ಮಹಾರಾಜರ ಊರಿನಲ್ಲಿ ಕನ್ನಡದ ತೇರು


Team Udayavani, Nov 26, 2017, 6:05 AM IST

kannada.jpg

ಮೈಸೂರಿನಲ್ಲಿ ನಡೆಯುತ್ತಿರುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಮೂರನೆಯ ದಿನ. ವರ್ಷದಿಂದ ನಾನಾ ಕಾರಣಗಳಿಂದ ಧೂಳು ಏಳಿಸುತ್ತಿದ್ದ  ಸಮ್ಮೇಳನ ಇಂದು ಸಂಜೆ ಪರಿಸಮಾಪ್ತಿಗೊಂಡು ಕನ್ನಡದ ಹೆಸರಿನಲ್ಲಿ  ನಡೆಯುವ ವಾರ್ಷಿಕ ಜಾತ್ರೆಯ ಚರಿತ್ರೆಗೆ ಮತ್ತೂಂದು ಪುಟ ಸೇರಿಕೊಳ್ಳುತ್ತದೆ. 

ಲೆಕ್ಕಕ್ಕೆ ಇದು 83ನೇ ಸಮ್ಮೇಳನ. ಮೈಸೂರಿಗೆ ಈ ಸಮ್ಮೇಳನ 29 ವರ್ಷಗಳ ಬಳಿಕ ಬಂದಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದೇ ಕರೆಸಿಕೊಳ್ಳುವ ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮಹಾರಾಜರ ಪರಂಪರೆ ನೀಡಿದ ಕೊಡುಗೆ ಮಹತ್ತರವಾದುದರಿಂದ ಇಂದಿಗೂ ಮೈಸೂರು ಮಹಾರಾಜರ ಊರು ಎಂದೇ ಕರೆಸಿಕೊಳ್ಳುತ್ತದೆ. ವಿಶೇಷವೆಂದರೆ, ಪ್ರಜಾಪ್ರಭುತ್ವದ ಸಂದರ್ಭದಲ್ಲಿ ನಡೆಯುವ ಅಕ್ಷರ ಜಾತ್ರೆಯ ಈ ಹೊತ್ತಿಗೆ ಕೂಡ ಇದು ಮಹಾರಾಜರ ಊರು! ಮುಖ್ಯಮಂತ್ರಿ ಸಿದ್ಧರಾಮಯ್ಯ ಇದೇ ಊರಿನವರು. ಸಮ್ಮೇಳನದ ಯಶಸ್ಸು ಅವರ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಅದಕ್ಕಾಗಿಯೇ ಅವರ ಸರಕಾರದ ಪ್ರತಿನಿಧಿಗಳೆಲ್ಲ ಸಮ್ಮೇಳನಕ್ಕಾಗಿ ಕೊನೇ ಗಳಿಗೆಯಲ್ಲಿ ಭಾರೀ ಓಡಾಡುತ್ತಿದ್ದಾರೆ ಮಾತ್ರವಲ್ಲ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೆಂಬುದು ಇನ್ನೊಂದು ಸರ್ಕಾರೀ ಪ್ರಾಯೋಜಿತ ಕಾರ್ಯಕ್ರಮವಾಗಿ ಬದಲಾಗಿರುವುದು ಹಿಂದೆಂದಿಗಿಂತ ಢಾಳಾಗಿ ಸಮ್ಮೇಳನದ ಅಡಿಗಡಿಗೂ ಕಾಣಿಸಿಕೊಂಡಿದೆ. 

ಸಮ್ಮೇಳನಕ್ಕಾಗಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದೆಯೆಂದು ಮಾಧ್ಯಮಗಳು ಹೇಳುವುದು ಕ್ಲೀಷೆಯಾಗಿದೆ. ಕೊಟ್ಟ ಕಾಸಿಗೆ ತಕ್ಕಂತೆ ನಗರ ಸಿಂಗಾರಗೊಂಡಿದೆಯೆನ್ನುವುದು ಸರಿಯಾದ ವಿವರವಾದೀತು. ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಪಾಟೀಲರ ಚಿತ್ರ ಎಲ್ಲೆಲ್ಲೂ ರಾರಾಜಿಸುತ್ತಿದೆ. ಕನ್ನಡದ ಉದ್ದಾಮ ಸಾಹಿತಿಗಳ ಮುಖವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಅಲ್ಲಲ್ಲಿ ಚಿತ್ರ ಹಾಕಲಾಗಿದೆ. ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಯಂತ್ರವು ಸಮ್ಮೇಳನಕ್ಕೆ ಹಗಲಿರುಳೂ ದುಡಿದು ಸಮ್ಮೇಳನವನ್ನು ಅದ್ದೂರಿಗೊಳಿಸಿದೆಯಾದರೂ ಜನಸಾಮಾನ್ಯರಿಗೆ ಈ ಯಾವ ತಯಾರಿಯೂ ಪುಳಕಗೊಳಿಸಲಿಲ್ಲವೇಕೆ ಎಂಬುದು ಸ್ವವಿಮರ್ಶೆಗೊಳ್ಳಬೇಕಾದ ವಿಷಯ.

ಕನ್ನಡ ಸಾಹಿತ್ಯ ಸಮ್ಮೇಳನ ವಾರ್ಷಿಕ ಜಾತ್ರೆಯೇ ವಿನಾ ಕನ್ನಡ ನಾಡು-ನುಡಿ- ಸಂಸ್ಕೃತಿಗೆ ಮಹತ್ತರ ಕೊಡುಗೆ ಕೊಡುವ ವೇದಿಕೆಯಲ್ಲ ಎಂಬುದು ಅನೇಕ ವರ್ಷಗಳಿಂದ ಸಾಬೀತಾಗಿದೆ. ಮೈಸೂರಲ್ಲಿ ಸಮ್ಮೇಳನ ನಡೆಯುವಾಗ ಸಹಜವಾಗಿಯೇ ಸಾಹಿತ್ಯಾಸಕ್ತರಿಗೆ ಪುಳಕವೆನಿಸಿತ್ತು. ಆಧುನಿಕ ಕನ್ನಡ ಸಾಹಿತ್ಯದ ನೇತಾರರೆಂದೇ ಭಾವಿಸಲಾಗುವ ಕುವೆಂಪು ಅವರ ಕರ್ಮಭೂಮಿಯಿದು. ಕನ್ನಡದ ಸಾಕ್ಷೀ ಪ್ರಜ್ಞೆಯಾಗಿದ್ದ  ಮಹಾರಾಜಾ ಕಾಲೇಜಿನ ಅಂಗಣದಲ್ಲಿ ಸಮ್ಮೇಳನ ಆಯೋಜನೆಗೊಂಡಿರುವುದೂ ಇದಕ್ಕೆ ಕಾರಣವಾಗಿತ್ತು. ಆದರೆ, ಸಮೃದ್ಧ ಚರಿತ್ರೆಗಾಗಿ ಹೆಮ್ಮೆ ಪಟ್ಟುಕೊಳ್ಳುವ ಮೈಸೂರು ವರ್ತಮಾನದಲ್ಲಿ ದೈತ್ಯ ಪ್ರತಿಭೆಗಳ ಸಂಗಮವಾಗಿ ಉಳಿದಿಲ್ಲವೆಂಬುದು ಸಂಘಟನೆಯಿಂದ ಹಿಡಿದು ಕಾರ್ಯಕ್ರಮಗಳು ಹಾಗೂ ಸ್ಥಳೀಯರ ಭಾಗವಹಿಸುವಿಕೆಯಲ್ಲಿ ಎದ್ದು ಕಂಡಿತು. ಆರಂಭದಿಂದಲೂ ಸಂಘಟನಾ ಸಂಸ್ಥೆಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಸುದ್ದಿಯಾಗಿತ್ತು. ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಸಾಹಿತ್ಯ ಸಮ್ಮೇಳನದ ಬಹುಮುಖ್ಯ ಅಂಗ. ಆರು ಕೋಟಿ ಕನ್ನಡಿಗರ ಆರಾಧ್ಯ ಸಾಧಕನಾಗಿ ಮೆರವಣಿಗೆ ಮಾಡಿಸಿಕೊಳ್ಳುವುದೊಂದು ಅಧ್ಯಕ್ಷರಿಗೆ ಸಲ್ಲುವ ಗೌರವ. ಇದಕ್ಕಾಗಿ ಸಿದ್ಧಪಡಿಸಲಾದ ರಥವೇ ಭ್ರಷ್ಟಾಚಾರದ ಶಿಶುವೆಂದು ಸುದ್ದಿಯಾಗಿ ತಲೆತಗ್ಗಿಸುವಂತಾಗಿದ್ದು ಈ ಸಲದ ವಿಶೇಷ. ಸುತ್ತೂರು ಮಠದವರು ರಾಜೇಂದ್ರ ಸ್ವಾಮಿಗಳ ಶತಮಾನೋತ್ಸವಕ್ಕೆ ಸಿದ್ಧಗೊಳಿಸಿದ್ದ ರಥಕ್ಕೆ ಹೊಸ ಬೇಗಡೆ ಹಚ್ಚಿ ಲಕ್ಷಾಂತರ ರೂಪಾಯಿ ವೆಚ್ಚ ತೋರಿಸಲಾಗಿದೆಯೆಂಬ ಆರೋಪ ಸಂಘಟಕರ ಮೇಲೆ ಬಂದಿತ್ತು. ಜೊತೆಗೆ ಸಮ್ಮೇಳನ ವೇದಿಕೆಯೂ ಇಂಥದೇ ಆಕ್ಷೇಪಕ್ಕೆ ಒಳಗಾಗಿದ್ದು ಇವುಗಳಿಗೆ ನಿಜಕ್ಕೂ ಯಾರ್ಯಾರಿಗೆ ಎಷ್ಟೆಷ್ಟು ಹಣ ಸಂದಾಯವಾಗುವುದೆಂದು ಲೆಕ್ಕ ತೆಗೆದರೆ ಒಳಗಿನ ಮರ್ಮ ಅರ್ಥವಾಗುವುದೆಂಬ ಆರೋಪ ಈಗಾಗಲೇ ಬಂದಿದೆ. ಸಾಹಿತ್ಯ ಸಮ್ಮೇಳನದ ಬಗ್ಗೆ ನೈಜ ಸಾಹಿತ್ಯಾಸಕ್ತರಿಗೆ ಭ್ರಮನಿರಸನವಾಗಿರುವುದು ಈ ಕಾರಣಕ್ಕೆ. ಸಾಹಿತ್ಯ ಸಮ್ಮೇಳನಗಳು ಯಾರ್ಯಾರಿಗೋ ದುಡ್ಡು ಮಾಡುವ ದಾರಿಯಾಗಬಾರದೆಂಬುದು ನಿಜವಾದ ಕಳಕಳಿ.

ಮೈಸೂರು ಸಮ್ಮೇಳನ ಚರಿತ್ರೆಯಲ್ಲಿ ದಾಖಲಾಗುವುದು ಅದರ ಅಧ್ಯಕ್ಷರ ಕಾರಣದಿಂದಲೂ ಹೌದು. ಚಂಪಾ ಎಂತಲೇ ಜನಪ್ರಿಯರಾಗಿರುವ ಪ್ರೊ. ಚಂದ್ರಶೇಖರ ಪಾಟೀಲ ಈ ಸಲದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರೆಂದು ವರದಿಗಳು ಬಂದಾಗ ಅನೇಕರು ಹುಬ್ಬೇರಿಸಿದರು. ಇದಕ್ಕೆ ಚಂಪಾ ಅವರ ಸಾಹಿತ್ಯಿಕ ಕೊಡುಗೆ ಕಾರಣವಲ್ಲ. ಚಂಪಾ ಕನ್ನಡದ ಶ್ರೇಷ್ಠ ಕವಿ ಹಾಗೂ ನಾಟಕಕಾರರಲ್ಲಿ ಒಬ್ಬರು ಎಂಬ ಬಗ್ಗೆ ಎರಡು ಮಾತಿಲ್ಲ. ವ್ಯವಸ್ಥೆಯ ವಿರುದ್ಧವಾಗಿಯೇ ಅವರು ಹೋರಾಡುತ್ತ ಬಂದವರು. ಒಂಥರಾ ಮೂರ್ತಿಭಂಜಕರಾಗಿಯೇ ಪ್ರಸಿದ್ಧರಾದವರು. ಅಂಥವರು ರಥದಲ್ಲಿ ಮೆರೆವಣಿಗೆ ಮಾಡಿಸಿಕೊಳ್ಳಬಹುದೆ ಎಂದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಕನ್ನಡ ಬಂಡಾಯ ಸಾಹಿತ್ಯ ಕಾಲದ ಮುಂಚೂಣಿಯ ಕವಿಯೆನಿಸಿಕೊಂಡ ಚಂಪಾ ಧಾರವಾಡದಲ್ಲಿರುವವರೆಗೂ ಬಂಡಾಯದ ಮನೋಭಾವ ಬಿಟ್ಟುಕೊಡಲಿಲ್ಲ.

ಸಾಹಿತ್ಯದ ಹೆಸರಿನಲ್ಲಿ ಅದ್ದೂರಿಯ ಜಾತ್ರೆಗಳನ್ನು ಒಪ್ಪುತ್ತಿರಲಿಲ್ಲ. ಆದರೆ, ಅವರು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇ ಬದಲಾದರು, ಅಧಿಕಾರದ ಗದ್ದುಗೆಗಳನ್ನು ಏರಿದರು. ಸರ್ಕಾರಗಳ ಜೊತೆ ಒಪ್ಪಂದಮಾಡಿಕೊಂಡು ಅಧಿಕಾರ ಅನುಭವಿಸಿದರು ಎಂದು ಕನ್ನಡ ನಾಡಿನಲ್ಲಿ ಬಹಳ ಜನಕ್ಕೆ ಅನಿಸಿದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ಹಿರಿಯ ಗಾಂಧೀವಾದಿ ಪ. ಮಲ್ಲೇಶರು ಈ ಬಗ್ಗೆ ಚಂಪಾ ಅವರನ್ನು ಅವರೆದುರಿನಲ್ಲೇ ಕಿಚಾಯಿಸಿದರು.

ಆದರೆ ಇದಕ್ಕೆ ಚಂಪಾ ಕೊಟ್ಟ ಸಮರ್ಥನೆ- “”ಇದರ ಹೆಸರಲ್ಲಾದರೂ ಮೂರು ದಿವಸ ಕನ್ನಡದ ಕೆಲಸವಾಗುತ್ತದೆ, ಕನ್ನಡದ ವಾತಾವರಣ ಉಂಟಾಗುತ್ತದೆ” ಎಂಬ ಸಮರ್ಥನೆ ಪೇಲವವಾಗಿತ್ತು. ಹಿಂದೊಮ್ಮೆ ದೇವನೂರು ಮಹಾದೇವ ಅವರನ್ನು ಸಾಹಿತ್ಯ ಪರಿಷತ್ತು ಸಮ್ಮೇಳನದ ಅಧ್ಯಕ್ಷತೆಯನ್ನು ಒಪ್ಪಿಕೊಳ್ಳಬೇಕೆಂದು ಆಹ್ವಾನಿಸಿತ್ತು. ಆದರೆ, ಅವರು ಕರ್ನಾಟಕದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಾಗದ ವಿನಾ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಗಟ್ಟಿ ನಿಲುವು ಪ್ರಕಟಿಸಿ ಸಮ್ಮೇಳನದಿಂದ ದೂರವುಳಿದರು. 

ಮೈಸೂರಿನ ಕನ್ನಡ ಜಾತ್ರೆ ಅದ್ದೂರಿಯಾಗಿಯೇ  ಆರಂಭಗೊಂಡು ಅದ್ದೂರಿಯಾಗಿಯೇ ಮುಗಿಯುತ್ತಿದೆ. ಮೂರು ದಿನ ಅನ್ಯಕಾರ್ಯ ನಿಮಿತ್ತ ರಜೆ ಸಿಗುವುದರಿಂದ ಹೆಚ್ಚಾಗಿ ಪಾಲ್ಗೊಳ್ಳುವ ನೌಕರರು ಮೈಸೂರು ಪ್ರವಾಸ ಮುಗಿಸಿ ಊರಿಗೆ ಮರಳುತ್ತಾರೆ. ಯಥಾಪ್ರಕಾರ ಸಮ್ಮೇಳನದ ಲೆಕ್ಕಪತ್ರಗಳು ಸರಿ ಸಮಯಕ್ಕೆ ಆಡಿಟ್‌ಗೆ ಒಳಪಡುವುದಿಲ್ಲ ಅಥವಾ ಜನರಿಗೆ ಪೋಲಾದ ಹಣದ ಬಗ್ಗೆ ಅಸಮಾಧಾನ ಉಳಿದೇ ಉಳಿಯುತ್ತದೆ ಹಾಗೂ ಕನ್ನಡ ನಾಡು ಇನ್ನೊಂದು ಸಮ್ಮೇಳನಕ್ಕೆ ಸಿದ್ಧವಾಗುತ್ತದೆ. ಕನ್ನಡ ಮಾತ್ರ ದೂರದಲ್ಲೇ ಕುಳಿತು ಆಗಾಗ ನಸು ನಗುತ್ತದೆ, ಹೆಚ್ಚಾಗಿ ಅಳುತ್ತಿರುತ್ತದೆ!

– ನಿರಂಜನ ವಾನಳ್ಳಿ

ಟಾಪ್ ನ್ಯೂಸ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.