ಎಂದಿದ್ದಾರೆ ಅಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.