ಎರಡು ಕೆರೆಗಳಿಗೆ ಮರುಜೀವ
Team Udayavani, Nov 25, 2017, 12:12 PM IST
ಮಹಾನಗರ: ಹಲವು ವರ್ಷಗಳಿಂದ ಪಾಳುಬಿದ್ದಿದ್ದ ನಗರದ ಎರಡು ಕೆರೆಗಳು ಈಗ ಮೈದುಂಬಿಕೊಂಡು ಸುತ್ತಮುತ್ತಲಿನ ಸುಮಾರು 500 ಮನೆಗಳಿಗೆ ‘ಜಲಜೀವ’ ಒದಗಿಸಲು ಸಿದ್ಧವಾಗಿವೆ. ಜತೆಗೆ ಸಂಜೆಯ ವಿಹಾರ ತಾಣವಾಗಿಯೂ ಆಕರ್ಷಣೆ ಪಡೆಯಲಿದೆ.
ಒಂದು ಕಾಲದಲ್ಲಿ ಪರಿಸರದ ಕೃಷಿಕರ ಬದುಕು ಹಸನಾಗಿಸಿದ್ದ ಜಪ್ಪಿನಮೊಗರು ಗ್ರಾಮದ ಶ್ರೀ ಕೋರ್ದಬ್ಬು ದೈವದ ನಾಗಸನ್ನಿಧಿ ಕೆರೆ ಮತ್ತು ಪಡ್ಡೆಯಿಕೆರೆಗಳು ಈಗ ಅಭಿವೃದ್ಧಿಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ. ಜಪ್ಪಿನಮೊಗರು ತಾರ್ದೊಲ್ಯ ಶ್ರೀ ಕೋರªಬ್ಬು ದೈವಸ್ಥಾನದ ನಾಗಸನ್ನಿಧಿ ಬಳಿಯ ಕೆರೆ, ಪಡ್ಡೆಯಿಕೆರೆಗಳಿಗೆ 300 ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಈ ಪರಿಸರ ಕೃಷಿ ಬದುಕಿನೊಂದಿಗೆ ಬೆಸೆದುಕೊಂಡಿತ್ತು.
ಆಗ ಇಡೀ ಪರಿಸರದ ಕೃಷಿ ಚಟುವಟಿಕೆ ಹಾಗೂ ಜನರ ಅಗತ್ಯಗಳಿಗೆ ನೀರುಣಿಸುತ್ತಿದ್ದುದು ಇದೇ ಕೆರೆಗಳು. ಕೃಷಿ ಬದುಕು ಮರೆಯಾಗಿ ಪರಿಸರ ನಗರಾಭಿ ಮುಖವಾಗಿ ತೆರೆದುಕೊಳ್ಳುತ್ತಿದ್ದಂತೆ ಎರಡೂ ಕೆರೆಗಳು ಜೀವಜಲವನ್ನು ಕಳೆದು ಕೊಳ್ಳ ತೊಡಗಿದವು. ದೈವಸ್ಥಾನಕ್ಕೂ ಬಾವಿ ನೀರನ್ನು ಆಶ್ರಯಿಸಬೇಕಾಯಿತು. ಹೀಗಿದ್ದಾಗ ಕೆರೆ ಅಭಿವೃದ್ಧಿಪಡಿಸುವ ಚಿಂತನೆ ಮೊಳಕೆಯೊಡೆದದ್ದು, 12 ವರ್ಷಗಳ ಹಿಂದೆ ನಡೆದ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ. ಅಷ್ಟ ಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಕೆರೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಚಿಂತಿಸಲಾಯಿತಾದರೂ ಆರ್ಥಿಕ ತೊಂದರೆಯಿಂದಾಗಿ ಸಾಧ್ಯವಾಗಿರಲಿಲ್ಲ. ಈಗ ತಾರ್ದೊಲ್ಯ ಪರಿಸರದವರ ಕನಸಿನಂತೆ ಶಾಸಕ ಜೆ. ಆರ್. ಲೋಬೋ ಅವರ ಸಹಕಾರದೊಂದಿಗೆ ಕೆರೆ ಅಭಿವೃದ್ಧಿಗೊಂಡಿದೆ’ ಎಂದು ತಾರ್ದೊಲ್ಯ ಶ್ರೀ ಕೋರªಬ್ಬು ಸೇವಾ ಸಮಿತಿ ಕಾರ್ಯದರ್ಶಿ ಯು. ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.
50 ಲಕ್ಷ ರೂ. ವೆಚ್ಚ
ಪಾಳುಬಿದ್ದ ಕೆರೆ ಬಗ್ಗೆ ತಾರ್ದೊಲ್ಯ ಶ್ರೀ ಕೋರ್ದಬ್ಬು ಸೇವಾ ಸಮಿತಿ ಮತ್ತು ಊರಿನ ಪ್ರಮುಖರು ಶಾಸಕ ಲೋಬೋಗೆ ತಿಳಿಸಿ, ಅಭಿವೃದ್ಧಿಗೆ ಸಹಕರಿಸುವಂತೆ ಕೇಳಿ ಕೊಂಡಿದ್ದರು. ತತ್‌ಕ್ಷಣ ಸ್ಪಂದಿಸಿದ ಶಾಸಕರು, ಸರಕಾರದ ಕೆರೆ ಅಭಿವೃದ್ಧಿ, ಸಣ್ಣ ನೀರಾವರಿ ಯೋಜನೆಯಡಿ 50 ಲಕ್ಷ ರೂ. ಅನುದಾನ ನೀಡಿದ್ದಾರೆ. ಸುಮಾರು 6 ತಿಂಗಳಿನಿಂದ ಕೆರೆಗಳ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ನ. 26ರಿಂದ ಕೆರೆಗಳನ್ನು ಜನರ ಉಪಯೋಗಕ್ಕೆ ನೀಡಲಾಗುತ್ತಿದ್ದು, ದೈವಸ್ಥಾನ ಹಾಗೂ ಸುತ್ತಮುತ್ತಲಿನ ಸುಮಾರು 500 ಮನೆಗಳಿಗೆ ಇವು ನೀರುಣಿಸಲಿವೆ.
ಸುತ್ತಲೂ ವಾಕಿಂಗ್ ಟ್ರ್ಯಾಕ್
ಜನರ ದಾಹ ತಣಿಸುವುದರೊಂದಿಗೆ ಸಂಬಂಧ ಬೆಸೆಯುವುದಕ್ಕೂ ಕೆರೆಗಳು ಸಾಕ್ಷಿಯಾಗಬೇಕು ಎಂಬ ನಿಟ್ಟಿನಲ್ಲಿ ಕೆರೆಯ ಸುತ್ತಲೂ ವಾಕಿಂಗ್ ಟ್ರಾಫಿಕ್ ನಿರ್ಮಾಣಗೊಳ್ಳುತ್ತಿದೆ. ಪಾಲಿಕೆಯ ಅನುದಾನದೊಂದಿಗೆ ಬೆಂಚ್‌ಗಳನ್ನು ಅಳವಡಿಸುವ ಯೋಜನೆಯಿದೆ. ಲೈಟಿಂಗ್ಸ್ ಅಳವಡಿಕೆ ಮತ್ತು ಗಿಡಗಳನ್ನು ನೆಟ್ಟು ಸಣ್ಣ ಪಾರ್ಕ್ ಮಾದರಿಯಲ್ಲಿ ದಡಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಸಂಜೆಯ ಹೊತ್ತಿನಲ್ಲಿ ನೀರಿನ ತಂಪಿನೊಂದಿಗೆ ಆಹ್ಲಾದಕರ ವಾತಾವರಣವನ್ನು ಇದು ಒದಗಿಸಲಿದೆ ಎಂದು ಕಾರ್ಪೋರೇಟರ್ ಪ್ರವೀಣ್‌ಚಂದ್ರ ಆಳ್ವ ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ. ಸುಮಾರು 70 ಸೆಂಟ್ಸ್ ಜಾಗದಲ್ಲಿ ಕೆರೆ ಹೊಸ ರೂಪದೊಂದಿಗೆ ನಿರ್ಮಾಣಗೊಳ್ಳುತ್ತಿದೆ.
ಅಂತರ್ಜಲ ವೃದ್ಧಿ
ಕೆರೆಯ ಪುನರ್ ನಿರ್ಮಾಣ ಕಾಮಗಾರಿಗೂ ಮುನ್ನ ಇದರಲ್ಲಿ ಕೆಸರು ಮಿಶ್ರಿತ ನೀರು, ಚರಂಡಿ ನೀರು ತುಂಬಿ ಕಲುಷಿತಗೊಂಡು ಕಪ್ಪಾಗಿ ಕಾಣುತ್ತಿತ್ತು. ಈಗ ಎರಡೂ ಕೆರೆಗಳಿಗೆ ತಡೆಗೋಡೆ ನಿರ್ಮಿಸಿ ನೀರು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಚರಂಡಿ ನೀರು ಒಳನುಗ್ಗದಂತೆ ತಡೆಯಲಾಗಿದೆ. ನಾಗಸನ್ನಿಧಿಯ ಕೆರೆ 11 ಮೀ. ಅಗಲ ಮತ್ತು 11 ಮೀ. ಉದ್ದ ಹೊಂದಿದೆ. ಇದರಲ್ಲಿ 22 ಅಡಿಯಷ್ಟು ನೀರಿದೆ. ಪಡ್ಡೆಯಿಕೆರೆಯು 17 ಮೀ. ಉದ್ದ ಮತ್ತು 15 ಮೀ. ಅಗಲವಿದೆ. ಇದರಲ್ಲಿ 20 ಅಡಿಯಷ್ಟು ನೀರು ತುಂಬಿಕೊಂಡಿದೆ. ಒಟ್ಟು ಕೆರೆ ಅಭಿವೃದ್ಧಿಯಿಂದಾಗಿ ಈ ಭಾಗದ ಸುಮಾರು 15 ಎಕರೆ ಪ್ರದೇಶದಲ್ಲಿ ಅಂತರ್ಜಲ ಮಟ್ಟವೂ ವೃದ್ಧಿಗೊಳ್ಳಲಿದೆ.
ಸಮಸ್ಯೆಗೆ ಪರಿಹಾರ
ಈ ಪರಿಸರದ ಜನತೆ ಮತ್ತು ಶಾಸಕ ಲೋಬೊ ಕನಸಿನಂತೆ ಉಭಯ ಕೆರೆಗಳು ಹೊಸತನದೊಂದಿಗೆ ನಿರ್ಮಾಣವಾಗಿದೆ. ಈಗಾಗಲೇ ಮಂಗಳೂರು ನೀರಿನ ಅಭಾವ ಎದುರಿಸುತ್ತಿದ್ದು, ಕುಡಿಯುವ ನೀರಿಗೆ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಈಗ ಕೆರೆ ಅಭಿವೃದ್ಧಿ ಮಾಡಿರುವುದರಿಂದ ತಾರ್ದೊಲ್ಯ ಜನತೆಗೆ ಈ ಬೇಸಗೆಯಲ್ಲಿ ನೀರಿನ ಸಮಸ್ಯೆ ಬಾರದು. ಇಲ್ಲಿನ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ.
-ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.