ತಂತ್ರಾಂಶ ಪರಿಣತ ಈ ಕನ್ನಡ ಸಂಜಾತ
Team Udayavani, Nov 26, 2017, 11:17 AM IST
ಈ ಹೆಸರು ಜನಸಮಾನ್ಯರಿಗೆ ಅಷ್ಟೇನೂ ಪರಿಚಿತವಲ್ಲ. ಆದರೆ, ಇವರು ಸಿದ್ಧಪಡಿಸಿರುವ ತಂತ್ರಜಾnನವನ್ನು ಮಾತ್ರ ನಾವೆಲ್ಲರೂ ಉಪಯೋಗಿಸುತ್ತಿದ್ದೇವೆ. ಪುರಾಣಿಕ್ ಅವರು ಅಮೆರಿಕಾದ ಐಬಿಎಂ ಸಂಸ್ಥೆಯಲ್ಲಿ ತಂತ್ರಜ್ಞರಾಗಿದ್ದಾರೆ. ಮಾಹಿತಿ ತಂತ್ರಜಾnನ ಕ್ಷೇತ್ರದಲ್ಲಿ 26 ವರ್ಷಗಳ ಅನುಭವವಿದೆ.
ನೂರಾರು ವರ್ಷಗಳ ಹಿಂದಿನ ಕನ್ನಡ ಹಸ್ತಪ್ರತಿಗಳು, ಅಪರೂಪದ ಪುಸ್ತಕಗಳು, ತಾಳೆಗರಿಯ ಗ್ರಂಥಗಳು, ತಾಮ್ರ ಶಾಸನ, ಶಿಲಾಶಾಸನಗಳು ಮೊದಲಾದ ಮಾಧ್ಯಮಗಳಲ್ಲಿರುವ ಮಾಹಿತಿಯನ್ನು ಮೂಲಪ್ರತಿಗೆ ಧಕ್ಕೆಯಾಗದಂತೆ ಡಿಜಿಟಲ್ ರೂಪಕ್ಕೆ ತರಲು ಕೋಲ್ಡ್ ಸ್ಕ್ಯಾನಿಂಗ್ ತಂತ್ರಜಾnನವನ್ನು ಇವರು ಅಭಿವೃದ್ಧಿಪಡಿಸಿದ್ದು,
ಅದನ್ನು ಕೆಲವು ಪ್ರಮುಖ ವಸ್ತು ಸಂಗ್ರಹಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಗ್ರಂಥಾಲಯಗಳು ಯಶಸ್ವಿಯಾಗಿ ಬಳಸುತ್ತಿವೆ. ಮಾಹಿತಿ ತಂತ್ರಜಾnನ ಕ್ಷೇತ್ರದಲ್ಲಿ ಕನ್ನಡವನ್ನು ಬಳಸಲು ಇವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ದೂರದರ್ಶನದಲ್ಲಿ ಕನ್ನಡ ಬಳಸಲು ಅಗತ್ಯವಾದ ತಂತ್ರಾಂಶ, ಸಹಕಾರಿ ಬ್ಯಾಂಕ್ಗಳಲ್ಲಿ ಕನ್ನಡ ಬ್ಯಾಂಕಿಂಗ್ ತಂತ್ರಾಂಶ, ಎಟಿಎಂಗಳಲ್ಲಿ ಕನ್ನಡ, ಮೊಬೈಲ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ಗಳಲ್ಲಿ ಕನ್ನಡ ಬಳಸಲು ಅಗತ್ಯವಾದ ತಂತ್ರಾಂಶ, ಮೊಬೈಲ್ ಸೇವೆ ನೀಡುವ ಸಂಸ್ಥೆಗಳು ಗ್ರಾಹಕರಿಗೆ ನೀಡುವ ಬಿಲ್ ಮತ್ತು ಗ್ರಾಹಕ ಸೇವಾ ಕೇಂದ್ರದಲ್ಲಿ ಕನ್ನಡ ಬಳಸಲು ಅಗತ್ಯವಾದ ಕನ್ನಡ ತಂತ್ರಾಂಶ ಹೀಗೆ ಹಲವಾರು ಕನ್ನಡ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಮೈಸೂರು ವಿ.ವಿ. 14 ಸಂಪುಟಗಳ ಕನ್ನಡ ವಿಶ್ವಕೋಶ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಮೊದಲಾದ ಹಲವು ಡಿಜಿಟಲ್ ಯೋಜನೆಗಳಿಗೂ ಇವರು ಕೊಡುಗೆ ನೀಡಿದ್ದಾರೆ. ಇವರ ಪ್ರಯತ್ನದಿಂದಾಗಿ ಏರಟೆಲ್, ವೋಡಾಫೋನ್ ಮೊದಲಾದ ಮೊಬೈಲ್ ಸೇವಾ ಸಂಸ್ಥೆಗಳು, ಅಮೆಜಾನ್ ಮೊದಲಾದ ಬಹುರಾಷ್ಟ್ರೀಯ ಸಂಸ್ಥೆಗಳು ಕಾಲ್ಸೆಂಟರ್ಗಳಲ್ಲಿ ಕನ್ನಡ ತಂತ್ರಾಂಶವನ್ನು ಬಳಸುತ್ತಿವೆ.
ಇದರಿಂದ ಕನ್ನಡಿಗರಿಗೆ ಉದ್ಯೋಗವೂ ಸೃಷ್ಟಿಯಾದಂತಾಗಿದೆ. ಕನ್ನಡ ನಾಡು-ನುಡಿಯ ಹಿರಿಮೆ ಸಾರುವಂಥ ವೆಬ್ ಪೋರ್ಟಲ್ (www.karnatakainfo.com)ನ್ನು ಕನ್ನಡದಲ್ಲಿ ಅಭಿವೃದ್ಧಿ ಪಡಿಸಿ, ಮೂರು ವರ್ಷಗಳವರೆಗೆ ಯಶಸ್ವಿಯಾಗಿ ನಡೆಸಿದ್ದಾರೆ. 1000 ವಚನಗಳನ್ನು, ಕುವೆಂಪುರವರ 100 ಕವನಗಳನ್ನು, 2 ಆತ್ಮಚರಿತ್ರಗಳನ್ನು ಇಂಗ್ಲಿಷ್ಗೆ ಅನುವಾದಿಸಿರುವ ಇವರು,
ಇದನ್ನು ಚೀನಿ, ಫ್ರೆಂಚ್ ಮೊದಲಾದ ಭಾಷೆಗಳಲ್ಲಿ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲೆಕ್ಸಾ, ವಾಟ್ಸನ್, ಸಿರಿ ಮೊದಲಾದ ಆಧುನಿಕ ತಂತ್ರಜಾnನದಲ್ಲಿ ಕನ್ನಡ ಸೌಲಭ್ಯ ದೊರೆಯಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಅಂದಹಾಗೆ ಇವರು ಹಿರಿಯ ಗಾಂಧೀವಾದಿ, ಸ್ವಾತಂತ್ರ ಹೋರಾಟಗಾರ, ಕರ್ನಾಟಕ ಏಕೀಕರಣ ಹೋರಾಟಗಾರ, ಸಾಹಿತ್ಯರತ್ನ ದಿ. ಅನ್ನದಾನಯ್ಯ ಪುರಾಣಿಕ್ ಅವರ ಮಗ.
– ಅಮೃತಾ ಮೆಹಂದಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPS ಹೆಚ್ಚುವರಿ ಎಲ್ಕೆಜಿ, 1ನೇ ತರಗತಿ ತೆರೆಯಲು ಅವಕಾಶ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.