ತುಳಿತಕ್ಕೊಳಗಾದವರ ಪ್ರೀತಿಯ ಕಥೆ-ವ್ಯಥೆ!
Team Udayavani, Nov 24, 2017, 11:47 AM IST
ಕನ್ನಡದಲ್ಲಿ ನೈಜ ಘಟನೆಯ ಚಿತ್ರಗಳಿಗೇನೂ ಕೊರತೆ ಇಲ್ಲ. ಆ ಸಾಲಿಗೆ “ಲವ್ ಯು 2′ ಚಿತ್ರವೂ ಸೇರಿದೆ. 2009ರಲ್ಲಿ ಮಂಡ್ಯದಲ್ಲೊಂದು ನಡೆದ ಘಟನೆಯೇ ಈ ಚಿತ್ರದ ಕಥಾವಸ್ತು. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಯುವ ಜನಾಂಗದ ನೈಜ ಘಟನೆ ಬಗ್ಗೆ ತಿಳಿದುಕೊಂಡ ಚಿತ್ರತಂಡ, ಆ ಕುಟುಂಬವನ್ನು ಸಂಪರ್ಕಿಸಿ, ಅವರ ಅನುಮತಿ ಪಡೆದು “ಲವ್ ಯು 2′ ಚಿತ್ರ ಮಾಡಿದೆ. ಅಂದಹಾಗೆ, ಈ ಚಿತ್ರಕ್ಕೆ ಮಹೇಶ್ ನಿರ್ದೇಶಕರು.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಪ್ರೇಮ್ ಕಹಾನಿ. ಇಬ್ಬರು ಹುಡುಗರಿಗೆ ಒಬ್ಬ ಹುಡುಗಿ ಪರಿಚಯವಾಗಿ, ಆ ಪರಿಚಯ ಮೂಲಕ ಗೆಳೆತನ ಬೆಳೆದು, ಆ ಗೆಳೆತನ ಪ್ರೀತಿಗೆ ತಿರುಗಿ, ಆ ಇಬ್ಬರ ಪೈಕಿ ಯಾರಿಗೆ ಆ ಪ್ರೀತಿ ಒಲಿಯುತ್ತೆ ಅನ್ನೋದು ಕಥೆ. ಇಲ್ಲಿ ಲವ್‌ಸ್ಟೋರಿ ಇದ್ದರೂ, ಹೊಸ ನಿರೂಪಣೆಯೊಂದಿಗೆ ಚಿತ್ರ ಸಾಗಲಿದೆಯಂತೆ.
ಕೋಲಾರ, ಮಡಿಕೇರಿ, ಸೋಮವಾರಪೇಟೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಾಹಸ ಕಲಾವಿದ ದಾಸ್ ಅವರ ಪುತ್ರ ಪವನ್‌ಕುಮಾರ್ ನಿರ್ಮಾಣದ ಜೊತೆಗೆ ನಾಯಕರಾಗಿಯೂ ಇಲ್ಲಿ ನಟಿಸಿದ್ದಾರೆ. ಅವರ ಜತೆಗೆ ರಘುಭಟ್ ಎಂಬ ಮತ್ತೂಬ್ಬ ನಾಯಕ ವೈದ್ಯರಾಗಿ ನಟಿಸಿದ್ದಾರೆ. ಇವರಿಗೆ ಕೀರ್ತಿಲಕ್ಷ್ಮೀ ನಾಯಕಿ. ಗಂಧರ್ವ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಚಿತ್ರದ ಆಡಿಯೋ ಸಿಡಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಸಹ ನಿರ್ಮಾಪಕರಾದ ನಿವೇದಿತಾ ಶಿವರಾಜ್, ಜಯಲಕ್ಷೀ ನಟರಾಜ್, ರೇಣುಕಾ ಲಿಂಗರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.