ಜೀವಂತ ಮಣ್ಣಾಗುತ್ತಿದ್ದವ ಕೂದಲೆಳೆಯಲ್ಲಿ ಬದುಕಿದ


Team Udayavani, Nov 27, 2017, 11:19 AM IST

blore.jpg

ಬೆಂಗಳೂರು: ಪೊಲೀಸರು ಬರುವುದು ಎಲ್ಲಾ ಮುಗಿದ ಮೇಲೇ ಎಂಬುದು ಜನರ ನಂಬಿಕೆ. ಬಹುತೇಕ ಸಿನಿಮಾಗಳಲ್ಲಿ ತೋರಿಸುವುದು ಕೂಡ ಇದನ್ನೇ. ಆದರೆ ಸದಾ ಜಾಗೃತರಾಗಿರುವ ಪೊಲೀಸರು, ಅಪಾಯದಲ್ಲಿರುವ ಸಾರ್ವಜನಿಕರ ಪ್ರಾಣ ರಕ್ಷಿಸಲು ಸದಾ ಸಿದ್ಧರಿರುತ್ತಾರೆ ಎಂಬ ಅಂಶವನ್ನು ಸಾಬೀತು ಮಾಡುವ ಪ್ರಕರಣವೊಂದು ಶುಕ್ರವಾರ ರಾತ್ರಿ ನಗರದಲ್ಲಿ ನಡೆದಿದೆ.

ಶಾಲಾ ವಾಹನ ಚಾಲಕನೊಬ್ಬನನ್ನು ಜೀವಂತ ಹೂತುಹಾಕುವ ದುಷ್ಕರ್ಮಿಗಳ ಪ್ರಯತ್ನವನ್ನು ವಿಫ‌ಲಗೊಳಿಸಿರುವ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಸಮಯ ಮತ್ತು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. 

ರಸ್ತೆ ಅಪಘಾತ ವಿಚಾರ ಸಂಬಂಧಿಸಿದಂತೆ ಚಾಲಕನನ್ನು ಅಪಹರಿಸಿ, ಸ್ಮಶಾನಕ್ಕೆ ಎಳೆದೊಯ್ದು ಮನಸೋಯಿಚ್ಛೆ ಥಳಿಸಿದ್ದ ದುಷ್ಕರ್ಮಿಗಳು, ಆತ ಜೀವಂತವಾಗಿರುವಾಗಲೇ ಗುಂಡಿ ತೆಗೆದು ಹೂಳುವ ಪ್ರಯತ್ನದಲ್ಲಿದ್ದರು. ಈ ವಿಷಯ
ತಿಳಿದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಕೇವಲ ಒಂದು ಗಂಟೆಯೊಳಗೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಜೀವ, ಮುತ್ತು, ಅರ್ಜುನ್‌ ಮತ್ತು ಮುರಳಿ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೂಬ್ಬ ಆರೋಪಿ ಸಂತೋಷ್‌ ಎಂಬಾತ ದರೋಡೆ ಪ್ರಕರಣವೊಂದರಲ್ಲಿ ತಲಘಟ್ಟಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇಸ್ರೋ ಲೇಔಟ್‌ ಬಳಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು, ಆಗಷ್ಟೇ ಶಾಲಾ ಮಕ್ಕಳನ್ನು ಅವರವರ ಮನೆಗಳಿಗೆ ಬಿಟ್ಟು ವಾಪಸ್‌ ಬರುತ್ತಿದ್ದ ಪ್ರದೀಪ್‌ ಎಂಬಾತನ ಸ್ಕೂಲ್‌ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾರೆ. ಚಾಲಕ ಪ್ರದೀಪ್‌ ಈ ಬಗ್ಗೆ ಪ್ರಶ್ನಿಸಿದ್ದರಿಂಧ ಕೋಪಗೊಂಢ ಆರೋಪಿಗಳು, ಆತನನ್ನು ಸ್ಮಶಾನಕ್ಕೆ ಹೊತ್ತೂಯ್ದು ಕೊಂದು,
ಹೂತುಹಾಕಲು ನಿರ್ಧರಿಸಿದ್ದರು! 

ಏನಿದು ಘಟನೆ: ವಸಂತಪುರ ನಿವಾಸಿ ಪ್ರದೀಪ್‌, ಶುಕ್ರವಾರ ಸಂಜೆ 6.30ರ ಸುಮಾರಿಗೆ ಪ್ರಾರ್ಥನಾ ಶಾಲೆ ಮಕ್ಕಳನ್ನು ತಮ್ಮ ಓಮ್ನಿ ಕಾರಿನಲ್ಲಿ ಮನೆಗೆ ಬಿಟ್ಟು ವಾಪಸ್‌ ಬರುತ್ತಿದ್ದರು. ಇದೇ ವೇಳೆ ಇಸ್ರೋ ಲೇಔಟ್‌ ಮುಖ್ಯ ರಸ್ತೆಯಲ್ಲಿ ಎರಡು ಡಿಯೋ ಸ್ಕೂಟರ್‌ಗಳಲ್ಲಿ ಓಮ್ನಿಗೆ ಎದುರಾಗಿ ಬಂದ ದುಷ್ಕರ್ಮಿಗಳು, ಬೇಕಂತಲೇ ಡಿಕ್ಕಿ ಹೊಡೆದಿದ್ದಾರೆ. ಇದೇ ವಿಷಯಕ್ಕೆ ಪ್ರದೀಪ್‌ ಮತ್ತು ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾರು ಮಾಲೀಕರಿಗೆ ಕರೆ ಮಾಡಿದ ಪ್ರದೀಪ್‌, ಅಪಘಾತದ ಮಾಹಿತಿ ನೀಡಿ, ಸ್ಥಳಕ್ಕೆ ಬರುವಂತೆ ಕೋರಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಆರೋಪಿಗಳು, ಪ್ರದೀಪ್‌ ಮೇಲೆ ಹಲ್ಲೆ ನಡೆಸಿ, ತಮ್ಮ ಸ್ಕೂಟರ್‌ನಲ್ಲಿ ಆತನನ್ನು ಅಪಹರಿಸಿದ್ದಾರೆ. ವಿಷಯ ತಿಳಿದ ಕಾರು ಮಾಲೀಕ ಕೆಂಚೇಗೌಡ, ತಕ್ಷಣ ಕುಮಾರ ಸ್ವಾಮಿ ಲೇಔಟ್‌ ಠಾಣೆಗೆ ದೂರು ನೀಡಿದ್ದರು. ಕೂಡಲೇ ಇನ್ಸಪೆಕ್ಟರ್‌ ಗುರುಪ್ರಸಾದ್‌, ಮೂರು ವಿಶೇಷ ತಂಡ ರಚಿಸಿ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. 

ಹೂಳ್ಳೋದಷ್ಟೇ ಬಾಕಿಯಿತ್ತು!
ಪ್ರದೀಪ್‌ನನ್ನು ಸ್ಮಶಾನಕ್ಕೆ ಕರೆದೊಯ್ದ ಆರೋಪಿಗಳು ಅಲ್ಲಿಯೇ ಮದ್ಯ ಸೇವಿಸಿದ್ದಾರೆ. ನಂತರ ಪ್ರದೀಪ್‌ನನ್ನು ಮನಸೋಯಿಚ್ಛೆ ಥಳಿಸಿದ್ದಾರೆ. ಪರಿಣಾಮ ಪ್ರದೀಪ್‌ಗೆ ಮೂಗು, ಬಾಯಿ ಮತ್ತು ಕೈ, ಕಾಲುಗಳಲ್ಲಿ ರಕ್ತಸ್ರಾವವಾಗಿ
ಅಸ್ವಸ್ಥರಾಗಿ ಕುಸಿದಿದ್ದಾರೆ. ಈ ವೇಳೆ ಆರೋಪಿಗಳು ಪಕ್ಕದಲ್ಲೇ ಗುಂಡಿ ತಗೆಯಲು ಮುಂದಾಗಿದ್ದಾರೆ. ಆಗಲೇ ರಾತ್ರಿ 7.30 ಆದ್ದರಿಂದ ಗುಂಡಿ ತೆಗೆಯಲು ಮೊಬೈಲ್‌ ಟಾರ್ಚ್‌ ಗಳನ್ನು ಬಳಸಿದ್ದಾರೆ. ಜತೆಗೆ ಕುಡಿದ ಮತ್ತಿನಲ್ಲಿ ಜೋರಾಗಿ ಮಾತನಾಡಿದ್ದಾರೆ. ಇತ್ತ ಆರೋಪಿಗಳಿಗಾಗಿ ಸ್ಮಶಾನಗಳನ್ನು ಜಾಲಾಡುತ್ತಿದ್ದ ತಂಡವೊಂದು ಅದೇ ಸ್ಮಶಾನಕ್ಕೆ ಬಂದಿದೆ. ಪೊಲೀಸರನ್ನು ಕಂಡ ಆರೋಪಿಗಳು ಅಲ್ಲಿಂದ ಕಾಲ್ಕಿಳಲು ಯತ್ನಿಸಿದ್ದಾರೆ. ಆದರೆ ಸುತ್ತ ನಾಕಾಬಂದಿ ಹಾಕಿದ ಪೊಲೀಶರು, ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಪ್ರದೀಪ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.

ಕೊಂದೇ ಬಿಡೋಣ ಎಂದು ತಮಿಳಲ್ಲಿ ಮಾತು
ಕಾರು ಮಾಲೀಕ ಕೆಂಚೇಗೌಡರಿಗೆ ಪ್ರದೀಪ್‌ ಕರೆ ಮಾಡಿದ ವೇಳೆ, ಹಿನ್ನೆಲೆಯಲ್ಲಿ ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡುವುದು ಕೆಂಚೇಗೌಡ ಅವರ ಕಿವಿಗೆ ಬಿದ್ದಿತ್ತು.  ಪ್ರದೀಪ್‌ನನ್ನು ಅಪಹರಿಸಿ ಸ್ಮಶಾನಕ್ಕೆ ಕರೆದೊಯ್ದು ಮುಗಿಸಿ ಬಿಡೋಣ,’ ಎಂದು ಆರೋಪಿಗಳು ಮಾತನಾಡಿಕೊಂಡಿದ್ದರು. ಈ ಮಾತುಕತೆ ಕೆಂಚೇಗೌಡರ ಮೊಬೈಲ್‌ನಲ್ಲಿ ರೆಕಾರ್ಡ್‌ಗಿತ್ತು. ಆರೋಪಿಗಳ ಭಾಷೆ, ಮಾತನಾಡುವ ರೀತಿ ಗಮನಿಸಿದ ಪೊಲೀಸರಿಗೆ ಇದು ಸ್ಲಂ ಯುವಕರ ಕೃತ್ಯ ಎಂಬುದು ಖಾತ್ರಿಯಾಗಿತ್ತು

ಮೊಬೈಲ್‌ ನೆಟ್ವರ್ಕ್‌ ಕೊಟ್ಟ ಸುಳಿವು
ದೂರು ದಾಖಲಿಸಿಕೊಂಡ ಕೂಡಲೆ ಆರೋಪಿಗಳ ಬೆನ್ನುಬಿದ್ದ ತನಿಖಾ ತಂಡಗಳು, ಪ್ರದೀಪ್‌ರ ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದ್ದು, ಕುಮಾರಸ್ವಾಮಿ ಲೇಔಟ್‌ನಿಂದ ಬನಶಂಕರಿಗೆ ಹೋಗುವ ಮಾರ್ಗ ಮಧ್ಯೆ ಮೊಬೈಲ್‌ ಸ್ವಿಚ್‌ ಆಫ್ ಆಗಿರುವುದು ತಿಳಿದುಬಂದಿದೆ. ನಂತರ ಮೂರು ವಿಶೇಷ ತಂಡಗಳು ಬನಶಂಕರಿ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸ್ಲಂಗಳು, ಪಾರ್ಕ್‌ಗಳು ಹಾಗೂ ಸ್ಮಶಾನಗಳನ್ನು ಶೋಧಿಸಿವೆ. ಈ ವೇಳೇ ಕುಮಾರಸ್ವಾಮಿ ಲೇಔಟ್‌ ಮತ್ತು
ಯಾರಬ್‌ನಗರದ ಮಾರ್ಗ ಮಧ್ಯೆ ಇರುವ ಸ್ಮಶಾನದಲ್ಲಿ ಆರೋಪಿಗಳಿರುವುದು ಪತ್ತೆಯಾಯಿತು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಸ್ಮಶಾನದ ಸಲಹೆ ನೀಡಿದ್ದು ಅಪ್ರಾಪ್ತ
ಕಾನೂನು ಸಂಘರ್ಷಕ್ಕೊಳಗಾದ (ಅಪ್ರಾಪ್ತ) ಹುಡುಗನೊಬ್ಬ ಈ ಕೃತ್ಯದಲ್ಲಿ ಆರೋಪಿಗಳಿಗೆ ಸಹಾಯ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಆತನನ್ನು ಭಾನುವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ. ಸೋಮವಾರ ಬೆಳಗ್ಗೆ  ತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಆರೋಪಿಗಳು  ದೀಪ್‌ನನ್ನು ಅಪಹರಿಸಿದಾಗ
ಈ ಯುವಕ “ನಮ್ಮ ತಾತ ಕೆಲಸ ಮಾಡುವ ಸ್ಮಶಾನಕ್ಕೆ ಕರೆದೊಯ್ದು ಅಲ್ಲಿಯೇ ಹೂತು ಬಿಡೋಣ,’ ಎಂದು ಸಲಹೆ ನೀಡಿದ್ದ. ಈ ನಡುವೆ ಆರೋಪಿಗಳ ಪೈಕಿ ಸಂತೋಷ್‌ ಎಂಬಾತ ಸ್ಮಶಾನದಿಂದ ತಪ್ಪಿಸಿಕೊಂಡು ತಲ್ಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ. ಇದೇ ವೇಳೆ ದರೋಡೆ ಪ್ರಕರಣವೊಂದರ ತನಿಖೇ ಕೈಗೊಂಡಿದ್ದ ತಲಘಟ್ಟಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಿದಾಗ ಅಪಹರಣದಲ್ಲಿ ಭಾಗಿಯಾಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.