ಸಂತೆಯಲ್ಲಿ ಪಾಕ ಪ್ರಿಯರಿಗೆ ರಸದೌತಣ
Team Udayavani, Nov 25, 2017, 8:27 AM IST
ಬೆಂಗಳೂರು: ಆಹಾರ ಪ್ರಿಯರಿಗೆ ಒಂದೇ ಸೂರಿನಡಿಯಲ್ಲಿ ಸಾವಿರಾರು ಬಗೆಯ ತಿಂಡಿ-ತಿನಿಸು ಉಣಬಡಿಸುವ “ಸೂಪರ್ ರುಚೀಸ್’ ಅಂತಾರಾಷ್ಟ್ರೀಯ ಬೃಹತ್ ಸಸ್ಯಹಾರಿ ಆಹಾರ ಸಂತೆಗೆ ಶುಕ್ರವಾರ ಚಾಲನೆ ಸಿಕ್ಕಿದೆ.
ನಗರದ ಫ್ರಿಡಂ ಪಾರ್ಕ್ನಲ್ಲಿ ರೆಡ್ ರಿಬ್ಬನ್ ಸಂಸ್ಥೆ ಆಯೋಜಿಸಿರುವ ಮೂರು ದಿನಗಳ ಬೃಹತ್ ಸಸ್ಯಹಾರಿ ಆಹಾರ ಸಂತೆ ನ.26ರವರೆಗೆ ನಡೆಯಲಿದೆ. ಸಂತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ತಿನಿಸುಗಳು ಸೇರಿದಂತೆ, ದೇಶದ ವಿವಿಧ
ರಾಜ್ಯಗಳ ಹಾಗೂ ವಿದೇಶಗಳ ತಿಂಡಿ-ತಿನಿಸುಗಳು ಆಹಾರ ಪ್ರಿಯರಿಗೆ ಮತ್ತಷ್ಟು ರುಚಿ ನೀಡಲಿವೆ. ಆಹಾರ ಸಂತೆಯಲ್ಲಿ 100ಕ್ಕೂ ಅಧಿಕ ಮಳಿಗೆಗಳಿದ್ದು, ಸಾವಿರಕ್ಕೂ ಹೆಚ್ಚು ಬಗೆಯ ತಿಂಡಿ-ತಿನಿಸುಗಳು ಸಾರ್ವಜನಿಕರಿಗೆ ದೊರೆಯಲಿವೆ. ಗ್ರಾಮೀಣ, ಸಾಂಪ್ರದಾಯಿಕ, ಪಾಶ್ಚಾತ್ಯ, ಸಿರಿಧ್ಯಾನದಿಂದ ತಯಾರಿಸಿದ, ಅಕ್ಕಿ, ರಾಗಿ, ಜೋಳದ ರೊಟ್ಟಿ, ಪಿಜ್ಜಾ, ಐಸ್ಕ್ರೀಂ ಹೀಗೆ
ಹಲವು ಬಗೆಯ ತಿನಿಸುಗಳನ್ನು ಸಂತೆಯ ವೈಶಿಷ್ಟತೆಯನ್ನು ಹೆಚ್ಚಿಸಿದ್ದು, ರಾಜಧಾನಿಯ ಕೆಲವೊಂದು ಹೆಸರಾಂತ ಹೋಟೆಲ್ಗಳು ಸಹ ಸಂತೆಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.
ಸಂತೆಯಲ್ಲಿ ಕರ್ನಾಟಕ, ಗುಜರಾತ್, ಆಂಧ್ರ, ತೆಲಂಗಾಣ, ದೆಹಲಿ ಸೇರಿದಂತೆ ನಾನಾ ರಾಜ್ಯಗಳಿಂದ ಹಾಗೂ ವಿಯೆಟ್ನಾಂ ದೇಶದಿಂದಲೂ ತಂಡವೊಂದು ಮಳಿಗೆ ತೆರೆದಿದೆ. ಸಂತೆಗೆ ಭೇಟಿ ನೀಡಿದರೆ ವಿಶಿಷ್ಠ ಬಗೆಯ ಭಕ್ಷ್ಯಗಳನ್ನು ಸವಿಯಬಹುದಾಗಿದೆ. ವಿಯೆಟ್ನಾಂ ತಂಡದ ಸುಮಾರು 20 ಬಗೆಯ ಕುರುಕಲು ತಿಂಡಿಗಳು(ಜಂಕ್ಫುಡ್) ವಿಶೇಷವಾಗಿದ್ದು, ಸಂತೆಯಲ್ಲಿ ತೆರೆದಿರುವ ವಿವಿಧ
ಮಳಿಗೆಗಳಲ್ಲಿ 30ಕ್ಕೂ ಹೆಚ್ಚು ಬಗೆಯ ಕಾಫಿ, ಹತ್ತಾರು ಬಗೆಯ ಐಸ್ಕ್ರೀಂ, ಚಾಕೋಲೆಟ್, ಪಾನಿಪೂರಿ, ಹೋಳಿಗೆ, ಮಡಿಕೆ ರೈಸ್ ಬಿರಿಯಾನಿ, ಮಲೆನಾಡಿನ ಕಶಾಯ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹೀಗೆ ಹತ್ತು ಹಲವು ಬಗೆಯ ತಿನಿಸುಗಳು ನಾಲಿಗೆಗೆ ರುಚಿ ನೀಡುತ್ತವೆ.
ಜ್ಯೂಸ್ ಮೇಲೆ ನಿಮ್ಮ ಫೋಟೊ!
ಬೆಂಗಳೂರಿನ ಕೋರಮಂಗಲದ ಸೆಲ್ಫಿ ಕೆಫೆ ಮಳಿಗೆಯು ಸಂತೆಗೆ ಬರುವ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಮಳಿಗೆಯ ಮುಂದಿರುವ ಕ್ಯಾಮೆರಾ ಮುಂದೆ ನಿಂತು ಗ್ರಾಹಕರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಕೇವಲ 30 ಸೆಕೆಂಡ್ನಲ್ಲಿ ತಾವು ಬಯಸುವ ಜ್ಯೂಸ್ ಮೇಲೆ ಆ ಫೋಟೋ ಪದರ ಬರಲಿವೆ. ಇದು ಹಾಂಕಾಂಗ್ ಮೂಲದ ತಂತ್ರಜ್ಞಾನವಾಗಿದ್ದು, ಹಣ್ಣುಗಳಿಂದ ತಯಾರಿಸಿದ ಕ್ರೀಮ್ನಿಂದ ಈ ರೀತಿಯ ಫೋಟೋ ಮುದ್ರಣವಾಗಲಿದ್ದು, ಜತೆಗೆ ಆ ಪದರ ತಿನ್ನಲು ಸಹ ಯೋಗ್ಯವಾಗಿದೆ ಎಂದು ಮಳಿಗೆದಾರರು ತಿಳಿಸಿದ್ದಾರೆ.
50 ರೂ. ಪ್ರವೇಶ ಶುಲ್ಕ: ಸಾರ್ವಜನಿಕರ ಬೇಸರ
ಆಹಾರ ಸಂತೆಯಲ್ಲಿ ಭಾಗಿಯಾಗಲು ಪ್ರತಿ ವ್ಯಕ್ತಿಗೆ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಇಂತಹ ಸಂತೆಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಆದರೆ, ಫ್ರಿಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಸಂತೆ ಪ್ರವೇಶಕ್ಕೆ ಪ್ರತಿ ವ್ಯಕ್ತಿಗೆ 50 ರೂ. ನಿಗದಿಪಡಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.