ರಾಜ್ಯದ ವಿದ್ಯುಚ್ಛಕ್ತಿ ಸಾಮರ್ಥ್ಯ 20,000 ಮೆವ್ಯಾ
Team Udayavani, Nov 24, 2017, 1:08 PM IST
ಧಾರವಾಡ: ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದಾಗ 14 ಸಾವಿರ ಮೆ.ವ್ಯಾ.ನಷ್ಟು ವಿದ್ಯುತ್ ಶಕ್ತಿ ಸಾಮರ್ಥಯ ಹೊಂದಿದ್ದ ರಾಜ್ಯವು ಇದೀಗ ನಾಲ್ಕೂವರೆ ವರ್ಷದಲ್ಲಿ 20 ಸಾವಿರ ಮೆ.ವ್ಯಾ. ಸಾಮರ್ಥಯದ ಗುರಿ ಮುಟ್ಟಲಾಗಿದೆ ಎಂದು ರಾಜ್ಯ ಇಂಧನ ಇಲಾಖೆ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ತಾಲೂಕಿನ ಶೆಡಬಾಳ (ಗರಗ) ಗ್ರಾಮದಲ್ಲಿ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದ ಶಂಕು ಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆ ವೇಳೆಗೆ 20 ಸಾವಿರ ಮೆ.ವ್ಯಾ.ನಷ್ಟು ವಿದ್ಯುತ್ ಸಾಮರ್ಥಯ ರಾಜ್ಯ ಹೊಂದಲಿದೆ ಎಂದರು.
ರಾಜ್ಯದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ 120 ತಾಲೂಕುಗಳನ್ನು ಆಯ್ಕೆ ಮಾಡಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಒಂದು ಸಾವಿರಕ್ಕೂ ಹೆಚ್ಚು ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ.
ರೈತರು ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದಿದ್ದರೆ, ಅವರು ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಬಹುದು. ಹೆಚ್ಚುವರಿ ವಿದ್ಯುತ್‌ನ್ನು ಕಂಪೆನಿಗೆ ಮಾರಾಟ ಮಾಡಿ ಆರ್ಥಿಕವಾಗಿ ಸಬಲರಾಗಬಹುದು ಎಂದರು. ಹಗಲು ಹೊತ್ತು ವಿದ್ಯುತ್ ಕೊಡಬೇಕೆಂಬ ಬೇಡಿಕೆ ಇದ್ದು, ಇದು ಎಲ್ಲ ರೈತರ ಮೂಲಭೂತ ಹಕ್ಕು, ಬೇಡಿಕೆಯೂ ಆಗಿದೆ.
ಹಗಲು ಹೊತ್ತು ವಿದ್ಯುತ್ ಕೊಡುವ ಸಲುವಾಗಿ ಸೋಲಾರ್ ಪಾರ್ಕ್ ಯೋಜನೆ ಜಾರಿ ಮಾಡಲಾಗಿದೆ. ರೈತ ತನ್ನ ಭೂಮಿಯಲ್ಲಿ ಬೆಳೆ ಬೆಳೆಯದೇ ಹೋದರೂ ವಿದ್ಯುತ್ ಆದರೂ ಉತ್ಪಾದಿಸಲಿ ಎಂಬ ಯೋಜನೆ ಇದಾಗಿದೆ. ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಕರ್ನಾಟಕದಲ್ಲಿ ಆಗುತ್ತಿದ್ದು, ಇದರಿಂದ 500 ಮೆ.ವ್ಯಾ.ವಿದ್ಯುತ್ ದೊರೆಯಲಿದ್ದು, ಸೋಲಾರ್ ಪಾರ್ಕ್ ಯೋಜನೆಯಿಂದ ಒಟ್ಟು 2 ಸಾವಿರ ಮೆ.ವ್ಯಾ.ನಷ್ಟು ಸಾಮರ್ಥಯ ಹೆಚ್ಚಲಿದೆ ಎಂದರು.
ತಾಲೂಕಿಗೊಂದರಂತೆ ಟ್ರಾನ್ಸ್‌ಫಾರ್ಮರ್ ಬ್ಯಾಂಕ್: ನಾನೂ ಕೂಡ ರೈತನ ಮಗ. ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ನಮ್ಮ ತಂದೆ ವ್ಯವಸಾಯ ಮಾಡುತ್ತಿದ್ದು, ಹೀಗಾಗಿ ರೈತರ ಕಷ್ಟಗಳು ನನಗೂ ಗೊತ್ತಿದೆ. ಅದೇ ಕಾರಣಕ್ಕೆ ಅಕ್ರಮ-ಸಕ್ರಮ ಯೋಜನೆ ಅಡಿ ರೈತರ 5 ಲಕ್ಷ ಅಕ್ರಮ ಪಂಪಸೆಟ್‌ಗಳನ್ನು ಸಕ್ರಮ ಮಾಡುವ ಕೆಲಸ ಮಾಡುತ್ತಿದೆ.
ಇದಲ್ಲದೇ ಪ್ರತಿ ತಾಲೂಕಿನಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಈಗಾಗಲೇ 140 ದುರಸ್ತಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಇದರ ಜೊತೆಗೆ ಪ್ರತಿ ತಾಲೂಕಿಗೆ ಒಂದರಂತೆ ಟ್ರಾನ್ ಫಾರ್ಮರ್ ಬ್ಯಾಂಕ್ ಆರಂಭಿಸಲಾಗುವುದು ಎಂದರು.
ಶೆಟ್ಟರ್‌ಗೆ ಪ್ರಶ್ನಿಸುವ ಶಕ್ತಿಯಿಲ್ಲ: ಬಿಜೆಪಿ ಪರಿವರ್ತನಾ ರ್ಯಾಲಿ ಮಾಡುತ್ತಿದ್ದು, ಇದರಿಂದ ಪರಿವರ್ತನೆ ಆಗಲಿ. ಅದರಿಂದ ನಮಗೇನೂ ಬೇಜಾರಿಲ್ಲ. ಅವರೆಲ್ಲ ಪರಿವರ್ತನೆ ಮಾಡಿಕೊಳ್ಳಲೇಬೇಕು ಎಂದ ಸಚಿವರು, ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರಿಗೆ ಸರಕಾರವನ್ನು ಪ್ರಶ್ನಿಸುವ ಶಕ್ತಿಯಿಲ್ಲ.
ವಿಪಕ್ಷದಲ್ಲಿ ಇದ್ದುಕೊಂಡು ಸದನದಲ್ಲಿ ಸರಕಾರದ ತಪ್ಪು, ಸವಾಲು ಹಾಕುವ ಕೆಲಸ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂಧನ ಇಲಾಖೆಯಲ್ಲಿ ಕಲ್ಲಿದ್ದಲು ಹಗರಣ ಆಗಿದೆ ಎಂಬುದಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸದನದಲ್ಲಿ ವಿರೋಧ ಪಕ್ಷದ ಬಿಜೆಪಿಯವರು ಈವರೆಗೂ ಬಾಯಿ ತೆಗೆದಿಲ್ಲ.
ಈ ರೀತಿಯ ಆಧಾರ ರಹಿತ ಮಾತುಗಳನ್ನು ಆಡಬೇಡಿ ಎಂದು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ತಾಪಂ ಅಧ್ಯಕ್ಷ ಮಲ್ಲನಗೌಡ ಭಾವಿಕಟ್ಟಿ, ಹೆಸ್ಕಾಂ ಎಂಡಿ ಜಾವೇದ ಅಖ್ತರ್, ಬಾಗಲಕೋಟೆ ವಿಭಾಗದ ಮುಖ್ಯ ಎಂಜನಿಯರ್ ನೀಲಾ ನಾಯ್ಕ, ರಮೇಶ ಬೆಂಡಿಗೇರಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.