ಮುಂಬಯಿ ಶೇರು ಗೆಲುವಿನ ಓಟ 8ನೇ ದಿನವೂ ಅಬಾಧಿತ
Team Udayavani, Nov 27, 2017, 5:02 PM IST
ಮುಂಬಯಿ : ಇಂದು ಸೋಮವಾರ ಮುಂಬಯಿ ಶೇರು ಪೇಟೆ ತನ್ನ ಎಂಟನೇ ದಿನದ ನಿರಂತರ ಗೆಲುವಿನ ಒಟವನ್ನು ಯಶಸ್ವಿಯಾಗಿ ನಡೆಸಿತು.
ದಿನದ ವಹಿವಾಟನ್ನು ಸೆನ್ಸೆಕ್ಸ್ 45.20 ಅಂಕಗಳ ಮುನ್ನಡೆಯೊಂದಿಗೆ 33,724.44 ಅಂಕಗಳ ಮಟ್ಟದಲ್ಲೂ, ನಿಫ್ಟಿ 9.80 ಅಂಕಗಳ ಮುನ್ನಡೆಯೊಂದಿಗೆ 10,399.50 ಅಂಕಗಳ ಮಟ್ಟದಲ್ಲೂ ಕೊನೆಗೊಳಿಸಿದವು.
ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗನ್ನು ಎಸ್ ಆ್ಯಂಡ್ ಪಿ ರೇಟಿಂಗ್ ಸಂಸ್ಥೆಯ ಯಥಾವತ್ ಉಳಿಸಿಕೊಂಡದ್ದು ಮುಂಬಯಿ ಶೇರು ಪೇಟೆಗೆ ನಿರಾಶೆ ಉಂಟು ಮಾಡಿತ್ತು. ಹಾಗಾಗಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಹಿನ್ನಡೆ ಕಂಡಿದ್ದವು.
ಆದರೆ ದೇಶೀಯ ಸಾಂಸ್ಥಿಕ ಹೂಡಿಕೆ ಸಂಸ್ಥೆಗಳು ಶೇರು ಖರೀದಿಯನ್ನು ನಿರಂತರವಾಗಿ ಕೈಗೊಂಡದ್ದೇ ಮುಂಬಯಿ ಶೇರು ಪೇಟೆಗೆ ಬೂಸ್ಟ್ ನೀಡಿತು.
ಕಳೆದ ಏಳು ದಿನಗಳ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ 918.80 ಅಂಕಗಳನ್ನು ಸಂಪಾದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!
L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.