ಬಾನಬಂಡಿಗಳ ರೆಕ್ಕೆ ಕಟ್ಟುವ ಊರು


Team Udayavani, Nov 26, 2017, 6:45 AM IST

bana-bandi.jpg

ನೀವು ಜಗತ್ತಿನ ಯಾವ ಮೂಲೆಯÇÉೇ ಇರಿ, ನಿಮ್ಮ ತಲೆಯ ಮೇಲೆ ಎತ್ತರದ ಆಕಾಶದಲ್ಲಿ ಏರುವ, ಹಾರುವ, ಇಳಿಯುವ ವಿಮಾನಗಳು ಕಾಣುತ್ತವೆ ಅಥವಾ ಕೇಳಿಸುತ್ತವೆ; ಅವುಗಳಲ್ಲಿ ಕೆಲವು ಆಕಾಶದಲ್ಲಿ ಬಿಳಿ ಹೊಗೆಯ ಗೆರೆಯನ್ನು ಗೀರುತ್ತ ಸಾಗುವುದನ್ನೂ ನಾವು ನೋಡುತ್ತೇವೆ. ಹೀಗೆ ನಾವು -ನೀವು ನೋಡುವ ವಿಮಾನಗಳಲ್ಲಿ ಹಲವು ವಿಮಾನಗಳು ಇಂಗ್ಲೆಂಡ್‌ನ‌ ನೈರುತ್ಯಕ್ಕಿರುವ ಪಟ್ಟಣವಾದ ಬ್ರಿಸ್ಟಲ್‌ನ ಜೊತೆಗೆ ಗಾಢವಾದ ನಂಟು ಹೊಂದಿರುತ್ತವೆ.

ಬ್ರಿಸ್ಟಲ್‌ ಎನ್ನುವ ಈ ಪಟ್ಟಣವನ್ನು ಕೇಳದ ತಿಳಿಯದ ಮನುಷ್ಯರು ಜಗತ್ತಿನಲ್ಲಿ ಬಹಳ ಮಂದಿ ಇರಬಹುದು, ಆದರೆ, ಬ್ರಿಸ್ಟಲ್‌ನ ಪರಿಚಯ ಇರದ ವಿಮಾನಗಳು ಹೆಚ್ಚು ಇರಲಿಕ್ಕಿಲ್ಲ. ವಿಮಾನ ಜಗತ್ತಿನ ಜನಪ್ರಿಯ ಊರು ಬ್ರಿಸ್ಟಲ…. ಈಗಷ್ಟೇ ತನ್ನ ವಿಮಾನ ಸೇವೆ ಆರಂಭಿಸಿದ ಎಳೆ ಯೌವ್ವನದ ಹುಡುಗಾಟದ ವಿಮಾನಗಳಿರಬಹುದು ಅಥವಾ ವರ್ಷಾನುಗಟ್ಟಲೆ ಏರಿ ಹಾರಿ ಸೋತು ಬಸವಳಿದು ನಿವೃತ್ತವಾದ ಮುದಿವಿಮಾನಗಳಿರಬಹುದು- ಅಂತಹ  ಹಲವು ವಿಮಾನಗಳ ತವರು ಬ್ರಿಸ್ಟಲ…. ಕಳೆದ ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ ವಿಮಾನಲೋಕದ ಜೊತೆ ಬ್ರಿಸ್ಟಲ್‌ಗೆ ಬಹಳ ಹತ್ತಿರದ  ಸಂಬಂಧ. 

ಅಮೆರಿಕದಲ್ಲಿ ರೈಟ್‌ ಸಹೋದರರು ವಿಮಾನವನ್ನು ಮೊದಲು  ಆಕಾಶಕ್ಕೆ ಹಾರಿಸಿದ ಬೆನ್ನÇÉೇ ಬ್ರಿಸ್ಟಲ್‌ನಲ್ಲೂ ವಿಮಾನ ತಯಾರಿಸುವ ತಂತ್ರಜ್ಞಾನ ಆಂಗ್ಲರ ಕೈಗೆ ದಕ್ಕಿತ್ತು ಮತ್ತು ಇಲ್ಲಿ ವಿಮಾನ ತಯಾರಿಸುವ ಕಂಪೆನಿಯ ಉದಯವಾಗಿತ್ತು. ಅಂದಿನಿಂದ ಇಂದಿನವರೆಗೆ ಬ್ರಿಸ್ಟಲ್‌ನಲ್ಲಿ ನಿರ್ಮಾಣಗೊಂಡು ದೇಶ-ವಿದೇಶಗಳಿಗೆ ಹಾರಿದ, ಖಂಡಾಂತರಗಳನ್ನು ಮುಟ್ಟಿದ ನಾಗರಿಕ ವಿಮಾನಗಳು, ಸೇನಾ ವಿಮಾನಗಳ ದಂಡೇ ಇದೆ. ಇಂದು ಹಾರದ ಹಿಂದೆ ಹಾರುತ್ತಿದ್ದ ವಿಮಾನಗಳ ಹೆಸರಲ್ಲಿ ಕಟ್ಟಡಗಳು, ಸಂಗ್ರಹಾಲಯಗಳೂ ಇಲ್ಲಿ ಇವೆ. ಇಲ್ಲಿ ತಯಾರಾದ ವಿಮಾನಗಳ ಬಗ್ಗೆ ಬರೆದಿಟ್ಟ ದಪ್ಪದ ಭಾರದ ಪುಸ್ತಕಗಳೂ ಇಲ್ಲಿವೆ. ತಮ್ಮ ವಿಮಾನಗಳ ಇತಿಹಾಸವನ್ನು ಆಂಗ್ಲರು ಬಹಳ ಪ್ರೀತಿಸುತ್ತಾರೆ.

ತನ್ನ  ಪ್ರಾಯದ ಕಾಲದಲ್ಲಿ ತಾನು ಯಾವ ವಿಮಾನದ ರೆಕ್ಕೆಯ ತಯಾರಿಯಲ್ಲಿ ಕೆಲಸ ಮಾಡಿ¨ªೆ ಎಂದು ಕಥೆ ಹೇಳುವ ವೃದ್ಧರು ನಿಮಗೆ ಬ್ರಿಸ್ಟಲ್‌ನಲ್ಲಿ ಬೇಕಾದಷ್ಟು ಜನ ಸಿಗುತ್ತಾರೆ. ಆ ಕಾಲದಲ್ಲಿ ಗಣಕ ಯಂತ್ರಗಳೂ ಇರಲಿಲ್ಲ, ಸಾಫ್ಟ್ವೇರ್‌ಗಳೂ ಇರಲಿಲ್ಲ, ಬರಿಯ ಪೆನ್ಸಿಲ್‌, ಕಾಗದಗಳನ್ನೂ ಹಿಡಿದು ಎಂತೆಂಥ‌ ವಿಮಾನಗಳನ್ನು ಅವುಗಳ ರೆಕ್ಕೆಗಳನ್ನು ತಾವು ವಿನ್ಯಾಸ ಮಾಡಿದೆವೆಂದು ತಮ್ಮ ಮಂದದೃಷ್ಟಿಯ ಕಣ್ಣಲ್ಲಿ ಹೊಳಪು ತುಂಬಿಸಿಕೊಂಡು ಆಡುತ್ತಾರೆ.   

ಒಂದಾನೊಂದು ಕಾಲದಲ್ಲಿ ಬ್ರಿಸ್ಟಲ್‌ನಲ್ಲಿ ವಿಮಾನ ತಯಾರಿಸುತ್ತಿದ್ದ ಕಂಪೆನಿ ಈಗ ಅದೇ ಸ್ವರೂಪದಲ್ಲಿ ಇಲ್ಲ.  ಹಿಂದೆಲ್ಲ ಇಂಗ್ಲೆಂಡ್‌ನ‌ವರ ವಿಮಾನ ಬೇರೆ, ಫ್ರಾನ್ಸ್‌ನವರು ತಯಾರಿಸುತ್ತಿದ್ದದ್ದು ಬೇರೆ ಎಂದೆಲ್ಲ ಇತ್ತು. ಯೂರೋಪಿನ ದೇಶಗಳ ನಡುವೆಯೇ ಅತಿಯಾದ ಮತ್ಸರ-ಮುನಿಸು-ಸ್ಪರ್ಧೆ-ಯುದ್ಧ ಎಲ್ಲ ಇತ್ತು. ಮಹಾಯುದ್ಧಗಳೆಲ್ಲ ಮುಗಿದು ಯೂರೋಪಿನ ದೇಶಗಳೆಲ್ಲ ಪೆಟ್ಟು ತಿಂದು ಬುದ್ಧಿ ಕಲಿತು, ಯಾವಾಗ  ದೂರದ ಅಮೆರಿಕದ ಬೋಯಿಂಗ್‌ ಕಂಪೆನಿ ವಿಮಾನ ಮಾರುಕಟ್ಟೆಯಲ್ಲಿ ಬಲಶಾಲಿಯಾಯಿತೋ ಯೂರೋಪಿನ ತಂತ್ರಜ್ಞಾನದ ಮುಂಚೂಣಿ ದೇಶಗಳಾದ ಫ್ರಾನ್ಸ್‌, ಜರ್ಮನಿ, ಬ್ರಿಟನ್‌ ಹಾಗೂ ಸ್ಪೆಯಿನ್‌ಗಳು ಜೊತೆಗೂಡಿ ಏರ್‌ಬಸ್‌ ಎನ್ನುವ ಕಂಪೆನಿಯನ್ನು ಕಟ್ಟಿದವು. ಈಗ ಬ್ರಿಸ್ಟಲ್‌ನಲ್ಲಿ ತಯಾರಾಗುವುದು ಏರ್‌ಬಸ್‌ ಎನ್ನುವ ಕಂಪೆನಿಯ ವಿಮಾನಕ್ಕೆ ಸಂಬಂಧಪಟ್ಟ ಭಾಗಗಳು. ಬ್ರಿಸ್ಟಲ್‌ಗೆ ಬಂದು ನೆಲೆಸಿದ ಹಲವು ಭಾರತೀಯರಲ್ಲದೆ  ನಾನು ಕೆಲಸ ಮಾಡುವ ಕಚೇರಿಯೂ ಇದೆ. ಹಾಗಂತ ಏರ್‌ಬಸ್‌ ಕಂಪೆನಿಯ ವಿಮಾನದ  ಸಂಪೂರ್ಣ ನಿರ್ಮಾಣ ಬ್ರಿಸ್ಟಲ್‌ನಲ್ಲಿ ಆಗುವುದಿಲ್ಲ. ಒಂದೊಂದು ಭಾಗ ಒಂದೊಂದು ದೇಶದಲ್ಲಿ ನಿರ್ಮಾಣಗೊಳ್ಳುತ್ತವೆ.

ಮತ್ತೆ ನಿರ್ಮಾಣದ ಕೊನೆಯ ಹಂತವಾಗಿ ಆಯಾ ದೇಶದ ಊರುಗಳಿಂದ ಫ್ರಾನ್ಸ್‌ನ ಟುಲೂಸ್‌ ಎನ್ನುವ ಊರಿಗೆ ವಿಮಾನದ ಭಾಗಗಳೆಲ್ಲ ಸಾಗಿಸಲ್ಪಟ್ಟು ಕೊನೆಯ ಹಂತದ ಜೋಡಣೆ ನಡೆಯುತ್ತದೆ. ಆಮೇಲೆ ಕಠಿಣ ಪರೀಕ್ಷೆ, ತೀವ್ರ ತಪಾಸಣೆಗಳಿಗೆ ಒಳಪಟ್ಟು ಆಕಾಶಕ್ಕೆ ಹಾರುವ ಪರವಾನಿಗೆ ಪಡೆಯುತ್ತದೆ. ಮತ್ತೆ ವಿಮಾನ ನಡೆಸುವ ಬೇರೆ ಬೇರೆ ಕಂಪೆನಿಗಳಿಗೆ ಮಾರಲ್ಪಡುತ್ತವೆ. ಅಂತಹ ವಿಮಾನಗಳು ನಮ್ಮ-ನಿಮ್ಮ ಮೇಲಿನ ಆಕಾಶದಲ್ಲಿ ಹಾರತೊಡಗುತ್ತವೆ. 

ಜಗತ್ತಿನ ನಾಗರಿಕ ವಿಮಾನ ಮಾರುಕಟ್ಟೆಯ ಸುಮಾರು ಅರ್ಧ ಭಾಗ ಯೂರೋಪಿನ ವಿಮಾನ ತಯಾರಕ ಏರ್‌ಬಸ್‌ ಕಂಪೆನಿಯ  ಅಧಿಪತ್ಯದಲ್ಲಿದೆ. ಉಳಿದರ್ಧ ಅಮೆರಿಕದ ಬೋಯಿಂಗ್‌ ಬಳಿ.  ಯೂರೋಪಿನ ವಿಮಾನ ತಯಾರಿಕೆಯ ಏರ್‌ಬಸ್‌ ಕಂಪೆನಿಯ ಎಲ್ಲ ವಿಮಾನಗಳ ರೆಕ್ಕೆಗಳು ವಿನ್ಯಾಸಗೊಳ್ಳುವುದು ಇಂಗ್ಲೆಂಡ್‌ನ‌ ಬ್ರಿಸ್ಟಲ್‌ನಲ್ಲಿ; ಅಂದರೆ ಈಗಿನ ನಮ್ಮೂರಿನಲ್ಲಿ ! ಸ‌ಣ್ಣ ಪ್ರಯಾಣ, ಹದ ಪ್ರಯಾಣ, ದೂರ ಪ್ರಯಾಣ, ಇನ್ನೂರು ಜನ ಹಿಡಿಸುವ, ಐನೂರು ಜನ ಹತ್ತಿದರೂ ತುಂಬದ ತರಹ ತರಹದ ವಿಮಾನಗಳು ಎಂದು  ಗುರುತಿಸಲ್ಪಡುವ ಎಲ್ಲ ವಿಮಾನಗಳ ರೆಕ್ಕೆಗಳೂ ನಮ್ಮ ಕಚೇರಿಯಲ್ಲಿ ವಿನ್ಯಾಸಗೊಳ್ಳುತ್ತವೆ. ಎ380, ಎ350, ಎ30, ಎ320 ಎಂದೆಲ್ಲ ಹೆಸರು ಪಡೆದ ಏರ್‌ಬಸ್‌ ತಯಾರಿಸಿದ ವಿಮಾನಗಳ ಸಂತತಿಯ ಪಟ್ಟಿ ಬೆಳೆಯುತ್ತಿದೆ. ಇತ್ತೀಚಿನ ಗಣತಿಯ  ಪ್ರಕಾರ ಸುಮಾರು ಹತ್ತು ಸಾವಿರ ಏರ್‌ಬಸ್‌ ನಿರ್ಮಿತ ವಿಮಾನಗಳು ಈಗ  ಸೇವೆಯಲ್ಲಿವೆ.  ಹಾಗಾಗಿಯೇ, ನಾವು-ನೀವು ಆಕಾಶದಲ್ಲಿ ನೋಡುವ ವಿಮಾನಗಳು ಒಂದೋ ಬ್ರಿಸ್ಟಲ್‌ ಅಲ್ಲಿ ತಮ್ಮ ರೆಕ್ಕೆಯನ್ನು ತಯಾರಿಸಿಕೊಂಡಿರಬೇಕು ಅಥವಾ ಅಮೆರಿಕದ ಬೋಯಿಂಗ್‌ ಅಲ್ಲಿ ತಯಾರಾಗಿ ಬ್ರಿಸ್ಟಲ್‌ ಮತ್ತು ಯೂರೋಪ್‌ ಅಲ್ಲಿ ತಯಾರಾದ ಏರ್‌ಬಸ್‌ ವಿಮಾನಗಳ ಸ್ಪರ್ಧಿ ಆಗಿರಬೇಕು. ಏರ್‌ಬಸ್‌ ಮತ್ತು ಬೋಯಿಂಗ್‌ಗಳಲ್ಲದೆ ಸಣ್ಣ ವಿಮಾನಗಳನ್ನು ತಯಾರಿಸುವ ಕೆನಡಾ, ಬ್ರೆಝಿಲ್‌ನಂತಹ ದೇಶಗಳ ವಿಮಾನ ಕಂಪೆನಿಗಳೂ ಇವೆ. ಅವೆಲ್ಲ ಗಾತ್ರದಲ್ಲೂ ಶಬ್ದದಲ್ಲೂ ಆಕಾರದಲ್ಲೂ ಜನಾಕರ್ಷಣೆಯಲ್ಲೂ ಏರ್‌ಬಸ್‌ ಮತ್ತು ಬೋಯಿಂಗ್‌ನ ವಿಮಾನಗಳನ್ನು ಹಿಂದಿಕ್ಕುವುದು ಇಲ್ಲಿಯವರೆಗೆ ಸಾಧ್ಯ ಆಗಿಲ್ಲ. ಚೈನಾ ಈಗಷ್ಟೇ ತಾನು ಸಿದ್ಧಪಡಿಸುತ್ತಿರುವ ಸಣ್ಣ ಗಾತ್ರದ ನಾಗರಿಕ ವಿಮಾನದ ಪರೀಕ್ಷೆ ನಡೆಸುತ್ತಿದೆ. ಶತಮಾನಕ್ಕಿಂತ ದೀರ್ಘ‌ ಇತಿಹಾಸದ ಬ್ರಿಸ್ಟಲ್‌ನಲ್ಲಿ ತಯಾರಿಸಲ್ಪಟ್ಟು ಹಾರುವ ವಿಮಾನ ರೆಕ್ಕೆಗಳು ಇದರಿಂದ ಸಣ್ಣ ಚಿಂತೆಗೂ ಒಳಗಾಗುತ್ತವೆ. ಮುಂದೊಂದು ದಿನ ಚೀನಾ ನಿರ್ಮಿತ ವಿಮಾನಗಳು ಆಕಾಶವನ್ನು ತುಂಬಿಯಾವೇ ಎಂದು  ಸಂದೇಹಪಡುತ್ತವೆ. ವಿಮಾನದ ರೆಕ್ಕೆಗಳಿಗಾಗಿ ತನ್ನನ್ನು ನೆನಪಿಡುವ ಮಂದಿ, ಉದ್ಯೋಗಕ್ಕಾಗಿ ತನ್ನನ್ನು ಅರಸಿ ಬರುವ ಜನ ಮುಂದೂ ಇರಬಹುದೇ, ಬರಬಹುದೇ ಎಂದೂ ಯೋಚಿಸುತ್ತವೆ. 

ವಿಮಾನದ ರೆಕ್ಕೆಗಳನ್ನು  ತಯಾರಿಸುವುದು, ವಿಮಾನಗಳನ್ನು ಜೋಡಿಸುವುದು, ಅವುಗಳನ್ನು ವಿಮಾನಯಾನ ನಡೆಸುವ ಏರ್‌ಲೈನ್‌ಗಳಿಗೆ ಮಾರುವುದು, ಅವು  ಸುರಕ್ಷಿತವಾಗಿ ದಶಕಗಳ ಕಾಲ ಹಾರುವುದು, ಮುಂದೆ ದುರಸ್ತಿಯ ಕೆಲಸ ಬಂದಾಗ ಅದನ್ನು ತಯಾರಿಸಿದ ಕಂಪೆನಿ ಸರಿಯಾದ ಮತ್ತು ತುರ್ತು ಸೇವೆ ನೀಡುವುದು ಇವೆಲ್ಲ ಸಂಕೀರ್ಣ ಸವಾಲುಗಳು ಮತ್ತು ಕಷ್ಟದ ವಿಷಯಗಳು.  ಅಮೆರಿಕ ಮತ್ತು ಯೂರೋಪುಗಳ ಅಧಿಪತ್ಯದ ವಿಮಾನ ಲೋಕದಲ್ಲಿ ಪಾಲು ಪಡೆಯಬೇಕೆಂದು ಚೈನಾ, ಜಪಾನ್‌, ರಷ್ಯಾಗಳು ತಯಾರಿ ನಡೆಸುತ್ತಿದ್ದರೂ ಆ ಪ್ರಯತ್ನಗಳಿಗೆ ಯಶಸ್ಸು ಸಿಗುತ್ತದೆ ಎನ್ನುವುದು ನಿಶ್ಚಿತ ಇಲ್ಲ. ಹೊಸ ವಿಮಾನಗಳ ಮೂಲಕ ವಿಮಾನ ಲೋಕಕ್ಕೆ ಲಗ್ಗೆ ಇಡುವ ಪ್ರಯತ್ನ, ಸಂಶೋಧನೆ, ಪರೀಕ್ಷೆಗಳು ಅಂತಹ ದೇಶಗಳ ವಿಮಾನ ತಯಾರಕರಿಂದ ನಡೆಯುತ್ತಲೇ ಇವೆ. ಇಂತಹ ಹೊತ್ತಲ್ಲಿ ಬ್ರಿಸ್ಟಲ್‌ನಲ್ಲಿ ಹುಟ್ಟಿದ ವಿಮಾನ ರೆಕ್ಕೆಗಳು ಒಮ್ಮೆ ತನ್ನ ಭವ್ಯ ಇತಿಹಾಸದ ಕಡೆಗೆ ತಿರುಗಿ ನೋಡುತ್ತ ಮತ್ತೂಮ್ಮೆ  ಭವಿಷ್ಯದ ಅನಿಶ್ಚಿತತೆಯ ಕಡೆಗೆ ಯೋಚಿಸುತ್ತ ಎತ್ತರದ ಆಕಾಶದಲ್ಲಿ  ಹಾರುತ್ತಿವೆ.

– ಯೋಗೀಂದ್ರ ಮರವಂತೆ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.