ಎಮ್ಮೆ ಮಾಲಕನಿಗೆ 20 ಲಕ್ಷ!
Team Udayavani, Nov 27, 2017, 9:55 AM IST
ಹೊಸದಿಲ್ಲಿ: ಬರೋಬ್ಬರಿ 13 ವರ್ಷಗಳ ಹಿಂದೆ ವೈದ್ಯರ ನಿರ್ಲಕ್ಷ್ಯದಿಂದಾಗಿ ತಮ್ಮ 19 ಎಮ್ಮೆಗಳನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಕೊನೆಗೂ ನ್ಯಾಯ ಸಿಕ್ಕಿದ್ದು, ಅವರಿಗೆ 20 ಲಕ್ಷ ರೂ. ಪರಿಹಾರ ಒದಗಿಸುವಂತೆ ರಾಷ್ಟ್ರೀಯ ಗ್ರಾಹಕರ ಆಯೋಗವು ತೀರ್ಪಿತ್ತಿದೆ.
ಹೈನುಗಾರಿಯನ್ನೇ ನಂಬಿಕೊಂಡು ಬದುಕುತ್ತಿದ್ದ ಹಾಗೂ ಅಂಗೈ ಅಗಲದ ಜಮೀನೂ ಇಲ್ಲದ ಶಭು ದಯಾಳ್ ಎಂಬ ಅನಕ್ಷರಸ್ಥನಿಗೆ ತಡವಾಗಿಯಾದರೂ ಸಮಾಧಾನಕರ ತೀರ್ಪನ್ನು ಆಯೋಗ ನೀಡಿದೆ. ಜಾನುವಾರುಗಳಿಗೆ ಚಿಕಿತ್ಸೆ ನೀಡಿದ ಸರಕಾರಿ ವೈದ್ಯರು ಮತ್ತು ದಿಲ್ಲಿ ಸರಕಾರದ ಪಶು ಸಂಗೋಪನಾ ಇಲಾಖೆಗಳು ಜಂಟಿಯಾಗಿ ಈ ಪರಿಹಾರ ಮೊತ್ತವನ್ನು ಅರ್ಜಿದಾರ ಶಭು ದಯಾಳ್‌ಗೆ ನೀಡಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.
ಶಭು ಅವರ ಸಂಸಾರ ಹೈನುಗಾರಿಕೆಯನ್ನೇ ಅವಲಂಬಿಸಿ ದಿನದೂಡುತ್ತಿತ್ತು. ಹೀಗಿರು ವಾಗ, 2004ರಲ್ಲಿ ಅವರ 22 ಜಾನುವಾರು ಗಳಿಗೆ ಚಿಕಿತ್ಸೆ ಕೊಡಿಸಲೆಂದು ಪಶು ಆರೋಗ್ಯ ಕೇಂದ್ರಕ್ಕೆ ಒಯ್ದಿದ್ದರು. ವೈದ್ಯರು ಸರಿಯಾದ ಚಿಕಿತ್ಸೆ ನೀಡದೇ ನಿರ್ಲಕ್ಷ é ವಹಿ ಸಿದ್ದರ ಪರಿಣಾಮವಾಗಿ ಮೂರು ದಿನ ಗಳಲ್ಲಿ 19 ಜಾನುವಾರುಗಳು ಸತ್ತವು. ಇದರಿಂದ ಅವರು 45 ವರ್ಷಗಳ ತಮ್ಮ ಹೈನುಗಾರಿಕೆ ಕಾಯಕವನ್ನೇ ತೊರೆಯಬೇಕಾಯಿತು. ಈ ಅಂಶಗಳನ್ನು ಪರಿಗಣಿಸಿದ ಆಯೋಗ 13 ವರ್ಷಗಳ ಪರಿಹಾರವನ್ನು ನೀಡುವಂತೆ ತೀರ್ಪಿತ್ತಿದೆ. ಈ ತೀರ್ಪನ್ನು ಆಯೋಗದಲ್ಲಿ ಪ್ರಶ್ನಿಸಿದ್ದ ವೈದ್ಯರು, ಜಾನುವಾರುಗಳು ತೀವ್ರ ಸ್ವರೂಪದ ಶೀತದಿಂದ ಸತ್ತಿವೆ ಎಂದು ಹೇಳಿ ದ್ದರು. ಆದರೆ ಇದನ್ನು ಆಯೋಗ ತಳ್ಳಿಹಾಕಿದೆ. ಚಿಕಿತ್ಸೆ ನೀಡಿದ್ದರ ಕುರಿತು ವೈದ್ಯರು ದಾಖಲೆ ಗಳನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡಿಲ್ಲದ್ದಕ್ಕೆ ಆಯೋಗ ಆಶ್ಚರ್ಯ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.