ಸಮ್ಮೇಳನದಲ್ಲಿ ಬಾಯಿಚಪ್ಪರಿಸಿದ ಸಾಹಿತ್ಯಾಸಕ್ತರು

Team Udayavani, Nov 25, 2017, 12:19 PM IST

m2-sam-uta.jpg

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಅಕ್ಷರಜಾತ್ರೆ ಕನ್ನಡದ ಕಂಪು ಪಸರಿಸುವ ಜತೆಗೆ, 3 ದಿನಗಳ ಕಾಲ ರುಚಿಕರ ಆಹಾರ ಪದಾರ್ಥಗಳು ರಾಜ್ಯದ ವಿವಿಧೆಡೆಗಳಿಂದ ಬಂದಿರುವ ಪ್ರತಿನಿಧಿಗಳು, ಕನ್ನಡ ಅಭಿಮಾನಿಗಳ ಬಾಯಿ ಚಪ್ಪರಿಸುವಂತೆ ಮಾಡಿದೆ.

ನಗರದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮೂರು ದಿನಗಳು ಅಂದಾಜು 6 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಹೀಗಾಗಿ ಸಮ್ಮೇಳನಕ್ಕೆಂದು ಆಗಮಿಸುವ ಗಣ್ಯರು, ಅತಿಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ರುಚಿ-ಶುಚಿಯಾದ ಊಟ, ತಿಂಡಿ ವ್ಯವಸ್ಥೆ ಮಾಡಲು ಸಮ್ಮೇಳನದ ಆಹಾರ ಸಮಿತಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಎಲ್ಲರಿಗೂ ಒಂದೇ ಮೆನು: ಬಹುತೇಕ ದೊಡ್ಡ ಸಮಾರಂಭಗಳಲ್ಲಿ ಗಣ್ಯರು, ಅತಿಥಿಗಳು, ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಇದಕ್ಕೆ ವಿರುದ್ಧವೆಂಬಂತೆ ಈ ಬಾರಿಯ ಅಕ್ಷರ ಜಾತ್ರೆಯಲ್ಲಿ ವಿವಿಧತೆಯಲ್ಲಿ ಏಕತೆ ಎಂಬಂತೆ ಎಲ್ಲರಿಗೂ ಒಂದೇ ಬಗೆಯ ಊಟ-ತಿಂಡಿ ವ್ಯವಸ್ಥೆ ಮಾಡಿರುವುದು ವಿಶೇಷ.

ಆದರೆ, ಊಟ-ತಿಂಡಿ ಹಂಚಿಕೆಯಲ್ಲಿ ಯಾವುದೇ ಗೊಂದಲಗಳು, ಪ್ರತಿಭಟನೆಗಳು ಆಗದಂತೆ ಮುನ್ನೆಚ್ಚರಿಕೆಯಾಗಿ 4 ಕಡೆ ವ್ಯವಸ್ಥೆ ಮಾಡಲಾಗಿದೆ.  ಸಾಹಿತಿಗಳು, ಆಹ್ವಾನಿತರು, ಗಣ್ಯರು, ಮಾಧ್ಯಮದವರು, ನೋಂದಾಯಿತರು ಹಾಗೂ ಸಾರ್ವಜನಿಕರಿಗೆ ಬೇರೆ ಬೇರೆ ಕಡೆ ಆಹಾರ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇದರ ನಿರ್ವಹಣೆಗಾಗಿ ಪ್ರತಿ ವಿಭಾಗಗಳಲ್ಲೂ ಅನೇಕ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.

ವ್ಯವಸ್ಥೆ ಉತ್ತಮವಾಗಿತ್ತು: ಸಮ್ಮೇಳನದ ಮೊದಲ ದಿನವಾದ ಶುಕ್ರವಾರದ ಊಟ-ತಿಂಡಿ ಹಂಚಿಕೆಯಲ್ಲಿ ಯಾವುದೇ ಗೊಂದಲಗಳು ಕಂಡುಬರಲಿಲ್ಲ. ಪ್ರಥಮ ದಿನದಂದು 8 ಸಾವಿರ ಮಂದಿ ಬೆಳಗಿನ ಉಪಹಾರ ಸೇವಿಸಿದರೆ. ಮಧ್ಯಾಹ್ನದ ಊಟದಲ್ಲಿ 10 ಸಾವಿರ ಹಾಗೂ ರಾತ್ರಿ ಊಟಕ್ಕೆ ಅಂದಾಜು 9 ಸಾವಿರ ಮಂದಿ ಭಾಗವಹಿಸಿದ್ದರು.

ಈ ಬಾರಿಯ ಆಹಾರ ನಿರ್ವಹಣೆಯನ್ನು ಬೆಂಗಳೂರಿನ ಉದಯ್‌ ಕೆಟರರ್ ವಹಿಸಿಕೊಂಡಿದ್ದು, ಅಡುಗೆ ವಿಭಾಗದಲ್ಲಿ 60 ಮಂದಿ, ಸರ್ವಿಸ್‌ ಮಾಡಲು 150 ಹಾಗೂ ಸ್ವತ್ಛತಾ ಕೆಲಸ ನಿರ್ವಹಿಸಲು 50 ಮಂದಿಯನ್ನು ನಿಯೋಜಿಸಲಾಗಿದೆ. ಹೀಗಾಗಿ ದಿನದ 3 ಹೊತ್ತು ಊಟ-ತಿಂಡಿ ಸೇವಿಸಿದ ಸಾರ್ವಜನಿಕರು, ಹೊರ ಜಿಲ್ಲೆಗಳ ಪ್ರತಿನಿಧಿಗಳು ಆಹಾರ ವ್ಯವಸ್ಥೆ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಂಗಲ್‌ ಸೂಪರ್‌, ವೆಜ್‌ ಬಿರಿಯಾನಿ, ಅಕ್ಕಿ ಪಾಯಸ ಬೊಂಬಾಟ್‌: ಸಮ್ಮೇಳನದ ಮೊದಲ ದಿನದಂದು ಬೆಳಗಿನ ಉಪಹಾರದಲ್ಲಿ ಸಿಹಿ ಪೊಂಗಲ್‌, ಖಾರ ಪೊಂಗಲ್‌, ಟೀ-ಕಾಫಿ ನೀಡಲಾಯಿತು. ಮಧ್ಯಾಹ್ನದ ಊಟಕ್ಕೆ ಪೂರಿ ಸಾಗು, ಕಜಾjಯ, ಮೆಂತ್ಯ ಸೊಪ್ಪಿನ ಬಾತ್‌, ಅನ್ನ ಸಂಬಾರ್‌, ಮೊಸರನ್ನ ಹಾಗೂ ಉಪ್ಪಿನಕಾಯಿ ನೀಡಿದರೆ, ರಾತ್ರಿ ಊಟಕ್ಕೆ ವೆಜ್‌ ಬಿರಿಯಾನಿ, ಅಕ್ಕಿ ಪಾಯಸ, ಅನ್ನ, ತಿಳಿಸಾರು, ಮೊಸರನ್ನ ಹಾಗೂ ಉಪ್ಪಿನಕಾಯಿ ನೀಡಲಾಯಿತು.       

ಇಂದಿನ ಹೊಟ್ಟೆಪಾಡು: 2ನೇ ದಿನವಾದ ನ.25ರಂದು ಬೆಳಗ್ಗಿನ ಉಪಹಾರದಲ್ಲಿ ಉಪ್ಪಿಟ್ಟು, ಕೇಸರಿಬಾತ್‌, ಮಸಾಲ ವಡೆ, ಟೀ-ಕಾಫಿ. ಮಧ್ಯಾಹ್ನದ ಊಟಕ್ಕೆ ಅಕ್ಕಿರೊಟ್ಟಿ, ಕಳ್ಳೆಹುಳಿ, ಹೋಳಿಗೆ, ತುಪ್ಪ, ಮೇಲುಕೋಟೆ ಪುಳಿಯೊಗರೆ, ಅನ್ನಸಾಂಬರ್‌, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಹಾಗೂ ರಾತ್ರಿ ಊಟದಲ್ಲಿ ಬಾದ್‌ ಶಾ, ವೆಜ್‌ಪಲಾವ್‌, ಅನ್ನ, ತಿಳಿಸಾರು, ಮೊಸರನ್ನ, ಉಪ್ಪಿನಕಾಯಿ ಇರಲಿದೆ. 

ಟಾಪ್ ನ್ಯೂಸ್

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.