ಸಾಗರ ಕವಚ ಕಾರ್ಯಾಚರಣೆ ಯಶಸ್ವಿ
Team Udayavani, Nov 23, 2017, 3:14 PM IST
ಕಾರವಾರ: ಸಾಗರ ಮಾರ್ಗ ಹಾಗೂ ಪಕ್ಕದ ರಾಜ್ಯದಿಂದ ದುಷ್ಕರ್ಮಿಗಳು ಜಿಲ್ಲೆಯೊಳಗೆ ನುಸುಳದಂತೆ ಕಟ್ಟೆಚ್ಚರ ವಹಿಸುವ ಸಾಗರ
ಕವಚ ಹೆಸರಿನ ಕಾರ್ಯಾಚರಣೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಇಡಲು ಯತ್ನಿಸಿದ ಇಬ್ಬರನ್ನು ನಗರಠಾಣೆ ಪಿಎಸ್‌ಐ
ನವೀನ್ ನಾಯ್ಕ ನೇತೃತ್ವದ ತಂಡ ಬುಧವಾರ ಮಧ್ಯಾಹ್ನ ಬಂಧಿಸಿತು.
ಈ ಮೂಲಕ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಮ್ಮಿಕೊಳ್ಳಲಾಗಿರುವ ಸಾಗರ ಕವಚ ಅಣಕು ಕಾರ್ಯಾಚರಣೆ ಯಶಸ್ವಿಯಾಗಿ
ಮುಕ್ತಾಯವಾಯಿತು. ಬಂಧಿ ತ ಸಿಬ್ಬಂದಿ ಕೋಸ್ಟ್‌ಗಾರ್ಡ್‌ನಲ್ಲಿ ನಾವಿಕ ವೃತ್ತಿ ಮಾಡುವ ಜಿ. ಡೆನಿಯಲ್ ರಾಜಕುಮಾರ್ ಹಾಗೂ ಎಲ್.ಕೆ.ಯಾದವ್ ಎಂದು ನಗರಠಾಣೆ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್ ಪಡೆ, ತಟರಕ್ಷಕ ಪಡೆ ಹಾಗೂ ರೆಡ್ ಫೋರ್ಸ್ ಸಹಕಾರದಲ್ಲಿ ಕಟ್ಟೆಚ್ಚರದ
ಕಾರ್ಯಾಚರಣೆ ನಡೆಯಿತು. ನ.21ರಂದು ಬೆಳಗ್ಗೆ 6ರಿಂದ 22ರ ಸಂಜೆ 6 ರವರೆಗೆ ನಡೆದ ಕಾರ್ಯಾಚರಣೆ ಯಶಸ್ವಿಯಾಯಿತು.
ಅನುಮಾನಾಸ್ಪದ ವ್ಯಕ್ತಿಗಳ ಚಲನೆ ಹಾಗೂ ಸಮಾಜಘಾತುಕ ಚಟುವಟಿಕೆಗಳನ್ನು ಪತ್ತೆ ಮಾಡುವ ಕಾರ್ಯಾಚರಣೆ ಸಾಗರ
ಕವಚ ವರ್ಷದಲ್ಲಿ ಎರಡು ಸಲ ನಡೆಸುತ್ತಾ ಬರಲಾಗುತ್ತಿದೆ.
ಜಿಲ್ಲಾ ಕೇಂದ್ರ ಕಾರವಾರ ಸಮೀಪ ಐಎನ್‌ಎಸ್ ಕದಂಬ, ಕೈಗಾ ಅಣುಸ್ಥಾವರ, ಸುಪಾ, ಕದ್ರಾ, ಕೊಡಸಳ್ಳಿ ಅಣೆಕಟ್ಟು, ಕಾಳಿ
ಸೇತುವೆಯಂತಹ ಸೂಕ್ಷ್ಮ ಪ್ರದೇಶಗಳಿದ್ದು, ಇವುಗಳ ಸುರಕ್ಷತೆ ದೃಷ್ಟಿಯಿಂದ ಈ ಕಾರ್ಯಾಚರಣೆ ಮಹತ್ವದ್ದಾಗಿದೆ. ಭದ್ರತಾ
ವ್ಯವಸ್ಥೆಯನ್ನು ಪ್ರತಿವರ್ಷ ಪರಿಶೀಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಎಲ್ಲೆಡೆ ಪೊಲೀಸ್ ಕಾವಲು:
ಸಾಗರ ಕವಚ ಕಾರ್ಯಾಚರಣೆಯಲ್ಲಿ ದುಷ್ಕರ್ಮಿಗಳು ಜಿಲ್ಲೆಯ ಗಡಿ ಪ್ರವೇಶಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಸಮುದ್ರ ದಂಡೆ, ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯ ಹಾಗೂ ನಗರ, ಪಟ್ಟಣಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಪೊಲೀಸ್ ಕಾವಲು ಬಿಗಿಗೊಳಿಸಲಾಗಿತ್ತು. ವಾಹನಗಳನ್ನು ಹಾಗೂ ಅತ್ತಿಂದಿತ್ತ ಪ್ರಯಾಣಿಸುವ ಜನರ ಬ್ಯಾಗ್, ಲಗೇಜ್ ಗಳನ್ನು ತಪಾಸಣೆ ಮಾಡಲಾಯಿತು. ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದವರನ್ನು ಜಾಗೃತಾವಸ್ಥೆಯಲ್ಲಿ
ಇಡಲಾಗಿತ್ತು.
ಗಡಿಯಲ್ಲಿ ತೀವ್ರ ತಪಾಸಣೆ:
ಜಿಲ್ಲೆಯ ಕಾರವಾರದಿಂದ ಭಟ್ಕಳದ ವರೆಗಿನ ಎರಡೂ ಗಡಿಯಲ್ಲಿ ವಾಹನ ತಪಾಸಣೆ ಜೋರಾಗಿತ್ತು. ಗೋವಾ ಗಡಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಹಾದು ಬರುವ ಪ್ರತಿಯೊಂದು ವಾಹನಗಳನ್ನು ಪೊಲೀಸರು ಹಾಗೂ ಸಂಚಾರಿ ಪೊಲೀಸರು ನಿಲ್ಲಿಸಿ ತಪಾಸಣೆ
ನಡೆಸುವ ದೃಶ್ಯ ಕಂಡು ಬಂತು.
ಸಮುದ್ರದಲ್ಲಿ ಕೋಸ್ಟ್ ಗಾರ್ಡ್‌ನ ಗಸ್ತು:
ಸಮುದ್ರ ಮಾರ್ಗವಾಗಿ ದುಷ್ಕರ್ಮಿಗಳು ಒಳ ಪ್ರವೇಶಿಸದಂತೆ, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸ್
ಪಡೆಯ ಬೋಟುಗಳು ಗಸ್ತು ತಿರುಗಿದವು. ಗೋವಾ ಗಡಿಯಿಂದ ಭಟ್ಕಳದ ವರೆಗೆ ಹಗಲು-ರಾತ್ರಿ ಗಸ್ತು ತಿರುಗಿ ಬಿಗಿ ಕಾವಲು
ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.