ಬೆಳ್ಳಾರೆ: ಪದವಿಪೂರ್ವ ಕಾಲೇಜಿನ ಕೊಠಡಿ ಕಾಮಗಾರಿ ಸ್ಥಗಿತ
Team Udayavani, Nov 25, 2017, 4:13 PM IST
ಬೆಳ್ಳಾರೆ: ಇಲ್ಲಿಯ ಬೆಳ್ಳಾರೆ ಸರಕಾರಿ ಸಂಯುಕ್ತ ಪ.ಪೂ. ಕಾಲೇಜಿನ ಕಾಲೇಜು ವಿಭಾಗದ ಕೊಠಡಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. 2016ನೇ ಸಾಲಿನಲ್ಲಿ ಆರ್.ಐ.ಡಿ.ಎಫ್. 65 ಲಕ್ಷ ರೂ. ಅನುದಾನದಲ್ಲಿ ಪ.ಪೂ. ಕಾಲೇಜಿಗೆ ಎರಡು ತರಗತಿ ಕೋಣೆ ಮತ್ತು ಶೌಚಾಲಯ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಕೆ.ಆರ್.ಐ.ಡಿ.ಎಲ್. ಗುತ್ತಿಗೆ ವಹಿಸಿಕೊಂಡಿತ್ತು. ಈ ಕಾಮಗಾರಿ ಪ್ರಾರಂ ಭಿಸಿ 6 ತಿಂಗಳಲ್ಲಿ ಮುಗಿಸಿ ಕಾಲೇಜಿಗೆ ಹಸ್ತಾಂತರ ಮಾಡಬೇಕೆಂಬ ನಿಯಮ ಇದೆ. ಇದೀಗ ಕಾಮಗಾರಿ ನಿಲ್ಲಿಸಿ 1 ವರ್ಷ ಕಳೆಯಿತು. ತರಗತಿ ಕೊಠಡಿಯ ಫೌಂಡೇಶನ್ ಹಾಕಿ ಗೋಡೆ ನಿರ್ಮಾಣವಾಗಿ ಸ್ಲ್ಯಾಬ್ ನ ಕೆಲಸ ನಡೆದಿದೆ. ಉಳಿದ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಂಡು ಆರು ತಿಂಗಳುಗಳಲ್ಲಿ ನಮಗೆ ಹಸ್ತಾಂತರವಾಗಬಹುದು ಎಂಬ ಕಾಲೇಜಿನ ಶಿಕ್ಷಕರು ಕಾಲೇಜು ಅಭಿವೃದ್ಧಿ ಸಮಿತಿಯವರ ನಂಬಿಕೆ ಭರವಸೆ ಈಗ ಹುಸಿಯಾಗಿದೆ.
ಸ್ಥಳೀಯರ ಆಕ್ರೋಶ
ಗುತ್ತಿಗೆ ವಹಿಸಿಕೊಂಡ ಕೆ.ಆರ್.ಡಿ.ಎಲ್. ಸಿಬಂದಿ ಇತ್ತ ಕಾಲೇಜಿನತ್ತ ಬಾರದೆ ನಾಪತ್ತೆಯಾಗಿದ್ದಾರೆ. ಫೋನ್ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಇದರಿಂದ ಮುಖ್ಯ ಎಂಜಿನಿಯರ್, ಸಿಬಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಗತಿ ಕೊಠಡಿ ಸಮಸ್ಯೆ
ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶವನ್ನು ಕಾಯ್ದುಕೊಂಡು ಬರುತ್ತಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಇದರಿಂದ ಇಲ್ಲಿಯ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಳಿತುಕೊಳ್ಳಲು ಜಾಗದ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ಈಗೀರುವ ತರಗತಿ ಕೊಠಡಿ ನಾದುರಸ್ತಿಯಲ್ಲಿದೆ. ಇದರಿಂದ ಕಾಲೇಜಿಗೆ ತರಗತಿ ಕೋಣೆಯ ಅಗತ್ಯ ಹೆಚ್ಚಿದೆ.
ಗಮನಕ್ಕೆ ತರುವೆ
ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಸಂಬಂಧಪಟ್ಟರವರ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ.
– ಶಕುಂತಳಾ ನಾಗರಾಜ್,
ಅಧ್ಯಕ್ಷೆ, ಬೆಳ್ಳಾರೆ ಗ್ರಾ.ಪಂ.
ಅನುದಾನದ ಸಮಸ್ಯೆ
ಅನುದಾನ ಬಿಡುಗಡೆಯಾಗದಿರುವುದರಿಂದ ಕಾಮಗಾರಿ ನಡೆಸಲು ಸಮಸ್ಯೆಯಾಗಿದೆ.
– ಪಾಟೀಲ್,
ಕೆ.ಆರ್.ಐ.ಡಿ.ಎಲ್. ಎಂಜಿನಿಯರ್
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.