ಕೂಳೂರಿನಲ್ಲಿ ಡಿ. 3ರಂದು ಮಂಗಳೂರು ಕಂಬಳ


Team Udayavani, Nov 23, 2017, 12:18 PM IST

22-Nov-6.jpg

ಮಹಾನಗರ: ಸುಮಾರು ಒಂದು ವರ್ಷ 8 ತಿಂಗಳ ಕಾಲ ಸ್ತಬ್ಧಗೊಂಡಿದ್ದ ಕರಾವಳಿಯ ಪ್ರಮುಖ ಜಾನಪದ ಕ್ರೀಡೆ ಕಂಬಳವು ಈಗ ಮತ್ತೆ ಆರಂಭವಾಗಿದ್ದು, ಈ ಬಾರಿ ಮಂಗಳೂರಿನಲ್ಲೂ ಈ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ. 

ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ನೇತೃತ್ವದ ಮಂಗಳೂರು ಕಂಬಳ ಸಮಿತಿ ನೇತೃತ್ವದಲ್ಲಿ ಡಿ.3ರಂದು ಕೂಳೂರಿನ ಗೋಲ್ಡ್‌ಪಿಂ ಚ್‌ ಸಿಟಿಯಲ್ಲಿ ಕಂಬಳ ನಡೆಯಲಿದ್ದು, ಸುಮಾರು 100 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಕಂಬಳವನ್ನು ಉಳಿಸುವ ಹಾಗೂ ಕಂಬಳ ದತ್ತ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಂಗಳೂರು ಕಂಬಳ ಸಮಿತಿ ನಗರದ ಪ್ರದೇಶದಲ್ಲಿ ಕಂಬಳವನ್ನು ಆಯೋಜಿಸುತ್ತಿದ್ದು, ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ.

25 ಮಂದಿ ತಂಡದಿಂದ ತಯಾರಿ
ಪ್ರಸ್ತುತ ಸರಪಾಡಿ ಜಾನ್‌ ಸಿರಿಲ್‌ ಡಿ’ ಸೋಜಾ ನೇತೃತ್ವದ 25 ಮಂದಿಯ ತಂಡ 10 ದಿನಗಳಿಂದ ಈ ಜೋಡುಕರೆ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ 152 ಮೀಟರ್‌ ಉದ್ದದ ಜೋಡುಕರೆ ಕಂಬಳ ನಿರ್ಮಿಸಲಾಗುತ್ತಿದ್ದು, ಇದಕ್ಕೆ ರಾಮ-ಲಕ್ಷ್ಮಣ ಜೋಡುಕರೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

 152 ಮೀಟರ್‌ ಉದ್ದದ ಕರೆ ನಿರ್ಮಿಸಲು 6ಸಾವಿರ ಕೆಂಪುಕಲ್ಲು ಬಳಕೆ ಮಾಡಲಾಗಿದೆ. ಇಲ್ಲಿ ಜೇಡಿ ಮಿಶ್ರಿತ ಮಣ್ಣಿರುವ ಕಾರಣ ತಳಭಾಗಕ್ಕೆ ಸುಮಾರು 80 ಲೋಡ್‌ನ‌ಷ್ಟು ಜಲ್ಲಿಹುಡಿ ಬಳಕೆ ಮಾಡಲಾಗಿದೆ. ಸುತ್ತ ಕಲ್ಲು ಕಟ್ಟಿಯಾದ ಬಳಿಕ ಜಲ್ಲಿ ಕ್ರಷರ್‌ಗಳನ್ನು ಡೋಜರ್‌ ಮೂಲಕ ಸಮತಟ್ಟು ಮಾಡಿ ಅದರ ಮೇಲೆ 60 ಲೋಡ್‌ ಮರಳು ಪಸರಿ, ಆ ಬಳಿಕ ನೀರು ಹಾಕಲಾಗುವುದು ಕರೆ ನಿರ್ಮಿಸುತ್ತಿರುವ ಜಾನ್‌ ಸಿರಿಲ್‌ ಡಿ’ ಸೋಜಾ.

ಸುಮಾರು 100 ಜೋಡಿ ಭಾಗವಹಿಸುವ ನಿರೀಕ್ಷೆ
ಸುಮಾರು 100 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು, ಆರು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಿಗೆ ಸೂಕ್ತ ಬಹುಮಾನಗಳನ್ನು ಘೋಷಿಸಲಾಗಿದೆ. ಕನೆಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಬಹು ಮಾನವಾಗಿ 2 ಪವನ್‌ ಚಿನ್ನ, ದ್ವಿತೀಯ 1 ಪವನ್‌ ಚಿನ್ನ, ಹಗ್ಗ, ನೇಗಿಲು, ಹಿರಿಯ ವಿಭಾಗದಲ್ಲಿ 2 ಪವನ್‌, 1 ಪವನ್‌, ಅಡ್ಡ ಹಲಗೆ ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ 1 ಪವನ್‌, ಅರ್ಧ ಪವನ್‌, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್‌, ವಿಜೇತ ಕೋಣಗಳ ಸಹಾಯಕ ತಂಡಕ್ಕೆ 1 ಸಾ. ರೂ. ಬಹುಮಾನ ನೀಡಲಾಗುತ್ತದೆ.

ಇಂದು ಕುದಿ
ಗುರುವಾರ ಕುದಿ (ಪ್ರಾಯೋಗಿಕ) ಕಂಬಳ ಓಡಿಸುವ ಕಾರ್ಯ ಕ್ರಮ ನಡೆಯಲಿದ್ದು, ಮುಂದಿನ ವಾರ ಮತ್ತೂಮ್ಮೆ ನಡೆ ಯಲಿದೆ. ತುಳು ಸಂಸ್ಕೃತಿಯನ್ನು ನಗರ ಪ್ರದೇಶದ ಜನರಿಗೆ ಪರಿಚಯಿಸುವ, ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ. ಡಿ.3ರಂದು ನಡೆಯುವ ಮಂಗಳೂರು ಕಂಬಳಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಹಿತ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕ್ಯಾಪ್ಯನ್‌ ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

ಕದ್ರಿ ಕಂಬಳ ಈಗಿಲ್ಲ
ಈ ಹಿಂದೆ ಕದ್ರಿ ದೇವರ ಕಂಬಳ ನಗರ ಪ್ರದೇಶದಲ್ಲಿ ನಡೆಯುತ್ತಿತ್ತು. ಕಂಬಳ ನಡೆಯುತ್ತಿದ್ದ ಭೂಮಿ ಬೇರೆಯವರ ಕೈ ಸೇರಿದ ಹಿನ್ನೆಲೆಯಲ್ಲಿ 2012ರಲ್ಲಿ ಕದ್ರಿ ಕಂಬಳ ಕೊನೆಯಾಗಿತ್ತು. 

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

1-manipura

Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.