ಪ್ರಧಾನಿಯಿಂದ ಎರಡೇ ದಿನದಲ್ಲಿ 8 ಸಮಾವೇಶ
Team Udayavani, Nov 24, 2017, 6:15 AM IST
ಅಹ್ಮದಾಬಾದ್: ವಿಧಾನಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಗುಜರಾತ್ನೆಲ್ಲೆಡೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಗುಜರಾತ್, ಸೌರಾಷ್ಟ್ರ ಭಾಗದಲ್ಲಿ ಚುನಾವಣಾ ಬಿಸಿ ತಾರಕಕ್ಕೇರಿದೆ.
ಈ ಪ್ರಾಂತ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಬಿಜೆಪಿ ಪರವಾಗಿ ಭಾರೀ ಪ್ರಮಾಣದ ರ್ಯಾಲಿಗಳನ್ನು ನಡೆಸಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ಕಾಂಗ್ರೆಸ್ ಧುರೀಣರೂ ತಮ್ಮ ರ್ಯಾಲಿಗಳನ್ನು ಆಯೋಜಿಸಿರುವುದು ಈ ಎರಡೂ ಪ್ರಾಂತ್ಯಗಳಲ್ಲಿನ ಚುನಾವಣಾ ಕಾವನ್ನು ಗಣನೀಯವಾಗಿ ಹೆಚ್ಚಿಸಿದೆ.
ದಕ್ಷಿಣ ಗುಜರಾತ್ ಹಾಗೂ ಸೌರಾಷ್ಟ್ರ ಪ್ರಾಂತ್ಯಗಳ 89 ವಿಧಾನಸಭೆಗಳಿಗೆ ಡಿ. 9ರಂದು ಚುನಾವಣೆ ನಡೆಯಲಿರುವುದರಿಂದ ನ. 27, 29ರಂದು ಪ್ರಧಾನಿ ಮೋದಿ ಈ ಭಾಗದಲ್ಲಿ ಎಂಟು ರ್ಯಾಲಿಗಳನ್ನು ನಡೆಸಲಿದ್ದಾರೆ. 27ರಂದು ಕಛ… ಜಿಲ್ಲೆಯ ಬುಜ್ನಲ್ಲಿ ಬೃಹತ್ ಸಮಾವೇಶ ನಡೆಸಲಿರುವ ಮೋದಿ, ಅದೇ ದಿನ ರಾಜ್ಕೋಟ್ನ ಜಾಸªನ್, ಅಮ್ರೇಲಿಯ ಧಾರಿ, ಸೂರತ್ ಜಿಲ್ಲೆಯ ಕಾಮ್ರೇಜ್ಗಳಲ್ಲಿ ರ್ಯಾಲಿ ನಡೆಸಲಿದ್ದಾರೆ. 29ರಂದು ಸೋಮನಾಥ ಪುರದ ಮೊರ್ಬಿ, ಪ್ರಾಚಿ ಹಳ್ಳಿಗಳಲ್ಲಿ, ಭಾವನಗರದ ಪಾಲಿಟಾನಾದಲ್ಲಿ ಹಾಗೂ ನವಾÕರಿಯಲ್ಲಿನ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ಗೆ “ಚಹಾ’ ಟಾಂಗ್: ಪ್ರಧಾನಿಯನ್ನು “ಚಾಯ್ ವಾಲಾ’ (ಚಹಾ ಮಾರುವವ) ಎಂದು ಟೀಕಿಸಿದ್ದ ಕಾಂಗ್ರೆಸ್ಗೆ ಶಾಂತಿಯುತವಾಗಿ ಎದಿರೇಟು ನೀಡಲು ನಿರ್ಧರಿಸಿರುವ ಗುಜರಾತ್ ಬಿಜೆಪಿ, ನ. 26ರಂದು ಆಕಾಶವಾಣಿಯಲ್ಲಿ ಪ್ರಸಾರವಾಗುವ ಮೋದಿಯವರ “ಮನ್ ಕಿ ಬಾತ್’ ಕಾರ್ಯಕ್ರಮವನ್ನು ಗುಜರಾತ್ ಜನತೆಯ ಜತೆ ಚಹಾ ಸವಿಯುತ್ತಾ ಆಲಿಸಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.