ಕಸಾಪ ಅಪ್‌ಡೇಟ್ ಆಗಲಿ: ಸಮ್ಮೇಳನ ವೀಕ್ಷಿಸಲು ಮೈಸೂರಿಗೇ ಹೋಗ್ಬೇಕು!
Team Udayavani, Nov 24, 2017, 7:48 AM IST
ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತು ಆಧುನಿಕತೆಗೆ ತಕ್ಕಂತೆ ಹೆಜ್ಜೆ ಹಾಕುತ್ತಿಲ್ಲ. ಅದೇ ಹಿಂದಿನ ಶಿಷ್ಠಾಚಾರದ ಬೆನ್ನತ್ತಿ ಹೋಗುತ್ತಿದ್ದು, ಅಖೀಲ ಭಾರತ ಸಾಹಿತ್ಯ ಸಮ್ಮೇಳನದಂತಹ ದೊಡ್ಡ ಕಾರ್ಯಕ್ರಮವನ್ನು ಗಡಿನಾಡು, ಹೊರನಾಡು, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ನೋಡಲಾಗದಂತಹ ಪರಿಸ್ಥಿತಿ ಇದ್ದು, ಮೈಸೂರಿಗೆ ತೆರಳೇ ವೀಕ್ಷಿಸಬೇಕಾಗಿದೆ.
ಕಾಲ ಬದಲಾಗುತ್ತಿದೆ. ಅಂತೆಯೇ ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಯಾವುದೇ ದೇಶದಲ್ಲಿ ನಡೆಯುವ ವರ್ತಮಾನವನ್ನು ಸಲೀಸಾಗಿ ನೋಡುವಂತಹ ಅಂತರ್ಜಾಲ ವ್ಯವಸ್ಥೆ ಇದೆ. ಕ್ಷಣಮಾತ್ರದಲ್ಲಿ ಅಮೆರಿಕಾದಲ್ಲಿ ನಡೆಯುವ ಘಟನೆಯೊಂದು ಭಾರತದ ಯಾವುದೋ ಚಿಕ್ಕ ಹಳ್ಳಿಯಲ್ಲಿ ಕುಳಿತು ನೋಡುವ, ವಿಶ್ಲೇಷಿಸುವಂತ ಈ ಕಾಲದಲ್ಲಿ ಇಂದಿಗೂ ಕನ್ನಡದ ದೊಡ್ಡ ಹಬ್ಬ ಅಕ್ಷರ ಜಾತ್ರೆಯನ್ನು ನೇರವಾಗಿ ನೋಡಲಾಗದ ಪರಿಸ್ಥಿತಿ ಇದ್ದು, ಕನ್ನಡ ಸಾಹಿತ್ಯ ಪರಿಷತ್ತು ಅಪ್‌ಡೇಟ್ ಆಗಬೇಕಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕಳೆದ ಬಾರಿ ರಾಯಚೂರಿನಲ್ಲಿ ನಡೆದ 82ನೇ ಸಾಹಿತ್ಯ ಸಮ್ಮೇಳನದಲ್ಲೇ ಈ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿದ್ದವು. ಬಹುಶಃ 83ನೇ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನದ ಸ್ವಾಗತ ಮತ್ತು ಪ್ರಚಾರ ಸಮಿತಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಬಹುದು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲಾಗದ ನಮ್ಮದೇ ಸುತ್ತಮುತ್ತಲ ಜಿಲ್ಲೆಗಳ,
ರಾಜ್ಯಗಳ ಕನ್ನಡಿಗರು ಸೇರಿದಂತೆ ಸಾಗರಾಚೆಗೆ ಇರುವ ಕನ್ನಡಿಗರಿಗೆ ಸಮ್ಮೇಳನದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವಿವಿಧ ಗೋಷ್ಠಿಗಳನ್ನು ನೇರ ಪ್ರಸಾರದಲ್ಲಿ ನೋಡಲು ಅನುಕೂಲ ಕಲ್ಪಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದ್ದು, ಈ ಬಾರಿಯೂ ಹೊರನಾಡು, ವಿದೇಶಗಳಲ್ಲಿರುವ ಕನ್ನಡಿಗರು ಅವಕಾಶ ವಂಚಿತರಾಗುತ್ತಿರುವುದು ವಿಪರ್ಯಾಸವೆನ್ನಬಹುದು. ದಾಖಲೀಕರಣ: ಪ್ರಸ್ತುತ ರಾಷ್ಟ್ರಕವಿ ಕುವೆಂಪು ಮುಖ್ಯವೇದಿಕೆ
ಕಾರ್ಯಕ್ರಮ ಸೇರಿ ವಿವಿಧ ಗೋಷ್ಠಿಗಳನ್ನು ವೇದಿಕೆ ಸುತ್ತಮುತ್ತ ಅಳವಡಿಸಲಾಗುತ್ತಿರುವ ಸುಮಾರು 13ರಿಂದ 20 ಎಲೆಕ್ಟ್ರಾನಿಕ್ ಪರದೆಗಳಲ್ಲಿ ನೇರವಾಗಿ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮ್ಮೇಳನದ ಪ್ರತಿಯೊಂದು ಕಾರ್ಯಕ್ರಮವನ್ನು ದಾಖಲು ಮಾಡಲು ಯೋಜನೆ ರೂಪಿಸಿದ್ದು, ಈಗಾಗಲೇ ಅದಕ್ಕಾಗಿ ಹಲವು ವಿಡಿಯೋಗ್ರಾಫರ್‌ಗಳನ್ನು, ಛಾಯಾಚಿತ್ರಗಾರರನ್ನು
ನೇಮಿಸಲಾಗಿದೆ. ಗೋಷ್ಠಿ, ಊಟ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವೇದಿಕೆ ಕಾರ್ಯಕ್ರಮ ಎಲ್ಲವೂ ದಾಖಲುಗೊಳ್ಳಲಿದೆ.
ಸಾಂಪ್ರದಾಯಿಕ ಶಿಷ್ಠಾಚಾರ?: ಬೆಂಗಳೂರಿನಲ್ಲಿ ಪ್ರತಿದಿನವೂ ಹೊಸ ಹೊಸ ಕೃತಿಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಇತ್ತೀಚಿನ ಟ್ರೆಂಡ್ ಹೇಗಾಗಿದೆಯೆಂದರೆ, ಕೃತಿ ಲೋಕಾರ್ಪಣೆ ಕಾರ್ಯಕ್ರಮವೂ ಕೂಡ ಕ್ಷಣದಲ್ಲಿ ಪೇಸ್‌ಬುಕ್‌ನಲ್ಲಿ ನೇರಪ್ರಸಾರ(ಲೈವ್)ದಲ್ಲಿ ಬಿಡುಗಡೆಯಾಗುತ್ತದೆ. ಕೆಲವು ಕಡೆಗಳಲ್ಲಿ ಯೂಟೂಬ್‌ಗಳಲ್ಲೂ ಕಾರ್ಯಕ್ರಮದ ವಿಡಿಯೋ ಸಿಗುವಂತೆ ಆಯೋಜಕರು, ಲೇಖಕರು ಮಾಡುವುದಲ್ಲದೆ, ಅದರ ಸಂಪರ್ಕವನ್ನು (ಲಿಂಕ್) ಕಳುಹಿಸಿ ಕೊಟ್ಟು, ಅದು ವೈರಲ್ ಆಗುವಂತೆ ಮಾಡುತ್ತಾರೆ. ಆದರೆ, ಸಾಮಾಜಿಕ ಜಾಲತಾಣಗಳು ಮಿಂಚಿನಂತೆ ಜಗತ್ ವ್ಯಾಪಿ ಹರಿದಾಡುತ್ತಿರುವಾಗ ಅಖೀಲ ಭಾರತ ಕನ್ನಡ ಸಾಹತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ನಲ್ಲಿ ನೇರವಾಗಿ ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾತ್ರ ಮಾಡಿಲ್ಲ. ಕಸಾಪ ಕೇವಲ ಪುಸ್ತಕಗಳನ್ನು ಮುದ್ರಿಸುವುದು, ವರ್ಷಕ್ಕೊಂದು ಸಮ್ಮೇಳನ ಮಾಡಿ ಸುಮ್ಮನಿರುವುದನ್ನೇ ತನ್ನ ಸಾಂಪ್ರದಾಯಿಕ ಶಿಷ್ಠಾಚಾರವೆಂದು ಕೈಕಟ್ಟಿ ಕುಳಿತುಕೊಂಡಿದೆ ಎಂಬ ಸಂಶಯ ನನಗಿದೆ. ಇಲ್ಲದಿದ್ದರೆ, ಪ್ರತಿ ಸಮ್ಮೇಳನವನ್ನು ತಂತ್ರಜಾnನ ಬಳಕೆ ಮಾಡಿಕೊಂಡು ಗಡಿನಾಡು, ಹೊರನಾಡು, ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರಿಗೂ ಅಕ್ಷರ ಜಾತ್ರೆಯ ಸವಿ ಉಣಿಸಬಹುದಿತ್ತು.
ಆದರೆ, ಸಾಮಾಜಿಕ ಜಾಲತಾಣವನ್ನು ಈ ಸಮ್ಮೇಳನದಲ್ಲೂ ಬಳಕೆ ಮಾಡಿಕೊಳ್ಳದಿರುವುದು ಬೇಸರ ತರಿಸುತ್ತಿದೆ ಎನ್ನುತ್ತಾರೆ ಸಮ್ಮೇಳನಕ್ಕೆ ದೂರದ ರಾಯಚೂರಿನಿಂದ ಆಗಮಿಸಿರುವ ರೇವಣ್ಣಬಸಪ್ಪಕೆಂಗಣ್ಣವರ್.
ಸಮ್ಮೇಳನದ ಅಷ್ಟೂ ಜವಾಬ್ದಾರಿಯನ್ನು ಸ್ವಾಗತ ಸಮಿತಿ ನೋಡಿಕೊಳ್ಳುತ್ತಿದೆ. ಕಾರ್ಯಕ್ರಮಗಳನ್ನು ದಾಖಲೀಕರಿಸಲು ವಿಡಿಯೋ, ಛಾಯಾಚಿತ್ರ ತೆಗೆಯಲು ಸೂಚಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಮ್ಮೇಳನದ ನೇರಪ್ರಸಾರ ಮಾಡುವ ವ್ಯವಸ್ಥೆ ಬಗ್ಗೆ ನನಗೆ ತಿಳಿಯದು.
●ಡಾ.ಮನುಬಳಿಗಾರ್, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು
ಮಾಹಿತಿ-ತಂತ್ರಜಾnನ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ಕನ್ನಡಿಗರೇ ಗುರುಗಳು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕನ್ನಡ ನುಡಿ ಹಬ್ಬದ ಕುರಿತು ಚರ್ಚೆಯಾಗುತ್ತಿಲ್ಲ. ಇನ್ನು ನೇರ ಪ್ರಸಾರವಂತೂ ಕನಸಿನ ಮಾತು. ಕನ್ನಡಿಗರು ಅಪ್‌ಡೇಟ್ ಆಗಬೇಕು. ಕನ್ನಡವನ್ನು ಅಪ್‌ಡೇಟ್ ಮಾಡಬೇಕು.
●ಡಾ.ನಿರಂಜನ್ ಕುಮಾರ್, ಎಂಜಿನಿಯರ್, ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.